Wednesday, 4 July 2018

kannada moral stories ಕನ್ನಡ ನೀತಿಕಥೆಗಳು


*ಮನುಷ್ಯ, ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ. ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ. ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ. ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾ ಹೋಗುತ್ತಾನೆ. ಇವೆಲ್ಲವನ್ನೂ ಮೀರಿ ನಡೆದವನು ಮಾತ್ರ ವಿಶೇಷನಾಗುತ್ತಾನೆ.*



*🔘"ಪುರುಷರೆಂದರೆ ಯಾರು?"ಎಲ್ಲಾ ಮಹಿಳೆಯರು ತಪ್ಪದೆ ಇದನ್ನು ಓದಿ...*


⚫ *ಮೊದಲ ಬಾರಿ ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!*

▪ *ಪುರುಷ ಎಂದರೆ ಯಾರು?*

▪ *ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ*

▪ *ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..*

▪ *ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..*

▪ *ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆ ಖರೀದಿಸಿ ಖಾಲಿ ಮಾಡುವವನು..*

▪ *ತನ್ನ ಇಡೀ ಯೌವನವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..*

▪ *ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.*

▪ *ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ, ಪತ್ನಿ ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....*

▪ *ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....*

▪ *ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಆತ ಮನೆಯಲ್ಲೇ ಇದ್ದರೆ ಸೋಮಾರಿ...*

▪ *ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ*

▪ *ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವ*

▪ *ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಳಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...*

▪ *ಒಂದು ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ*

▪ *ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ*

▪ *ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ..*



*ಇದೊಂದು ಫಾರ್ವರ್ಡ್ ಮೆಸೇಜ್ ಬಹಳ ಸುಂದರ ಅರ್ಥಗರ್ಭಿತವಾದ ರಚನೆ ಓದಲು ಮರೆಯದಿರಿ...*
🌺🌺🌺

*1. ನಾವೆಷ್ಟೇ ಸುಂದರ ಮತ್ತು ಹ್ಯಾಂಡ್‌ಸಂ ಆಗಿದ್ದರೂ, ಬಬೂನ್‌ಗಳು ಮತ್ತು ಗೊರಿಲ್ಲಾಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂಬುದನ್ನು ಮರೆಯದಿರೋಣ.*

*ನಮ್ಮನ್ನು ನಾವು ವಿಪರೀತವಾಗಿ ಹೊಗಳಿಕೊಳ್ಳುವುದನ್ನು ಬಿಟ್ಟುಬಿಡೋಣ.*

🌺🌺🌺

*2. ನಾವೆಷ್ಟೇ ಗಟ್ಟಿಯಾಗಿ ಶಕ್ತಿವಂತರಾಗಿದ್ದರೂ ಸರಿಯೇ, ನಮ್ಮನ್ನು ನಾವು ನಮ್ಮ ಸಮಾಧಿಗೆ ಹೊತ್ತುಕೊಂಡು ಹೋಗಲಾರೆವು.*

*ವಿನಮ್ರತೆಯಿಂದಿರೋಣ*

🌼🌼🌼🌼

*3. ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನೆಂದೂ ನೋಡಲಾರೆವು*.

*ತಾಳ್ಮೆಯಿಂದ ಇರೋಣ.*

🌹🌹🌹

*4. ನಾವೆಷ್ಟೇ ಬಿಳುಪಾದ ಚರ್ಮ ಹೊಂದಿರುವವರಾದರೂ ಕತ್ತಲೆಯಲ್ಲಿ ನಮಗೆ ಬೆಳಕು ಬೇಕೇ ಬೇಕು.*

*ಜಾಗರೂಕರಾಗಿರೋಣ*

🌺🌺🌺
*5. ನಾವೆಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಕಾರುಗಳನ್ನು ಹೊಂದಿದ್ದರೂ, ನಮ್ಮ ಹಾಸಿಗೆಗೆ ನಾವು ನಡೆಯಲೇಬೇಕು.*

🌼🌼🌼

*ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ ತೆಗೆದುಕೊಳ್ಳೋಣ. ಜೀವನ ಬಲು ಚಿಕ್ಕದು.*

*ನಾವು ಜೀವಿಸುವ ಜೀವನ...*

🌻🌻🌻

*ನಮ್ಮನ್ನು ಈ ಬೆಳಗ್ಗೆ ಎಬ್ಬಿಸಿದ್ದು ನಮ್ಮ ಅಲಾರಂ ಗಡಿಯಾರ ಎಂದುಕೊಂಡರೆ, ಅದನ್ನು ಒಂದು ಶವದ ಪಕ್ಕದಲ್ಲಿ ಇಟ್ಟು ನೋಡಿದಾಗ, ದೇವರ ಕೃಪೆಯು ನಮ್ಮನ್ನು ಇಂದು ಎಬ್ಬಿಸಿದ್ದು ಎಂಬ ಸತ್ಯ ಹೊಳೆಯುತ್ತದೆ. ನಾವು ಬದುಕಿರುವುದೇ ಆ ದೇವದೇವನ ಕೃಪೆಯಿಂದಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.*

*ಯೋಗವು ಒಮ್ಮೇ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ*

🌹🌹🌹


*ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಅರ್ಥವಾಗುವದಿಲ್ಲ ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವದಿಲ್ಲ ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವವನ್ನು ಬಿಡಬೇಡಿ. ಬೇರೆಯವರು  ಕೋಪದಿಂದ ಮಾತನಾಡಿದರೆ
"ಗುಣ" ವನ್ನು ಕಳೆದುಕೊಳ್ಳುತ್ತೇವೆ.

ಹೆಚ್ಚಾಗಿ ಮಾತನಾಡಿದರೆ
"ಶಾಂತಿ"ಯನ್ನು ಕಳೆದುಕೊಳ್ಳುತ್ತೇವೆ.

ಅನಗತ್ಯವಾಗಿ ಮಾತನಾಡಿದರೆ
"ಕೆಲಸ" ವನ್ನು ಕಳೆದುಕೊಳ್ಳುತ್ತೇವೆ.

ಅಹಂಕಾರದಿಂದ ಮಾತನಾಡಿದರೆ
"ಪ್ರೀತಿ" ಯನ್ನು ಕಳೆದುಕೊಳ್ಳುತ್ತೇವೆ.

ಸುಳ್ಳು ಸುಳ್ಳು ಮಾತನಾಡಿದರೆ
"ಹೆಸರು" ಕಳೆದುಕೊಳ್ಳುತ್ತೇವೆ.

ವೇಗವಾಗಿ ಮಾತನಾಡಿದರೆ
"ಅರ್ಥ" ವನ್ನು ಕಳೆದುಕೊಳ್ಳುತ್ತೇವೆ.

ಪ್ರೀತಿಯಿಂದ ಮಾತನಾಡಿದರೆ
"ಎಲ್ಲವನ್ನು" ಗಳಿಸಿಕೊಳ್ಳುತ್ತೇವೆ
🌿*



 ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ ಏನು ಅಂತ ತಿಳಿದುಕೊಳ್ಳೋಣ ;

೧) ಮೊಣಕಾಲು ಮೇಲೆ ನಿಲ್ಲಿಸಿದರೆ
*"ವಿನಯವನ್ನು ರೂಢಿಸಿಕೋ"* ಎಂದರ್ಥ.

೨) *"ಬಾಯಿಯ ಮೇಲೆ ಬೆರಳಿಟ್ಟುಕೋ ಎಂದರೆ ಸ್ವ-ಪ್ರಶಂಸೆ ಮಾಡಿಕೊಳ್ಳಬೇಡ "* ಎಂದು.

೩)ಕಿವಿ ಹಿಡಿದು ನಿಲ್ಲೆಂದರೆ *"ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು"* ಅಂತ.

೪) ಬೆಂಚಿನ ಮೇಲೆ ನಿಲ್ಲು ಅಂದರೆ *"ಎಲ್ಲರಿಗಿಂತ ಓದಿನಲ್ಲಿ ಮುಂದೆ ಇರು"* ಅಂತರ್ಥ.

೫) ಕೈಯೆತ್ತಿ ನಿಲ್ಲು ಅಂದರೆ
*"ನಿನ್ನ ಗುರಿ ಉನ್ನತವಾಗಿ ನಿಶ್ಚಲವಾಗಿರಲಿ"* ಎಂದು.

೬) ಗೋಡೆಗೆ ಮುಖಮಾಡಿ ನಿಲ್ಲು ಎಂದರೆ *"ಆತ್ಮಾವಲೋಕನ ಮಾಡಿಕೋ"* ಅಂತ.

೭) ತರಗತಿಯ (ಕ್ಲಾಸಿಂದ) ಹೊರಗೆ ನಿಲ್ಲಿಸಿದರೆ *"ಪರಿಸರದ ಜ್ಞಾನ ಪಡೆದುಕೋ"* ಎಂದು.

೮) ಕರಿಹಲಗೆ (ಬ್ಲ್ಯಾಕ್ ಬೋರ್ಡು) ಒರೆಸು ಎಂದರೆ
*"ಯಾವಾಗಲೂ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು"* ಎಂದರ್ಥ.

೯) ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ *"ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು. ಸೋಲೊಪ್ಪಿಕೊಳ್ಳಬೇಡ"* ಎಂದು.

ಎಷ್ಟು ಚೆನ್ನಾಗಿದೆಯಲ್ವಾ ಶಿಕ್ಷೆಯೆಂಬ ನವರತ್ನಗಳು.
ಗೂಢಾರ್ಥವ ಜೋಡಿಸಿ ಬದುಕ ತಿದ್ದುವ ಗುರುಗಳಿಗೆ ನಮೋ.ಜೀವನದ ಸತ್ಯವು_ಇಷ್ಟೇ*

*ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ* *ಮಾಡುವ ದಿನಗಳಷ್ಟು ಮಾತ್ರ*
*ಒಳ್ಳೆಯವರು ಅಗಿ ಕಾಣುತ್ತೇವೆ*
*ನಮ್ಮಿಂದ ಒಂದು ಚಿಕ್ಕ ತಪ್ಪು* *ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ*
*ನಾವು ಮಾಡುವ ಕೆಲಸಗಳು*
*ಜನರನ್ನು* *ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲಲ
*ಸಮುದ್ರಕ್ಕೆ ಬಿದ್ದ ಮಳೆ,*
? *ಹಸಿವಿಲ್ಲದವನಿಗೆ ನೀಡಿದ ಆಹಾರ,*
? *ಧನವಂತನಿಗೆ ನೀಡಿದ ಹಣ,*
? *ದರಿದ್ರವಂತನಿಗೆ ಬಂದ ಯೌವ್ವನ,*
*ಯಾವಾಗಲೂ ವ್ಯರ್ಥ.*
*ಜೀವನ ನಮಗೆ ಏನು ಕೊಟ್ಟಿದ್ದೆ ಅನ್ನುವದಕ್ಕಿಂತ*
*ಜೀವನದಲ್ಲಿ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಅನ್ನೋದು ಮುಖ್ಯ.*
*"ಚಿಂತೆ ಮತ್ತು ಚಿತೆಗೆ "ಇರುವ ವ್ಯತ್ಯಾಸ ಒಂದು ಸೊನ್ನೆ ಆದರೆ ಅದೇ ಜೀವನದ ನಿಜವಾದ ಸತ್ಯ


"ಒಬ್ಬರ ಅತಿಯಾದ ದ್ವೇಷದಿಂದ ಮನಸ್ಸಿಗೆ ಆಗುವ ದುಃಖಕ್ಕಿಂತ ಒಬ್ಬರನ್ನು ಅತಿಯಾಗಿ ಹಚ್ಚಿಕೊಳ್ಳುವುದರಿಂದ ನಮ್ಮ ಮನಸ್ಸು ಘಾಸಿಗೊಳ್ಳುತ್ತದೆ. ಯಾರೂ ಯಾರಿಗೂ ಅನಿವಾಯ೯ವಲ್ಲ. ಎಲ್ಲರನ್ನೂ ಎಲ್ಲಾ ಸಮಯದಲ್ಲೂ ಪ್ರೀತಿಸುವುದಾಗಲಿ, ದ್ವೇಷಿಸುವುದಾಗಲೀ, ಸಾಧ್ಯವಾಗಲ್ಲ ಆದರೇ... ಎಂಥಾ ಪರಿಸ್ಥಿತಿಯಲ್ಲೂ ಮಾನವೀಯತೆಯಿಂದ ವತಿ೯ಸುವವರೆ ನಿಜವಾದ ಮನುಷ್ಯರು.*"

ಜಗತ್ತನ್ನೇ ಗೆಲ್ಲಬೇಕೆಂಬ ಇಚ್ಛೆ ನಿನಗಿದ್ದರೆ ಅದಕ್ಕೆ ಬೇಕಾದದ್ದು ಒಂದೇ ಒಂದು ಮಾರ್ಗ, ಅದು ಬೇರೆಯವರಿಗೆ ಕೆಟ್ಟದಾಗಿ ಮಾತನಾಡದಿರುವುದು

*ಕೈಯಿಂದ ಎಸೆದ ಕಲ್ಲು*
*ನೂರು ಅಡಿ ಹೋಗಿ ಬೀಳುತ್ತದೆ*

*ಬಂದೂಕಿನಂದ ಹೊರಟ ಗುಂಡು*
*ಸಾವಿರ ಅಡಿ ದೂರ ಬೀಳುತ್ತದೆ*

ಆದರೆ.......!!

*ಹಸಿದವನಿಗೆ ಕೊಟ್ಟ ರೊಟ್ಟಿಯ ತುಂಡು*
*ಸ್ವರ್ಗದ ಬಾಗಿಲಿನವರೆಗೂ ಹೋಗುತ್ತದೆ*
" *ಶುದ್ಧ ಮನಸ್ಸಿನಿಂದ ಆಡುವ ಮಾತು ಲಕ್ಷಾಂತರ ಜನರ ಹ್ರದಯ ಗೆಲ್ಲಬಹುದು.., ಅದೇ ಒಂದು ದ್ವೇಷದ ನುಡಿ ಲಕ್ಷಾಂತರ ಜನ ವಿರೋಧಿಗಳನ್ನು ಸ್ರಷ್ಠಿಸಬಹುದು...ಮಾತಿಗಿರುವ ಶಕ್ತಿಯೇ ಅಂತಹದು ಮಾತಿಗಿರುವ ಬೆಲೆ ಮಾತು ಆಡುವವರಿಗೂ ಇರಲ್ಲ*..."

*🌼🌺🌼🌺🌼🌺🌼🌺🌼🌺
ತೊಂದರೆಗಳಿಗೆ ಎರಡು ಕಾರಣವಂತೆ
ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು. ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು..!




*ಕೆಲವೇ ಕ್ಷಣಗಳಲ್ಲಿ ಹಣ ಎನ್ನುವುದು ಬರೀ ಕಾಗದದ ಚೂರುಗಳಾಗಬಹುದು...!!*

*ಚಿನ್ನವು ಕೇವಲ ಒಂದು ಲೋಹವಾಗಿಬಿಡಬಹುದು...!!*

*ಆದರೆ ಸಂಬಂಧ ಗಳಿಗಿರುವ ಬೆಲೆಯನ್ನು ದೇವರಿಗೂ ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲ...!!*

*ನಮ್ಮ ಸ್ನೇಹಿತರು ಹಾಗೂ ಪರಿವಾರದವರೇ

💐 " ನಾವೆಷ್ಟು ಖುಷಿಯಾಗಿದ್ದೇವೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ ಸಂತೋಷವಾಗಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸಾಧ್ಯವಾದಷ್ಟು ಎಲ್ಲರನ್ನೂ ಖುಷಿ ಯಾಗಿಡಲು ಪ್ರಯತ್ನಿಸೋಣ*."


 *ಒಂದು ದಿನ ಕನಸು, ಜೀವನವನ್ನು ಕೇಳುತ್ತೆ ನಾನು ಯಾವಾಗಲು ನನಸು ಆಗೋದಿಲ್ಲಾ ಯಾಕೆ? ಅಂತಾ...... ಆಗ ಜೀವನ ನಗುತ್ತಾ ಹೇಳುತ್ತೆ, ಪ್ರಯತ್ನ ಪಡದೆ ಎಲ್ಲಾ ಕನಸು ನನಸಾದರೆ ಜೀವನಕ್ಕೆ ಅಥ೯ನೇ ಇರೋದಿಲ್ಲ ಅಂತಾ..*

ನೊಣಗಳು ನಮ್ಮ ಸುಂದರವಾದ ಇಡೀ ದೇಹವನ್ನು ಬಿಟ್ಟು ಗಾಯದ ಮೇಲೆ ಕುಳಿತುಕೊಳ್ಳುವ ಹಾಗೇ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.*

_*ಚಿಂತಿಸದಿರಿ*_


*ಹುಡುಕುವವರು ಏನಾದರೂ ಹುಡುಕಿಕೊಂಡು ಇರಲಿ ನಮಗೆ ನಮ್ಮತನದ ಅರಿವಿರಲಿ ನಮ್ಮ ಅಂತರಾಳ ಯಾವಾಗಲೂ ಒಳ್ಳೆಯದನ್ನೇ ಬಯಸಲಿ."*

_*ಅಬ್ದುಲ್
ಮರೆತು ಬಿಡಿ : ನಿಮ್ಮ ಅಸಫಲತೆಯ
ಮರೆತು ಬಿಡಿ : ಬೇರೆಯವರ ತಪ್ಪನ್ನು
ಮರೆತು ಬಿಡಿ : ಹಿಂದಿನ ಕಹಿ ಕ್ಷಣಗಳ

💮💮💮
ಬಿಟ್ಟುಬಿಡಿ : ಇನ್ನೊಬ್ಬರನ್ನು ಕೀಳಾಗಿ ಕಾಣುವುದನು
ಬಿಟ್ಟುಬಿಡಿ : ಇನ್ನೊಬ್ಬರ ಏಳಿಗೆಗೆ ಹೊಟ್ಟೆ ಕಿಚ್ಚನು
ಬಿಟ್ಟುಬಿಡಿ : ಇನ್ನೊಬ್ಬರ ಹಣದ ಆಸೆಯನು
ಬಿಟ್ಟುಬಿಡಿ : ಇನ್ನೊಬ್ಬರ ಅಪಹಾಸ್ಯವನು
ಬಿಟ್ಟುಬಿಡಿ : ಇನ್ನೊಬ್ಬರ ಸಫಲತೆಗೆ ದುಃಖವನು

*💎 ಸುಖ ಜೀವನದ ಮಂತ್ರಗಳು 💎*

1 ಹಿತವಾಗಿ ಮಾತಾಡಿ 👉 ಶಾಂತಿ ಸಿಗುತ್ತದೆ
2 ಅಹಂಕಾರ ಬಿಡಿ 👉 ದೊಡ್ಡವರಾಗುವಿರಿ
3 ಭಕ್ತಿಯಿರಲಿ 👉 ಮುಕ್ತಿ ಸಿಗುತ್ತದೆ
4 ವಿಚಾರ ಮಾಡಿ 👉 ಜ್ಞಾನ ಸಿಗುತ್ತದೆ
5 ಸೇವೆ ಮಾಡಿ 👉 ಶಕ್ತಿ ದೊರೆಯುತ್ತದೆ
6 ಸಹನೆಯಿಂದಿರಿ 👉 ದೈವತ್ವ ದೊರೆಯುತ್ತದೆ
7 ಸಂತೋಷದಿಂದಿರಿ 👉 ಸುಖ ದೊರೆಯುತ್ತದೆ



👌 ಒಂದೊಳ್ಳೆj ವಿಚಾರ👌

ಪರಕೆಯ ಕಡ್ಡಿಗಳು ದಾರದಿಂದ ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಸಂಬಂಧ ಎಂಬ ದಾರದಿಂದ ಒಂದಾಗೋಣ.

▫ _*ಕಟ್ಟಿದ ಮನೆ ಬಾಡಿಗೆದಾರನಿಗೆ ಆಯ್ತು*_
▫ *ಕೊಂಡ ಹೊಲ* *ಗೇಣಿದಾರನಿಗಾಯ್ತು*
▫ _*ಮುದ್ದಾಗಿ ಬೆಳೆಸಿದ ಮಗಳು ಅಳಿಯನಿಗಾಯ್ತು*_
▫ *ಹತ್ತಾರು ದೇವರಿಗೆ ಹರಕೆ ಹೊತ್ತು ಹೆತ್ತ ಮಗ ಸೊಸೆಯ ಪಾಲಾಯ್ತು*

ವಯಸ್ಸಾದ ಮೇಲೆ ಯಾರಿಗೆ ಯಾರಿಲ್ಲ ಎರವಿನ ಸಂಸಾರ

*ಆದರೂ ಆಸೆಗೆ ಕೊನೆಯಿಲ್ಲ..*
"ತಿದ್ದದೆ ತೀಡದೆ ಅಂದ ಕಾಣದು ಗೊಂಬೆ.*
*ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ.*
*ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು."*
*ಕಂಬಳಿ ಹುಳುವಿನಿಂದಲೇ*
*ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ*! *ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ* ""...

**👨‍❤‍👨ಸ್ನೇಹ ಅನ್ನೋದು ನೆನಪು ಅಲ್ಲ ಕನಸು ಅಲ್ಲ*
*ನಮ್ಮ ಜೊತೆ ಸದಾ ಇರೋ ಇನ್ನೊoದು ಮನಸ್ಸು* 😘❤
*ಯಶಸ್ಸು ಎಂದರೆ ವೈಯಕ್ತಿಕವಾಗಿ ನಾವೆಷ್ಟು ಬೆಳೆದೆವು ಎಂಬುದಲ್ಲ ,* *ನಮ್ಮ ಬೆಳವಣಿಗೆಗಳಿಂದ*
*ಎಷ್ಟು ಜನರು ಸ್ಪೂರ್ತಿ ಪಡೆದರು ಎಂಬುದು ಮುಖ್ಯವಾಗುತ್ತದೆ !*


*ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ*
*ಹಾಗೆಯೇ ಜೀವನ, ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ*

*🌹🌹ಶುಭಮುಂಜಾನೆ🌹🌹*

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು