ಸೌತೆಕಾಯಿ
ತುರಿದಿಡಿ.ಅದಕ್ಕೆ ಗುಲಾಬಿ ಜಲ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ಅನ್ನು ಕಪ್ಪು
ಕಲೆಗಳ ಮೇಲೆ ಹಚ್ಚುವುದರಿಂದ ಆ ಭಾಗ ತಿಳಿಯಾಗುತ್ತದೆ.ಜೊತೆಗೆ ಸುಸ್ತಾದ ಕಕಣ್ಣುಗಳಿಗೆ
ಉತ್ತಮ ವಿಶ್ರಾಂತಿಯು ದೊರೆಯುತ್ತದೆ.
ತುರಿದ
ಶುಂಠಿಗೆ ಜೇನುತುಪ್ಪ ಮತ್ತು ಗುಲಾಬಿ ಜಲ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್
ಅನ್ನು ಪ್ರತಿದಿನ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಕಲೆ ಹಾಗು ಸುಕ್ಕುಗಳು
ಕಡಿಮೆಯಾಗುತ್ತವೆ.
■2
ಚಮಚ ಜೇನುತುಪ್ಪ , 1 ಚಮಚ ನಿಂಬೆರಸ ಸ್ವಲ್ಪ ಗುಲಾಬಿ ಜಲ ಸೇರಿಸಿ ಪೇಸ್ಟ್ ಮಾಡಿಡಿ.
ಪ್ರತಿದಿನ ಬೆಳಿಗ್ಗೆ ಅದನ್ನು ಮುಖಕ್ಕೆ ಹಚ್ಚಿ ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ
ತೊಳೆಯಿರಿ. ಕೆಲವು ದಿನಗಳ ನಂತರ ನಿಂಬೆರಸಕ್ಕೆ ಬದಲಾಗಿ ಮೊಸರನ್ನ ಬಳಸಿ ಪೇಸ್ಟ್
ಮಾಡಿಕೊಂಡು ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ಮುಖ ತೊಳೆಯಿರಿ. ಇದು ಡ್ರೈ ಸ್ಕಿನ್
ಇರುವವರಿಗೆ ಅತ್ಯುತ್ತಮ ಫೇಸ್ ಫ್ಯಾಕ್ ಆಗಿ ಕೆಲಸ ಮಾಡುತ್ತದೆ.
ಸೌತೆಕಾಯಿಯ
ಸಿಪ್ಪೆ ತೆಗೆದು ಹೋಳು ಮಾಡಿ ತುರಿದುಕೊಳ್ಳಿ.ಅದಕ್ಕೆ ಕ್ಯಾರೆಟ್ ತುರಿ ಸೇರಿಸಿ ಮತ್ತು
ಸ್ವಲ್ಪ ನಿಂಬೆರಸ ಸೇರಿಸಿ ಮುಖದಲ್ಲಿ ಕಪ್ಪುಕಲೆಗಳಿರುವ ಕಡೆ ದಿನಕ್ಕೆ ಮೂರರಿಂದ ನಾಲ್ಕು
ಬಾರಿ ಹಚ್ಚಿ..ರಾತ್ರಿ ಸಮಯದಲ್ಲಿ ತಪ್ಪದೇ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು
ಮಲಗಿ ಬೆಳಿಗ್ಗೆ ತಣ್ಣನೆಯ ನೀರಿನಿಂದ ಮುಖ ತೊಳೆದರೆ ಮುಖದ ಕಪ್ಪು ಕಲೆ ಹಾಗೂ ಕಣ್ಣಿನ
ಕಪ್ಪು ವೃತ್ತ ಒಂದೇ ವಾರದಲ್ಲಿ ಕಡಿಮೆಯಾಗುತ್ತದೆ.
ಒಂದು
ಚಮಚ ಟೊಮೆಟೊ ಪೇಸ್ಟ್ ಅರ್ಧ ಚಮಚ ಕಿತ್ತಳೆಹಣ್ಣಿನ ರಸ, 2 ಚಿಟಕಿ ಅರಿಶಿನ ಮತ್ತು ಒಂದು
ಚಮಚ ಕಡಲೆ ಹಿಟ್ಟು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು
ಮುಖ,ಕೈ.ಕಾಲು ಎಲ್ಲೆಲ್ಲಿ ಕಪ್ಪು ಕಲೆಗಳಿರುವುದೋ ಅಲ್ಲಿ ಹಚ್ಚಿ 10 ನಿಮಿಷ ಒಣಗಲು
ಬಿಡಿ.ನಂತರ ತಣ್ಣೀರಿನಿಂದ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡುವುದರಿಂದ ಕಪ್ಪು ಕಲೆಗಳು
ಕ್ರಮೇಣ ಕಡಿಮೆಯಾಗುತ್ತದೆ.
No comments:
Post a Comment