ಬಿ.ಎ.ಸನದಿ.
ಡಾ//ಬಿ.ಎ.ಸನದಿ ಅವರ ಪೂರ್ಣ ಹೆಸರು ಬಾಬ ಸಾಹೇಬ ಅಹ್ಮದ್ ಸನದಿ.
ಜನನ:ಆಗಸ್ಟ್ 18 1933 ಬೆಳಗಾವಿಯ ಸನದಿ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸನದಿಯಲ್ಲಿ ಪೂರೈಕೆ.
●ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸುಮಾರು 60 ಕೃತಿಗಳನ್ನು ರಚಿಸಿದ್ದಾರೆ.
ಕಾವ್ಯ, ಭಾವಗೀತೆ, ಶಿಶುಸಾಹಿತ್ಯ,ನಾಟಕ, ವಿನೋದ ಸಾಹಿತ್ಯ, ಅನುವಾದ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ. 9 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಅವುಗಳೆಂದರೆ,ಆಶಾಕಿರಣ,ನೆಲಸಂಪಿಗೆ,ತಾಜಮಹಲು,ಪ್ರತಿಬಿಂಬ, ಮುಂಬೈ ಮಳೆ,ಮನೆ ಮನೆಗೆ ಬೇಲಿ,ಮರುಭೂಮಿ ಇತ್ಯಾದಿ.
ವಿಮರ್ಶೆ ಕೃತಿಗಳು - 7
ಸಂಪಾದಿತ ಕೃತಿಗಳು - 7
ಮಕ್ಕಳ ನಾಟಕಗಳು - 8
ಕಥಾಸಂಕಲನ - 3 ಪ್ರಕಟಗೊಂಡಿವೆ.
ಇವರ 80 ನೇ ವಯಸ್ಸಿನಲ್ಲಿ 80 ರ ಪಯಣ ಎಂಬ ಅಭಿನಂದನಾ ಗ್ರಂಥ ಸಮರ್ಪಣೆಯಾಗಿದೆ.
ಸನದಿಯವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ನಿರಂಜನ ಪ್ರಶಸ್ತಿ.
ಗೋರೂರು ಪ್ರಶಸ್ತಿ.
ಭೂಸನೂರಮಠ ಪ್ರಶಸ್ತಿ.
ಬೇಂದ್ರೆ ಕಾವ್ಯ ಪ್ರಶಸ್ತಿ.
Comments
Post a Comment