Skip to main content

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು. Kannada subhashitagalu.kannada nudimuttugalu

1. ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.------ ಕುವೆಂಪು
2. ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ;ಆದರೆ ಆತನ ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ. ----- ಅಬ್ರಹಾಂ ಲಿಂಕನ್.
3. ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ. ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ. ----- ಸರ್ವಜ್ಞ.
4. ಗುಣಾತ್ಮಕವಾಗಿ ಯೋಚಿಸುವುದಿಲ್ಲ ಎಂದಾದಲ್ಲಿ ನೀವು ಕನಿಷ್ಠ ಪಕ್ಷ ಸುಮ್ಮನಾದರೂ ಇರಿ.----- ಜೋಯೆಲ್ ಆಸ್ಟಿನ್ .
5. ಜಾತಿಯನ್ನು ಕೇಳಬೇಡಿ , ಹೇಳಬೇಡಿ ಮತ್ತು ಅದರ ಬಗ್ಗೆ ಚಿಂತಿಸಲೂಬೇಡಿ.---- ನಾರಾಯಣ ಗುರು.
6. ಪ್ರೀತಿಯಲ್ಲಿ ಬೀಳುವುದಕ್ಕೆ ಗುರುತ್ವಾಕರ್ಷಣ ಶಕ್ತಿಯನ್ನು ಬೈದು ಪ್ರಯೋಜನವಿಲ್ಲ. ಅದೊಂದು ಜೈವಿಕ ಕ್ರಿಯೆ; ಭೌತ ಮತ್ತು ರಸಾಯನಶಾಸ್ತ್ರಕ್ಕೆ ಅಲ್ಲಿ ಸ್ಥಳವಿಲ್ಲ.----- ಆಲ್ಬರ್ಟ್ ಐನ್ ಸ್ಟೀನ್
7. ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ.-----ತ.ರಾ.ಸು.
8. ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ; ಲೋಕ ಧರ್ಮದ ಹಿತಕ್ಕಾಗಿ ಅಲ್ಲ. -----ಡಿ.ವಿ.ಜಿ.
9. ಮೌನ ಅನಂತದಷ್ಟು ಆಳವಾದದ್ದು.ಮಾತು ಕಾಲದಷ್ಟು ಕ್ಷಣಿಕ. ---- ಥಾಮಸ್ ಕಾರ್ಲೈಲ್.
10. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ಸರ್.ಫಿಲಿಪ್ ಸಿಡ್ನಿ.
11. ಕ್ಷಮಿಸುವುದು ಉತ್ತಮ. ಮರೆತುಬಿಡುವುದು ಸರ್ವೋತ್ತಮ. ------ ರಾಬರ್ಟ್ ಬ್ರೌನಿಂಗ್ .
12. ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. -----ಪಿ.ಸೈರಸ್.
13. ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು.ಕಾಲನ್ನೆಳೆಯುತ್ತಾ ನಡೆಯಬೇಡ.----ಎ.ಪಿ.ಜೆ.ಅಬ್ದುಲ್ ಕಲಾಂ.
14. ಜಗತ್ತಿನಲ್ಲಿ ಹೇಳುವವರಿಗಿಂತ , ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.----- ಗಳಗನಾಥ.
15. ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.------ ಶಿವರಾಮ ಕಾರಂತ.
16. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. -----ಕುವೆಂಪು.
17. ಸತ್ಯವನ್ನು ಹೇಳುವವನು , ಸ್ವಾರ್ಥವನ್ನು ಗೆದ್ದವನು ನಿಜವಾದ ಸುಖಿ.----- ಬುದ್ಧ.
18. ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , ಅವಕಾಶವೆಂಬ ತಂದೆಗೆ ಜನಿಸುವ ಮಗು.-----ಗುರುನಾನಕ್.
19. ರೂಪ ಕಣ್ಣುಗಳಿಗೆ ಸೀಮಿತ.ಗುಣ , ಆತ್ಮದವರೆಗೆ ತಲುಪುವ ಸಾಧನ.-----ತ್ರಿವೇಣಿ.
20. ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತಾ ನಾಶಪಡಿಸು.---- ಸ್ವಾಮಿ ವಿವೇಕಾನಂದ.
21. ತಾನು ಎಲ್ಲವನ್ನೂ ಬಲ್ಲೆನೆಂದು ತಿಳಿಯುವವನೆ ಮೂರ್ಖ. ----- ಮಹಾಭಾರತ.
22. ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ.----ರಂ.ಶ್ರೀ.ಮುಗಳಿ.
23. ಹಣಕ್ಕೆ ಕೈ , ಕಾಲುಗಳಿದ್ದಂತೆ ಉಪಯೋಗಿಸಿ, ಇಲ್ಲವೇ ಕಳೆದುಕೊಳ್ಳಿ.-----ಹೆನ್ರಿ ಫೋರ್ಡ್.
24. ಬಂಧಿತನಾದ ದೇವರೇ ಮನುಷ್ಯ ; ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು. ----- ರಾಮಕೃಷ್ಣ ಪರಮಹಂಸ.
25. ಸಾಯುವುದು ಸುಲಭ, ಬಾಳುವುದು ದೊಡ್ಡ ಹೊಣೆಗಾರಿಕೆ. ---- ಎಸ್. ವಿ.ರಂಗಣ್ಣ.
26. ನಮ್ಮ ಗುಣಗಳ ನೆರಳೇ ನಮ್ಮ ಲೋಕಗಳು.----- ಎಮರ್ ಸನ್.
27. ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ. ----- ಮಹಾತ್ಮಾ ಗಾಂಧಿ.
28. ನಿರ್ಭಯವೂ ನಿಷ್ಪಕ್ಷಪಾತವೂ ಆದ ಜಗತ್ತಿನ ಅನ್ವೇಷಣೆಯೇ ವಿಜ್ಞಾನ. ----' ಸಿ.ವಿ.ರಾಮನ್.
29. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ತಾವೇ ಕಂಡುಕೊಳ್ಳಬೇಕು.ಧರ್ಮದ ದಾರಿ ಒಂದಲ್ಲ,ಹಲವು.----- ಕೆ.ಎಂ. ಮುನ್ಷಿ.
30. ನಮ್ಮ ಧರ್ಮಗಳು ನಮಗೆ ಕೂಡಿ ಬಾಳಲು ಕಲಿಸದೇ ಇದ್ದರೆ ಆ ಧರ್ಮಗಳು ಏಕೆ.? ---- ಸಿದ್ಧೇಶ್ವರ ಸ್ವಾಮಿಜಿ.
31. ಲೋಕವೆಂಬುದೊಂದು ಸಂತೆ, ಬೇಕು ಬೇಡಗಳ ಕಂತೆ, ಸಾಕು ನಮಗಾ ಚಿಂತೆ.----- ಡಿ.ವಿ.ಗುಂಡಪ್ಪ.
32. ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದು:ಖಿಯೂ ಅಲ್ಲ. ---- ಗೌತಮ ಬುದ್ಧ.
33. ನಿಮ್ಮ ಮುಖವನ್ನು ಯಾವತ್ತೂ ಸೂರ್ಯನಿಗೆ ಅಭಿಮುಖವಾಗಿಟ್ಟು ಕೊಳ್ಳಿ.ನೆರಳು ಹಿಂದಕ್ಕೆ ಸರಿಯುತ್ತದೆ.----- ವಾಲ್ಟ್ ವಿಟ್ಮನ್.
34. ಮಹಾ ಕಾರ್ಯಗಳು ಮಹಾ ತ್ಯಾಗದಿಂದ ಮಾತ್ರ ಸಾಧ್ಯ. ----- ಸ್ವಾಮಿ ವಿವೇಕಾನಂದ.
35. ಶ್ರಮಜೀವಿಯಂತೆ ಕೆಲಸ ಮಾಡು .ವೇದಾಂತಿಯಂತೆ ಯೋಚಿಸು.------- ಹೆನ್ರಿ ಬರ್ಗ್.
36. ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.------ ಸ್ವಾಮಿ ವಿವೇಕಾನಂದ.
37. ಸುಖದಲ್ಲೂ ಭಯ , ಅಪಾಯ ಇದೆ. ಕಷ್ಟದಲ್ಲೂ ಹಿತ , ಭರವಸೆ ಇದೆ. ----- ಫ್ರಾನ್ಸಿಸ್ ಬೇಕನ್.
38. ಹೊಗಳಿಕೆಯ ಮಾಲಿನ್ಯವನ್ನು ತೊಡೆದು ಹಾಕಲು ಏಕಮಾತ್ರ ಉಪಾಯ: ಕೆಲಸ ಮತ್ತು ಇನ್ನಷ್ಟು ಕೆಲಸ. ------ಆಲ್ಬರ್ಟ್ ಐನ್ ಸ್ಟೀನ್.
39. "ನಮ್ಮನ್ನು ಪ್ರೀತಿಸುವವರಿದ್ದಾರೆ" ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ.----- ವಿಕ್ಟರ್ ಹ್ಯೂಗೊ.
40. ತಿಳಿದವಗೆ ಜಗವೆಲ್ಲ ರಸದ ಊಟ.---- ಜಿ.ಎಸ್.ಶಿವರುದ್ರಪ್ಪ.
41. ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು , ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ ! ---- ಡಿ.ವಿ.ಜಿ.
42. ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ. ------ಪ.ಸೈರಸ್.
43. ಸುಖ, ಸ್ನೇಹಿತರನ್ನು ಕರೆತರುತ್ತದೆ.ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.------ಪಿ.ಸೈರಸ್.
44. ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು.----- ರವೀಂದ್ರನಾಥ್ ಟ್ಯಾಗೋರ್.
45. ಯಾವ ಸರ್ಕಾರಕ್ಕೆ ಜನರನ್ನು ಸುಖಿಗಳನ್ನಾಗಿಸಬೇಕೆಂಬ ಅಪೇಕ್ಷೆ ಇದೆಯೋ, ಯಾವ ಸರ್ಕಾರಕ್ಕೆ ಅದನ್ನು ಸಾಧಿಸುವ ರೀತಿ ತಿಳಿದಿದೆಯೋ ಅದೇ ಶ್ರೇಷ್ಠ ಸರ್ಕಾರ. -----ಮೆಕಾಲೆ.
46. ಭಾಗ್ಯವಿರಬಹುದು, ಬೇಕಾದವರು ಇರಬಹುದು , ಫಲ ಮಾತ್ರ ಪಡೆದಷ್ಟೇ.----- ಎ.ಆರ್.ಕೃಷ್ಣ ಶಾಸ್ತ್ರಿ.
47. ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ.---- ಸಾಕ್ರೆಟಿಸ್.
48. ಸುಖವನ್ನು ಸಹಿಸುವ ಶಕ್ತಿ ಒಬ್ಬನಿಗಿದ್ದರೆ ದುಃಖವನ್ನು ಸಹಿಸುವ ಶಕ್ತಿ ನೂರಾರು ಮಂದಿಗಿರುತ್ತದೆ.----- ಥಾಮಸ್ ಕಾರ್ಲೈಲ್.
49. ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ.------- ಇಂಗರ್ ಸಾಲ್.
50. ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. ------ಮಹಾತ್ಮಾ ಗಾಂಧಿ. 

Comments

Post a Comment

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...