Model question papers for KAS mains exam in kannada medium conducted by kpsc ಕ ೆಎಎಸ್ ಮುಖ್ಯ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆ
ಕ ೆಎಎಸ್ ಮುಖ್ಯ ಪರೀಕ್ಷೆ ಬರೆಯಲು ತಯಾರಾಗುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ.
ಪತ್ರಿಕೆ ---3
1) fixed Dose Drug Combination (FDCs) ಎಂದರೇನು? ಅದರ ಗುಣಾವಗುಣಗಳನ್ನು ಚರ್ಚಿಸಿ.
2) ಪ್ರಕೃತಿ ವಿಕೋಪವೆಂದರೇನು? ಅದರ ನಿರ್ವಹಣೆ ಹೇಗಿರಬೇಕು ಎಂದು ನಿಮ್ಮ ಅಭಿಪ್ರಾಯ ತಿಳಿಸಿ.
3)ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಸಮಾಜದಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಟೀಕಾತ್ಮಕವಾಗಿ ವಿಶ್ಲೇಷಣೆ ಮಾಡಿ.
4) ಜೈವಿಕ ತಂತ್ರಜ್ಞಾನ ಕ್ಷೇತ್ರದ ಪರಿಕಲ್ಪನೆಗಳನ್ನು ವಿವರಿಸಿ. ಭಾರತದಲ್ಲಿ ಅದನ್ನು ಅನುಷ್ಠಾನಗೊಳಿಸಲು ಇರುವ ಅವಕಾಶಗಳು ಮತ್ತು ಸಮಸ್ಯೆಗಳ ಬಗ್ಗೆ ಟಿಪ್ಪಣಿ ಬರೆಯಿರಿ.
5)ಭಾರತದಲ್ಲಿ ಹುಲಿ ಯೋಜನೆ ಕಾರ್ಯಕ್ರಮದ ಅನುಷ್ಠಾನದ ಯಶಸ್ಸಿನ ಬಗ್ಗೆ ವಿವರಿಸಿ.
6)ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಆರ್ಥಿಕ ಅಭಿವೃದ್ಧಿ ಜೊತೆ ಜೊತೆಯಾಗಿ ಮುಂದುವರೆಯಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿ.
7)ಮಾನವ ಬಂಡವಾಳ ಮತ್ತು ವಿಜ್ಞಾನ ತಂತ್ರಜ್ಞಾನ ದೇಶದ ಅಭಿವೃದ್ಧಿಗೆ ಹೇಗೆ ಪೂರಕ ವಿಶ್ಲೇಷಿಸಿ.
8)ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಸಂಚಾರದ ಬಗ್ಗೆ ಟಿಪ್ಪಣಿ ಬರೆಯಿರಿ. .
9)ಭಾರತದ ಕೃಷಿ ಪದ್ಧತಿಯಲ್ಲಿ ಅನುಸರಿಸಬೇಕಾದ ಆಧುನಿಕ ಪ್ರವೃತ್ತಿಯ ಸವಾಲುಗಳನ್ನು ಎದುರಿಸಲು ಸೂಕ್ತ ಮಾರ್ಗೋಪಾಯಗಳ ಬಗ್ಗೆ ವಿವರಿಸಿ.
10) ಫುಡ್ ಪಾರ್ಕ್ ಗಳ ಸ್ಥಾಪನೆ ಕೃಷಿಯ ಪ್ರಗತಿಗೆ ಹೇಗೆ ಪೂರಕವಾಗಿದೆ ಎಂದು ಟಿಪ್ಪಣಿ ಬರೆಯಿರಿ..
Comments
Post a Comment