ಸುಂದರ
ಕೂದಲನ್ನು ಹೊಂದುವುದು ಪ್ರತಿಯೊಂದು ಹೆಣ್ಣಿನ ಬಯಕೆ...ಆದರೆ ಇಂದಿನ ಒತ್ತಡದ
ಜೀವನದಲ್ಲಿ ಕೂದಲಿನ ಕಾಳಜಿಯೂ ಸಹ ತುಂಬಾ ಕಷ್ಟದ ಕೆಲಸವಾಗಿದೆ..ಮನೆಯಲ್ಲಿ ದೊರೆಯುವ
ಹಲವಾರು ಸರಳ ಸಾಮಗ್ರಿಗಳನ್ನು ಬಳಸಿ ಪ್ರತಿಯೊಬ್ಬರೂ ಸುಂದರವಾದ ಹಾಗೂ ಆರೋಗ್ಯಕರವಾದ
ಕೂದಲನ್ನು ಪಡೆಯಬಹುದು...ಅದಕ್ಕೆ ಇಲ್ಲಿವೆ ಕೆಲವು ಸರಳ ಮನೆಮದ್ದುಗಳು.
●ಧೂಳು
, ಬಿಸಿಲಿನಿಂದಾಗಿ ಕೂದಲು ಒರಟಾಗುವ ಜೊತೆಗೆ ಉದುರಲೂ
ಪ್ರಾರಂಭವಾಗುತ್ತದೆ.ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಕೂದಲಿನ ಅಂದವನ್ನು
ಹೆಚ್ಚಿಸಬಹುದು.
♡ ಮೊಸರು , ನಿಂಬೆಹಣ್ಣು , ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ಕಲಸಿ ಆ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ನುಣುಪಾಗುತ್ತದೆ.
♤ಕಾಯಿಯ ಹಾಲಿಗೆ ನೆನೆಸಿದ ಮೆಂತ್ಯವನ್ನು ಮಿಶ್ರಣ ಮಾಡಿ ರುಬ್ಬಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
♤ದಾಸವಾಳದ ಸೊಪ್ಪು ,ಅಲೊವೆರಾ ಮತ್ತು ಮದರಂಗಿ ಸೊಪ್ಪುನ್ನು ರುಬ್ಬಿ ತಿಂಗಳಿಗೊಮ್ಮೆ ಕೂದಲಿಗೆ ಹಚ್ಚುವುದರಿಂದ ಸುಂದರ ಕೂದಲನ್ನು ಪಡೆಯಬಹುದು.
No comments:
Post a Comment