Tuesday, 14 November 2017

ಕನ್ನಡ ಸುಭಾಷಿತಗಳು


  1. ಮುಗುಳ್ನಗೆ ಎನ್ನುವುದು ದಯಾಳುತನದ ಜಾಗತಿಕ ಭಾಷೆ.---ವಿಲಿಯಂ ಆರ್ಥರ್ ವಾರ್ಡ.
  2. ಅಳಬೇಡಿ.ನೀವು ಯಾವುದಕ್ಕಾಗಿ ಅಳುತ್ತೀದ್ದೀರೋ ಅದು ಮುಗಿದುಹೋಗಿದೆ.-----ಡಾ.ಸಿಯಸ್.
  3. ಮಕ್ಕಳು ನಗುವುದನ್ನು ಅವರ ಹೆತ್ತವರಿಂದ ಕಲಿಯುತ್ತಾರೆ.-----ಸಿನಿಚಿ ಸುಜುಕಿ.
  4. ಜನರು ವಿಶ್ವಾಸದ ಕೊರತೆಯಿಂದಾಗಿ ಸವಾಲುಗಳನ್ನು ಎದುರಿಸಲು ಹೆದರುತ್ತಾರೆ.ನನಗೆ ನನ್ನ ಮೇಲೆ ಪೂರ್ಣ ವಿಶ್ವಾಸವಿದೆ.------'ಮಹಮ್ಮದ್ ಅಲಿ.
  5. ಪ್ರಯತ್ನಿಸುವವನಿಗೆ ಯಾವುದೂ ಅಸಾಧ್ಯವಲ್ಲ ----ಅಲೆಗ್ಸಾಂಡರ್ ದಿ ಗ್ರೇಟ್.
  6. ಯಾವುದೇ ಕೆಲಸ ಅದು ಮುಗಿಸುವವರೆಗೆ ಅಸಾಧ್ಯವೆಂದೇ ತೋರುತ್ತದೆ.-------ನೆಲ್ಸನ್ ಮಂಡೇಲಾ.
  7. ತಪ್ಪುಗಳನ್ನು ಹುಡುಕಬೇಡಿ, ಪರಿಹಾರಗಳನ್ನು ಹುಡುಕಿ.-----ಹೆನ್ರಿ ಫೋರ್ಡ್.
  8. ನಾವು ನಮ್ಮ ಮನೆಗಳನ್ನು ರೂಪಿಸುತ್ತೇವೆ. ಬಳಿಕ ಅವು ನಮ್ಮನ್ನು ರೂಪಿಸುತ್ತವೆ.-------ವಿನ್ ಸ್ಟನ್ ಚರ್ಚಿಲ್.
  9. ಅಪಾಯವನ್ನು ಎದುರಿಸುವಾಗ ನಾಯಕನಾದವನು ಗುಂಪನ್ನು ಎದುರಿನಿಂದ ಮುನ್ನಡೆಸಬೇಕು.ಸಂಭ್ರಮ ಆಚರಣೆಯ  ವೇಳೆಗೆ ಗುಂಪಿನ ಹಿಂದಿರಬೇಕು.-----ನೆಲ್ಸನ್ ಮಂಡೇಲಾ.
  10. ಅಪಾಯದಿಂದ ರಕ್ಷಣೆಗೆ ಪ್ರಾರ್ಥಿಸಿ.ಆದರೆ ಅಪಾಯಗಳನ್ನು ಎದುರಿಸುವಾಗ ಧೈರ್ಯದಿಂದಿರಿ.-----ರವೀಂದ್ರನಾಥಟ್ಯಾಗೋರ್.
  11. ಧೈರ್ಯ ಎಂದರೆ ಭಯವೇ ಇಲ್ಲದಿರುವುದಲ್ಲ.ಭಯದ ಮೇಲಿನ ನಿಯಂತ್ರಣ ಮತ್ತು ಭಯವನ್ನು ಎದುರಿಸುವುದೇ ಧೈರ್ಯ.------ಮಾರ್ಕ್ ಟೈನ್.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು