Tuesday, 6 March 2018

Simple beauty tips in kannada simple face mask face pack tips beauty care tips in kannada

ಇಡೀ ದೇಹದ ನಿರ್ಜೀವ ಕಣಗಳನ್ನು ತೆಗೆದು ಚರ್ಮವನ್ನು ಕಾಂತಿಯುಕ್ತವಾಗುವಂತೆ ಮಾಡುವ ಸ್ಕ್ರಬ್ ತಯಾರಿಸುವ ವಿಧಾನ.

ಬೇಕಾದ ಸಾಮಗ್ರಿಗಳು
• ಅಕ್ಕಿ ಹಿಟ್ಟು 2 ಚಮಚ
• ಕಡಲೆ ಹಿಟ್ಟು 4 ಚಮಚ
• ಕಸ್ತೂರಿ ಅರಿಶಿನ 2 ಚಮಚ
• ಅಲೋವೆರಾ ಜೆಲ್ 4 ಚಮಚ
• ಸೌತೆಕಾಯಿ ರಸ ಅರ್ಧ
• ಟೊಮಾಟೊ 1
• ಜೇನು ತುಪ್ಪ 2 ಚಮಚ


ತಯಾರಿಸುವ ವಿಧಾನ

○ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಕ್ಸಿಗೆ ಹಾಕಿ ಸ್ವಲ್ಪ ತರಿತರಿಯಾಗಿ ಪೇಸ್ಟ್ ತಯಾರಿಸಿ ಕೊಳ್ಳಬೇಕು.

○ ನಂತರ ಮುಖ ಮತ್ತು ಮೈಯನ್ನು ಸ್ವಲ್ಪ ಒದ್ದೆ ಮಾಡಿ ತಯಾರಿಸಿಟ್ಟುಕೊಂಡ ಪೇಸ್ಟ್ ಅನ್ನು ಹಚ್ಚಿ ಲಘುವಾಗಿ ಮಸಾಜ್ ಮಾಡಬೇಕು. ನಂತರ 10 ನಿಮಿಷ ಬಿಟ್ಟು ಸ್ವಲ್ಪ ನೀರು ತೆಗೆದು ಕೊಂಡು ಮೈಯನ್ನು ಪುನಃ ಲಘುವಾಗಿ ಮಸಾಜ್ ಮಾಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.

○ವಾರಕ್ಕೆ ಒಂದು ದಿನ ಈ ರೀತಿ ಮಾಡಿದರೆ ತ್ವಚೆ ಕಾಂತಿಯುಕ್ತವಾಗುತ್ತದೆ. ಮತ್ತು ಮೃದುವಾಗಿ ಹೊಳೆಯುತ್ತದೆ.

○ ಚರ್ಮದ ಕಪ್ಪು ಕಲೆ ಮಾಯವಾಗಿ ನಿರ್ಜೀವ ಕಣಗಳು ತೊಲಗಿ ತ್ವಚೆ ಕಾಂತಿಯುಕ್ತವಾಗುತ್ತದೆ.

○ ಹೊಸ ಚರ್ಮದ ಬೆಳವಣಿಗೆಗೆ ಸಹಾಯಕವಾಗುತ್ತದೆ.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು