Thursday, 1 February 2018

Kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

1. ಭೂತಕಾಲದೊಂದಿಗೆ ಮಾತ್ರ ಬದುಕನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಭವಿಷ್ಯದೊಂದಿಗೆ ಬದುಕಬೇಕು.--- ಸೊರೆನ್ ಕೀರ್ಕ್ ಗಾರ್ಡ್.
2. ತರ್ಕಭರಿತ ಮನಸ್ಸು ಎರಡು ಅಲಗಿನ ಕತ್ತಿಯಂತೆ.ಅದು ಬಳಸುವಾತನ ಕೈಯಲ್ಲೇ ರಕ್ತ ಭರಿಸುತ್ತದೆ.---ರವೀಂದ್ರನಾಥ್ ಟ್ಯಾಗೋರ್.
3. ಸುಳ್ಳಿನ ಜತೆಗೆ ಸಮಾಧಾನದಿಂದ ಇರುವುದರ ಬದಲು , ಸತ್ಯದಿಂದ ಗಾಯಗೊಳ್ಳುವುದು ಒಳ್ಳೆಯದು. ---ಖಾಲಿದ್ ಹುಸೇನಿ.
4. ಮಕ್ಕಳಂತೆ ನಿಮ್ಮ ಮನಸ್ಸಿನ ಖುಷಿಗಾಗಿ ಓದಬೇಡಿ.ಮಹತ್ವಾಕಾಂಕ್ಷಿಗಳಂತೆ ಜನರಿಗೆ ಬುದ್ಧಿ ಹೇಳಲೂ ಓದಬೇಡಿ.ಬದುಕುವುದಕ್ಕಾಗಿ ಓದಿ.----- ಗುಸ್ತಾವ್ ಫ್ಲಾಬರ್ಟ್.
5. ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ,ಹಾರಲಿ ಗದ್ದುಗೆ ಮಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೆ ಇಲ್ಲ. ----ಕುವೆಂಪು.
6. ನಾನು ಪರಿಪೂರ್ಣ ಅಲ್ಲವೆಂದು ನನಗೆ ಗೊತ್ತಿದೆ. ಪರಿಪೂರ್ಣವಾಗಲೂ ನಾನು ಬಯಸುವುದಿಲ್ಲ. ಆದರೆ ನನ್ನೆಡೆಗೆ ಬೆರಳು ತೋರಿಸುವ ಮುನ್ನ ನಿನ್ನ ಕೈಗಳು ಸ್ವಚ್ಛ ಇವೆಯ ಎಂದು ನೋಡಿಕೊ.------ ಬಾಬ್ ಮಾರ್ಲೆ.
7. ಸಹಜವಾಗಿ ಬದುಕುವುದಕ್ಕೆ ಜನರು ಇಷ್ಟೊಂದು ಶಕ್ತಿ ಏಕೆ ಖರ್ಚು ಮಾಡುತ್ತಾರೆ ಎನ್ನುವುದು ಅರ್ಥವೇ ಆಗುವುದಿಲ್ಲ. ಆಲ್ಬರ್ಟ್ ಕಾಮು.
8. ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ ಅದು ನಮ್ಮ ಬುದ್ದಿಯಾಚೆಗಿನ ಮಾತು.ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು.----- ಮಧುರ ಚೆನ್ನ.
9. ಮಧ್ಯಮಮಟ್ಟದ ಶಿಕ್ಷಕ ಹೇಳಿಕೊಡುತ್ತಾನೆ.ಉತ್ತಮ ಶಿಕ್ಷಕ ವಿವರಿಸುತ್ತಾನೆ.ಮೇಲ್ಮಟ್ಟದ ಶಿಕ್ಷಕ ಪ್ರಾತ್ಯಕ್ಷಿಕೆ ಮಾಡುತ್ತಾನೆ. ಅತ್ಯುತ್ತಮ ಶಿಕ್ಷಕ ಸ್ಪೂರ್ತಿ ತುಂಬುತ್ತಾನೆ.----- ವಿಲಿಯಂ ಆರ್ಥರ್ ವಾರ್ಡ್.
10. ಮರಳಿ ಪಡೆಯುವಂತಹದ್ದನ್ನು ನೀವು ಕೊಟ್ಟರೆ ಅದು ದಾನವಲ್ಲ.ಮರಳಿ ಪಡೆಯಲು ಸಾಧ್ಯವಾಗದಂತಹದ್ದನ್ನು ದಾನ ಮಾಡಿ.----ಇದ್ರಿಸ್ ಶಾ.
11. ನಾಲಗೆ ಆತ್ಮದ ವೈರಿ. ತುಟಿಗಳು ಸುಮ್ಮನಿದ್ದಾಗ ಹೃದಯಕ್ಕೆ ನೂರಾರು ನಾಲಗೆಗಳಿರುತ್ತವೆ.-----ರೂಮಿ.
12. ಸ್ಥಿರ ಚಿತ್ತವೇಕಿನ್ನು ಬರಲಿಲ್ಲ, ತಾಯೆ? ಚಿತ್ತವನು ಮುತ್ತಿರುವುದೇಕಿನ್ನು ಮಾಯೆ ? ----ಕುವೆಂಪು.
13. ಹೊಟ್ಟೆಯ ಹಸಿವನ್ನು ಹೇಗಾದರೂ ನೀಗಿಸಬಹುದು. ಆದರೆ ಪ್ರೀತಿಯ ಹಸಿವನ್ನು ನೀಗಿಸುವುದು ಕಷ್ಟ. ----ಮದರ್ ತೆರೇಸಾ.
14. ಅತ್ಯುತ್ತಮ ಗೆಳೆಯ ಮತ್ತು ಅತ್ಯಂತ ಕೆಟ್ಟ ವೈರಿ ಇಬ್ಬರೂ ನಿಮ್ಮೊಳಗೇ ಇದ್ದಾನೆ.---- ಇಂಗ್ಲೀಷ್ ಗಾದೆ.
15. ಚಿತ್ರವೆಂದರೆ ಮೌನವಾಗಿರುವ ಕಾವ್ಯ. ಕಾವ್ಯವೆಂದರೆ ಮಾತನಾಡುವ ಚಿತ್ರ.----- ಪ್ಲುಟಾರ್ಕ್.
16. ಒಂದೋ ಓದಲು ಅರ್ಹವಾದದ್ದನ್ನು ಬರೆಯಿರಿ.ಇಲ್ಲವೇ ಬರೆಯುವುದಕ್ಕೆ ಅರ್ಹವಾದದ್ದನ್ನು ಮಾಡಿರಿ.----ಬೆಂಜಮಿನ್ ಫ್ರಾಂಕ್ಲಿನ್.
17. ಅತ್ಯುತ್ತಮ ಆಡಳಿತ ಇರುವ ದೇಶದಲ್ಲಿ ಬಡತನ ಎನ್ನುವುದು ನಾಚಿಕೆಯ ಸಂಗತಿ.ಕೆಟ್ಟ ಆಡಳಿತ ಇರುವ ದೇಶದಲ್ಲಿ ಶ್ರೀಮಂತಿಕೆ ಎನ್ನುವುದು ನಾಚಿಕೆಯ ಸಂಗತಿ. -----ಕನ್ ಫ್ಯೂಶಿಯಸ್.
 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು