Skip to main content

Posts

Showing posts from September, 2017

Tips for preparation for FDA/SDA conducted by kpsc ...books for kannada medium students...tips ...study materials for FDA SDA EXAM

ಇತ್ತೀಚೆಗೆ ಪ್ರತಿ ವರ್ಷವೂ ಕೆ. ಪಿ.ಎಸ್. ಸಿ. ವಿವಿಧ ಇಲಾಖೆಗಳ ಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಮೊದಲಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದೆ. ಸರ್ಕಾರಿ ಹುದ್ದೆ ಪಡೆಯುವುದು ಇಂದಿನ ಬಹುತೇಕ ಯುವ ಜನರ ಕನಸು.. ಅದರಲ್ಲಿ ಈ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆ ಯಾಗಲು ಬಹುತೇಕ ಸ್ಪರ್ಧಾರ್ಥಿಗಳು ಕನಸು ಕಾಣುತ್ತಾರೆ ಜೊತೆಗೆ ಪರಿಶ್ರಮ ಪಡುತ್ತಾರೆ..ಆದರೆ ಯಶಸ್ಸು ಎಂಬುದು ಒಂದು ತಪಸ್ಸು. ಅದರಲ್ಲಿ ಅಂತಿಮ ಗುರಿ ತಲುಪಲು ಕನಸಿನೊಂದಿಗೆ ಕಠಿಣ ಪರಿಶ್ರಮ, ಛಲ ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.. ಹಾಗೆಯೇ ಅತಿಯಾದ ಆತ್ಮವಿಶ್ವಾಸವೂ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತದೆ.ಆದುದರಿಂದ ಅಭ್ಯರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಅನುಸರಿಸಬೇಕಾದ ಕೆಲವೊಂದು ಸಲಹೆಗಳನ್ನು ಹಾಗು ಅಭ್ಯಸಿಸಬೇಕಾದ ಪುಸ್ತಕಗಳ ಮಾಹಿತಿ ನೀಡುವುದು ಈ ಲೇಖನದ ಉದ್ದೇಶ. ಪರೀಕ್ಷೆಗೆ ತಯಾರಾಗಲು ಸಲಹೆಗಳು . ○ಮೊದಲನೆಯ ಪ್ರಮುಖ ಅಂಶವೆಂದರೆ ಪಠ್ಯಕ್ರಮವನ್ನು ಸಮಗ್ರ ವಾಗಿ ಅಧ್ಯಯನ ಮಾಡುವುದು.  ಇದರಿಂದ ಯಾವ ಯಾವ ವಿಷಯಗಳ ಮೇಲೆ ಗಮನಹರಿಸಬೇಕು ಯಾವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಯುತ್ತದೆ. ಸಾಧ್ಯವಾದರೆ ಸಿಲಬಸ್ ನ ಒಂದು ಪ್ರಿಂಟ್ ಕೊಂಡು ಆಗ್ಗಾಗ್ಗೆ ಗಮನಿಸುವುದು ಒಳ್ಳೆಯದು. ○ ಎರಡ...

Books list for KAS mains exam in kannada medium by kpsc...ಕ ೆಎಎಸ್ ಮುಖ್ಯ ಪರೀಕ್ಷೆ ಬರೆಯಲು ಸಹಾಯಕವಾದ ಪುಸ್ತಕಗಳು

ಕೆ.ಪಿ.ಎಸ್. ಸಿ ನಡೆಸುವ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಯು ಕೆ.ಎ.ಎಸ್  ಎಂಬ ಹೆಸರಿನಿಂದಲಹೆಸರಿನಿಂದಲೇ ಜನಪ್ರಿಯವಾಗಿದೆ. ಆಗಸ್ಟ್ 20-2017 ರಲ್ಲಿ ನಡೆದ ಪೂರ್ವಭಾವಿ ಪರೀಕ್ಷೆ ಯ ಮುಂದಿನ ಹಂತವಾದ ಮುಖ್ಯ ಪರೀಕ್ಷೆ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮುಖ್ಯ ಅಳಲೆಂದರೆ, ಅಧ್ಯಯನ ಸಾಮಾಗ್ರಿಗಳ ಕೊರತೆ. ಬಹುತೇಕ ಅಭ್ಯರ್ಥಿಗಳು ಕನ್ನಡ ಮಾಧ್ಯಮವನ್ನು ತಮ್ಮ ಬರವಣಿಗೆಯ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಲು ಬಹಳ ಶ್ರಮಿಸುತ್ತಿರುತ್ತಾರೆ. ಆದರೆ ಸ್ವಲ್ಪ ಪರಿಶ್ರಮ ಪಟ್ಟರೆ ಕನ್ನಡ ಮಾಧ್ಯಮದ ಪುಸ್ತಕಗಳ ಸಂಗ್ರಹ ಅಷ್ಟೇನು ಕಷ್ಟದ ಕೆಲಸವಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಮುಖ್ಯ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಗತ್ಯವಾದ ಪುಸ್ತಕಗಳ ಪಟ್ಟಿ ಮಾಡಿ ಈ ಲೇಖನದ ಮೂಲಕ ನೀಡಲಾಗಿದೆ. ಇದೊಂದು ಪರಿಪೂರ್ಣ ಸಂಗ್ರಹವಲ್ಲ. ಆದರೆ ಗರಿಷ್ಠ ಮಟ್ಟದಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಮಾಹಿತಿ ಕ್ರೋಢೀಕರಿಸಲಾಗಿದೆ. ಅದನ್ನು ವಿಭಾಗವಾರು ವಿಂಗಡಣೆ ಮಾಡಿ ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ. ಪತ್ರಿಕೆ -1 ಪ್ರಬಂಧ ಬರವಣಿಗೆ. ಪ್ರಚಲಿತ ವಿಷಯಗಳ ಮೇಲೆ ಎರಡು ಪ್ರಬಂಧ ರಚನೆ ಈ ಪತ್ರಿಕೆ ಒಳಗೊಂಡಿರುತ್ತದೆ. ತಲಾ 125 ಅಂಕದ ಈ ಪ್ರಬಂಧ ಬರವಣಿಗೆಗೆ ಅಭ್ಯರ್ಥಿಗಳಿಗೆ ವಿಷಯದ ಆಳ ...