Friday 20 October 2017

Model question papers for KAS Mains exam conducted by kpsc ಕ ೆಎಎಸ್ ಮುಖ್ಯ ಪರೀಕ್ಷೆ ಗೆ ಮಾದರಿ ಪ್ರಶ್ನೆ ಪತ್ರಿಕೆ

ಮುಂಬರುವ ಡಿಸೆಂಬರ್ ನಲ್ಲಿ ಕೆಪಿಎಸ್ ಸಿ ನಡೆಸಲು ನಿರ್ಧರಿಸಿದ ಕ ೆಎಎಸ್ ಮುಖ್ಯ ಪರೀಕ್ಷೆ ಬರೆಯಲು ತಯಾರಾಗುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಅಂಕಗಳನ್ನು ಪಡೆಯಬಹುದು.
ಮಾದರಿ ಪ್ರಶ್ನೆ ಪತ್ರಿಕೆ
1 - ಸಾರ್ವಜನಿಕ ಆಡಳಿತ
ಪತ್ರಿಕೆ- 1
                ಭಾಗ- 1
1) a)ನವ ಸಾರ್ವಜನಿಕ ಆಡಳಿತದ ಮೂಲ ತತ್ವವೇನೆಂದರೆ' ಪ್ರಾಮಾಣಿಕ ಸಿದ್ದಾಂತ, ತಾತ್ವಿಕತೆ, ಸಾಮಾಜಿಕ ಕಾಳಜಿ ಹಾಗು ಸಕ್ರಿಯತಾವಾದದ ಕಡೆಗೆ ಒಂದು ರೀತಿಯ ಚಲನೆ. ' ಪರಾಮರ್ಶಿಸಿ.  25 ಅಂಕಗಳು


b)ಅಧಿಕಾರದ ಶ್ರೇಣೀಕರಣ ಹಾಗೂ ನಿಯಮಗಳ ವ್ಯವಸ್ಥೆಯಿಂದ ವ್ಯಕ್ತಿತ್ವ ಲೋಪ ಹಾಗೂ ದಕ್ಷತೆ ಸಾಧ್ಯವಾಗುತ್ತದೆ. ವಿವರಿಸಿ.  25 ಅಂಕಗಳು.

2) ಮಾನವನ ಅಗತ್ಯಗಳನ್ನು ಕುರಿತ ಮಾಸ್ಲೋ ಸಿದ್ದಾಂತ  ಹಾಗು ಹರ್ಜಬರ್ಗ ನ ಪ್ರೇರಣೆ ಮತ್ತು ಹೈಜಿಯನ್ ಸಿದ್ಧಾಂತವನ್ನು ಕುರಿತ ಪರಿಕಲ್ಪನೆಯ ಸಾಪೇಕ್ಷ ಉತ್ತಮಿಕೆಯನ್ನು ಹೋಲಿಸಿ.   50 ಅಂಕಗಳು

3) ಭಾರತದ ಆಯವ್ಯಯ ಅಂದಾಜು ಪತ್ರದ ಸಿದ್ಧತೆ, ಅನುಶಾಸನ ಹಾಗೂ ಅನುಷ್ಠಾನದ ವಿವಿಧ ಹಂತಗಳನ್ನು ವಿವರಿಸಿ. 50 ಅಂಕಗಳು.

4)ಸಂಚಾರ ಸಂದೇಶವು  ನಿರ್ವಹಣೆಯ ಹೃದಯ ಮತ್ತು ಸಂಘಟನೆ ಯ ರಕ್ತ ಪ್ರವಾಹ  ಎಂದು ವರ್ಣಿಸಲಾಗಿದೆ. ಚರ್ಚಿಸಿ.  50 ಅಂಕಗಳು

                  ಭಾಗ -

5)a) ಸಮಕಾಲೀನ ಜಗತ್ತಿನಲ್ಲಿ ಸಾರ್ವಜನಿಕ ಆಡಳಿತ  ವಿಷಯಕ್ಕೆ ಇರುವ ವ್ಯಾಪ್ತಿ ಅವಕಾಶ ಕುರಿತು  ವಿವರಿಸಿ.  25 ಅಂಕಗಳು


b) ಆಜ್ಞಾಪನೆ ಸರಪಳಿಯಲ್ಲಿ ಅಧಿಕಾರ ಪ್ರತಿನಿಯೋಜನೆಯಿಂದಾಗುವ ಅನುಕೂಲತೆಗಳನ್ನು ನಿರೂಪಿಸಿ. 25 ಅಂಕಗಳು


6)ಸಾರ್ವಜನಿಕ ಮತ್ತು ಖಾಸಗಿ ಆಡಳಿತಗಳಿಗೆ ಇರುವ ವ್ಯತ್ಯಾಸಗಳ ನ್ನು ವಿವರಿಸಿ.   50 ಅಂಕಗಳು


7) "ಆಡಳಿತಾತ್ಮಕ ನಾಯಕತ್ವದ "ಅಗತ್ಯ ಲಕ್ಷಣಗಳನ್ನುಚರ್ಚಿಸಿ. 50  ಅಂಕಗಳು.


8)  ಸಾರ್ವಜನಿಕ ಆಡಳಿತದಲ್ಲಿ "ವ್ಯವಸ್ಥೆ ಗಳ ಸಿದ್ದಾಂತ ದ " ಮುಖ್ಯ ತತ್ವಗಳು ಯಾವುವು...ಪರಾಮರ್ಶೆ ಮಾಡಿ.  50 ಅಂಕಗಳು


No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು