Skip to main content

ಗುಪ್ತ ಸಾಮ್ರಾಜ್ಯ ಕುರಿತ ಮಾಹಿತಿ ಕೆ.ಪಿ.ಎಸ್. ಸಿ.ಪರೀಕ್ಷೆಗಾಗಿ. History notes for kpsc exams gupta dynasty

ಗುಪ್ತ ಸಾಮ್ರಾಜ್ಯ
1) ' ದೇವಿ ಚಂದ್ರ ಗುಪ್ತಂ ' ಎಂಬ ರಾಜಕೀಯ ನಾಟಕವನ್ನು ರಚಿಸಿದವರು.- - - - ವಿಶಾಖದತ್ತ.

2) ಅಭಿನವ ಗುಪ್ತನು ರಚಿಸಿದ ಗ್ರಂಥ - - - ' ಅಭಿನವ ಭಾರತಿ '.

3)ಗುಪ್ತರ ಕಾಲದ ಸಾಮಾಜಿಕ, ಧಾರ್ಮಿಕ ಸ್ಥಿತಿಯನ್ನು ತಿಳಿಯಲು ಇರುವ ಫಾಹಿಯಾನನ ಕೃತಿ - - - - ಫೋ - ಕೋ - ಕಿ.

4) ಮೆಹ್ರೌಲಿ ಸ್ತಂಭಶಾಸನವು ಯಾವ ಅರಸನ ಸಾಹಸಗಳನ್ನು ವರ್ಣಿಸುತ್ತದೆ.- - - - ರಾಜಚಂಡನ (ಎರಡನೇ ಚಂದ್ರಗುಪ್ತ.)

5) ಸ್ಕಂದಗುಪ್ತನು ಪುಷ್ಯಮಿತ್ರರೊಂದಿಗೆ ಹಾಗೂ ಹೂಣರೊಂದಿಗೆ ಹೋರಾಡಿದುದನ್ನು ತಿಳಿಸುವ ಶಾಸನ - - - ಬಿಟಾರಿ ಸ್ತಂಭ ಶಾಸನ.

6) ಗುಪ್ತ ಸಂತತಿಯ ಸ್ಥಾಪಕರು - - - ಶ್ರೀ ಗುಪ್ತ.

7) ಮಹಾರಾಜಾಧಿರಾಜ ಎಂಬ ಬಿರುದು ಹೊಂದಿದ ಮೊದಲ ಗುಪ್ತ ದೊರೆ - - - - ಮೊದಲನೇ ಚಂದ್ರ ಗುಪ್ತ.

8) ಚಂದ್ರಗುಪ್ತನ ರಾಣಿಯ ಹೆಸರು - - - - ರಾಜಕುಮಾರಿ ಕುಮಾರದೇವಿ.

9) ಕ್ರಿ.ಶ.320ರಿಂದ ಆರಂಭವಾದ ಗುಪ್ತ ಯುಗ ಪ್ರಾರಂಭಿಸಿದವರು - - - ಮೊದಲನೇ ಚಂದ್ರಗುಪ್ತ.

10) ಮೊದಲನೇ ಚಂದ್ರಗುಪ್ತನ ಉತ್ತರಾಧಿಕಾರಿ - - - ಸಮುದ್ರ ಗುಪ್ತ.

11) ಅಲಹಾಬಾದ್ ಸ್ತಂಭಶಾಸನವನ್ನು ರಚಿಸಿದವರು - - - ಹರಿಸೇನ.

12)ಅಲಹಾಬಾದ್ ಸ್ತಂಭಶಾಸನ ಇರುವ ಭಾಷೆ ಮತ್ತು ಶೈಲಿ - - - - ಸಂಸ್ಕೃತ ಭಾಷೆ ಮತ್ತು ಗದ್ಯ ಮತ್ತು ಪದ್ಯಗಳಿಂದ ಕೂಡಿದ ಚಂಪೂಶೈಲಿ.

13) ಅಲಹಾಬಾದ್ ಸ್ತಂಭಶಾಸನ ಮೂಲಪ್ರತಿ ಸ್ಥಾಪಿತವಾದದ್ದು - - - - ಕೌಸಂಬಿಯಲ್ಲಿ ಅಶೋಕನಿಂದ.

14)ಸಮುದ್ರಗುಪ್ತನ ದಕ್ಷಿಣ ದಂಡಯಾತ್ರೆಯ ಮೂರು ಲಕ್ಷಣಗಳು - - - 1)ಗ್ರಹಣ 2) ಮೋಕ್ಷ 3) ಅನುಗ್ರಹ.


ಗ್ರಹಣ ಎಂದರೆ - - ವೈರಿಯನ್ನು ಸೆರೆಹೆಡಿಯುವುದು.
ಮೋಕ್ಷ ಎಂದರೆ - - ಬಿಡುಗಡೆಗೊಳಿಸುವುದು.
ಅನುಗ್ರಹ ಎಂದರೆ - - ಅವನ ರಾಜ್ಯವನ್ನು ಅವನಿಗೇ ಹಿಂದಿರುಗಿಸುವುದು.

15) ಸಮುದ್ರ ಗುಪ್ತ ನನ್ನು ಭಾರತದ ನೆಪೋಲಿಯನ್ ಎಂದು ಕರೆದವರು - - - ಡಾ.ವಿ.ಎ.ಸ್ಮಿತ್.

16)ಅಶ್ವಮೇಧಯಾಗವನ್ನು ಆಚರಿಸಿದ ಸಮುದ್ರ ಗುಪ್ತ ನಿಗೆ ಇದ್ದ ಬಿರುದು - - - ಅಶ್ವಮೇಧ ಪರಾಕ್ರಮ.

17) ಸಮುದ್ರಗುಪ್ತ ಜಾರಿಗೆ ತಂದ ನಾಣ್ಯಗಳಲ್ಲಿ ಪ್ರಮುಖವಾದವುಗಳು - - - - ಶಂಖ,ಚಕ್ರ, ವೀಣಾ,ಅಶ್ವಮೇಧ.

18) ಕವಿರಾಜ ಎಂಬ ಬಿರುದು ಇದ್ದ ದೊರೆ - - - ಸಮುದ್ರಗುಪ್ತ.
19) ಸಮುದ್ರಗುಪ್ತನು ಸಂಸ್ಕೃತ ಭಾಷೆಯಲ್ಲಿ ಬರೆದ ಕೃತಿ - - ಕೃಷ್ಣ ಚರಿತೆ.

20) ಎರಡನೇ ಚಂದ್ರಗುಪ್ತನ ಬಿರುದು - - ವಿಕ್ರಮಾದಿತ್ಯ.

21)ಗುಪ್ತ ರ ಸ್ವರ್ಣಯುಗ ಅಸ್ತಿತ್ವದಲ್ಲಿದ್ದ ಅವಧಿ - - ಎರಡು ಶತಮಾನ.

22)ಎರಡನೇ ಚಂದ್ರಗುಪ್ತನ ದಿಗ್ವಿಜಯಗಳಬಗ್ಗೆ ತಿಳಿಸುವ ಸ್ತಂಭಶಾಸನ - - ದೆಹಲಿಯ ಮೆಹ್ರೌಲಿ ಕಬ್ಬಿಣ ಸ್ತಂಭಶಾಸನ.

23) 2ನೇ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ್ದ ಚೀನೀ ಯಾತ್ರಿಕ - - - - ಫಾಹಿಯಾನ್.

24)ಫಾಹಿಯಾನನು ಭೇಟಿನೀಡಿದ ಸ್ಥಳಗಳು - - ಮಥುರ, ಗಯಾ, ನಳಂದ,ರಾಜಗೃಹ.

25) ನಳಂದ ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು - - - - ಕುಮಾರಗುಪ್ತನ ಕಾಲದಲ್ಲಿ.

26) ಕಾಳಿದಾಸನ ಆಶ್ರಯದಾತ ದೊರೆಗಳು - - - ಎರಡನೇ ಚಂದ್ರಗುಪ್ತ ಮತ್ತು ಕುಮಾರಗುಪ್ತ.

27) ಶೂದ್ರಕ ರಚಿಸಿದ ನಾಟಕ - - - ಮೃಚ್ಛಕಟಿಕ.


28) ಕಿರಾತಾರ್ಜುನೀಯ ಮಹಾಕಾವ್ಯ ರಚಿಸಿದವರು - - - ಭಾರವಿ.

29) ಕಾಳಿದಾಸನ ಪ್ರಕಾರ ರಾಜ ಮತ್ತು ಮಂತ್ರಿ ಪರಿಷತ್ತಿನ ನಡುವೆ ಮಧ್ಯಸ್ಥಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದವನು - - - ಕಂಚುಕಿ.

30)ಗುಪ್ತರ ಕಾಲದಲ್ಲಿ ಮಂತ್ರಿ ಪರಿಷತ್ತು ಕೈಗೊಂಡ ತೀರ್ಮಾನವನ್ನು ರಾಜನಿಗೆ ತಿಳಿಸುತ್ತಿದ್ದವರು - - ಅಮಾತ್ಯ.

31) ಗುಪ್ತರ ಕಾಲದ ಪ್ರಮುಖ ನಾಗರೀಕ ಅಧಿಕಾರಿಗಳು - - - - ರಾಜಪುರುಷ.
     ರಾಜನಾಯಕ.
     ರಾಜಪುತ್ರ.
     ರಾಜಾಮಾತ್ಯ.
     ಮಹಾಸಾಮಂತ.
     ಮಹಾಕುಮಾರಾಮಾತ್ಯ.
     ಮಹಾಪ್ರತಿಹಾರ.
     ಅಜನ ಸಂಚಾರಿಕ.
    

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...