Tuesday, 14 November 2017

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ.
ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು.

□  □ □ □ □ □ □ □ □ □ □ □ □ □ □

    ತತ್ಸಮ - - - -  - - - - - - - - - ತದ್ಭವ
(ಸಂಸ್ಕೃತ )                    (ಕನ್ನಡ )
■ ನರ್ತಕಿ - ನಚ್ಚಣಿ
■ ಲಕ್ಷ್ಮಿ - ಲಕ್ಕಿ ,ಲಕುಮಿ
■ವೇಷ - ವೇಸ
■ಲೇಪ - ಲಪ್ಪ
■ವರ್ಧಮಾನ - ಬದ್ದವಣ
■ವಜ್ರ - ಬಜ್ಜರ
■ವತ್ಸಲಾ - ಬಚ್ಚಳೆ
■ವಿಸ್ತಾರ - ಬಿತ್ತರ
■ವೃದ್ಧ - ವಡ್ಡ
■ವೃದ್ಧಿ - ಬಡ್ಡಿ
■ವ್ಯಾಖ್ಯಾನ - ವಕ್ಕಣೆ
■ವ್ಯಾಘ್ರ - ಬಗ್ಗ
■ವರ್ಧಕಿ - ಬಡಗಿ
■ವಿದ್ಯೆ - ಬಿಜ್ಜೆ
■ವೈದ್ಯ - ಬೆಜ್ಜ
■ವಿಜ್ಞಾನ - ಬಿನ್ನಣ
■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ
■ಶೂನ್ಯ - ಸೊನ್ನೆ
■ಅವಸ್ಥೆ - ಅವತೆ
■ಅರ್ಹ - ಅರುಹ
■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ)
■ಅಂಗುಷ್ಠ - ಅಂಗುಟ ,ಉಂಗುಟ.
■ಆಲಸ್ಯ - ಆಲಸ
■ಆಜ್ಞಾ, ಆಜ್ಞೆ - ಆಣೆ
■ಕ್ರಕಚ - ಗರಗಸ
■ಕ್ಷಣ - ಚಣ
■ಗ್ರಹ - ಗರ
■ಗ್ರಹಣ - ಗರಣ
■ಗ್ರಾಮೀಣ - ಗಾವಿಲ
■ಲಕ್ಷ - ಲಕ್ಕ
■ ಶ್ರೇಷ್ಠಿ - ಸೆಟ್ಟಿ
■ಸಂಸ್ಕೃತ - ಸಕ್ಕದ
■ ಸನ್ಮಾನ - ಸಮ್ಮಾನ
■ ಸಂಜ್ಞಾ - ಸನ್ನೆ
■ಸೂತ್ರಿಕೆ - ಸುತ್ತಿಗೆ
■ ಸ್ವರ್ಗ - ಸಗ್ಗ
■ಸ್ವರ್ಣ - ಸೊನ್ನ
■ ಸಂಜ - ಶಿವ
■ಹಿಚಿಕೆ - ಹಿಕ್ಕೆ
■ಸಾಕ್ಷಿ - ಸಕ್ಕಿ
■ಸೃಷ್ಟಿ - ಹುಟ್ಟು
■ಶರ್ವ - ಸರ್ವ ,ಸಬ್ಬ
■ ಸುರಪರ್ಣಿಕೆ - ಸುರಹೊನ್ನೆ
■ಶ್ರದ್ಧಾ - ಸಡ್ಡೆ
■ದಿಶಾ - ದಿಶೆ, ದೆಸೆ.
■ಹಸ್ತ - ಹತ್ತ
■ಹವ್ಯ - ಹಬ್ಬ
■ಕ್ಷಪಣ - ಸವಣ
■ಕ್ಷಾರ - ಕಾರ
■ಶ್ರೇಣಿ - ಕೇಣಿ
■ಕ್ಷೀರ - ಕೀರ
■ ಕೀರ್ತೀ - ಕೀರುತಿ
■ಕುಬ್ಜೆ -  ಕುಬುಜೆ
■ಕ್ರೂರ - ಕೂರ
■ಕೂಷ್ಮಾಂಡ - ಕುಂಬಳ
■ಕ್ರೌಂಚ - ಕೊಂಚೆ
■ ಗವ್ಯೂತ - ಗಾವುದ
■ಪ್ರತಿ - ಪಡಿ
■ಪ್ರಣವ - ಪಣವ
■ ಪ್ರಸಾದ - ಹಸಾದ
■ ಪ್ರಸರ - ಪಸರ
■ ಚಂದ್ರ - ಚಂದಿರ
■ ಚತುರ - ಚದುರ
■ ಚತುಷ್ಕ - ಚೌಕ
■  ಚತುರ್ಥಿ - ಚೌತಿ
■  ಜ್ವರ - ಜರ
■ ಜನ್ಮ - ಜನುಮ
■ ಜ್ಯೋತಿಷ - ಜೋಯಿಸ
■ ತಪಸ್ವಿ - ತವಸಿ
■ ತ್ವರಿತ - ತುರಿತ
■ ತ್ಯಾಗ - ಚಾಗ
■ ತ್ರಿಪದಿ - ತಿವದಿ
■ ತ್ರಿಶೂಲ - ತಿಸುಳ
■ ದ್ವಿಗುಣ - ದುಗುಣ
■ ದ್ವಿತೀಯಾ - ಬಿದಿಗೆ
■ ದ್ವೀಪ - ದೀಪ
■ ಧ್ವನಿ - ದನಿ
■ ವಶ - ಬಸ
■ದ್ರೋಣಿ - ದೋಣಿ
■ದ್ಯೂತ - ಜೂಜು
■ನ್ಯಾಯ - ನಾಯ
■ ನಿರೀಕ್ಷಿಸು - ನಿರುಕಿಸು
■ ಪದ್ಮ - ಪದುಮ
■ ಪತಿವ್ರತೆ - ಹದಿಬದೆ
■ ಪರೀಕ್ಷೆ -  ಪರಿಕೆ
■ ವ್ಯಾಧ - ಬಿಯದ
■ ವ್ಯಾಜ - ವಾಯ
■ ವ್ಯವಹಾರ - ಬೇಹರ ,ಬೇಹಾರ
■ ವ್ಯಾಸಂಗ - ಬಿಯಸಂಗ
■ ಪ್ರಣತಿ - ಹಣತಿ
■ ವೃಷಭ - ಬಸವ
■ ಪ್ರತಿಹಾರ - ಪಡಿಯರ
■ ಪ್ರಲಾಪಿಸು - ಪಳಯಿಸು
■ ಪ್ರಕರಣ - ಹಗರಣ
■ ಪ್ರಯಾಣ - ಪಯಣ
■ ಪ್ರವಾಲ - ಹವಳ
■ ಪ್ರಸಾಧನ - ಪಸದನ
■ ಪ್ರಾಯ - ಹರಯ
■ ಪ್ರಭಾ - ಹಬೆ
■ ಪ್ರಮಾಣ - ಹವಣ
■ ನಿದ್ರಾ - ನಿದ್ದೆ
■ ನಿಶ್ಚಲ - ನಿಚ್ಚಳ
■ ತಥ್ಯ - ತತ್ತ
■ ಧಮ್ಮ - ದಮ್ಮ
■ ದೃಷ್ಟಿ - ದಿಟ್ಟಿ
■ ತ್ರಿಗುಣ - ತಿಗುಣ
■ ತೀಕ್ಷ್ಣ - ತಿಕ್ಕ
■ ಜೋತ್ಸ್ನಾ - ಜೊನ್ನ
■ ಛತ್ರಿಕಾ -  ಸುತ್ತಿಗೆ
■ ಚಿತ್ರ - ಚಿತ್ತಾರ
■ ಚರ್ಮ - ಚಮ್ಮ
■ ಘೋಷ್ಠಿ - ಗೊಟ್ಟಿ
■ ಕೂರ್ಪಾಸ - ಕುಪ್ಪಸ
■ ಕುಸ್ತುಂಬರ - ಕೊತ್ತಂಬರಿ
■ ಕುಬ್ಜ - ಗುಜ್ಜ
■ ಕಾವ್ಯ - ಕಬ್ಬ
■ ಕಾರ್ಯ - ಕಜ್ಜ
■ ಕಸ್ತೂರಿ - ಕತ್ತುರಿ
■ ಕರ್ತರಿ - ಕತ್ತರಿ
■ ಕನ್ಯಾ - ಕನ್ನೆ
■ ನಿತ್ಯ - ನಿಚ್ಚ
■ ಸಂಧ್ಯಾ - ಸಂಜೆ
■ ಸ್ತಂಭ - ಕಂಬ
■ ಸ್ಪಂದನ - ಪಂದನ
■ ಸ್ವಾಮಿ - ಸಾಮಿ
■ ವ್ಯಾಕುಲ - ಬಾಗುಳ
■ ರಾಶಿ - ರಾಸಿ
■ ವರ್ಷ  - ಬರಿಸ
■ ರಕ್ತ - ರಕುತ
■ ಯುಕ್ತಿ - ಯುಕುತಿ
■ ಯುಗ್ಮ - ಜುಗುಮ
■ ಯತ್ನ - ಯತನ , ಜತನ
■ ಮೂರ್ತಿ - ಮೂರುತಿ
■ ಮುಗ್ಧ - ಮುಗುದ
■ ಮುಕ್ತಿ - ಮುಕುತಿ
■ ಮರ್ಕಟ - ಮಂಕಟ ,ಮಂಗಡ
■ ಭಕ್ತಿ - ಬಕುತಿ
■ ಮಷಿ - ಮಸಿ
■ ಪಕ್ಷ - ಪಕ್ಕ
■ ಪಕ್ಷಿ - ಹಕ್ಕಿ
■ ಪರ್ವ - ಹಬ್ಬ
■ ಪತ್ರಿಕಾ - ಪುತ್ಥಳಿ
■ ಪ್ರಜ್ವಲ - ಪಜ್ಜಳ
■ ಪ್ರತಿಷ್ಠಾ - ಹದಿಟೆ
■ ಪುಸ್ತಕ - ಹೊತ್ತಿಗೆ
■ ಪೌರ್ಣಿಮಾ - ಹುಣ್ಣಿಮೆ
■ ಬ್ರಹ್ಮ - ಬೊಮ್ಮ
■ ಮಾರ್ಜನ - ಮಜ್ಜನ
■ ಮೃತ್ಯು - ಮಿತ್ತು
■ ರತ್ನ - ರತುನ
■ ರಾಕ್ಷಸ - ರಕ್ಕಸ
■ ಲಕ್ಷಣ - ಲಕ್ಕಣ
■ ವರ್ಷ - ವರುಸ
■ ಅವಸ್ಥೆ - ಅವಿತೆ
■ ಅರ್ಹ - ಅರುಹ
■ ಪರಶು - ಪಸು
■ ಸಲ್ಫಲ - ಸಪ್ಪಳ
■ ಸ್ಫಿಕ್ಕಾ - ಹಿಕ್ಕೆ
■ ಪಾಷಾಣ - ಪಾಸಾನ
■ ಪಾಶ - ಪಾಸ



ನಿಮ್ಮ ಸಲಹೆ ಮತ್ತು ಸೂಚನೆಗಳಿಗೆ ಸದಾ ಸ್ವಾಗತ.

11 comments:

  1. ಬ್ಯಾದಿ ಪದದ ತತ್ಸಮ ರೂಪ ಏನು?

    ReplyDelete
  2. ಧರ್ಮ ಪದದ ತದ್ಭವ ರೂಪ ಏನು?

    ReplyDelete
  3. ಬ್ಯಾದಿ ಪದದ ತತ್ಸಮ ರೂಪ ಏನು?

    ReplyDelete
  4. ಧರ್ಮ ತದ್ದವ ರೂಪ ದಮ್ಮ

    ReplyDelete
  5. ಅಬ್ಜೋದರ ಪದದ ತದ್ಭವ ರೂಪ

    ReplyDelete

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು