Saturday, 7 July 2018

ನೀತಿ ಕತೆಗಳು ಕನ್ನಡ ನೀತಿ ಕತೆಗಳು moral stories in kannada kannada neethi kathegalu

ತುಂಬು ಗರ್ಭಿಣಿಯೊಬ್ಬಳು ಹೆರಿಗೆ ನೋವಿಂದ ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತಾಳೆ. ಕಾರಿನಲ್ಲಿ ಬಂದ ಯುವಕನೊಬ್ಬ ನೋಡಿಯೂ ನೋಡದಂತೆ ಕಾರನ್ನು ಮುಂದೆ ಚಲಾಯಿಸುತ್ತಾನೆ. ಅವನ ಕಾರಿನ ಹಿಂದೆ *ಮಾತೃ ದೇವೋಭವ* ಎಂದು ಬರೆದಿರುತ್ತದೆ.
ಮತ್ತೆ ಅದೇ ರಸ್ತೆಯಲ್ಲಿ ಆಟೋ ಒಂದು ಬರುತ್ತದೆ, ಸಹಾಯಕ್ಕಾಗಿ ಆ ಹೆಣ್ಣು ಮಗಳು ಅಂಗಲಾಚುತ್ತಾಳೆ. ಆಕೆಯೊಂದಿಗೆ ಯಾರೂ ಇಲ್ಲವೆಂದು ಗಮನಿಸಿ ನನಗ್ಯಾಕೀ ಉಸಾಬರಿ ಎಂಬಂತೆ ಆಟೋ ಡ್ರೈವರ್ ಹೊರಟು ಹೋಗುತ್ತಾನೆ. *ಗರ್ಭಿಣಿಯರಿಗೆ ಉಚಿತ ಸೇವೆ* ಆಟೋ ಹಿಂದೆ ಹೀಗೆಂದು ಬರೆದಿತ್ತು. ಹೀಗೇ ಹಲವರು ನೋಡಿಯೂ ನೋಡದಂತೆ ಹೊರಟು ಹೋಗುತ್ತಾರೆ. ಒಬ್ಬೊಬ್ಬರ ವಾಹನಗಳ ಹಿಂದೆಯೂ ದೊಡ್ಡ ದೊಡ್ಡ ಸಾಲುಗಳು, *ತಾಯಿಯೇ ದೇವರು*, *ತಾಯಿಗಿಂತ ದೇವರಿಲ್ಲ*, *ಹೆಣ್ಣನ್ನು ರಕ್ಷಿಸಿ;ಹೆಣ್ಣನ್ನು ಗೌರವಿಸಿ*, *ಹೆಣ್ಣೇ ಸಂಸಾರದ ಕಣ್ಣು*, ಇತ್ಯಾದಿ ಬೋಧನೆಗಳು.

ಸ್ವಲ್ಪ ಹೊತ್ತಿನ ನಂತರ ನಾಲ್ಕೈದು ಯುವಕರು ಬೈಕುಗಳಲ್ಲಿ ಗುಂಪಾಗಿ ಕೂಗಾಡುತ್ತಾ ಬರುತ್ತಾರೆ. ಆ ಗರ್ಭಿಣಿ ಹೆಣ್ಣು ಸಹಾಯಕ್ಕಾಗಿ ಒದ್ದಾಡುತ್ತಿರುವುದು ಕಂಡ ಯುವಕರು ಆಕೆಯನ್ನು ಹೇಗೋ ಆಸ್ಪತ್ರೆ ತಲುಪಿಸುತ್ತಾರೆ. ಆಗ ಆಕೆ ಆ ಯುವಕರಿಗೆ ಕೃತಜ್ಞತೆಯಿಂದ ಕೈ ಮುಗಿಯುತ್ತಾಳೆ. ತಮಾಷೆ ಅಂದ್ರೆ ಆ ಯುವಕರ ಬೈಕುಗಳ ಹಿಂದೆ *ಬ್ಯಾಡ್ ಬಾಯ್ಸ್* ಎಂದು ಬರೆದಿತ್ತು.

ಕಥೆಯ ನೀತಿ ಇಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡುವುದರಿಂದ, ಬೋಧಿಸುವುದರಿಂದ ದೊಡ್ಡ ವ್ಯಕ್ತಿಗಳಾಗೋದಿಲ್ಲ, ಒಳ್ಳೊಳ್ಳೇ ಸಂದೇಶಗಳು ವಾಹನಗಳ ಮೇಲೆ ಬರೆಸಿದ ಮಾತ್ರಕ್ಕೆ ಒಳ್ಳೆಯವರಾಗಲ್ಲ. ಅವಶ್ಯಕತೆಯಿರುವವರಿಗೆ ಅಗತ್ಯ ಸಮಯದಲ್ಲಿ ಮಾಡುವ ಸಣ್ಣ-ಪುಟ್ಟ ಸಹಾಯಗಳು ಪರಮ ಶ್ರೇಷ್ಠವಾಗುತ್ತವೆ.
MOUNESH BADIGER
[29/05, 10:13 pm] Manjula N H: ಸಫಲ ಸಂವಹನಕ್ಕೆ ಸಲಹೆಗಳು:
-----------------------------------
ಮಾತನಾಡುವಾಗ......
# ತಾಯಿಯೊಂದಿಗೆ ಮಮತೆಯಿಂದ
ಮಾತನಾಡಿ
# ತಂದೆಯೊಂದಿಗೆ ಗೌರವದಿಂದ
ಮಾತನಾಡಿ
# ಗುರುವಿನೊಂದಿಗೆ ವಿನಮ್ರತೆಯಿಂದ
ಮಾತನಾಡಿ
# ಪತ್ನಿಯೊಂದಿಗೆ ಸತ್ಯವಾಗಿ
ಮಾತನಾಡಿ
# ಸಹೋದರರೊಂದಿಗೆ ಸಂಯಮದಿಂದ
ಮಾತನಾಡಿ
# ಸಹೋದರಿಯೊಂದಿಗೆ ಪ್ರೀತಿಯಿಂದ
ಮಾತನಾಡಿ
# ಮಕ್ಕಳೊಂದಿಗೆ ಉತ್ಸಾಹದಿಂದ
ಮಾತನಾಡಿ
# ಸಂಭಂದಿಕರೊಂದಿಗೆ ಪರಾನುಭೂತಿಯಿಂದ
ಮಾತನಾಡಿ
# ಸ್ನೇಹಿತರೊಂದಿಗೆ ಮುಕ್ತವಾಗಿ
ಮಾತನಾಡಿ
# ಅಧಿಕಾರಿಗಳೊಂದಿಗೆ ನಯವಾಗಿ
ಮಾತನಾಡಿ
# ವ್ಯಾಪಾರಿಗಳೊಂದಿಗೆ ಕಟ್ಟುನಿಟ್ಟಾಗಿ
ಮಾತನಾಡಿ
# ಗ್ರಾಹಕರೊಂದಿಗೆ ಪ್ರಾಮಾಣಿಕವಾಗಿ
ಮಾತನಾಡಿ
# ಕೆಲಸಗಾರರೊಂದಿಗೆ ಸೌಜನ್ಯದಿಂದ ಮಾತನಾಡಿ
# ರಾಜಕಾರಣಿಗಳೊಂದಿಗೆ ಎಚ್ಚರಿಕೆಯಿಂದ
ಮಾತನಾಡಿ

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು