Tuesday 26 December 2017

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi

1. ಆದರ್ಶ ಗೃಹಸ್ಥನಾಗುವುದು , ಆದರ್ಶ ಸನ್ಯಾಸಿಯಾಗುವುದಕ್ಕಿಂತ ಬಹಳ ಕಷ್ಟ. ---- ಸ್ವಾಮಿ ವಿವೇಕಾನಂದ.
2. ಕಷ್ಟಗಳು ಹೆಚ್ಚಾದಂತೆ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತದೆ. -----ಎಮರ್ಸನ್.
3. ಪ್ರೀತಿಯಿಂದಾಡಿದ ಪ್ರತಿಯೊಂದು ನುಡಿಯು ಸಿಡಿಲಿನಂತೆ ಪರಿಣಾಮಕಾರಿ. -------ಸ್ವಾಮಿ ವಿವೇಕಾನಂದ.
4. ಗಟ್ಟಿ ಯಾವುದು , ಜಳ್ಳು ಯಾವುದು ಎಂಬುದನ್ನು ತಿಳಿದು ಶಾಶ್ವತವಾದ ಸತ್ಯವನ್ನು ಹುಡುಕುವುದು ನಮ್ಮ ಧರ್ಮವಾಗಬೇಕು.-----.ಬಿ.ಎಂ.ಶ್ರೀ.
5. ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು. ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ----- ವಿನೋಬಾ ಭಾವೆ.
6. ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು , ತೂಗುವುದು , ಅಳೆಯುವುದು.---- ಗೋಪಾಲಕೃಷ್ಣ ಅಡಿಗ.
7. ನಿಮ್ಮಷ್ಟಕ್ಕೆ ನೀವೇ ಬೆಳೆಯಬೇಕು.ಅದಕ್ಕಾಗಿ ಬೇರೊಬ್ಬ ಶಿಕ್ಷಕನಿರುವುದಿಲ್ಲ.------ ಸ್ವಾಮಿ ವಿವೇಕಾನಂದ.
8. ಕಲಿಕೆ ವಿಷಯ ಬರೀ ತಿಳುವಳಿಕೆಯ ಮಟ್ಟದಲ್ಲಿ ಉಳಿಯದೆ ಹೆಚ್ಚು ಅರ್ಥಪೂರ್ಣ ಮಾಡಬಲ್ಲ ಮನುಷ್ಯನೊಬ್ಬ ಬೇಕು. ಆತನೇ ಕೋಚ್ ಅಥವಾ ಗುರು. ------ ಪಿ. ಲಂಕೇಶ್.
9. ಅನ್ಯರನ್ನು ಆಳು ಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.----- ದ.ರಾ.ಬೇಂದ್ರೆ.
10. ಬಾಳುವಷ್ಟು ಕಾಲವೂ ಕಲಿಯುತ್ತಲೇ ಇರಬೇಕು.----- ತೀ.ನಂ.ಶ್ರೀ.
11. ನಾವು ಬಿಡುಗಡೆ, ಸ್ವಾತಂತ್ರ್ಯ ಪಡೆಯಬೇಕಾದದ್ದು ಅಜ್ಞಾನದಿಂದ, ಅಧರ್ಮದಿಂದ.---'.ಬಿ.ಎಂ.ಶ್ರೀ.
12. ನಮ್ಮ ಹಕ್ಕುಗಳಿಗಾಗಿ ಹೋರಾಡಲು ಎಲ್ಲಿ ಅವಕಾಶ ಇದೆಯೋ ಅಲ್ಲಿ ಪ್ರಜಾಪ್ರಭುತ್ವ ಇದೆ ಎಂದೇ ಅರ್ಥ. ------ ರೋಜರ್ ನಾಶ್ ಬಾಲ್ಡಿವಿನ್.
13. ಕರುಣೆ ಹೃದಯದ ಅಂತರಾಳದಿಂದ ಬರಬೇಕು. ಅದೇ ನಿಜವಾದ ಕರುಣೆ.-------ಮಹಾತ್ಮಾ ಗಾಂಧಿ.
14. ದೈವ ಸಹಾಯವಿಲ್ಲದೆ ಜಯವಿಲ್ಲ. ಸ್ವಪ್ರಯತ್ನವಿಲ್ಲದೆ ದೈವ ಸಹಾಯವೂ ಇಲ್ಲ.----- ಡಿ.ವಿ.ಜಿ.
15. ಕೆಟ್ಟದ್ದನ್ನು ಮಾಡಲೇಬೇಕೆಂದವನಿಗೆ ಅವಕಾಶದ ಕೊರತೆ ಇರದು.-------ಪಿ.ಸೈರಸ್
16. ಇನ್ನಬ್ಬರ ದುಃಖದಲ್ಲಿ ಸಂತೋಷ ಕಾಣಬೇಡ.------ಪಿ.ಸೈರಸ್.
17. ನಮ್ಮ ಹೆಚ್ಚಿನ ದುಃಖ, ಸಂಕಟಗಳಿಗೆ ನಾವೇ ಕಾರಣ.------ಸಾಫೋಕ್ಲಿಸ್.
18. ಧೈರ್ಯ ಅಂದರೆ ಭಯ ಇಲ್ಲದಿರುವುದಲ್ಲ, ಭಯದ ಮೇಲೆ ಜಯ ಸಾಧಿಸುವುದು.---- ನೆಲ್ಸನ್ ಮಂಡೇಲಾ.
19. ಮತ್ತೆ ಮತ್ತೆ ಯಾವ ಪುಸ್ತಕ ಓದುತ್ತೇವೆಯೋ ಅದು ಉತ್ತಮವಾದ ಪುಸ್ತಕ. ---------ಜಾನ್ ರಸ್ಕಿನ್.
20. ನಾವು ಮಾಡಿದ ಅಲ್ಪ ಸಾಧನೆ , ಮಾಡಬೇಕಾದ ಬೃಹತ್ ಕಾರ್ಯಕ್ಕೆ ನಮ್ಮನ್ನು ಕುರುಡಾಗಿಸಬಾರದು.-----ಎಸ್ . ರಾಧಾಕೃಷ್ಣನ್.
21. ಪ್ರೀತಿಯು ಒಡೆತನವನ್ನು ಪ್ರತಿಪಾದಿಸುವುದಿಲ್ಲ. ಸ್ವಾತಂತ್ರ್ಯವನ್ನು ನೀಡುತ್ತದೆ. ------- ರವೀಂದ್ರನಾಥ್ ಟ್ಯಾಗೋರ್.
22. ಭಕ್ತಿ ಒಳ್ಳೆಯ ಮಾತುಗಳನ್ನಾಡಿಸಿದರೆ ಸಾಲದು.ಅದು ಒಳ್ಳೆಯ ಕೆಲಸಗಳನ್ನು ಮಾಡಿಸಬೇಕು. ------ಡಿ.ವಿ.ಜಿ.
23. ದುಡಿಮೆಯು ಅತ್ಯಂತ ಹೆಚ್ಚು ಬೆಲೆಬಾಳುವ ಬಂಡವಾಳ. -------ಕಾರ್ಲ್ ಮಾರ್ಕ್ಸ್.
24. ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿನಿಂದ ಬೆಳೆಯುವುದಕ್ಕಾಗಿ .--------ಶಿವರಾಮ ಕಾರಂತ.
25. ಧನವಿದ್ದವರೇ ಧನಿಕರಲ್ಲ, ಜ್ಞಾನವೇ ಧನದ ನಿಧಿ.------ಪಂಡಿತ ತಾರಾನಾಥ.
26. ವಿವೇಕಿಯಾದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ.-----ಸ್ವಾಮಿ ವಿವೇಕಾನಂದ.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು