Sunday, 22 October 2017

Model question papers for FDA AND SDA EXAM Conducted by kpsc

ಮುಂಬರುವ ಎಫ್ ಡಿ ಎ ಮತ್ತು ಎಸ್ ಡಿ ಎ  ಪರೀಕ್ಷೆಗೆ  ಸಹಾಯಕವಾಗುವ ಮಾದರಿ ಪ್ರಶ್ನೆ ಪತ್ರಿಕೆಯನ್ನು  ಈ ಅಂಕಣದಲ್ಲಿ ನೀಡಲಾಗಿದೆ.
1) 2017 ರ ಆನೆ ಗಣತಿಯ ಮುಖ್ಯಾಂಶಗಳು
ದೇಶದಲ್ಲಿರುವ ಒಟ್ಟು ಆನೆಗಳ ಸಂಖ್ಯೆ- 27,312
ದಕ್ಷಿಣ ಭಾರತದಲ್ಲಿ ಇರುವ ಆನೆಗಳ ಸಂಖ್ಯೆ- 11960
ಈಶಾನ್ಯ ಭಾರತದಲ್ಲಿ ಇರುವ ಆನೆಗಳ ಸಂಖ್ಯೆ- 10,139
ಉತ್ತರ ಭಾರತದಲ್ಲಿ ಇರುವ ಆನೆಗಳ ಸಂಖ್ಯೆ- 2085
ಪೂರ್ವ ಕೇಂದ್ರ ವಲಯ -3128

ಅತಿ ಹೆಚ್ಚು ಆನೆಗಳ ಸಂಖ್ಯೆ ಹೊಂದಿರುವ ರಾಜ್ಯಗಳು
ಪ್ರಥಮ ಸ್ಥಾನ ಕರ್ನಾಟಕ- 6049
ದ್ವಿತೀಯ ಸ್ಥಾನ ಅಸ್ಸಾಂ- 5719
ತೃತೀಯ ಸ್ಥಾನ ಕೇರಳ- 3054
ನಾಲ್ಕನೇ ಸ್ಥಾನ- ತಮಿಳುನಾಡು- 2761
•ವಿಶ್ವ ಆನೆಗಳ ದಿನ-ಆಗಸ್ಟ್ 12
•ಗಜಯಾತ್ರಾ ಯೋಜನೆ- ದೇಶಾದ್ಯಂತ ಆನೆಗಳ ನ್ನು ಸಂರಕ್ಷಿಸುವ ಉದ್ದೇಶದಿಂದ ಆರಂಭಿಸಲಾದ ಅಭಿಯಾನ 2017 ರ ಆಗಸ್ಟ್ 12 ರಿಂದ ಪ್ರಾರಂಭ.



2) ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಷಯಗಳ ವಿ .ವಿ ಮಣಿಪುರದಲ್ಲಿ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

3)ಮಾನ್ಸುನ್ ಟೂರಿಸಂ  ವರದಿ 2017
•ಸಮೀಕ್ಷೆ ನಡೆಸಿದವರು  -" ಮೇಕ್ ಮೈ ಟ್ರಿಪ್ ಆನ್ ಲೈನ್ ಟ್ರಾವೆಲ್ಸ್  ಕಂಪನಿ.
• ಮಳೆಗಾಲದಲ್ಲಿ ಭಾರತೀಯರು ಭೇಟಿ ನೀಡಲು ಬಯಸುವ ಜನಪ್ರಿಯ ದೇಶೀಯ ತಾಣಗಳ ಪಟ್ಟಿ ಕೆಳಗಿನಂತೆ ಇದೆ.
ಮೊದಲ ಸ್ಥಾನ- ಗೋವಾ
ಎರಡನೆಯ ಸ್ಥಾನ- ಹಿಮಾಚಲ ಪ್ರದೇಶ ದ ಮನಾಲಿ
ಮೂರನೆಯ ಸ್ಥಾನ-  ಮೈಸೂರು
ನಾಲ್ಕನೇ ಸ್ಥಾನ- ಊಟಿ


ಅಂತರರಾಷ್ಟ್ರೀಯ ತಾಣಗಳ ಪಟ್ಟಿ
ಪ್ರಥಮ ಸ್ಥಾನ- ದುಬೈ
ಎರಡನೆಯ ಸ್ಥಾನ-  ಸಿಂಗಪುರ
ಮೂರನೆಯ ಸ್ಥಾನ- -ಥೈಲ್ಯಾಂಡ್
ನಾಲ್ಕನೇ ಸ್ಥಾನ- ಮಲೇಶಿಯಾ


4) ಕರ್ನಾಟಕ ರಾಜ್ಯದ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹರಡಿರುವ  ಕಾವೇರಿ ವನ್ಯ ಜೀವಿ ಧಾಮ ವನ್ನು  ಕೇಂದ್ರ ಸರ್ಕಾರವು ವನ್ಯ ಜೀವಿ ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದೆ.


5) ಭಾರತದ ಮೊದಲ ವಿಶ್ವ ಪಾರಂಪರಿಕ ನಗರ - ಅಹಮದಾಬಾದ್. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು