*1. ನಾವೆಷ್ಟೇ ಸುಂದರ ಮತ್ತು ಹ್ಯಾಂಡ್‌ಸಂ ಆಗಿದ್ದರೂ, ಬಬೂನ್‌ಗಳು ಮತ್ತು ಗೊರಿಲ್ಲಾಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂಬುದನ್ನು ಮರೆಯದಿರೋಣ.*
*ನಮ್ಮನ್ನು ನಾವು ವಿಪರೀತವಾಗಿ ಹೊಗಳಿಕೊಳ್ಳುವುದನ್ನು ಬಿಟ್ಟುಬಿಡೋಣ.*
🌺🌺🌺
*2. ನಾವೆಷ್ಟೇ ಗಟ್ಟಿಯಾಗಿ ಶಕ್ತಿವಂತರಾಗಿದ್ದರೂ ಸರಿಯೇ, ನಮ್ಮನ್ನು ನಾವು ನಮ್ಮ ಸಮಾಧಿಗೆ ಹೊತ್ತುಕೊಂಡು ಹೋಗಲಾರೆವು.*
*ವಿನಮ್ರತೆಯಿಂದಿರೋಣ*
🌼🌼🌼🌼
*3. ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನೆಂದೂ ನೋಡಲಾರೆವು*.
*ತಾಳ್ಮೆಯಿಂದ ಇರೋಣ.*
🌹🌹🌹
*4. ನಾವೆಷ್ಟೇ ಬಿಳುಪಾದ ಚರ್ಮ ಹೊಂದಿರುವವರಾದರೂ ಕತ್ತಲೆಯಲ್ಲಿ ನಮಗೆ ಬೆಳಕು ಬೇಕೇ ಬೇಕು.*
*ಜಾಗರೂಕರಾಗಿರೋಣ*
🌺🌺🌺
*5. ನಾವೆಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಕಾರುಗಳನ್ನು ಹೊಂದಿದ್ದರೂ, ನಮ್ಮ ಹಾಸಿಗೆಗೆ ನಾವು ನಡೆಯಲೇಬೇಕು.*
🌼🌼🌼
*ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ ತೆಗೆದುಕೊಳ್ಳೋಣ. ಜೀವನ ಬಲು ಚಿಕ್ಕದು.*
*ನಾವು ಜೀವಿಸುವ ಜೀವನ...*
🌻🌻🌻
*ನಮ್ಮನ್ನು ಈ ಬೆಳಗ್ಗೆ ಎಬ್ಬಿಸಿದ್ದು ನಮ್ಮ ಅಲಾರಂ ಗಡಿಯಾರ ಎಂದುಕೊಂಡರೆ, ಅದನ್ನು ಒಂದು ಶವದ ಪಕ್ಕದಲ್ಲಿ ಇಟ್ಟು ನೋಡಿದಾಗ, ದೇವರ ಕೃಪೆಯು ನಮ್ಮನ್ನು ಇಂದು ಎಬ್ಬಿಸಿದ್ದು ಎಂಬ ಸತ್ಯ ಹೊಳೆಯುತ್ತದೆ. ನಾವು ಬದುಕಿರುವುದೇ ಆ ದೇವದೇವನ ಕೃಪೆಯಿಂದಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.*
*ಯೋಗವು ಒಮ್ಮೇ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ*
🌹🌹🌹
*ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಅರ್ಥವಾಗುವದಿಲ್ಲ ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವದಿಲ್ಲ ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವವನ್ನು ಬಿಡಬೇಡಿ. ಬೇರೆಯವರು ಸದ್ಭಾವನೆ ಸ್ವೀಕರಿಸುವದಿದ್ದರೆ ಅದು ನಿಮ್ಮ ತಪ್ಪಲ್ಲ*.
ಒಂದು ದಿನ ಕನಸು, ಜೀವನವನ್ನು ಕೇಳುತ್ತೆ ನಾನು ಯಾವಾಗಲು ನನಸು ಆಗೋದಿಲ್ಲಾ ಯಾಕೆ? ಅಂತಾ...... ಆಗ ಜೀವನ ನಗುತ್ತಾ ಹೇಳುತ್ತೆ, ಪ್ರಯತ್ನ ಪಡದೆ ಎಲ್ಲಾ ಕನಸು ನನಸಾದರೆ ಜೀವನಕ್ಕೆ ಅಥ೯ನೇ ಇರೋದಿಲ್ಲ ಅಂತಾ..*
*💞💞💞 ಶುಭೋದಯ 💞💞💞*
●ಮನೆಗೆ T.V. ಬಂದಾಗ ನಾನು ಪುಸ್ತಕ *ಓದುವುದನ್ನೇ* ಮರೆತೆ.
●ಮನೆಯ ಬಾಗಿಲಿಗೆ ಕಾರು ಬಂದು ನಿಂತಾಗ ನಾನು *ನಡೆಯಲು* ಮರೆತೆ.
●ಮೊಬೈಲ್ ಪೋನ್ ಸಿಕ್ಕಿದಾಗ *ಕಾಗದ ಬರೆಯು*ದನ್ನೇ ಮರೆತೆ.
●Computer ಸಿಕ್ಕಿದಾಗ ನಾನು *spelling*ಗಳನ್ನೇ ಮರೆತೆ.
●ಮನೆಗೆ a/c ಬಂದಾಗ ಮರಗಳ ನೆರಳಿನಲ್ಲಿದ್ದ *ತಂಗಾಳಿ*ಗಳನ್ನೇ ಮರೆತೆ.
●ನಂತರ ನನ್ನ ಜೀವನ ಮಹಾನಗರಕ್ಕೆ ಬದಲಾಯಿಸಿದಾಗ *ಮಣ್ಣಿನ ಗಂಧ*ವನ್ನೇ ಮರೆತೆ.
●ATMಗಳಲ್ಲಿ ಹಣ ವಿನಿಮಯ ಪ್ರಾರಂಭಿಸಿದಾಗ *ಹಣದ ಬೆಲೆ*ಯನ್ನೇ ಮರೆತೆ.
●ಕ್ರತ್ರಿಮ ಸುಗಂಧ ಲೇಪನಗಳನ್ನು ಆಸ್ವಾದಿಸಲು ಪ್ರಾರಂಬಿಸಿದಾಗ ಪುಷ್ಪಗಳ *ಸುಗಂಧವನ್ನೇ* ಮರೆತೆ.
●ಫಾಸ್ಟ್ ಪುಡ್ ತಿನ್ನಲು ಆರಂಭಿಸಿದಾಗ ಮನೆಯ *ದೋಸೆ ಚಟ್ನಿ ಪಾಯಸಗಳ ರುಚಿ*ಗಳನ್ನೇ ಮರೆತೆ.
●ಕೊನೆಗೆ Facebook ಸಿಕ್ಕಿದಾಗ ನಾನು *ಮಾತನಾಡುವುದನ್ನೇ* ಮರೆತು ಬಿಟ್ಟೆ.
●ಈಗ what‘s app ಕೂಡಾ ಸಿಕ್ಕಿದಾಗ *ಕುಳಿತಲ್ಲಿಂದ ಎದ್ದೇಳಲು* ಮರೆತುಬಿಟ್ಟೆ.
*ತಮಾಷೆಯಾದರೂ ನೀತಿ ಇದೆ* ಅಲ್ಲವೇ..!!??
💐 *ಅರ್ಥಪೂರ್ಣ 💐
⚫ *ಮೊದಲ ಬಾರಿ ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!*
▪ *ಪುರುಷ ಎಂದರೆ ಯಾರು?*
▪ *ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ*
▪ *ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..*
▪ *ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..*
▪ *ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆ ಖರೀದಿಸಿ ಖಾಲಿ ಮಾಡುವವನು..*
▪ *ತನ್ನ ಇಡೀ ಯೌವನವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..*
▪ *ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.*
▪ *ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ, ಪತ್ನಿ ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....*
▪ *ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....*
▪ *ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ.*
▪ *ಆತ ಮನೆಯಲ್ಲೇ ಇದ್ದರೆ ಸೋಮಾರಿ...*
▪ *ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ*
▪ *ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ.*
▪ *ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವ*
▪ *ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಳಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...*
▪ *ಒಂದು ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ*
▪ *ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ*
▪ *ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ..*
*ಪುರುಷ ದಿನಾಚರಣೆ ಯಾಕಿಲ್ಲ*
ನಾವೆಲ್ಲಾ ಸದಾ ಆಸ್ತಿ ಮಾಡುವ ಚಿ0ತೆ ಮಾಡುತ್ತೇವೆ ಆದರೆ ಆ ಆಸ್ತಿ ಹೇಗಿರಬೇಕು ಎ0ಬುದನ್ನು ಯೋಚನೆ ಮಾಡುವುದಿಲ್ಲಾ. ಹಾಗಾದರೆ ಈ ಕೆಳಗೆ ಬರೆದಿರುವುದನ್ನು ಓದಿ ಆಳವಡಿಸಿ ಆನ0ದಮಯವಾಗಿಸಿ ಜೀವನವನ್ನು.
*"ಅಮೂಲ್ಯ ಆಸ್ತಿ"*
1 *ಒಳ್ಳೆಯ ನಡತೆ ಮನುಷ್ಯನ ಆಸ್ತಿ.*
2 *ಒಳ್ಳೆಯ ಮಕ್ಕಳು ತಂದೆ ತಾಯಿಯ ಆಸ್ತಿ.*
3 *ಒಳ್ಳೆಯ ಗುಣ ಮನಸ್ಸಿನ ಆಸ್ತಿ.*
4 *ಒಳ್ಳೆಯ ಸಂಭಂದ ಜೀವನದ ಆಸ್ತಿ.*
5 *ಒಳ್ಳೆಯ ಹವ್ಯಾಸ ಪರಿಸರದ ಆಸ್ತಿ.*
6 *ಒಳ್ಳೆಯ ಪ್ರೀತಿ ಹೃದಯದ ಆಸ್ತಿ.*
7 *ಒಳ್ಳೆಯ ಆಹಾರ ದೇಹದ ಆಸ್ತಿ.*
8 *ಒಳ್ಳೆಯ ಪುಸ್ತಕ ಜ್ಞಾನದ ಆಸ್ತಿ.*
9 *ಒಳ್ಳೆಯ ಗುರು ವಿಶ್ವದ ಆಸ್ತಿ.*
10 *ಒಳ್ಳೆಯ ನಗು ಆರೋಗ್ಯದ ಆಸ್ತಿ.*
11 *ಒಳ್ಳೆಯ ಮಾನವೀಯತೆ ಸಮಾಜದ ಆಸ್ತಿ.*
*ಇವೇ ನಮ್ಮ ನಿಮ್ಮೆಲ್ಲರ ಆಸ್ತಿಯಾಗಿರಲಿ ಎಂದು ಪ್ರಾರ್ಥಿಸೋಣ.*
ಭಗವದ್ಗೀತೆಯನ್ನು ಮೆಚ್ಚಿದರೆ ಬ್ರಾಹ್ಮಣನೆನ್ನುವಿರಿ,🤔
ಅಂಬೇಡ್ಕರ್ ಅವರನ್ನು ಪ್ರೀತಿಸಿದರೆ ದಲಿತನೆನ್ನುವಿರಿ,🤔
ಬಸವಣ್ಣನವರನ್ನು ಅನುಸರಿಸಿದರೆ ಲಿಂಗಾಯಿತನೆನ್ನುವಿರಿ,🤔
ಕೆ೦ಪೇಗೌಡರನ್ನು ಹೊಗಳಿದರೆ ಒಕ್ಕಲಿಗನೆನ್ನುವಿರಿ,🤔
ಕನಕದಾಸರನ್ನು ಹಾಡಿದರೆ ಕುರುಬನೆನ್ನುವಿರಿ,🤔
ವಾಲ್ಮೀಕಿಯನ್ನು ನೆನಪಿಸಿಕೊಂಡರೆ ಬೇಡನೆನ್ನುವಿರಿ,🤔
ವಿಶ್ವಕರ್ಮರನ್ನು ಜ್ಙಾಪಿಸಿಕೊಂಡರೆ ಆಚಾರಿಎನ್ನುವಿರಿ,🤔
ವಚನಕಾರ ಮಾಚಯ್ಯನನ್ನು ಕೊಂಡಾಡಿದರೆ ಮಡಿವಾಳನೆನ್ನುವಿರಿ,🤔
ಬುದ್ಧರನ್ನು ಅಳವಡಿಸಿಕೊಂಡರೆ ಬೌದ್ಧನೆನ್ನುವಿರಿ,🤔
ಮಹಾವೀರರನ್ನು ಇಷ್ಟಪಟ್ಟರೆ ಜ್ಯೆನನೆನ್ನುವಿರಿ, 🤔
ಗುರುನಾನಾಕ್ ರನ್ನು ವ್ಯೆಭವೀಕರಿಸಿದರೆ ಸಿಖ್ಖರೆನ್ನುವಿರಿ,🤔
ಯೇಸುಕ್ರಿಸ್ತರನ್ನು ಅರ್ಥಮಾಡಿಕೊಂಡರೆ ಕ್ರಿಶ್ಚಿಯನ್ ಎನ್ನುವಿರಿ,🤔
ಪ್ಯೆಗಂಬರ್ ಅವರನ್ನು ನಂಬಿದರೆ ಮುಸ್ಲಿಂಮನೆನ್ನುವಿರಿ,🤔
ಉದ್ದನಾಮಕ್ಕೊಂದು ಜಾತಿ, ಅಡ್ಡನಾಮಕ್ಕೊಂದು ಜಾತಿ,🤔
ವಿಭೂತಿಗೊಂದು ಜಾತಿ, ಕುಂಕುಮಕ್ಕೊಂದು ಜಾತಿ,🤔
ಕತ್ತಿನಸರಕ್ಕೊಂದು ಜಾತಿ, ಸೊಂಟದಸರಕ್ಕೊಂದು ಜಾತಿ,🤔
ತುಪ್ಪ ತಿಂದರೆ ಒಂದು ಜಾತಿ, ಮಾಂಸತಿಂದರೆ ಇನ್ನೊಂದು ಜಾತಿ,🤔
ಎರಡೂಕೈ ಜೋಡಿಸಿ ಮುಗಿದರೆ ಒಂದು ಧರ್ಮ,🤔
ಎದೆಯ ಮೇಲೆ ಕೈಯಿಟ್ಟರೆ ಇನ್ನೊಂದು ಧರ್ಮ,🤔
ಬಗ್ಗಿದರೆ ಒಂದು ಧರ್ಮ,🤔
ಮಲಗಿದರೆ ಇನ್ನೊಂದು ಧರ್ಮ,🤔
ಹಸು ತಿಂದರೆ ಒಂದು ಧರ್ಮ,🤔
ಹಂದಿ ತಿಂದರೆ ಇನ್ನೊಂದು ಧರ್ಮ,🤔
ಸೆರಗು ಮುಚ್ಚಿಕೊಂಡರೆ ಒ೦ದು ಧರ್ಮ, 🤔
ಮುಖ ಮುಚ್ಚಿಕೊಂಡರೆ ಇನ್ನೊಂದು ಧರ್ಮ,🤔
ಅಣ್ಣಾ,ಅಪ್ಪಾ, ಅಯ್ಯಾ,ತಂದೆ,ಗುರು,ಗೆಳೆಯ,ಯಾಕಪ್ಪಾ ಇದೆಲ್ಲಾ ,
ಎಲ್ಲರ ದೇಹವೂ ರಕ್ತ, ಮೂಳೆ,ಮಾಂಸ, ಚರ್ಮವಲ್ಲ ಹೊದಿಕೆ,🤷🏼♂
ನಾವೇ ಶಾಶ್ವತ ಅಲ್ಲ ಅಂದಮೇಲೆ ಯಾಕ್ರಯ್ಯ ಇಷ್ಟೊಂದು ಭೇಧ,🤗
ಸರಳವಾಗಿ, ಸಹಜವಾಗಿ ಬದುಕೋಣ ,
ಭಾರತೀಯರೆನ್ನೋಣ 🇮🇳
*ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ..*
*...ಪ್ರಬುದ್ಧ ಭಾರತ...*
🙏🏼👍👌🏻 💪🏼🤗🤗
ಸಮಾನತೆಯ ಸಂಕೇತ ಭಾರತೀಯರಾಎಲ್ಲಾ ಸ್ತ್ರೀಯರಿಗೂ ಈ ಬರಹವನ್ನು ಸಮರ್ಪಿಸುತ್ತೇನೆ)
ಒಬ್ಬ ಗುರುಗಳು ಆತನ ಹತ್ತಿರ ಕೇಳುತ್ತಾರೆ
" ನೀವು ಏನು ಕೆಲಸ ಮಾಡುತ್ತಿದ್ದೀರಾ..?
ಆತ - ನಾನು ಬ್ಯಾಂಕ್ ನಲ್ಲಿ ಅಕೌಂಟೆಂಟ್.
ಗುರು - ನಿಮ್ಮ ಪತ್ನಿ ?
ಆತ - ಆಕೆಗೆ ಕೆಲಸವಿಲ್ಲ ಹೌಸ್ ವೈಫ್.
ಗುರು - ಯಾರು ಬೆಳಗಿನ ಟೀ ತಿಂಡಿಗಳನ್ನು ತಯಾರಿಸೋದು?
ಆತ - ನನ್ನ ಪತ್ನಿ , ಯಾಕೆಂದರೆ ಆಕೆಗೆ ಕೆಲಸವಿಲ್ಲ.
ಗುರು - ಟೀ ತಿಂಡಿಗಳನ್ನು ಮಾಡಲು ಆಕೆ ಎಷ್ಟು ಗಂಟೆಗೆ ಏಳುತ್ತಾಳೆ ?
ಆತ - ಐದು ಗಂಟೆಗೆ. ತಿಂಡಿಗಳನ್ನು ಮಾಡೋದಕ್ಕೆ ಮುಂಚೆ ಮನೆಯನ್ನೆಲ್ಲಾ ಕ್ಲೀನ್ ಮಾಡುತ್ತಾಳೆ.
ಗುರು - ನಿಮ್ಮ ಮಕ್ಕಳು ಹೇಗೆ ಶಾಲೆಗೆ ಹೋಗೋದು?
ಆತ - ನನ್ನ ಪತ್ನಿ ಕರಕ್ಕೊಂಡು ಹೋಗುತ್ತಾಳೆ, ಆಕೆಗೆ ಕೆಲಸವಿಲ್ಲ.
ಗುರು - ಮಕ್ಕಳನ್ನು ಶಾಲೆಗೆ ಬಿಟ್ಟು ಬಂದ ನಂತರ ನಿಮ್ಮ ಪತ್ನಿ ಏನು ಮಾಡುತ್ತಾಳೆ?
ಆತ - ಮಾರ್ಕೆಟ್ ಗೆ ಹೋಗುತ್ತಾಳೆ, ಅಲ್ಲಿಂದ ಬಂದು ಮಧ್ಯಾಹ್ನದ ಊಟ ರೆಡಿ ಮಾಡುತ್ತಾಳೆ, ಬಟ್ಟೆಗಳನ್ನು ಒಗೆಯುತ್ತಾಳೆ. ಹೂ ಗಿಡಗಳಿಗೆ ನೀರು ಹಾಕುತ್ತಾಳೆ, ಯಾಕೆಂದರೆ ಆಕೆಗೆ ಕೆಲಸವಿಲ್ಲ.
ಗುರು - ಸಂಜೆ ನೀವು ಮನೆಗೆ ಬಂದು ಏನು ಮಾಡುತ್ತೀರಿ ?
ಆತ - ರೆಸ್ಟ್ ಮಾಡುತ್ತೇನೆ. ಕಾರಣ ನಾನು ಕೆಲಸಕ್ಕೆ ಹೋಗಿ ಬಂದದ್ದರಿಂದ ಸುಸ್ತಾಗಿರುತ್ತೇನೆ.
ಗುರು - ಆಗ ನಿಮ್ಮ ಪತ್ನಿ ಏನು ಮಾಡುತ್ತಾಳೆ ?
ಆತ - ನನಗೆ ಮತ್ತು ಮಕ್ಕಳಿಗೆ ಸಂಜೆಯ ಟೀ ತಿಂಡಿಯನ್ನು ಕೊಟ್ಟು , ರಾತ್ರಿಯ ಊಟ ರೆಡಿಮಾಡಿ ಮಕ್ಕಳಿಗೆ ತಿನ್ನಿಸಿ ನನಗೂ ಬಡಿಸಿಕೊಡುತ್ತಾಳೆ. ನಂತರ ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ ಮಕ್ಕಳಿಗೆ ಪಾಠವನ್ನು ಹೇಳಿಕೊಟ್ಟು ಮಲಗಿಸುತ್ತಾಳೆ.
" ಬೆಳಗಿನಿಂದ ಮಧ್ಯರಾತ್ರಿಯವರೆಗೆ ಕಷ್ಟಪಟ್ಟು ದುಡಿದರೂ ಹೇಳುವುದು ಆಕೆಗೆ ಕೆಲಸವಿಲ್ಲ."
ಹೌಸ್ ವೈಫ್ ಆಗಲು ಯಾವುದೇ ಪದವಿಯ ಅಗತ್ಯವಿಲ್ಲ, ಆದರೆ ಅವರ ಸಾನ್ನಿಧ್ಯ ಬಹಳ ಪ್ರಧಾನವಾಗಿದೆ.
ಮತ್ತೆ ಒಂದು ದಿನ ಗುರುಗಳು ಆತನ ಪತ್ನಿಯ ಬಳಿ ಕೇಳುತ್ತಾರೆ ನೀವು ಕೆಲಸ ಮಾಡುತ್ತಿದ್ದೀರಾ ಅಥವಾ ಹೌಸ್ ವೈಫಾ?
ಆಕೆ - ಹೌದು ನಾನು ಫುಲ್ ಟೈಮ್ ಕೆಲಸ ಮಾಡುವ ಹೌಸ್ ವೈಫ್ ಆಗಿದ್ದೇನೆ.
24 ಗಂಟೆಯಾಗಿದೆ ನನ್ನ ಡ್ಯೂಟಿ.
ನಾನು ಅಮ್ಮನಾಗಿದ್ದೇನೆ,
ನಾನು ಪತ್ನಿಯಾಗಿದ್ದೇನೆ,
ನಾನು ಮಗಳಾಗಿದ್ದೇನೆ,
ನಾನು ಸೊಸೆಯಾಗಿದ್ದೇನೆ,
ನಾನು ಆಲಾರಂ ಆಗಿದ್ದೇನೆ,
ನಾನು ಕುಕ್ ಆಗಿದ್ದೇನೆ,
ನಾನು ದಾಸಿಯಾಗಿದ್ದೇನೆ,
ನಾನು ಟೀಚರ್ ಆಗಿದ್ದೇನೆ,
ನಾನು ವೈಟರ್ ಆಗಿದ್ದೇನೆ,
ನಾನು ದಾದಿಯಾಗಿದ್ದೇನೆ,
ನಾನು ವಾಚ್ ಮೆನ್ ಆಗಿದ್ದೇನೆ,
ನಾನು ಗುರುವಾಗಿದ್ದೇನೆ,
ನನಗೆ ರಜಾದಿನಗಳಿಲ್ಲ,
ನನಗೆ ಮೆಡಿಕಲ್ ರಜೆಗಳಿಲ್ಲ,
ನಾನು ಹಗಲು ಮತ್ತು ರಾತ್ರಿ ದುಡಿಯುವ ಸೇವಕಿಯಾಗಿದ್ದೇನೆ.
ಕೊನೆಗೆ ನನಗೆ ಸಿಗುವ ಸಂಬಳ ಬರೀ ದೂರುಗಳು ಮತ್ತು ಚುಚ್ಚು ಮಾತುಗಳು ಮಾತ್ರ. ..... ನಿಸ್ವಾರ್ಥದಿಂದ ಎಲ್ಲರ ಸಂತೋಷಕ್ಕೆ ಅಂತ ಬದುಕುವ ಒಂದೇ ಒಂದು ಜೀವಾ ಅಂದ್ರೇ ಅದು ಹೆಣ್ಣು ಮಾತ್ರ ಅವರು ಮಾಡಿತ್ತಿರೋ ಎಲ್ಲಾ ತ್ಯಾಗಗಳಿಗೆ ಒಂದ Big Salute
🙏🙏🙏🙏🙏🙏🙏
🍇🍇🍇🍇🍇🍇🍇🍇🍇
ಒತ್ತಡವಿಲ್ಲದ ಉದ್ಯೋಗವಿಲ್ಲ ,
ನಷ್ಟವಿಲ್ಲದ ವ್ಯಾಪಾರವಿಲ್ಲ ,
ಕಷ್ಟವಿಲ್ಲದ ವ್ಯವಸಾಯವಿಲ್ಲ ,
ನೋವಿಲ್ಲದ ಸಂಸಾರವಿಲ್ಲ ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ ,
ಇವೆಲ್ಲವನ್ನೂ ಜಯಸುವುದೇನೇ
"ಜೀವನ"
🍇🍇🍇🍇🍇🍇🍇🍇🍇
🙏.. ಶುಭೋದಯ.. 🙏
ನಾವು ಭಾಗ್ಯಶಾಲಿಗಳು! ಪುಣ್ಯವಂತರು!!
★ — ★ — ★ — ★ — ★
1947 ರಿಂದ 2000 ರ ಮಧ್ಯೆ ಹುಟ್ಟಿದ ನಾವು ಭಾಗ್ಯಶಾಲಿಗಳು ಹಾಗೂ ಪುಣ್ಯವಂತರು.
ಏಕೆಂದರೆ..
೧. ನಾವು, ಶಾಲೆಗೆ ಪ್ರಾಣಿಗಳಂತೆ ಹೆಣಭಾರದ ಪುಸ್ತಕಗಳನ್ನು ಹೊತ್ತು ಹೋಗಲಿಲ್ಲ.
೨. ಆಟ ಆಡುವಾಗ, ಸೈಕಲ್ ಸವಾರಿ ಮಾಡುವಾಗ ನಮಗೆ ಹೆಲ್ಮೆಟ್ ಧರಿಸಿಕೊಳ್ಳುವ ಧಾವಂತವಿರಲಿಲ್ಲ.
೩. ಶಾಲೆ ಮುಗಿದ ಮೇಲೆ ಮುಸ್ಸಂಜೆಯಾಗುವವರೆಗೂ ಆಟವಾಡುತ್ತಿದ್ದೆವು. ನಮಗೆ ಈ ಟಿವಿ, ಕಂಪ್ಯೂಟರ್ ಗಳ ಗೊಡವೆಯಿರಲಿಲ್ಲ.
೪. ನಮ್ಮ ನಿಜವಾದ ಗೆಳೆಯರೊಂದಿಗಷ್ಟೇ ಆಡಿದೆವು, ಹಾಡಿದೆವು, ಕುಣಿದಾಡಿದೆವು, ಜಗಳಾಡಿದೆವು, ಮಾತಾಡಿದೆವು! ಮುಖ ಮೋರೆ ನೋಡದ, ಎದುರು ಬದುರು ಭೇಟಿಯಾಗದ ಆನ್ ಲೈನ್ ಗೆಳೆಯರೊಂದಿಗಲ್ಲ.
೫. ಬಾಯಾರಿಕೆಯಾದಾಗ ಧಾರಾಳವಾಗಿ ನಲ್ಲಿ ನೀರನ್ನೋ, ಹಳ್ಳದ ನೀರನ್ನೋ, ಕೆರೆ ಬಾವಿಯ ನೀರನ್ನೋ ಕುಡಿದೆವು. ಬಾಟಲಿ ನೀರಿಗಾಗಿ ಹುಡುಕಾಡಲಿಲ್ಲ.
೬. ಒಂದೇ ಹಣ್ಣನ್ನು ನಾಲ್ಕು ಮಂದಿ ಕಚ್ಚಿ ತಿಂದೆವು, ಒಂದೇ ಗ್ಲಾಸಿನಲ್ಲಿ ನಾಲ್ಕು ಮಂದಿ ಕಚ್ಚಿ ಕುಡಿದೆವು. ನಮಗೆ ಯಾವ ರೋಗವೂ ಬರಲಿಲ್ಲ. ಬರುವ ಭೀತಿಯೂ ಇರಲಿಲ್ಲ.
೭. ತಟ್ಟೆ ತುಂಬ ಸಿಹಿ ತಿಂಡಿಗಳನ್ನು ತಿಂದರೂ, ಧಂಡಿಧಂಡಿ ಅನ್ನ ಉಂಡರೂ ನಮ್ಮ ತೂಕ ಹೆಚ್ಚಾಗಲಿಲ್ಲ.
೮. ಬರಿಗಾಲಲ್ಲೇ ಊರು ಸುತ್ತಿದರೂ, ನಮ್ಮ ಪಾದಗಳಿಗೇನೂ ಆಗಲಿಲ್ಲ, ಕ್ರಿಮಿ ಕೀಟಗಳು ಅಂಟಿಕೊಳ್ಳಲಿಲ್ಲ.
೯. ವಿಟಮಿನ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಶಿಯಂ, ಮಣ್ಣು ಮಸಿ ಮಣ್ಣಾಂಗಟ್ಟಿ ಅಂತ ಮಾತ್ರೆ ನುಂಗಲಿಲ್ಲ. ಸಿರಪ್ಪು ಕುಡಿಯಲಿಲ್ಲ. ಆದರೂ ಆರೋಗ್ಯವಾಗೇ ಇದ್ದೆವು.
೧೦. ನಮ್ಮ ಆಟಿಕೆಗಳನ್ನು ನಾವೇ ತಯಾರಿಸಿಕೊಂಡು ಆಡಿದವರು ನಾವು. ಅದಕ್ಕಾಗಿ ಅಪ್ಪ ಅವ್ವ, ಆಂಟಿ ಅಂಕಲ್ಲರು ಸಾವಿರಾರು ರೂಪಾಯಿ ಸುರಿಯಲಿಲ್ಲ.
೧೧. ನಮ್ಮ ಅಪ್ಪ ಅವ್ವ ಅಸಹ್ಯ ಹುಟ್ಟಿಸುವಷ್ಟು ಶ್ರೀಮಂತರಾಗಿರಲಿಲ್ಲ. ಹಣ ಮತ್ತು ಸಂಪತ್ತನ್ನು ಸಂಗ್ರಹಿಸಲೆಂದೇ ಬದುಕಿದವರಲ್ಲ. ಅವರು ಭೋಗದ ವಸ್ತುಗಳನ್ನು ಮೀರಿದ ಪ್ರೀತಿಯನ್ನು ಕೊಟ್ಟರು.
೧೨. ನಾವು ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೊಬೈಲ್ ಫೋನ್ ಗಳನ್ನು ಉಪಯೋಗಿಸಲಿಲ್ಲ. ಆ, ಈ ಸಂಕೇತಗಳನ್ನು ಬಳಸಲಿಲ್ಲ.
೧೩. ಯಾರೋ ಬರೆದದ್ದನ್ನು ಫಾರ್ವರ್ಡ್ ಮಾಡಲಿಲ್ಲ. ನಾವೇ ಬರೆದೆವು. ನಾವೇ ಓದಿದೆವು. ನೇರವಾಗಿ ಹೇಳಿದೆವು.
೧೪. ನಮ್ಮ ಬಳಿ ಸೆಲ್ ಫೋನ್, ಡಿವಿಡಿ, ಪೆನ್ ಡ್ರೈವ್, ಪ್ಲೇ ಸ್ಟೇಷನ್, ವಿಡಿಯೋ ಗೇಮ್, ಲ್ಯಾಪ್ ಟಾಪ್, ಇಂಟರ್ ನೆಟ್ ಗಳಿರಲಿಲ್ಲ. ಗೆಳೆಯರಿದ್ದರು..!
೧೫. ನಮ್ಮ ಸಂಬಂಧಿಕರ ಮನೆಗೆ, ಅಜ್ಜಿ ಮನೆಗೆ ನಮಗೆ ಬೇಕು ಬೇಕಾದಾಗಲೆಲ್ಲ ಹೋಗಿ ಬರುತ್ತಿದ್ದೆವು. ಕಾಲ್ ಮಾಡಿ ಪರ್ಮಿಷನ್ ಕೇಳಬೇಕಾದ ಪರಿಸ್ಥಿತಿಯಿರಲಿಲ್ಲ.
೧೬. ನಮ್ಮ ಜೊತೆಯಲ್ಲಿ ಬಂಧು ಮಿತ್ರರು, ಹಿತೈಷಿಗಳೂ ಇದ್ದರು. ಇನ್ಷೂರನ್ಸ್ ಇಲ್ಲದೆಯೂ ನಾವು ಬದುಕಬಹುದಿತ್ತು.
೧೭. ನಮ್ಮ ಅಪ್ಪ ಅವ್ವನಿಗಿಂತ ನಾವೇ ತಿಳಿದವರೆಂಬ ಭಾವನೆ ನಮಗೆಂದೂ ಬರಲಿಲ್ಲ.
ಆದರೆ, ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರು ಎಂದು ಹೆಮ್ಮೆ ಪಡುತ್ತಿದ್ದೇವೆ. ಭಾವನೆಗಳ ಬೆಲೆ ತಿಳಿಯದೆ ಬೆಳೆಯುತ್ತಿದ್ದಾರೆ.
೧೮. ನಮ್ಮ ಫೋಟೋಗಳು ಹೆಚ್ಚಾಗಿ ಬ್ಲಾಕ್ ಆಂಡ್ ವೈಟ್ ಇರಬಹುದು;
ಆದರೆ, ನಮ್ಮ ನೆನಪುಗಳು ಎಷ್ಟೊಂದು ವರ್ಣರಂಜಿತವಾಗಿವೆ!!
ಒಟ್ಟಿನಲ್ಲಿ ನಾವು ಭಾಗ್ಯಶಾಲಿಗಳು!!
ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ
ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ
ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ – ತಾಯಿ ಮಡಿಲು
ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ “ಅಮ್ಮ” ಎಂದರೆ ಸಾಕೆ..
ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ ಏನು ಅಂತ ತಿಳಿದುಕೊಳ್ಳೋಣ ;
೧) ಮೊಣಕಾಲು ಮೇಲೆ ನಿಲ್ಲಿಸಿದರೆ
*"ವಿನಯವನ್ನು ರೂಢಿಸಿಕೋ"* ಎಂದರ್ಥ.
೨) *"ಬಾಯಿಯ ಮೇಲೆ ಬೆರಳಿಟ್ಟುಕೋ ಎಂದರೆ ಸ್ವ-ಪ್ರಶಂಸೆ ಮಾಡಿಕೊಳ್ಳಬೇಡ "* ಎಂದು.
೩)ಕಿವಿ ಹಿಡಿದು ನಿಲ್ಲೆಂದರೆ *"ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು"* ಅಂತ.
೪) ಬೆಂಚಿನ ಮೇಲೆ ನಿಲ್ಲು ಅಂದರೆ *"ಎಲ್ಲರಿಗಿಂತ ಓದಿನಲ್ಲಿ ಮುಂದೆ ಇರು"* ಅಂತರ್ಥ.
೫) ಕೈಯೆತ್ತಿ ನಿಲ್ಲು ಅಂದರೆ
*"ನಿನ್ನ ಗುರಿ ಉನ್ನತವಾಗಿ ನಿಶ್ಚಲವಾಗಿರಲಿ"* ಎಂದು.
೬) ಗೋಡೆಗೆ ಮುಖಮಾಡಿ ನಿಲ್ಲು ಎಂದರೆ *"ಆತ್ಮಾವಲೋಕನ ಮಾಡಿಕೋ"* ಅಂತ.
೭) ತರಗತಿಯ (ಕ್ಲಾಸಿಂದ) ಹೊರಗೆ ನಿಲ್ಲಿಸಿದರೆ *"ಪರಿಸರದ ಜ್ಞಾನ ಪಡೆದುಕೋ"* ಎಂದು.
೮) ಕರಿಹಲಗೆ (ಬ್ಲ್ಯಾಕ್ ಬೋರ್ಡು) ಒರೆಸು ಎಂದರೆ
*"ಯಾವಾಗಲೂ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು"* ಎಂದರ್ಥ.
೯) ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ *"ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು. ಸೋಲೊಪ್ಪಿಕೊಳ್ಳಬೇಡ"* ಎಂದು.
ಎಷ್ಟು ಚೆನ್ನಾಗಿದೆಯಲ್ವಾ ಶಿಕ್ಷೆಯೆಂಬ ನವರತ್ನಗಳು.
ಗೂಢಾರ್ಥವ ಜೋಡಿಸಿ ಬದುಕ ತಿದ್ದುವ ಗುರುಗಳಿಗೆ ನಮೋನಮಃ 🙏🏻🙏🏻
*ನಿನ್ನ ಬೆಲೆ ಎಷ್ಟು....?*
ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " *ನನ್ನ ಜೀವನದ ಬೆಲೆ ಏನು* ? "
ಎಂದು.
ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು *ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ*
*ಆದರೆ ಅದನ್ನು ನೀನು ಮಾರಬಾರದು* ಎಂದು ಹೇಳಿದನಂತೆ.
ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ.
ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.
ಮಾರುತ್ತೀಯಾ?" ಎಂದು ಕೇಳಿದನಂತೆ.
ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.
ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ.
ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.
ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.
ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ "ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ.
ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ.
ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು.
ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, 'ಇದನ್ನು ಮಾರುವುದಿಲ್ಲ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.
ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.
ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ.
ನಾನು ನನ್ನ ಆಸ್ತಿಯನ್ನೆಲ್ಲಾ
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. .........
ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.
ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.
ಆಗ ದೇವರು "ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.
ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು.
ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.
*ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ*.
ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ.
*ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ*.
ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.
ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.
ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " *ಮಾನವ ಜನ್ಮ ಬಹು ಶ್ರೇಷ್ಠವಾದದ್ದು*" ಎಂದು.
ಹಾಗಾಗಿ *ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.🌼🌹
1. ಕಷ್ಟಗಳನ್ನು ಎದುರಿಸಲು ಮಕ್ಕಳಿಗೆ ಕಲಿಸಿ. ಸಂಘರ್ಷಗಳಿಂದ ಮನುಷ್ಯನ ಸ್ಫೂರ್ತಿ ದೃಢವಾಗುತ್ತದೆ.--------- ವಿಲಿಯಂ ಚಾನಿಂಗ್.
2. ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ.ಆದರೆ ಬುದ್ಧಿವಂತರು ಮಾತ್ರ ತಪ್ಪುಗಳಿಂದ ಪಾಠ ಕಲಿಯುತ್ತಾರೆ. -----------ವಿನ್ ಸ್ಟನ್ ಚರ್ಚಿಲ್.
3. ಕನ್ನಡ ಪದಗಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ
ಅಂತ ಔನ್ ಅಂದ್ರೆ - ದೇವ್ರ್ ಆದ್ರ್ ಏನು
ಮಾಡ್ತೀನ್ ಔನ್ಗೆ ಖತ್ನ !
----ಜಿ.ಪಿ.ರಾಜರತ್ನಂ
1. ಪರಿಸ್ಥಿತಿಯು ಪ್ರತಿಕೂಲವಾಗಿರುವಾಗ ಮಾತನಾಡುವುದೂ ಸಾಹಸವೇ. ----------ರಂ.ಶ್ರೀ.ಮುಗಳಿ