Monday, 25 December 2017

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು. Kannada subhashitagalu.kannada nudimuttugalu

1. ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.------ ಕುವೆಂಪು
2. ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ;ಆದರೆ ಆತನ ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ. ----- ಅಬ್ರಹಾಂ ಲಿಂಕನ್.
3. ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ. ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ. ----- ಸರ್ವಜ್ಞ.
4. ಗುಣಾತ್ಮಕವಾಗಿ ಯೋಚಿಸುವುದಿಲ್ಲ ಎಂದಾದಲ್ಲಿ ನೀವು ಕನಿಷ್ಠ ಪಕ್ಷ ಸುಮ್ಮನಾದರೂ ಇರಿ.----- ಜೋಯೆಲ್ ಆಸ್ಟಿನ್ .
5. ಜಾತಿಯನ್ನು ಕೇಳಬೇಡಿ , ಹೇಳಬೇಡಿ ಮತ್ತು ಅದರ ಬಗ್ಗೆ ಚಿಂತಿಸಲೂಬೇಡಿ.---- ನಾರಾಯಣ ಗುರು.
6. ಪ್ರೀತಿಯಲ್ಲಿ ಬೀಳುವುದಕ್ಕೆ ಗುರುತ್ವಾಕರ್ಷಣ ಶಕ್ತಿಯನ್ನು ಬೈದು ಪ್ರಯೋಜನವಿಲ್ಲ. ಅದೊಂದು ಜೈವಿಕ ಕ್ರಿಯೆ; ಭೌತ ಮತ್ತು ರಸಾಯನಶಾಸ್ತ್ರಕ್ಕೆ ಅಲ್ಲಿ ಸ್ಥಳವಿಲ್ಲ.----- ಆಲ್ಬರ್ಟ್ ಐನ್ ಸ್ಟೀನ್
7. ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ.-----ತ.ರಾ.ಸು.
8. ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ; ಲೋಕ ಧರ್ಮದ ಹಿತಕ್ಕಾಗಿ ಅಲ್ಲ. -----ಡಿ.ವಿ.ಜಿ.
9. ಮೌನ ಅನಂತದಷ್ಟು ಆಳವಾದದ್ದು.ಮಾತು ಕಾಲದಷ್ಟು ಕ್ಷಣಿಕ. ---- ಥಾಮಸ್ ಕಾರ್ಲೈಲ್.
10. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ಸರ್.ಫಿಲಿಪ್ ಸಿಡ್ನಿ.
11. ಕ್ಷಮಿಸುವುದು ಉತ್ತಮ. ಮರೆತುಬಿಡುವುದು ಸರ್ವೋತ್ತಮ. ------ ರಾಬರ್ಟ್ ಬ್ರೌನಿಂಗ್ .
12. ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. -----ಪಿ.ಸೈರಸ್.
13. ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು.ಕಾಲನ್ನೆಳೆಯುತ್ತಾ ನಡೆಯಬೇಡ.----ಎ.ಪಿ.ಜೆ.ಅಬ್ದುಲ್ ಕಲಾಂ.
14. ಜಗತ್ತಿನಲ್ಲಿ ಹೇಳುವವರಿಗಿಂತ , ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.----- ಗಳಗನಾಥ.
15. ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.------ ಶಿವರಾಮ ಕಾರಂತ.
16. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. -----ಕುವೆಂಪು.
17. ಸತ್ಯವನ್ನು ಹೇಳುವವನು , ಸ್ವಾರ್ಥವನ್ನು ಗೆದ್ದವನು ನಿಜವಾದ ಸುಖಿ.----- ಬುದ್ಧ.
18. ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , ಅವಕಾಶವೆಂಬ ತಂದೆಗೆ ಜನಿಸುವ ಮಗು.-----ಗುರುನಾನಕ್.
19. ರೂಪ ಕಣ್ಣುಗಳಿಗೆ ಸೀಮಿತ.ಗುಣ , ಆತ್ಮದವರೆಗೆ ತಲುಪುವ ಸಾಧನ.-----ತ್ರಿವೇಣಿ.
20. ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತಾ ನಾಶಪಡಿಸು.---- ಸ್ವಾಮಿ ವಿವೇಕಾನಂದ.
21. ತಾನು ಎಲ್ಲವನ್ನೂ ಬಲ್ಲೆನೆಂದು ತಿಳಿಯುವವನೆ ಮೂರ್ಖ. ----- ಮಹಾಭಾರತ.
22. ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ.----ರಂ.ಶ್ರೀ.ಮುಗಳಿ.
23. ಹಣಕ್ಕೆ ಕೈ , ಕಾಲುಗಳಿದ್ದಂತೆ ಉಪಯೋಗಿಸಿ, ಇಲ್ಲವೇ ಕಳೆದುಕೊಳ್ಳಿ.-----ಹೆನ್ರಿ ಫೋರ್ಡ್.
24. ಬಂಧಿತನಾದ ದೇವರೇ ಮನುಷ್ಯ ; ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು. ----- ರಾಮಕೃಷ್ಣ ಪರಮಹಂಸ.
25. ಸಾಯುವುದು ಸುಲಭ, ಬಾಳುವುದು ದೊಡ್ಡ ಹೊಣೆಗಾರಿಕೆ. ---- ಎಸ್. ವಿ.ರಂಗಣ್ಣ.
26. ನಮ್ಮ ಗುಣಗಳ ನೆರಳೇ ನಮ್ಮ ಲೋಕಗಳು.----- ಎಮರ್ ಸನ್.
27. ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ. ----- ಮಹಾತ್ಮಾ ಗಾಂಧಿ.
28. ನಿರ್ಭಯವೂ ನಿಷ್ಪಕ್ಷಪಾತವೂ ಆದ ಜಗತ್ತಿನ ಅನ್ವೇಷಣೆಯೇ ವಿಜ್ಞಾನ. ----' ಸಿ.ವಿ.ರಾಮನ್.
29. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ತಾವೇ ಕಂಡುಕೊಳ್ಳಬೇಕು.ಧರ್ಮದ ದಾರಿ ಒಂದಲ್ಲ,ಹಲವು.----- ಕೆ.ಎಂ. ಮುನ್ಷಿ.
30. ನಮ್ಮ ಧರ್ಮಗಳು ನಮಗೆ ಕೂಡಿ ಬಾಳಲು ಕಲಿಸದೇ ಇದ್ದರೆ ಆ ಧರ್ಮಗಳು ಏಕೆ.? ---- ಸಿದ್ಧೇಶ್ವರ ಸ್ವಾಮಿಜಿ.
31. ಲೋಕವೆಂಬುದೊಂದು ಸಂತೆ, ಬೇಕು ಬೇಡಗಳ ಕಂತೆ, ಸಾಕು ನಮಗಾ ಚಿಂತೆ.----- ಡಿ.ವಿ.ಗುಂಡಪ್ಪ.
32. ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದು:ಖಿಯೂ ಅಲ್ಲ. ---- ಗೌತಮ ಬುದ್ಧ.
33. ನಿಮ್ಮ ಮುಖವನ್ನು ಯಾವತ್ತೂ ಸೂರ್ಯನಿಗೆ ಅಭಿಮುಖವಾಗಿಟ್ಟು ಕೊಳ್ಳಿ.ನೆರಳು ಹಿಂದಕ್ಕೆ ಸರಿಯುತ್ತದೆ.----- ವಾಲ್ಟ್ ವಿಟ್ಮನ್.
34. ಮಹಾ ಕಾರ್ಯಗಳು ಮಹಾ ತ್ಯಾಗದಿಂದ ಮಾತ್ರ ಸಾಧ್ಯ. ----- ಸ್ವಾಮಿ ವಿವೇಕಾನಂದ.
35. ಶ್ರಮಜೀವಿಯಂತೆ ಕೆಲಸ ಮಾಡು .ವೇದಾಂತಿಯಂತೆ ಯೋಚಿಸು.------- ಹೆನ್ರಿ ಬರ್ಗ್.
36. ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.------ ಸ್ವಾಮಿ ವಿವೇಕಾನಂದ.
37. ಸುಖದಲ್ಲೂ ಭಯ , ಅಪಾಯ ಇದೆ. ಕಷ್ಟದಲ್ಲೂ ಹಿತ , ಭರವಸೆ ಇದೆ. ----- ಫ್ರಾನ್ಸಿಸ್ ಬೇಕನ್.
38. ಹೊಗಳಿಕೆಯ ಮಾಲಿನ್ಯವನ್ನು ತೊಡೆದು ಹಾಕಲು ಏಕಮಾತ್ರ ಉಪಾಯ: ಕೆಲಸ ಮತ್ತು ಇನ್ನಷ್ಟು ಕೆಲಸ. ------ಆಲ್ಬರ್ಟ್ ಐನ್ ಸ್ಟೀನ್.
39. "ನಮ್ಮನ್ನು ಪ್ರೀತಿಸುವವರಿದ್ದಾರೆ" ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ.----- ವಿಕ್ಟರ್ ಹ್ಯೂಗೊ.
40. ತಿಳಿದವಗೆ ಜಗವೆಲ್ಲ ರಸದ ಊಟ.---- ಜಿ.ಎಸ್.ಶಿವರುದ್ರಪ್ಪ.
41. ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು , ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ ! ---- ಡಿ.ವಿ.ಜಿ.
42. ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ. ------ಪ.ಸೈರಸ್.
43. ಸುಖ, ಸ್ನೇಹಿತರನ್ನು ಕರೆತರುತ್ತದೆ.ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.------ಪಿ.ಸೈರಸ್.
44. ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು.----- ರವೀಂದ್ರನಾಥ್ ಟ್ಯಾಗೋರ್.
45. ಯಾವ ಸರ್ಕಾರಕ್ಕೆ ಜನರನ್ನು ಸುಖಿಗಳನ್ನಾಗಿಸಬೇಕೆಂಬ ಅಪೇಕ್ಷೆ ಇದೆಯೋ, ಯಾವ ಸರ್ಕಾರಕ್ಕೆ ಅದನ್ನು ಸಾಧಿಸುವ ರೀತಿ ತಿಳಿದಿದೆಯೋ ಅದೇ ಶ್ರೇಷ್ಠ ಸರ್ಕಾರ. -----ಮೆಕಾಲೆ.
46. ಭಾಗ್ಯವಿರಬಹುದು, ಬೇಕಾದವರು ಇರಬಹುದು , ಫಲ ಮಾತ್ರ ಪಡೆದಷ್ಟೇ.----- ಎ.ಆರ್.ಕೃಷ್ಣ ಶಾಸ್ತ್ರಿ.
47. ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ.---- ಸಾಕ್ರೆಟಿಸ್.
48. ಸುಖವನ್ನು ಸಹಿಸುವ ಶಕ್ತಿ ಒಬ್ಬನಿಗಿದ್ದರೆ ದುಃಖವನ್ನು ಸಹಿಸುವ ಶಕ್ತಿ ನೂರಾರು ಮಂದಿಗಿರುತ್ತದೆ.----- ಥಾಮಸ್ ಕಾರ್ಲೈಲ್.
49. ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ.------- ಇಂಗರ್ ಸಾಲ್.
50. ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. ------ಮಹಾತ್ಮಾ ಗಾಂಧಿ. 

1 comment:

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು