*ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆಯ ಹುಲ್ಲಾಗಬೇಕು,*
*ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು,*
*ತೂರಿದಷ್ಟು ಎತ್ತರದ ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು,*
*ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಬೇಕು,*
*ಇವೆಲ್ಲವೂ ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು ಬೆಳಕ ಚಲ್ಲಬೇಕು..!*
🍀 *ಖುಷಿ ,ಸಂತೋಷ ಎನ್ನುವುದು* *ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ*. *ಅದು ಎಂದಿಗೂ ಬರಿದಾಗುವುದಿಲ್ಲ.* *ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ ಹಂಚುವ* *ಮೂಲಕ* , *ಇನ್ನೊಬ್ಬರ* *ಮೊಗದಲ್ಲೂ ಆ ಸಂತಸವನ್ನು* *ಕಾಣಬಹುದು.
ಎಲ್ಲಾ ಕಷ್ಟಗಳಿಗೂ, ಸಮಸ್ಯೆಗಳಿಗೂ ಎರಡು ಔಷದಿಗಳಿವೆ, ಒಂದು ದುಡಿಮೆ ಮತ್ತೊಂದು ತಾಳ್ಮೆ.
ಇವೆರಡು ನಿಮ್ಮಲ್ಲಿರಲಿ.
*ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂಥ ಗೆಳೆಯರು ಬೇಕು..!*
*ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ..*
*ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ..!*
ಯಾವಾಗ ತಾಯಿ ಸಂತೋಷವಾಗಿರುತ್ತಾಳೋ ಆಗ ಕುಟುಂಬ ಆನಂದವಾಗಿರುತ್ತದೆ. ಯಾವಾಗ ಕುಟುಂಬ ಸಂತೋಷವಾಗಿರುತ್ತದೆಯೋ ಆಗ ಇಡೀ ರಾಷ್ಟ್ರವೇ ಆನಂದವಾಗಿರುತ್ತದೆ..
✍🏻ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.
ಬದುಕಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವಂತೆ ಬದುಕೋದು ಸ್ವಾಭಿಮಾನದ ಜೀವನ. ನಮ್ಮನ್ನ ಮತ್ತೊಬ್ಬರು ಗುರುತಿಸುವಂತೆ ಬದುಕುವುದು ಅಭಿಮಾನದ ಸನ್ಮಾನ".*
🌈ದೂರ ಇದ್ದ ತಕ್ಷಣ ಸಂಬಂಧ ಹಾಳುಗುವುದಿಲ್ಲ.*
*ಹತ್ತಿರ ಇದ್ದ ತಕ್ಷಣ ಸಂಬಂಧ ಬೇಸುಯುದಿಲ್ಲ.*
*ಯಾರು ಎಷ್ಟು ಚೆನ್ನಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದರೆ ಅನ್ನುವ ಮೇಲೆ ಸಂಬಂಧಗಳು ಗಟ್ಟಿಯಾಗುತ್ತದೆ.🌈*
ಜೀವನ ಹೇಗಿರಬೇಕು ಅಂದರೆ ನಾವು ಹುಟ್ಟಿದರೆ ತಾಯಿ ಸಂತೋಷ ಪಡುವಂತಿರಬೇಕು.
ಬೆಳೆದರೆ ತಂದೆ ಆನಂದಿಸುವಂತಿರಬೇಕು
ಬಾಳಿದರೆ ಸಮಾಜ ಸಂಭ್ರಮಿಸುವಂತಿರಬೇಕು
ಸತ್ತರೆ ಸ್ಮಶಾನ ಕೂಡ ಕಣ್ಣೀರಿಡುವಂತಿಬೇಕು.....
No comments:
Post a Comment