ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆಪತ್ರಿಕೆ ಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಈ ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ನಡೆಸಿದರು ಮುಖ್ಯ ಪರೀಕ್ಷೆ ಬರೆಯಲು ಸಹಾಯಕವಾಗುತ್ತದೆ.
ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ
ಪತ್ರಿಕೆ-1
1) ಗ್ರಾಮೀಣ ಸಮಾಜಶಾಸ್ತ್ರದ ಸ್ವರೂಪ ಮತ್ತು ವ್ಯಾಪ್ತಿ ಕುರಿತು ಟಿಪ್ಪಣಿ ಬರೆಯಿರಿ.
2) ಗ್ರಾಮೀಣ ಸಮಾಜದಲ್ಲಿ ವರ್ಗ ಮತ್ತು ಜಾತಿ ವ್ಯವಸ್ಥೆಯ ಪ್ರಭಾವದ ಸ್ವರೂಪವೇನು.?
3) ಸಮುದಾಯ ನಾಯಕತ್ವದ ಲಕ್ಷಣಗಳನ್ನು ವಿವರಿಸಿ.
4) ಗ್ರಾಮೀಣ ಕೈಗಾರಿಕೆಗಳ ರೋಗಗ್ರಸ್ಥತೆಗೆ ಕಾರಣಗಳು ಮತ್ತು ಪರಿಹಾರಗಳನ್ನು ತಿಳಿಸಿ.
5)ಭಾರತದ ಕೃಷಿ ಪದ್ಧತಿಯ ಆಧುನಿಕ ತಂತ್ರೋಪಾಯಗಳನ್ನು ಕುರಿತು ಬರೆಯಿರಿ.
6) ಭಾರತೀಯ ಕೃಷಿ ಪದ್ಧತಿಯಲ್ಲಿ ಸಾಂಸ್ಥಿಕ ಮತ್ತು ಸಾಂಸ್ಥಿಕೇತರ ಸಾಲದ ಮೂಲಗಳನ್ನು ಕುರಿತು ವಿಶ್ಲೇಷಣೆ ಮಾಡಿ.
7) ಭಾರತೀಯ ಗ್ರಾಮೀಣ ವಲಸೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ.
8) ಗ್ರಾಮೀಣ ನಿರುದ್ಯೋಗದ ಸ್ವರೂಪ ಮತ್ತು ಅದರ ನಿರ್ಮೂಲನೆಗಾಗಿ ಜಾರಿಗೆ ಬಂದಿರುವ ಕಾರ್ಯಕ್ರಮಗಳ ಯಶಸ್ಸು ಯಾ ವ ರೀತಿ ಇದೆ. ಟೀಕಾತ್ಮಕವಾಗಿ ಚರ್ಚಿಸಿ.
9) ಭಾರತದಲ್ಲಿ ಕೃಷಿ ಬೆಲೆ ನೀತಿಯ ಪ್ರಾಮುಖ್ಯತೆ ಏನು?
10) ಭಾರತದ ಆರ್ಥಿಕ ಪ್ರಗತಿಗೆ ಕೃಷಿ ಕ್ಷೇತ್ರದ ವಲಯವಾರು ಕೊಡುಗೆ ಯಾವ ರೀತಿ ಇದೆ.?
No comments:
Post a Comment