Tuesday, 14 November 2017

fruits face pack for beautiful skin ಸುಂದರ ತ್ವಚೆಗೆ ಹಣ್ಣಿನ ಫೇಸ್ ಫ್ಯಾಕ್

ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಪ್ರಾಮುಖ್ಯತೆ ಅವುಗಳಿಗೆ ಸೌಂದರ್ಯವರ್ಧಕ ಗುಣಗಳಿಗೂ ಇದೆ.ಪ್ರತಿ ಮನೆಗಳಲ್ಲಿ ಸುಲಭವಾಗಿ ದೊರೆಯುವ ತಾಜಾ ಹಣ್ಣುಗಳನ್ನು ಬಳಸಿ ಮನೆಯಲ್ಲಿಯೇ ತ್ವಚೆಯ ಸೌಂದರ್ಯವನ್ನು ಅತೀ ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚಿಲ್ಲದೆಯೇ ಪಡೆಯಬಹುದು. ಅವುಗಳ ಒಂದು ಸಣ್ಣ ಪರಿಚಯ ಈ ಲೇಖನದಲ್ಲಿ ನೀಡುವುದು ನಮ್ಮ ಉದ್ದೇಶ.

ಕಿವಿ ಹಣ್ಣು
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.ಮೊಟ್ಟೆಯ ಬಿಳಿ ಭಾಗವನ್ನು ಕಿವಿ ಹಣ್ಣಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.


ಬಾಳೆಹಣ್ಣು
●●●●●●●●
ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುತ್ತದೆ.ಬಾಳೆಹಣ್ಣಿನ್ನು ಜೇನುತುಪ್ಪದೊಂದಿಗೆ ಕಲಸಿ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯುವುದರಿಂದ ತ್ವಚೆ ಮೃದುವಾಗುತ್ತದೆ.
●●●●●●●●
ಬಾಳೆಹಣ್ಣಿನ ಜೊತೆಗೆ ಬೆಣ್ಣೆ ಹಣ್ಣನ್ನು  ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.
ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.








ಪಪ್ಪಾಯಿ ಹಣ್ಣು
●●●●●●●●●●●●●●●●●


ಪಪ್ಪಾಯಿ ಹಣ್ಣು ಮತ್ತು ಬಾದಾಮಿಯನ್ನು ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷದ ನಂತರ ತೊಳೆಯಿರಿ. ಈ ರೀತಿ ಮಾಡುವುದರಿಂದ ಮುಖದ ತಾಜಾತನ ಹೆಚ್ಚುತ್ತದೆ.


♤♤♤♤♤♤♤♤♤♤♤♤♤♤♤
ಪಪ್ಪಾಯಿ ಮತ್ತು ಜೇನುತುಪ್ಪವನ್ನು ಮಿಶ್ರ ಮಾಡಿ ಮುಖಕ್ಕೆ ವಾರದಲ್ಲಿ ಮೂರು ದಿನ ಫೇಸ್ ಫ್ಯಾಕ್ ಹಾಕುವುದರಿಂದ ಮುಖದಲ್ಲಿನ ಕಪ್ಪು ಕಲೆಗಳು ಬಹಳ ಕಡಿಮೆ ಅವಧಿಯಲ್ಲಿ ಕಡಿಮೆಯಾಗುತ್ತವೆ.


ಸ್ಟ್ರಾಬೆರಿ ಹಣ್ಣು
♡♡♡♡♡♡♡♡♡♡♡♡♡♡♡



ಸ್ಟ್ರಾಬೆರಿ ಹಣ್ಣು ಮತ್ತು ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಬಿಸಿಲಿನಿಂದಾಗಿ ಮುಖದ ಮೇಲೆ ಮೂಡಿರುವ ಕಪ್ಪು ಕಲೆಗಳು  ಕಡಿಮೆಯಾಗುತ್ತವೆ ಮತ್ತು ಮುಖದ ಕಾಂತಿ ಹೆಚ್ಚುತ್ತದೆ.


ದ್ರಾಕ್ಷಿ ಹಣ್ಣು
♧♧♧♧♧♧♧♧♧♧♧♧♧♧


 ಬೀಜ ತೆಗೆದು ದ್ರಾಕ್ಷಿಯನ್ನು ರುಬ್ಬಿಕೊಳ್ಳಿ. ಅದಕ್ಕೆ ರೋಸ್ ವಾಟರ್  ಮತ್ತು ಮುಲ್ತಾನಿಮಿಟ್ಟಿ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷದ ನಂತರ  ಮುಖ ತೊಳೆದುಕೊಳ್ಳಿ ಮತ್ತು ಹಾಗೆಯೇ ಒಣಗಲು ಬಿಡಿ. ಒಣಚರ್ಮದವರಿಗೆ ಇದು ಅತ್ಯಂತ ಪರಿಣಾಮಕಾರಿ ಫೇಸ್ ಪ್ಯಾಕ್.






ನಿಮ್ಮ ಸಲಹೆ ---ಸೂಚನೆಗಳ  ನಿರೀಕ್ಷೆಯಲ್ಲಿರುವ.........

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು