ಹಣ್ಣುಗಳು
ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಪ್ರಾಮುಖ್ಯತೆ ಅವುಗಳಿಗೆ ಸೌಂದರ್ಯವರ್ಧಕ
ಗುಣಗಳಿಗೂ ಇದೆ.ಪ್ರತಿ ಮನೆಗಳಲ್ಲಿ ಸುಲಭವಾಗಿ ದೊರೆಯುವ ತಾಜಾ ಹಣ್ಣುಗಳನ್ನು ಬಳಸಿ
ಮನೆಯಲ್ಲಿಯೇ ತ್ವಚೆಯ ಸೌಂದರ್ಯವನ್ನು ಅತೀ ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚಿಲ್ಲದೆಯೇ
ಪಡೆಯಬಹುದು. ಅವುಗಳ ಒಂದು ಸಣ್ಣ ಪರಿಚಯ ಈ ಲೇಖನದಲ್ಲಿ ನೀಡುವುದು ನಮ್ಮ ಉದ್ದೇಶ.
ಕಿವಿ ಹಣ್ಣು
ಕಿವಿ
ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸಲು
ಸಹಕಾರಿ.ಮೊಟ್ಟೆಯ ಬಿಳಿ ಭಾಗವನ್ನು ಕಿವಿ ಹಣ್ಣಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ
ಹಚ್ಚಿಕೊಳ್ಳುವುದರಿಂದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.
ಬಾಳೆಹಣ್ಣು
●●●●●●●●
ಬಾಳೆಹಣ್ಣಿನಲ್ಲಿ
ವಿಟಮಿನ್ ಎ ಹೇರಳವಾಗಿರುತ್ತದೆ.ಬಾಳೆಹಣ್ಣಿನ್ನು ಜೇನುತುಪ್ಪದೊಂದಿಗೆ ಕಲಸಿ ಮುಖಕ್ಕೆ
ಹಚ್ಚಿ ಇಪ್ಪತ್ತು ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯುವುದರಿಂದ ತ್ವಚೆ
ಮೃದುವಾಗುತ್ತದೆ.
●●●●●●●●
ಬಾಳೆಹಣ್ಣಿನ
ಜೊತೆಗೆ ಬೆಣ್ಣೆ ಹಣ್ಣನ್ನು ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಮುಖ ಮತ್ತು
ಕುತ್ತಿಗೆಗೆ ಹಚ್ಚಿಕೊಳ್ಳಿ.ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.
ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.
ಪಪ್ಪಾಯಿ ಹಣ್ಣು
●●●●●●●●●●●●●●●●●
ಪಪ್ಪಾಯಿ
ಹಣ್ಣು ಮತ್ತು ಬಾದಾಮಿಯನ್ನು ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಮುಖ ಮತ್ತು
ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷದ ನಂತರ ತೊಳೆಯಿರಿ. ಈ ರೀತಿ ಮಾಡುವುದರಿಂದ ಮುಖದ
ತಾಜಾತನ ಹೆಚ್ಚುತ್ತದೆ.
♤♤♤♤♤♤♤♤♤♤♤♤♤♤♤
ಪಪ್ಪಾಯಿ
ಮತ್ತು ಜೇನುತುಪ್ಪವನ್ನು ಮಿಶ್ರ ಮಾಡಿ ಮುಖಕ್ಕೆ ವಾರದಲ್ಲಿ ಮೂರು ದಿನ ಫೇಸ್ ಫ್ಯಾಕ್
ಹಾಕುವುದರಿಂದ ಮುಖದಲ್ಲಿನ ಕಪ್ಪು ಕಲೆಗಳು ಬಹಳ ಕಡಿಮೆ ಅವಧಿಯಲ್ಲಿ ಕಡಿಮೆಯಾಗುತ್ತವೆ.
ಸ್ಟ್ರಾಬೆರಿ ಹಣ್ಣು
♡♡♡♡♡♡♡♡♡♡♡♡♡♡♡
ಸ್ಟ್ರಾಬೆರಿ
ಹಣ್ಣು ಮತ್ತು ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ
ಬಿಸಿಲಿನಿಂದಾಗಿ ಮುಖದ ಮೇಲೆ ಮೂಡಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತವೆ ಮತ್ತು ಮುಖದ
ಕಾಂತಿ ಹೆಚ್ಚುತ್ತದೆ.
ದ್ರಾಕ್ಷಿ ಹಣ್ಣು
♧♧♧♧♧♧♧♧♧♧♧♧♧♧
ಬೀಜ
ತೆಗೆದು ದ್ರಾಕ್ಷಿಯನ್ನು ರುಬ್ಬಿಕೊಳ್ಳಿ. ಅದಕ್ಕೆ ರೋಸ್ ವಾಟರ್ ಮತ್ತು
ಮುಲ್ತಾನಿಮಿಟ್ಟಿ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ
ಇಪ್ಪತ್ತು ನಿಮಿಷದ ನಂತರ ಮುಖ ತೊಳೆದುಕೊಳ್ಳಿ ಮತ್ತು ಹಾಗೆಯೇ ಒಣಗಲು ಬಿಡಿ.
ಒಣಚರ್ಮದವರಿಗೆ ಇದು ಅತ್ಯಂತ ಪರಿಣಾಮಕಾರಿ ಫೇಸ್ ಪ್ಯಾಕ್.
ನಿಮ್ಮ ಸಲಹೆ ---ಸೂಚನೆಗಳ ನಿರೀಕ್ಷೆಯಲ್ಲಿರುವ.........
No comments:
Post a Comment