Saturday, 7 July 2018

kannada moral stories in kannada kannada neethi kathegalu Kannada ಕನ್ನಡ ನೀತಿ ಕತೆಗಳು ಕನ್ನಡ ಸಣ್ಣ ಕತೆ ಗಳು ನೀತಿ ಕತೆಗಳು

*ನಿನ್ನ ಬೆಲೆ ಎಷ್ಟು....?*

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " *ನನ್ನ ಜೀವನದ ಬೆಲೆ ಏನು* ? "
ಎಂದು.

ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು *ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ*

*ಆದರೆ ಅದನ್ನು ನೀನು ಮಾರಬಾರದು* ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ.

ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.

ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ "ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ.

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ.

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು.

ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, 'ಇದನ್ನು ಮಾರುವುದಿಲ್ಲ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ.

ನಾನು ನನ್ನ ಆಸ್ತಿಯನ್ನೆಲ್ಲಾ
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. .........

ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.

ಆಗ ದೇವರು "ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು.

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.

*ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ*.

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ.

*ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ*.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.

ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " *ಮಾನವ ಜನ್ಮ ಬಹು ಶ್ರೇಷ್ಠವಾದದ್ದು*" ಎಂದು.

ಹಾಗಾಗಿ *ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.🌼🌹

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು