Skip to main content

moral stories in kannada ಕನ್ನಡದ ನೀತಿ ಕತೆಗಳು

ಒಬ್ಬ ತನ್ನ ಹೊಸ ಕಾರಿಗೆ ಪಾಲಿಶ್ ಮಾಡುತ್ತಿದ್ದ. ತುಂಬಾ ಶ್ರದ್ಧೆಯಿಂದ ಧೂಳಿನ ಚಿಕ್ಕ ಕಣವೂ ಇರದಂತೆ ಫಳಫಳನೆ ಹೊಳೆಯುವಂತೆ ಮತ್ತೆ ಮತ್ತೆ ಉಜ್ಜುತ್ತಿದ್ದ.

🏃🏻

ಅಷ್ಟರಲ್ಲಿ ಅಲ್ಲೇ ಆಡುತ್ತಿದ್ದ ಆತನ ಆರು ವರ್ಷದ ಪುಟ್ಟ ಮಗ ಕಲ್ಲಿನ ಚೂರಿನಿಂದ ಕಾರಿನ ಮೇಲೆ ಗೀರತೊಡಗಿದ.
😡
ಈತನಿಗೆ ಕೋಪ ಉರಿದುಹೋಯಿತು. ಅಲ್ಲೇ ಇದ್ದ ಕಬ್ಬಿಣದ ಸರಳಿನಿಂದ ಮಗನ ಕೈ ಮೇಲೆ ರಪರಪನೆ ಹೊಡೆಯತೊಡಗಿದ. ತನ್ನ ಕೋಪ ತಣಿದಮೇಲೆ ರಕ್ತ ಸುರಿಯುತ್ತಿದ್ದ ಮಗನ ಕೈಯ್ಯನ್ನು ನೋಡಿ ಗಾಬರಿಯಿಂದ ಆಸ್ಪತ್ರೆಗೆ ಒಯ್ದ.
🚑
ಅಲ್ಲಿ ಡಾಕ್ಟರ್ ನೋಡಿ ಬೆರಳುಗಳಿಗೆ ತುಂಬಾ ಪೆಟ್ಟು ಬಿದ್ದಿರುವ ಕಾರಣ ಬೆರಳುಗಳನ್ನು ಉಳಿಸಲಾಗದೆಂದು ಕತ್ತರಿಸಿ ತೆಗೆದು ಬ್ಯಾಂಡೇಜ್ ಮಾಡಿದರು.
🚶🏿
ಸ್ವಲ್ಪ ದಿನದಲ್ಲಿ ಮಗ ಮನೆಗೆ ಬಂದ. ಚಿಂತಿತನಾಗಿ ಕುಳಿತಿದ್ದ ತನ್ನ ಅಪ್ಪನ ಬಳಿ ಮಗ ತನ್ನ ಮೊಂಡಾದ ಕೈ ತೋರಿಸಿ ಕೇಳಿದ, ಅಪ್ಪಾ ನನ್ನ ಕೈಬೆರಳು ಚಿಗುರಿ ಬೆಳೆದು ಮತ್ತೆ ಮೊದಲಿನಂತಾಗಲು ಎಷ್ಟುದಿನ ಬೇಕಾಗತ್ತಪ್ಪಾ?
😞
ಅಪ್ಪನಿಗೆ ದುಃಖ ಉಮ್ಮಳಿಸಿಬಂತು. ಏನೂ ಹೇಳಲಾರದೇ ಮಗನ ಕೈಯ್ಯನ್ನೊಮ್ಮೆ, ಕಾರನ್ನೊಮ್ಮೆ ನೋಡಿದ.
🚗
ಎಲ್ಲದಕ್ಕೂ ಈ ಹಾಳಾದ ಕಾರೇ ಕಾರಣ ಅನಿಸಿತು. ಕಾರನ್ನು ದಬದಬನೆ ಒದ್ದ. ಕಾಲು ಸೋಲುವ ವರೆಗೂ ಕಂಡಕಂಡಲ್ಲಿ ಒದ್ದ. ಅಲ್ಲೇ ಕುಸಿದು ಕುಳಿತ.
ಮಗ ಕಾರಿನ ಮೇಲೆ ಅಂದು ಗೀಚಿದ್ದು ಕಂಡಿತು.

"ನನ್ನ ಪ್ರೀತಿಯ ಅಪ್ಪ".
😢
ಅಪ್ಪ ಕರಗಿಹೋದ.
😍😡
ಪ್ರೀತಿ ಮತ್ತು ಕೋಪಕ್ಕೆ ಯಾವುದೇ ಮಿತಿ ಇರುವಪದಿಲ್ಲ.
ಪ್ರೀತಿಪೂರ್ಣ ಸುಖಜೀವನಕ್ಕಾಗಿ ಬದುಕಿನ ಮಾರ್ಗವನ್ನು ನಾವೇ ಆಯ್ದುಕೊಳ್ಳಬೇಕು.
😇
ಮನುಷ್ಯರನ್ನು ಪ್ರೀತಿಸಬೇಕು.
ವಸ್ತುಗಳನ್ನು ಉಪಯೋಗಿಸಬೇಕು.
😤
ಆದರೆ ಈಗಿನ ನಮ್ಮ ಸಮಸ್ಯೆಯೆಂದರೆ ಜನರು ವಸ್ತುಗಳನ್ನು ಪ್ರೀತಿಸುತ್ತಾರೆ. ಜನರನ್ನು ಉಪಯೋಗಿಸುತ್ತಾರೆ!
🌷
ಬನ್ನಿ ಗೆಳೆಯರೇ!
ಈ ವರ್ಷ ನಾವು ಈ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಮುಂದುವರಿಯೋಣ.
👪
ವಸ್ತುಗಳನ್ನು ಉಪಯೋಗಿಸಿ: ಆದರೆ ಮಾನವರನ್ನು ಪ್ರೀತಿಸಿ.
😇
ಮನದಲ್ಲಿ ಮೂಡುವ ವಿಚಾರಗಳನ್ನು ಅವಲೋಕಿಸಿ: ಅವೇ ಮುಂದೆ ಮಾತುಗಳಾಗುತ್ತವೆ.
😁
ಮಾತನ್ನು ನಿಯಂತ್ರಿಸಿ: ಅವೇ ಮುಂದೆ ಕೃತಿಗಳಾಗುತ್ತವೆ.
😎
ಕೃತಿಗಳನ್ನು ಗಮನಿಸಿ: ಅವೇ ನಿಮ್ಮ ಸ್ವಭಾವವಾಗುತ್ತದೆ.
😊
ಸ್ವಭಾವವನ್ನು ಸುಧಾರಿಸಿಕೊಳ್ಳಿ:. ಅದೇ ನಿಮ್ಮ ವ್ಯಕ್ತಿತ್ವವಾಗುತ್ತದೆ.
😀
ವ್ಯಕ್ತಿತ್ವವನ್ನು ಬೆಳೆಸಿ
👍🏼👌😊

Comments

Popular posts from this blog

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಕನ್ನಡದ ಮೊದಲುಗಳು ಕನ್ನಡದ ಬಗ್ಗೆ ಪ್ರಮುಖ ಮಾಹಿತಿಗಳು