Skip to main content

Model question paper in Kannada medium for kas mains exam conducted by kpsc in Karnataka ಕೆಎಎಸ್ ಮುಖ್ಯ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆ

ಪತ್ರಿಕೆ 1


1. ಹಿಂದುಳಿದ ವರ್ಗಗಳ ಆಯೋಗವಾದ ವೆಂಕಟಸ್ವಾಮಿ ಸಮಿತಿ ವರದಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
2. ಕರ್ನಾಟಕದಲ್ಲಿ ದಲಿತ ಚಳವಳಿ ಬೆಳೆದು ಬಂದ ಹಾದಿ ಬಗ್ಗೆ ಹಾಗೂ ಅದರ ಪ್ರಸ್ತುತ ಇತಿ ಮಿತಿಗಳ ನ್ನು ಚರ್ಚಿಸಿ.
3. ದೇವರಾಜ ಅರಸು ಅವರು ಕೈಗೊಂಡ ಭೂಸುಧಾರಣೆಗಳನ್ನು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿ.
4. ಗೋಕಾಕ್ ಚಳುವಳಿಯ ಹಿನ್ನೆಲೆ ಹಾಗೂ ಅದರ ಜಾರಿ ಕುರಿತು ನಿಮ್ಮ ಅನಿಸಿಕೆಯನ್ನು ತಿಳಿಸಿ.
5. ಕರ್ನಾಟಕದ ಗಡಿ ವಿವಾದಗಳು ಮತ್ತು ಜನ ಸಾಮಾನ್ಯರ ಮೇಲೆ ಅದರ ಪರಿಣಾಮದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
6. ಕರ್ನಾಟಕದಲ್ಲಿ ರೈತ ಚಳುವಳಿ ಬೆಳೆದು ಬಂದ ಬಗೆ ಹಾಗೂ ಅದರ ಪ್ರಸ್ತುತತೆ ಬಗ್ಗೆ ಬರೆಯಿರಿ.
7. ಕೃಷ್ಣ ನದಿ ಜಲವಿವಾದದ ಸಂಪೂರ್ಣ ಮಾಹಿತಿ ಹಾಗೂ ರಾಜ್ಯದ ಕೃಷಿ ವಲಯಕ್ಕೆ ಅದರ ಪರಿಣಾಮಗಳೇನು?
8. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿರ್ಮೂಲನೆಗೆ ನಂಜುಂಡಪ್ಪ ಸಮಿತಿ ನೀಡಿರುವ ಸಲಹೆಗಳು ಯಾವುವು?
9. ಭಾರತೀಯ ಸಾಮಾಜಿಕ ಸಂರಚನೆಯ ಮುಖ್ಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
10. ಭಾರತದಲ್ಲಿ ಯುವ ಅಶಾಂತಿಯ ಲಕ್ಷಣಗಳು , ಕಾರಣ ಮತ್ತು ಪರಿಣಾಮಗಳೇನು?

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕನ್ನಡದ ಮೊದಲುಗಳು ಕನ್ನಡದ ಬಗ್ಗೆ ಪ್ರಮುಖ ಮಾಹಿತಿಗಳು