Skip to main content

moral stories in kannada ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

ತುಂಬು ಗರ್ಭಿಣಿಯೊಬ್ಬಳು ಹೆರಿಗೆ ನೋವಿಂದ ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತಾಳೆ. ಕಾರಿನಲ್ಲಿ ಬಂದ ಯುವಕನೊಬ್ಬ ನೋಡಿಯೂ ನೋಡದಂತೆ ಕಾರನ್ನು ಮುಂದೆ ಚಲಾಯಿಸುತ್ತಾನೆ. ಅವನ ಕಾರಿನ ಹಿಂದೆ *ಮಾತೃ ದೇವೋಭವ* ಎಂದು ಬರೆದಿರುತ್ತದೆ.
ಮತ್ತೆ ಅದೇ ರಸ್ತೆಯಲ್ಲಿ ಆಟೋ ಒಂದು ಬರುತ್ತದೆ, ಸಹಾಯಕ್ಕಾಗಿ ಆ ಹೆಣ್ಣು ಮಗಳು ಅಂಗಲಾಚುತ್ತಾಳೆ. ಆಕೆಯೊಂದಿಗೆ ಯಾರೂ ಇಲ್ಲವೆಂದು ಗಮನಿಸಿ ನನಗ್ಯಾಕೀ ಉಸಾಬರಿ ಎಂಬಂತೆ ಆಟೋ ಡ್ರೈವರ್ ಹೊರಟು ಹೋಗುತ್ತಾನೆ. *ಗರ್ಭಿಣಿಯರಿಗೆ ಉಚಿತ ಸೇವೆ* ಆಟೋ ಹಿಂದೆ ಹೀಗೆಂದು ಬರೆದಿತ್ತು. ಹೀಗೇ ಹಲವರು ನೋಡಿಯೂ ನೋಡದಂತೆ ಹೊರಟು ಹೋಗುತ್ತಾರೆ. ಒಬ್ಬೊಬ್ಬರ ವಾಹನಗಳ ಹಿಂದೆಯೂ ದೊಡ್ಡ ದೊಡ್ಡ ಸಾಲುಗಳು, *ತಾಯಿಯೇ ದೇವರು*, *ತಾಯಿಗಿಂತ ದೇವರಿಲ್ಲ*, *ಹೆಣ್ಣನ್ನು ರಕ್ಷಿಸಿ;ಹೆಣ್ಣನ್ನು ಗೌರವಿಸಿ*, *ಹೆಣ್ಣೇ ಸಂಸಾರದ ಕಣ್ಣು*, ಇತ್ಯಾದಿ ಬೋಧನೆಗಳು.

ಸ್ವಲ್ಪ ಹೊತ್ತಿನ ನಂತರ ನಾಲ್ಕೈದು ಯುವಕರು ಬೈಕುಗಳಲ್ಲಿ ಗುಂಪಾಗಿ ಕೂಗಾಡುತ್ತಾ ಬರುತ್ತಾರೆ. ಆ ಗರ್ಭಿಣಿ ಹೆಣ್ಣು ಸಹಾಯಕ್ಕಾಗಿ ಒದ್ದಾಡುತ್ತಿರುವುದು ಕಂಡ ಯುವಕರು ಆಕೆಯನ್ನು ಹೇಗೋ ಆಸ್ಪತ್ರೆ ತಲುಪಿಸುತ್ತಾರೆ. ಆಗ ಆಕೆ ಆ ಯುವಕರಿಗೆ ಕೃತಜ್ಞತೆಯಿಂದ ಕೈ ಮುಗಿಯುತ್ತಾಳೆ. ತಮಾಷೆ ಅಂದ್ರೆ ಆ ಯುವಕರ ಬೈಕುಗಳ ಹಿಂದೆ *ಬ್ಯಾಡ್ ಬಾಯ್ಸ್* ಎಂದು ಬರೆದಿತ್ತು.

ಕಥೆಯ ನೀತಿ ಇಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡುವುದರಿಂದ, ಬೋಧಿಸುವುದರಿಂದ ದೊಡ್ಡ ವ್ಯಕ್ತಿಗಳಾಗೋದಿಲ್ಲ, ಒಳ್ಳೊಳ್ಳೇ ಸಂದೇಶಗಳು ವಾಹನಗಳ ಮೇಲೆ ಬರೆಸಿದ ಮಾತ್ರಕ್ಕೆ ಒಳ್ಳೆಯವರಾಗಲ್ಲ. ಅವಶ್ಯಕತೆಯಿರುವವರಿಗೆ ಅಗತ್ಯ ಸಮಯದಲ್ಲಿ ಮಾಡುವ ಸಣ್ಣ-ಪುಟ್ಟ ಸಹಾಯಗಳು ಪರಮ ಶ್ರೇಷ್ಠವಾಗುತ್ತವೆ.

Comments

Popular posts from this blog

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಕನ್ನಡದ ಮೊದಲುಗಳು ಕನ್ನಡದ ಬಗ್ಗೆ ಪ್ರಮುಖ ಮಾಹಿತಿಗಳು