Tuesday, 14 November 2017

model question paper for pu college lecturer exam of KEA -karnataka

1) ಕನ್ನಡದ ಮೊದಲ ಕೃತಿ ಕವಿರಾಜಮಾರ್ಗದ ಕಾಲ ಯಾವುದು ?
a) ಕ್ರಿ.ಶ .850
b) ಕ್ರಿ.ಶ.950
c) ಕ್ರಿ.ಶ.  750
d) ಕ್ರಿ.ಶ.800

2) ಕನ್ನಡ ಛಂದಸ್ಸಿನ ತಾಯಿಬೇರು ಯಾವುದು?
a)ರಗಳೆ
 b)ತ್ರಿಪದಿ
 c)ಷಟ್ಪದಿ
 d )ಕಂದಪದ್ಯ

3)' ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್' ಎಂಬ ಪ್ರಸಿದ್ಧ ವಾಕ್ಯವಿರುವುದು
---
a)ಪಂಪಭಾರತದಲ್ಲಿ
 b ) ಕವಿರಾಜಮಾರ್ಗದಲ್ಲಿ
c)ಆದಿಪುರಾಣದಲ್ಲಿ
 d)ಜೈಮಿನಿಭಾರತದಲ್ಲಿ.

4) ಪ್ರಸಿದ್ಧ ಕೃತಿ "ಪುಷ್ಪದಂತ ಪುರಾಣ"ವನ್ನು ಬರೆದ ಕವಿ --
a .ಒಂದನೇ ಗುಣವರ್ಮ
b.ಎರಡನೇ ಗುಣವರ್ಮ
c.ನಾಗಚಂದ್ರ
d.ಭಾರವಿ.

5) ವಡ್ಡಾರಾದನೆಯಲ್ಲಿರುವ ಒಟ್ಟು ಕಥೆಗಳ ಸಂಖ್ಯೆ
a.19
b.20
c.9
d.18

6) ಸಂಸ್ಕೃತದ ಪ್ರಸಿದ್ಧ ಕೃತಿ "ಕುಮಾರಸಂಭವ"ದ ಕರ್ತೃ
a.ಭಾರವಿ
b.ಭಟ್ಟನಾರಾಯಣ
c.ಕಾಳಿದಾಸ
 d.ಭೋಜ

7) ಗುಣನಂದಿಯ ಹೆಸರು ಉಲ್ಲೇಖಿತವಾಗಿರುವುದು
a.ಶ್ರವಣಬೆಳಗೊಳದ ಶಾಸನಗಳಲ್ಲಿ
b.ಹಲ್ಮಿಡಿ ಶಾಸನದಲ್ಲಿ
c.ತಮಟೆಕಲ್ಲು ಶಾಸನದಲ್ಲಿ
d.ಬಾದಾಮಿ ಶಾಸನದಲ್ಲಿ.

8) ಹಿಂದಿನ "ಬನವಾಸಿ"ಈಗಿನ
a.ಶಿವಮೊಗ್ಗ ಪ್ರಾಂತ್ಯ
b.ಬಿಜಾಪುರ ಪ್ರಾಂತ್ಯ
c.ದಕ್ಷಿಣ ಕನ್ನಡ ಪ್ರಾಂತ್ಯ
d.ಮೈಸೂರು ಪ್ರಾಂತ್ಯ.

9) " ಅಭಿನವ ಪಂಪ"ನೆಂದು ಬಿರುದಾಂಕಿತನಾದ ಕವಿ
a.ಪಂಪ
b.ನಾಗಚಂದ್ರ
c .ರಾಘವಾಂಕ.
d .ಪೊನ್ನ

10)"ಕವಿತಾಗುಣಾರ್ಣವ " ಎಂದು ಬಿರುದು ಪಡೆದ ಕವಿ
a.ನಾಗಚಂದ್ರ
b.ಪಂಪ
c .ಅಭಿನವ ಪಂಪ
d.ಲಕ್ಷೀಶ

11) " ವ್ಯಾಸಮುನೀಂದ್ರರುಂದ್ರವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ"ಎಂದು ನಮ್ರತೆಯಿಂದ ಗುರುಸ್ಮರಣೆ ಮಾಡಿರುವ ಕವಿ
a.ಕುಮಾರವ್ಯಾಸ
b.ಪಂಪ
c.ರನ್ನ
d.ನಾಗಚಂದ್ರ

 12) 'ಪಂಪನು ಕನ್ನಡದ ಕಾಳಿದಾಸ' ಎಂದು ಹೇಳಿರುವವರು
a.ತೀ.ನಂ.ಶ್ರೀ
b.ಬಿ.ಎಂ.ಶ್ರೀ
c.ನಾಗರಾಜ
d.ಕುವೆಂಪು

13)"ಹಿತಮಿತಮೃದುವಚನ ಲಲಿತ ಗಂಭೀರವದನ"ದ ಕವಿ
a.ಪಂಪ
b.ನಾಗಚಂದ್ರ
c.ಪೊನ್ನ
d.ರನ್ನ

14)" ಕರುಳ್ಗಳ ಸವಣ" ಎಂದು ಬಿರುದು ಪಡೆದಿದ್ದ ಕವಿ
a.ರನ್ನ
b.ಪೊನ್ನ
c.ಪಂಪ
d.ಜನ್ನ.

15) ರಾಷ್ಟ್ರಕೂಟ ದೊರೆ 3ನೇ ಕೃಷ್ಣನಿಂದ "ಉಭಯಚಕ್ರವರ್ತಿ"ಎಂಬ ಬಿರುದು ಪಡೆದ ಕವಿ
a.ಜನ್ನ
b.ರನ್ನ
c.ಪೊನ್ನ
d.ಪಂಪ



ಉತ್ತರಗಳು
1.a
2.b
3.b
4.b
5.a
6.c
7.a
8.a
9.b
10.b
11.b
12.a
13.a
14.b
15.c

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು