Saturday, 11 August 2018

Pudina rice receipes in kannada ಪುದಿನಾ ರೈಸ್. Rice receipes in kannada

ಬೇಕಾದ ಸಾಮಗ್ರಿಗಳು
• ಪುದಿನ ಸೊಪ್ಪು 1 ಕಟ್ಟು
• ಕೊತ್ತಂಬರಿ ಸೊಪ್ಪು 1 ಕಟ್ಟು
• ಹಸಿಮೆಣಸಿನ ಕಾಯಿ 8
• ಶುಂಠಿ 1 ಇಂಚು
• ಬೆಳ್ಳುಳ್ಳಿ 1
• ತೆಂಗಿನಕಾಯಿ ತುರಿ ಸ್ವಲ್ಪ
• ಈರುಳ್ಳಿ 3
• ಟೊಮಾಟೊ 2
• ಗೋಡಂಬಿ 15-20
• ಪಲಾವ್ ಎಲೆ 1
• ಜೀರಿಗೆ 1 ಚಮಚ
• ಏಲಕ್ಕಿ 1
• ಚಕ್ಕೆ 2
• ಲವಂಗ 4
• ಅನಾನಸ್ ಮೊಗ್ಗು 2
• ಎಣ್ಣೆ-ತುಪ್ಪ-- ಅಗತ್ಯಕ್ಕೆ ಅನುಗುಣವಾಗಿ
• ಅಕ್ಕಿ 2 ಗ್ಲಾಸ್ (ಅರ್ಧ ಕೆ.ಜಿ)
• ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

[ ] ಮಿಕ್ಸಿ ಜಾರ್ ಗೆ ಪುದಿನಾ.,ಕೊತ್ತಂಬರಿ ಸೊಪ್ಪು,ಹಸಿಮೆಣಸಿನ ಕಾಯಿ, ಅರ್ಧ ಈರುಳ್ಳಿ, ಶುಂಠಿ , ಬೆಳ್ಳುಳ್ಳಿ, ತೆಂಗಿನಕಾಯಿ ತುರಿ ಹಾಕಿ ಪೇಸ್ಟ್ ತರಹ ಮಾಡಿಕೊಳ್ಳಬೇಕು.
[ ] ನಂತರ ಕುಕ್ಕರ್ ಗೆ ಎಣ್ಣೆ, ಸ್ವಲ್ಪ ತುಪ್ಪ ಹಾಕಿ ಅದು ಕಾದ ನಂತರ ಪಲಾವ್ ಎಲೆ,ಜೀರಿಗೆ, ಅನಾನಸ್ ಹೂವು, ಏಲಕ್ಕಿ,ಗೋಡಂಬಿ,ಚಕ್ಕೆ ಲವಂಗ,ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವ ತನಕ ಹುರಿಯಬೇಕು. ನಂತರ ಅದಕ್ಕೆ ಟೊಮಾಟೊ ಹಾಕಿ ಬಾಡಿಸಿ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಅದರ ಹಸಿ ವಾಸನೆ ಹೋಗುವವರಿಗೆ ಹುರಿಯಬೇಕು.
[ ] ನಂತರ ಅದಕ್ಕೆ ತೊಳೆದ ಅಕ್ಕಿ ಹಾಕಿ ಒಂದು ನಿಮಿಷ ಹುರಿಯಬೇಕು. ನಂತರ ಅಳತೆಗನುಗುಣವಾಗಿ ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಕ್ಕರ್ ನಲ್ಲಿ 2 ವಿಷಲ್ ಹಾಕಿಸಬೇಕು.
ಈಗ ರುಚಿ ರುಚಿ ಆದ ಪುದಿನಾ ರೈಸ್ ಸವಿಯಲು ಸಿದ್ದ.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು