● ಕಸ್ತೂರಿ ಅರಿಶಿನ ಬಹು ಉಪಯುಕ್ತ ಸೌಂದರ್ಯ ವರ್ಧಕ ವಸ್ತುವಾಗಿದೆ.ಬಹಳ ಸುಲಭವಾಗಿ ಇದರಿಂದ ಗರಿಷ್ಠ ಮಟ್ಟದ ಉಪಯೋಗ ಪಡೆಯಬಹುದು.ಅವುಗಳೆಂದರೆ
°ಕಸ್ತೂರಿ
ಅರಿಶಿನವನ್ನು ಕಡಲೆ ಹಿಟ್ಟು ಹಾಗೂ ಹಸಿ ಹಾಲಿನೊಂದಿಗೆ ಕಲೆಸಿ ಸೋಪಿನ ಬದಲು ಸ್ನಾನಕ್ಕೆ
ಬಳಸುವುದರಿಂದ ಚರ್ಮದ ಮೇಲಿನ ಒಣ ಕೋಶಗಳು ಹೋಗುವುದರೊಂದಿಗೆ ತ್ವಚೆ
ಕಾಂತಿಯುತವಾಗುತ್ತದೆ.ಗೌರವರ್ಣ ಪಡೆಯಬಹುದು.
♤♤♤♤ಸೌತೆಕಾಯಿ♤♤♤♤
● ಪ್ರತಿಯೊಂದು ಊಟದ ಜೊತೆಗೆ ಹಸಿ ತರಕಾರಿಯಾಗಿ ಉಪಯೋಗಿಸುವ ಸೌತೆಕಾಯಿ ಅದರ ಸೌಂದರ್ಯ ವರ್ಧಕ ಗುಣಗಳಿಗೂ ಪ್ರಸಿದ್ಧ.
ಸೌತೆಕಾಯಿ
ರಸವನ್ನು ನಿಂಬೆಯ ರಸದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು
ಕಲೆಗಳು ಕಡಿಮೆಯಾಗುತ್ತವೆ ಹಾಗೂ ಬಿಸಿಲಿನಿಂದಾಗಿ ಕಪ್ಪಾದ ಚರ್ಮದ ಬಣ್ಣ
ತಿಳಿಯಾಗುತ್ತದೆ.
•ಕತ್ತರಿಸಿದ
ಸೌತೆಕಾಯಿ ಓಳುಗಳನ್ನು ರಾತ್ರಿವೇಳೆ ಕಣ್ಣುಗಳ ಮೇಲೆ ಇಟ್ಟುಕೊಂಡು ವಿಶ್ರಾಂತಿ
ಪಡೆಯುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವೃತ್ತ ಕಡಿಮೆಯಾಗುತ್ತದೆ.
•ಸೌತೆಕಾಯಿ
ರಸವನ್ನು ಹತ್ತಿಯಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಂಡು 20 ನಿಮಿಷದ ನಂತರ ತಣ್ಣನೆಯ
ನೀರಿನಿಂದ ತೊಳೆಯುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವೃತ್ತ ಮಾಯವಾಗಿ ಕಣ್ಣುಗಳು
ಆರೋಗ್ಯದಿಂದ ಹೊಳೆಯುತ್ತವೆ.
■■■■■■■■■■ಜೇನುತುಪ್ಪ■■■■■■■■■■■
ಮನೆ ಮನೆಯಲ್ಲೂ ಸುಲಭವಾಗಿ ಸಿಗುವ ಹಾಗೂ ಮಕ್ಕಳಿಂದ ಹಿಡಿದು ವೃದ್ಧರೂ ಕೂಡ ಇಷ್ಟ ಪಡುವ ನೈಸರ್ಗಿಕ ಸಿಹಿ ಈ ಜೇನುತುಪ್ಪ.
ಇದರ ಸೌಂದರ್ಯ ವರ್ಧಕ ಗುಣಗಳು ಅಪಾರ.
ಇದು ನೈಸರ್ಗಿಕ ಬ್ಲೀಚಿಂಗ್ ರೀತಿ ಕಾರ್ಯ ನಿರ್ವಹಿಸುವ ವಸ್ತುವಾಗಿದೆ.
ಸಮ
ಪ್ರಮಾಣದ ನಿಂಬೆ ರಸ ಹಾಗೂ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ
20 ನಿಮಿಷ ಒಣಗಲು ಬಿಡಬೇಕು.ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯುವುದರಿಂದ ಮುಖದ
ಮೇಲಿನ ಕಪ್ಪು ಕಲೆಗಳು ಕಡಿಮೆಯಾಗಿ ತ್ವಚೆ ಗೌರವರ್ಣ ಪಡೆಯುತ್ತದೆ.
No comments:
Post a Comment