Wednesday, 4 July 2018

moral stories in kannada ಕನ್ನಡದ ನೀತಿ ಕತೆಗಳು

“ಕೋಪ ಬರುತ್ತಿದೆ”

ಎಂದು ಮಗ ಪ್ರತಿ ಸಲ ಹೇಳಿದಾಗ…

ಗೋಡೆಗೆ ಮೊಳೆ ಹೊಡಿ ಎನ್ನುತ್ತಾನೆ ತಂದೆ!

ಯಾಕೆ ಗೊತ್ತಾ?

ಗೋಡೆಗೆ ಹೊಡೆದ ಮೊಳೆಗಳು…
ಅದ್ಭುತವಾದ ಜೀವನ ಸತ್ಯ.

ಮಗನೊಬ್ಬನಿಗೆ…
ತಂದೆ ಕೆಲವು ಮೊಳೆಗಳನ್ನು ಕೊಟ್ಟು…

ನಿನಗೆ ನಿತ್ಯ ಎಷ್ಟು ಮಂದಿಯ ಮೇಲೆ ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡಿ ಎಂದು ಹೇಳುತ್ತಾನೆ..!

ಮೊದಲ ದಿನ 20, ಬಳಿಕ 15, ಮೂರನೇ ದಿನ 10 ಹೀಗೆ..

ತನ್ನ ಕೈಯಲ್ಲಿ ಇರುವ ಮೊಳೆಗಳನ್ನೆಲ್ಲಾ ಗೋಡೆಗೆ ಹೊಡೆದುಬಿಟ್ಟ ಮಗ.

ಮೊಳೆಗಳು ಮುಗಿದ ಕೂಡಲೆ…

ಮಗ ತಂದೆ ಬಳಿ ಬಂದು ಅಪ್ಪಾ ನೀವು ಕೊಟ್ಟ ಮೊಳೆಗಳೆಲ್ಲಾ ಮುಗಿದುಹೋದವು ಎಂದ.

ಓ…

ಅಂದರೆ ನಿನಗೆ ತುಂಬಾ ಮಂದಿ ಮೇಲೆ ಕೋಪ ಬಂದಂತಿದೆ..
ಎನ್ನುತ್ತಾರೆ ತಂದೆ..!

ಆ…ಆದರೆ…

ನಾಳೆಯಿಂದ ನಿತ್ಯ, ಗೋಡೆಗೆ ನೀನು ಹೊಡೆದ ಕೆಲವು ಮೊಳೆಗಳನ್ನು ತೆಗೆದುಬಿಡು ಎಂದು ಮಗನಿಗೆ ತಂದೆ ಹೇಳುತ್ತಾನೆ…

ತಂದೆ ಹೇಳಿದಂತೆ…

ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದ ಮಗ..

ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಟ್ಟ.

ಏನಾಯಿತು ಎಂದು ಮಗನನ್ನು ಕೇಳಿದ ತಂದೆ…

ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದುಬಿಟ್ಟೆ ಅಪ್ಪ ಎಂದ ಮಗ.

ಹಾಗಿದ್ದರೆ ಗೋಡೆ ಹೇಗಿದೆ? ಮೊಳೆಗಳೇನೋ ತೆಗೆದುಬಿಟ್ಟೆ..

ಆದರೆ ಇದರಿಂದ ಗೋಡೆಗೆ ಆದ ರಂಧ್ರಗಳು ಮಾತ್ರ ಹಾಗೆಯೇ ಇವೆ ಎಂದ ಮಗ.

ಆಗ ತಂದೆ…ಮಗನೊಂದಿಗೆ.. “ನೋಡಿದೆಯಾ”.. ಮೊಳೆಗಳನ್ನು ಹೊಡೆಯುವಾಗ ಸುಲಭವಾಗಿ ಹೊಡೆದೆ..!

ತೆಗೆಯುವಾಗ ತುಂಬಾ ಕಷ್ಟಪಟ್ಟೆ.
ಮೊಳೆಗಳನ್ನು ತೆಗೆದ ರಂಧ್ರಗಳು ಮಾತ್ರ ಹಾಗೆಯೇ ಇವೆ..

ಎಂದರೆ ನಮಗೆ ತುಂಬಾ ಮಂದಿ ಮೇಲೆ ಕೋಪ ಬರುತ್ತದೆ,

ಆ ಕೋಪದಲ್ಲಿ ಅವರ ಮನಸ್ಸನ್ನು ಗಾಯಪಡಿಸುತ್ತೇವೆ.. (ಅಂದರೆ ಮೊಳೆ ಹೊಡೆಯುತ್ತೇವೆ), ಬಳಿಕ sorry ಹೇಳುತ್ತೇವೆ (ಅಂದರೆ ಹೊಡೆದ ಮೊಳೆಗಳನ್ನು ತೆಗೆಯುತ್ತೇವೆ), ಆದರೆ sorry ಹೇಳಿಬಿಟ್ಟರೆ ಅವರ ಮನಸ್ಸಿಗೆ ಆದ ಗಾಯ (ಅಂದರೆ ರಂಧ್ರಗಳನ್ನು) ಮಾತ್ರ ಮುಚ್ಚಲು ಸಾಧ್ಯವಿಲ್ಲ.

ಹಾಗಾಗಿಯೇ ಮಾತುಗಳು-ಬುಲೆಟ್‌ನಂತಹವು, ಅಳೆದು ತೂಗಿ ಮಾತನಾಡಬೇಕು, ಇತರರನ್ನು ನೋಯಿಸದಂತೆ ಮಾತನಾಡಬೇಕು –

*ಪ್ರೀತಿಯಿಂದ ಮಾತನಾಡೋಣ.*

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು