ಧೂಳು
ಮತ್ತು ಬಿಸಿಲಿನಿಂದ ಮುಖದ ಸೌಂದರ್ಯ ಮಾಸುತ್ತಾ ಹೋಗುತ್ತದೆ..ಇದನ್ನು ನಿರ್ಲಕ್ಷ್ಯ
ಮಾಡಿದರೆ ತ್ವಚೆಗೆ ಹಾನಿಕರ.ಮುಖದ ಕಾಂತಿಯನ್ನು ಮರಳಿ ಪಡೆಯಲು ಮನೆಯಲ್ಲಿ ಸುಲಭವಾಗಿ
ದೊರೆಯುವ ಕೆಲವು ಸಾಮಗ್ರಿಗಳಿಂದ ಸಾಧ್ಯ.
ಇದಕ್ಕೆ ಸೂಕ್ತವಾದ ಸರಳ ಸಲಹೆ ಇದು.ಇದನ್ನು ಒಂದು ವಾರ ಅನುಸರಿಸಿದರೆ ನಿಮ್ಮ ಮುಖದ ಸೌಂದರ್ಯ ಚಮತ್ಕಾರದ ರೀತಿಯಲ್ಲಿ ಬದಲಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು
■ ಒಂದು ಕಳಿತ ಬಾಳೆಹಣ್ಣು
■ ಒಂದು ಚಮಚ ಜೇನುತುಪ್ಪ
■ ಒಂದು ಚಮಚ ನಿಂಬೆಹಣ್ಣಿನರಸ.
ವಿಧಾನ
♤♤♤♤♤♤♤♤
ಮೂರೂ ಸಾಮಗ್ರಿಗಳನ್ನು ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ.
ಅದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಲಘುವಾಗಿ ಮಸಾಜ್ ಮಾಡಿ.
ನಂತರ ಉಳಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಅದು ಚೆನ್ನಾಗಿ ಒಣಗಲು ಬಿಡಿ.
ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.ಯಾವುದೇ ಸೋಪ್ ಅಥವಾ ಕ್ರೀಮ್ ಬಳಸಬೇಡಿ.
ಪ್ರತಿದಿನ ಈ ರೀತಿ ಮಾಡಿದರೆ ಒಂದೇ ವಾರದಲ್ಲಿ ಮುಖದ ಕಪ್ಪು ಕಲೆ ಕಡಿಮೆಯಾಗಿ ಆರೋಗ್ಯಕರ ಹಾಗೂ ಕಾಂತಿಯುತ ತ್ವಚೆ ಪಡೆಯಬಹುದು.
No comments:
Post a Comment