Tuesday, 14 November 2017

kannada medium notes for sub registrar kpsc exam

☆ 2016 ನೇ ಆಗಸ್ಟ್ 8 ಮತ್ತು 9 ರಂದು ಮೈಸೂರಿನಲ್ಲಿ ಭಾರತ ಮತ್ತು ಜಪಾನ್ ನಡುವಿನ  7 ನೇ ಅಂತರರಾಷ್ಟ್ರೀಯ  ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ನಡೆಯಿತು.
ಈ ಸಮ್ಮೇಳನದ ಕೇಂದ್ರ ವಿಷಯ "ಭವಿಷ್ಯದ ಸವಾಲುಗಳು ಮತ್ತು ಪರಿಹಾರಗಳು " ಎಂಬುದಾಗಿತ್ತು.

☆ಪ್ರವಾಸೋದ್ಯಮ ಅಭಿವೃದ್ಧಿ.
ಪ್ರವಾಸೋದ್ಯಮಕ್ಕೆ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ತೆಗೆದುಕೊಂಡ ಅತ್ಯುತ್ತಮ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಲಭಿಸಿದೆ.
ಮೊದಲ ಸ್ಥಾನ ಪಡೆದ ರಾಜ್ಯ-ಮಧ್ಯಪ್ರದೇಶ
ಎರಡನೇ ಸ್ಥಾನ ಪಡೆದ ರಾಜ್ಯ -ಗುಜರಾತ್
ಮೂರನೇ ಸ್ಥಾನ ಪಡೆದ ರಾಜ್ಯ- ಕರ್ನಾಟಕ....
ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳೆಂದರೆ...
•ಅತ್ಯುತ್ತಮ ಪ್ರವಾಸೋದ್ಯಮ ಸ್ನೇಹಿ ರೈಲು ನಿಲ್ದಾಣ-ರಾಜಸ್ತಾನದ ಸವಾಯ್ ಮಧೋಪುರ ರೈಲು ನಿಲ್ದಾಣ.
•ಅತ್ಯುತ್ತಮ ವಿಮಾನ ನಿಲ್ದಾಣ-ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ.
•ಅತ್ಯುತ್ತಮ ಪಾರಂಪರಿಕ ನಗರ-ತೆಲಂಗಾಣದ ವಾರಂಗಲ್.
•ಅತ್ಯುತ್ತಮ ನಿರ್ವಹಣೆ ಸ್ಮಾರಕ- ಮಧ್ಯಪ್ರದೇಶದ ಅಮರ್ ಕಂಟಕ್ ಸ್ಮಾರಕ.
•ಅತ್ಯುತ್ತಮ ಹೋಟೆಲ್- ಗೋವಾದ ತಾಜ್ ಎಕ್ಸೋಟಿಕ.

☆ಲೈಫ್ ಲೈನ್ ಎಕ್ಸ್ ಪ್ರೆಸ್

• ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದ ವಿಶಿಷ್ಟವಾದ ರೈಲು ಇದು.
• ವಿಶ್ವದ ಮೊಟ್ಟಮೊದಲ ರೈಲಿನಲ್ಲಿನ ಆಸ್ಪತ್ರೆ ಇದು. ಗ್ರಾಮೀಣ ಪ್ರದೇಶದ ಬಡ ಮತ್ತು ಅಶಕ್ತ ಸಮುದಾಯಕ್ಕೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.ಈ ಕಾರ್ಯಕ್ರಮವು ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದೆ.
•ಇದರ ವಿಶೇಷತೆಯೆಂದರೆ ಇದನ್ನು "ಮ್ಯಾಜಿಕ್ ಟ್ರೇನ್ ಆಫ್ ಇಂಡಿಯಾ" ಎಂದು ಕರೆಯಲಾಗುತ್ತದೆ.ಇದು ಪ್ರಾರಂಭವಾದ ದಿನಾಂಕ 1991 ಜುಲೈ 16.
•ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ,ಭಾರತೀಯ ರೈಲ್ವೆ ಜಾಲವನ್ನು ಬಳಸಿಕೊಂಡು ವಯೋವೃದ್ಧರು ಹಾಗೂ ಮಕ್ಕಳಿಗೆ ಸ್ಥಳದಲ್ಲೇ ರೋಗ ಪತ್ತೆ ಹಚ್ಚಿ , ಅಗತ್ಯ ವೈದ್ಯಕೀಯ ನೆರವು ಹಾಗೂ ಶಸ್ತ್ರಚಿಕಿತ್ಸೆ ನೀಡುವ ಗುರಿಯನ್ನು ಹೊಂದಲಾಗಿದೆ.


No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು