Sunday, 29 October 2017

Model question papers for KAS Mains exam conducted by kpsc in kannada medium ಕೆಎಎಸ್ ಮುಖ್ಯ ಪರೀಕ್ಷೆ ಗೆಜೆಟೆಡ್ ಮಾದರಿ ಪ್ರಶ್ನೆ ಪತ್ರಿಕೆ

ಕ ೆಎಎಸ್ ಮುಖ್ಯ ಪರೀಕ್ಷೆ ಬರೆಯಲು ತಯಾರಾಗುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ.
ಪತ್ರಿಕೆ  ---2

1) ನಿಯೋಜಿತ ಶಾಸನಾಧಿಕಾರದ ಮೇಲೆ  ಶಾಸನೀಯ ನಿಯಂತ್ರಣ ಕುರಿತು  ಬರೆಯಿರಿ.

2) ಅಲಿಪ್ತ ಚಳುವಳಿಯ ಪ್ರಸ್ತುತತೆ ಕುರಿತು ಚರ್ಚಿಸಿ.

3)ಪ್ರಸ್ತುತ ಸರ್ಕಾರದ ವಿದೇಶಿ ನೀತಿ ಕುರಿತು ಟೀಕಾತ್ಮಕವಾಗಿ ಚರ್ಚಿಸಿ.

4)ಭೂಮಂಡಲದ ವಾಯುಗುಣವು  ಭಿನ್ನತೆಯಿಂದ ಕೂಡಿರಲು ಕಾರಣಗಳೇನು? 

5)ಪ್ರೇರಣೆ ಮತ್ತು ನಾಯಕತ್ವವು ಸಂಘಟನೆಯಲ್ಲಿ  ಮಹತ್ವದ ಪಾತ್ರ ವಹಿಸುತ್ತವೆ.. ಹೇಗೆ ಎಂದು  ವಿಷದೀಕರಿಸಿ.

6)ಅಭಿವೃದ್ಧಿ ಆಡಳಿತ ಎಂದರೇನು?  ಅದರ ಲಕ್ಷಣಗಳನ್ನು ತಿಳಿಸಿ.

7)ಭಾರತದ ನಗರೀಕರಣ ಮತ್ತು ಅದರಿಂದ ಉಂಟಾಗುವ ಸಕಾರಾತ್ಮಕ ಮತ್ತು ನಕಾರಾತ್ಮಕ  ಪರಿಣಾಮಗಳನ್ನು  ಚರ್ಚಿಸಿ.

8)ಭಾರತದ  ಭೌಗೋಳಿಕ ಲಕ್ಷಣಗಳನ್ನು ಕರ್ನಾಟಕದ ಭೌಗೋಳಿಕ ಪ್ರದೇಶ  ಬಹುವಾಗಿ ಪ್ರದರ್ಶಿಸುತ್ತದೆ  ಎಂಬ ಅಭಿಪ್ರಾಯವಿದೆ.  ಹೇಗೆ ಎಂದು ವಿಷದೀಕರಿಸಿ.


9)ಭಾರತದಲ್ಲಿ  ನಿಯೋಜಿತ  ಶಾಸನದ  ಉಪಯುಕ್ತತೆ  ಮತ್ತು ಸಿ.ಎ.ಜಿ.ಯ ಪ್ರಸ್ತುತತೆ ಕುರಿತು ಟೀಕಾತ್ಮಕವಾಗಿ ಚರ್ಚಿಸಿ.

10) ನಿರ್ಧಾರ ಕೈಗೊಳ್ಳುವುದು ನಿರ್ವಹಣೆ ಯ ಪ್ರಮುಖ ಕಾರ್ಯ ವಾಗಿದೆ. ಹೇಗೆ ವಿಷದೀಕರಿಸಿ. 

Sunday, 22 October 2017

Model question papers for FDA AND SDA EXAM Conducted by kpsc

ಮುಂಬರುವ ಎಫ್ ಡಿ ಎ ಮತ್ತು ಎಸ್ ಡಿ ಎ  ಪರೀಕ್ಷೆಗೆ  ಸಹಾಯಕವಾಗುವ ಮಾದರಿ ಪ್ರಶ್ನೆ ಪತ್ರಿಕೆಯನ್ನು  ಈ ಅಂಕಣದಲ್ಲಿ ನೀಡಲಾಗಿದೆ.
1) 2017 ರ ಆನೆ ಗಣತಿಯ ಮುಖ್ಯಾಂಶಗಳು
ದೇಶದಲ್ಲಿರುವ ಒಟ್ಟು ಆನೆಗಳ ಸಂಖ್ಯೆ- 27,312
ದಕ್ಷಿಣ ಭಾರತದಲ್ಲಿ ಇರುವ ಆನೆಗಳ ಸಂಖ್ಯೆ- 11960
ಈಶಾನ್ಯ ಭಾರತದಲ್ಲಿ ಇರುವ ಆನೆಗಳ ಸಂಖ್ಯೆ- 10,139
ಉತ್ತರ ಭಾರತದಲ್ಲಿ ಇರುವ ಆನೆಗಳ ಸಂಖ್ಯೆ- 2085
ಪೂರ್ವ ಕೇಂದ್ರ ವಲಯ -3128

ಅತಿ ಹೆಚ್ಚು ಆನೆಗಳ ಸಂಖ್ಯೆ ಹೊಂದಿರುವ ರಾಜ್ಯಗಳು
ಪ್ರಥಮ ಸ್ಥಾನ ಕರ್ನಾಟಕ- 6049
ದ್ವಿತೀಯ ಸ್ಥಾನ ಅಸ್ಸಾಂ- 5719
ತೃತೀಯ ಸ್ಥಾನ ಕೇರಳ- 3054
ನಾಲ್ಕನೇ ಸ್ಥಾನ- ತಮಿಳುನಾಡು- 2761
•ವಿಶ್ವ ಆನೆಗಳ ದಿನ-ಆಗಸ್ಟ್ 12
•ಗಜಯಾತ್ರಾ ಯೋಜನೆ- ದೇಶಾದ್ಯಂತ ಆನೆಗಳ ನ್ನು ಸಂರಕ್ಷಿಸುವ ಉದ್ದೇಶದಿಂದ ಆರಂಭಿಸಲಾದ ಅಭಿಯಾನ 2017 ರ ಆಗಸ್ಟ್ 12 ರಿಂದ ಪ್ರಾರಂಭ.



2) ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಷಯಗಳ ವಿ .ವಿ ಮಣಿಪುರದಲ್ಲಿ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

3)ಮಾನ್ಸುನ್ ಟೂರಿಸಂ  ವರದಿ 2017
•ಸಮೀಕ್ಷೆ ನಡೆಸಿದವರು  -" ಮೇಕ್ ಮೈ ಟ್ರಿಪ್ ಆನ್ ಲೈನ್ ಟ್ರಾವೆಲ್ಸ್  ಕಂಪನಿ.
• ಮಳೆಗಾಲದಲ್ಲಿ ಭಾರತೀಯರು ಭೇಟಿ ನೀಡಲು ಬಯಸುವ ಜನಪ್ರಿಯ ದೇಶೀಯ ತಾಣಗಳ ಪಟ್ಟಿ ಕೆಳಗಿನಂತೆ ಇದೆ.
ಮೊದಲ ಸ್ಥಾನ- ಗೋವಾ
ಎರಡನೆಯ ಸ್ಥಾನ- ಹಿಮಾಚಲ ಪ್ರದೇಶ ದ ಮನಾಲಿ
ಮೂರನೆಯ ಸ್ಥಾನ-  ಮೈಸೂರು
ನಾಲ್ಕನೇ ಸ್ಥಾನ- ಊಟಿ


ಅಂತರರಾಷ್ಟ್ರೀಯ ತಾಣಗಳ ಪಟ್ಟಿ
ಪ್ರಥಮ ಸ್ಥಾನ- ದುಬೈ
ಎರಡನೆಯ ಸ್ಥಾನ-  ಸಿಂಗಪುರ
ಮೂರನೆಯ ಸ್ಥಾನ- -ಥೈಲ್ಯಾಂಡ್
ನಾಲ್ಕನೇ ಸ್ಥಾನ- ಮಲೇಶಿಯಾ


4) ಕರ್ನಾಟಕ ರಾಜ್ಯದ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹರಡಿರುವ  ಕಾವೇರಿ ವನ್ಯ ಜೀವಿ ಧಾಮ ವನ್ನು  ಕೇಂದ್ರ ಸರ್ಕಾರವು ವನ್ಯ ಜೀವಿ ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದೆ.


5) ಭಾರತದ ಮೊದಲ ವಿಶ್ವ ಪಾರಂಪರಿಕ ನಗರ - ಅಹಮದಾಬಾದ್. 

Friday, 20 October 2017

Model question papers for KAS Mains exam conducted by kpsc ಕ ೆಎಎಸ್ ಮುಖ್ಯ ಪರೀಕ್ಷೆ ಗೆ ಮಾದರಿ ಪ್ರಶ್ನೆ ಪತ್ರಿಕೆ

ಮುಂಬರುವ ಡಿಸೆಂಬರ್ ನಲ್ಲಿ ಕೆಪಿಎಸ್ ಸಿ ನಡೆಸಲು ನಿರ್ಧರಿಸಿದ ಕ ೆಎಎಸ್ ಮುಖ್ಯ ಪರೀಕ್ಷೆ ಬರೆಯಲು ತಯಾರಾಗುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಅಂಕಗಳನ್ನು ಪಡೆಯಬಹುದು.
ಮಾದರಿ ಪ್ರಶ್ನೆ ಪತ್ರಿಕೆ
1 - ಸಾರ್ವಜನಿಕ ಆಡಳಿತ
ಪತ್ರಿಕೆ- 1
                ಭಾಗ- 1
1) a)ನವ ಸಾರ್ವಜನಿಕ ಆಡಳಿತದ ಮೂಲ ತತ್ವವೇನೆಂದರೆ' ಪ್ರಾಮಾಣಿಕ ಸಿದ್ದಾಂತ, ತಾತ್ವಿಕತೆ, ಸಾಮಾಜಿಕ ಕಾಳಜಿ ಹಾಗು ಸಕ್ರಿಯತಾವಾದದ ಕಡೆಗೆ ಒಂದು ರೀತಿಯ ಚಲನೆ. ' ಪರಾಮರ್ಶಿಸಿ.  25 ಅಂಕಗಳು


b)ಅಧಿಕಾರದ ಶ್ರೇಣೀಕರಣ ಹಾಗೂ ನಿಯಮಗಳ ವ್ಯವಸ್ಥೆಯಿಂದ ವ್ಯಕ್ತಿತ್ವ ಲೋಪ ಹಾಗೂ ದಕ್ಷತೆ ಸಾಧ್ಯವಾಗುತ್ತದೆ. ವಿವರಿಸಿ.  25 ಅಂಕಗಳು.

2) ಮಾನವನ ಅಗತ್ಯಗಳನ್ನು ಕುರಿತ ಮಾಸ್ಲೋ ಸಿದ್ದಾಂತ  ಹಾಗು ಹರ್ಜಬರ್ಗ ನ ಪ್ರೇರಣೆ ಮತ್ತು ಹೈಜಿಯನ್ ಸಿದ್ಧಾಂತವನ್ನು ಕುರಿತ ಪರಿಕಲ್ಪನೆಯ ಸಾಪೇಕ್ಷ ಉತ್ತಮಿಕೆಯನ್ನು ಹೋಲಿಸಿ.   50 ಅಂಕಗಳು

3) ಭಾರತದ ಆಯವ್ಯಯ ಅಂದಾಜು ಪತ್ರದ ಸಿದ್ಧತೆ, ಅನುಶಾಸನ ಹಾಗೂ ಅನುಷ್ಠಾನದ ವಿವಿಧ ಹಂತಗಳನ್ನು ವಿವರಿಸಿ. 50 ಅಂಕಗಳು.

4)ಸಂಚಾರ ಸಂದೇಶವು  ನಿರ್ವಹಣೆಯ ಹೃದಯ ಮತ್ತು ಸಂಘಟನೆ ಯ ರಕ್ತ ಪ್ರವಾಹ  ಎಂದು ವರ್ಣಿಸಲಾಗಿದೆ. ಚರ್ಚಿಸಿ.  50 ಅಂಕಗಳು

                  ಭಾಗ -

5)a) ಸಮಕಾಲೀನ ಜಗತ್ತಿನಲ್ಲಿ ಸಾರ್ವಜನಿಕ ಆಡಳಿತ  ವಿಷಯಕ್ಕೆ ಇರುವ ವ್ಯಾಪ್ತಿ ಅವಕಾಶ ಕುರಿತು  ವಿವರಿಸಿ.  25 ಅಂಕಗಳು


b) ಆಜ್ಞಾಪನೆ ಸರಪಳಿಯಲ್ಲಿ ಅಧಿಕಾರ ಪ್ರತಿನಿಯೋಜನೆಯಿಂದಾಗುವ ಅನುಕೂಲತೆಗಳನ್ನು ನಿರೂಪಿಸಿ. 25 ಅಂಕಗಳು


6)ಸಾರ್ವಜನಿಕ ಮತ್ತು ಖಾಸಗಿ ಆಡಳಿತಗಳಿಗೆ ಇರುವ ವ್ಯತ್ಯಾಸಗಳ ನ್ನು ವಿವರಿಸಿ.   50 ಅಂಕಗಳು


7) "ಆಡಳಿತಾತ್ಮಕ ನಾಯಕತ್ವದ "ಅಗತ್ಯ ಲಕ್ಷಣಗಳನ್ನುಚರ್ಚಿಸಿ. 50  ಅಂಕಗಳು.


8)  ಸಾರ್ವಜನಿಕ ಆಡಳಿತದಲ್ಲಿ "ವ್ಯವಸ್ಥೆ ಗಳ ಸಿದ್ದಾಂತ ದ " ಮುಖ್ಯ ತತ್ವಗಳು ಯಾವುವು...ಪರಾಮರ್ಶೆ ಮಾಡಿ.  50 ಅಂಕಗಳು


Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು