Friday 19 January 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ದ್ವೇಷ ಬದುಕಿನಲ್ಲಿ ಕತ್ತಲೆ ಕವಿಸುತ್ತದೆ. ಪ್ರೇಮ ಬದುಕನ್ನು ಉದ್ದೀಪನಗೊಳಿಸುತ್ತದೆ. ---- ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.
2. ನೆಮ್ಮದಿ ನಿಮ್ಮ ಮನಸ್ಸಿನೊಳಗೇ ಇದೆ. ಅದನ್ನು ಹೊರಗೆ ಹುಡುಕಬೇಡಿ. ----ಗೌತಮ ಬುದ್ಧ.
3. ಸಂದಿಗ್ಧದ ಸಮಯದಲ್ಲಿ ತುಂಬ ಬಲಶಾಲಿಗೂ ಅತ್ಯಂತ ದುರ್ಬಲನ ಸಹಾಯ ಪಡೆಯುವ ಅಗತ್ಯ ಬೀಳುತ್ತದೆ. ---- ಈಸೋಪ.
4. ದುರದೃಷ್ಟ ಆವರಿಸಿದೆ ಎಂದರೆ ನಿಮಗೆ ನೈಜ ಗೆಳೆಯರಿಲ್ಲ ಎಂದರ್ಥ. ---- ಅರಿಸ್ಟಾಟಲ್.
5. ನಮ್ಮಿಂದ ಸಾಧ್ಯವಾದದ್ದನ್ನೆಲ್ಲ ಮಾಡಿದರೂ ಸಾಕಾಗುವುದಿಲ್ಲ. ಕೆಲವೊಮ್ಮೆ ಅಗತ್ಯ ಇರುವುದನ್ನಷ್ಟೆ ಮಾಡಬೇಕು.---- ವಿನ್ ಸ್ಟನ್ ಚರ್ಚಿಲ್.
6. ಭಾಷಣದ ಸಾಮರ್ಥ್ಯ ಇರುವವರಿಗೆಲ್ಲ ಮಾತುಕತೆ ನಡೆಸಲು ಬರುತ್ತದೆ ಎಂದುಕೊಳ್ಳಬೇಡಿ.----- ಬೆಂಜಮಿನ್ ಡಿಸ್ರೇಲಿ.
7. ದೇಶಪ್ರೇಮ ಎಂದರೆ ದೇಶದ ಪರವಾಗಿ ನಿಲ್ಲುವುದು; ದೇಶವನ್ನು ಆಳುವವನ ಜತೆಗೆ ನಿಲ್ಲುವುದು ಎಂದಲ್ಲ.---- ಥಿಯೋಡರ್ ರೂಸ್ ವೆಲ್ಟ್.
8. ಎಲ್ಲರೂ ಹೀರೋಗಳಾಗಲು ಆಗುವುದಿಲ್ಲ.ಏಕೆಂದರೆ ಚಪ್ಪಾಳೆ ಹೊಡೆಯಲು ಕೆಲವರಾದರೂ ಬೇಕಲ್ಲ. ---- ವಿಲ್ ರೋಜರಸ್.
9. ಬುದ್ಧಿವಂತನ ಬಗ್ಗೆ ಮೂರ್ಖನ ವರದಿ ಯಾವತ್ತೂ ಸತ್ಯವಾಗಿರುವುದಿಲ್ಲ. ಏಕೆಂದರೆ ಮೂರ್ಖ ತನಗೆ ಅರ್ಥವಾದಷ್ಟನ್ನು ಮಾತ್ರ ಬರೆಯುತ್ತಾನೆ.----- ಬರ್ ಟ್ರೆಂಡ್ ರಸೆಲ್.
10. ಕೆಲವರು ವರ್ಷಕ್ಕೆ ಎರಡು ಅಥವಾ ಮೂರು ಸಲ ಯೋಚಿಸುತ್ತಾರೆ.ಹಾಗಾಗಿಯೇ ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಯೋಚಿಸುವವರು ಆಳುತ್ತಾರೆ.---- ಜಾರ್ಜ್ ಬರ್ನಾರ್ಡ್ ಷಾ.
11. ಮೇಧಾವಿತನ ಸೌಂದರ್ಯಕ್ಕಿಂತ ಹೆಚ್ಚು ಬಾಳಿಕೆ ಬರುತ್ತದೆ. ---- ಆಸ್ಕರ್ ವೈಲ್ಡ್.
12. ಇದು ನನಗೆ ಮೊದಲೇ ಗೊತ್ತಿದೆ ಎಂದು ಯಾರಾದರೂ ಭಾವಿಸಿದ್ದರೆ ಅವನು ಆ ವಿಷಯವನ್ನು ಕಲಿಯುವುದು ಅಸಾಧ್ಯ. ---- ಎಪಿಕ್ಟಿಟಸ್.
13. ನಿಮ್ಮ ಬಳಿ ಸುತ್ತಿಗೆ ಮಾತ್ರ ಇರುವುದಾದರೆ , ಪ್ರತಿಯೊಂದು ಸಮಸ್ಯೆಯನ್ನೂ ಮೊಳೆ ಎಂದೇ ಭಾವಿಸಿ. ---- ಅಬ್ರಹಾಂ ಮಾಸ್ಲೊ.
14. ಪಾಠ ಮಾಡುವುದು ಎಂದರೆ ಎರಡನೇ ಬಾರಿ ಆ ವಿಷಯವನ್ನು ಕಲಿತಂತೆ.---- ಜೋಸೆಫ್ ಜೋಬಟರ್.
15. ಕೇವಲ ಸುತ್ತಿಗೆ ಇದ್ದವನಿಗೆ ಎದುರಿಗೆ ಇರವುದೆಲ್ಲವೂ ಮೊಳೆಯಂತೆಯೇ ಕಾಣಿಸುತ್ತದೆ. ---- ಅಬ್ರಹಾಂ ಮಾಸ್ಲೊ.
16. ಜಗತ್ತು ಅಪಾಯಕಾರಿ. ದುಷ್ಟರಿಂದಾಗಿ ಅಲ್ಲ; ದುಷ್ಟತನವನ್ನು ನೋಡಿ ಸುಮ್ಮನಿರುವ ಒಳ್ಳೆಯವರಿಂದಾಗಿ.----- ಆಲ್ಬರ್ಟ್ ಐನ್ ಸ್ಟೀನ್.
17. ಸೋಮಾರಿಯಾಗಿರುವುದು ಸಾಯುವುದಕ್ಕಿಂತ ಅಡ್ಡದಾರಿ. ಕ್ರಿಯಾಶೀಲನಾಗಿರುವುದು ಬದುಕುವ ಮಾರ್ಗ.----ಗೌತಮ ಬುದ್ಧ.
18. ಯಾವ ಆದರ್ಶ ಮನುಷ್ಯನ ಹಿತವನ್ನು ಕಾಯುವುದೋ ಅದೇ ಧರ್ಮ. ----ಡಾ. ಎಸ್.ರಾಧಾಕೃಷ್ಣನ್.
19. ಜೀವನದಲ್ಲಿ ಇರುವುದೇ ಒಂದು ಸಂತೋಷದ ಸಂಗತಿ . ಅದೆಂದರೆ ಪ್ರೀತಿಸಲ್ಪಡುವುದು ಮತ್ತು ಪ್ರೀತಿಸುವುದು.----- ಜಾರ್ಜ್ ಸ್ಯಾಂಡ್.
20. ಬದಲಾವಣೆ ಬದುಕಿನ ನಿಯಮ. ಭೂತಕಾಲ ಮತ್ತು ವರ್ತಮಾನವನ್ನು ಮಾತ್ರ ನೋಡುವವರು ಭವಿಷ್ಯವನ್ನು ಕಳೆದುಕೊಳ್ಳುತ್ತಾರೆ.---- ಜಾನ್ ಎಫ್ ಕೆನಡಿ
21. ಮನುಷ್ಯರನ್ನು ಒಟ್ಟುಗೂಡಿಸುವುದು ಎರಡೇ - ಭಯ ಮತ್ತು ಆಸಕ್ತಿ. ----ನೆಪೋಲಿಯನ್ ಬೊನಪಾರ್ಟ್.
22. ಸಹಾಯ ಮಾಡುವ ಹೃದಯ ಇದ್ದವನಿಗೆ ಟೀಕಿಸುವ ಅಧಿಕಾರವೂ ಇರುತ್ತದೆ. ---- ಅಬ್ರಹಾಂ ಲಿಂಕನ್.
23. ನೀವು ಏನನ್ನು ಬೇಕಾದರೂ ಮಾಡಬಹುದು, ಆದರೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ----ಡೇವಿಡ್ ಆಲನ್.
24. ನಿಷ್ಪ್ರಯೋಜಕ ವ್ಯಕ್ತಿ ಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ---- ಸಾಕ್ರೆಟಿಸ್.
25. ಯಾವುದಾದರೂ ವಿಚಾರವನ್ನು ಒಪ್ಪಿಕೊಳ್ಳದೆ , ಮನಸ್ಸಿಗೆ ಬಿಟ್ಟುಕೊಂಡರೆ ನಿಮ್ಮದು ಶಿಕ್ಷಿತ ಮನಸ್ಸು ಎನ್ನಬಹ.----ಅರಿಸ್ಟಾಟಲ್.
26. ಶಾಲೆಯ ಬಾಗಿಲನ್ನು ತೆರೆಯುವಾತ ಜೈಲಿನ ಬಾಗಿಲು ಮುಚ್ಚಿದಂತೆ.----- ವಿಕ್ಟರ್ ಹ್ಯೂಗ್.
27. ಅತ್ಯುತ್ತಮ ಕಲಿಕೆಯ ತರಗತಿ ಹಿರಿಯರ ಪದತಲದಲ್ಲಿದೆ.----- ಆಂಡಿ ರೂನಿ.
28. ನೀವು ಸಿಟ್ಟಿಗೆದ್ದ ಪ್ರತಿ ನಿಮಿಷಕ್ಕೂ 60 ಸೆಕೆಂಡ್ ಗಳ ಸಂತೋಷವನ್ನು ಕಳೆದುಕೊಳ್ಳುತ್ತೀರಿ.-----ರಾಲ್ಫ್ ಎಮರ್ಸನ್.
29. ಮೂರ್ಖ ತಮಾಷೆಗಿಂತ ತಮಾಷೆಯಾಗಿ ಕಾಣುವ ಮೂರ್ಖ ಒಳ್ಳೆಯವನು.---- ವಿಲಿಯಂ ಷೇಕ್ಸ್ ಪಿಯರ್.
30. ಪ್ರತಿಯೊಬ್ಬ ಮಹಿಳೆಯೂ ಬಂಡಾಯಗಾರ್ತಿ.ಸಾಮಾನ್ಯವಾಗಿ ತನ್ನ ವಿರುದ್ಧವೇ ಆಕೆ ಬಂಡಾಯ ಏಳುತ್ತಾಳೆ.----ಆಸ್ಕರ್ ವೈಲ್ಡ್.
31. ಒಂದೋ ತುಂಬಾ ಸುಲಭ ; ಇಲ್ಲವೇ ಅಸಾಧ್ಯ. ಅದರ ನಡುವೆ ಯಾವುದೂ ಇಲ್ಲ. ---- ಸಾಲ್ವಡೋರ್ ಡಾಲಿ.
32. ನಾನು ವ್ಯಾಕರಣ ಬದ್ದವಾಗಿ ಮಾತನಾಡಲು ಬಯಸುವುದಿಲ್ಲ ; ನಾನು ಮಹಿಳೆಯರಂತೆ ಮಾತನಾಡಲು ಬಯಸುತ್ತೇನೆ. ಜಾರ್ಜ್ ಬರ್ನಾರ್ಡ್ ಷಾ.
33. ಕೆಟ್ಟ ಮನುಷ್ಯ ಭಯದಿಂದ ಅನುಸರಣೆ ಮಾಡುತ್ತಾನೆ ; ಒಳ್ಳೆಯ ಮನುಷ್ಯ ಪ್ರೀತಿಯಿಂದ ಅನುಸರಣೆ ಮಾಡುತ್ತಾನೆ. ---- ಅರಿಸ್ಟಾಟಲ್.
34. ದೊರೆಯಾಗಲೀ, ರೈತನಾಗಲೀ ; ಮನೆಯಲ್ಲಿ ನೆಮ್ಮದಿ ಇದ್ದವನು ಮಾತ್ರ ಸಂತೋಷವಾಗಿರಬಲ್ಲ.---- ಗಾಯಥೆ.
35. ದುಃಖವನ್ನು ಒಬ್ಬನೇ ಅನುಭವಿಸಬಹುದು .ಆದರೆ ಸಂತೋಷವನ್ನು ಪೂರ್ಣ ರೂಪದಲ್ಲಿ ಅನುಭವಿಸಲು ಇನ್ನೊಬ್ಬನ ಜತೆಗೆ ಹಂಚಿಕೊಳ್ಳಲೇಬೇಕಾಗುತತ್ತದೆ.------- ಮಾರ್ಕ್ ಟ್ವೈನ್.
36. ಸ್ವಾತಂತ್ರ್ಯವೆಂದರೆ ಜನರು ಯಾವುದನ್ನು ಕೇಳಲು ಬಯಸುವುದಿಲ್ಲವೋ ಅದನ್ನು ಹೇಳುವ ಹಕ್ಕು.----- ಜಾರ್ಜ್ ಆರ್ವೆಲ್.
37. ನಾವು ಯುವಕರಿಗಾಗಿ ಯಾವಾಗಲೂ ಭವಿಷ್ಯವನ್ನು ನಿರ್ಮಿಸಲು ಆಗುವುದಿಲ್ಲ; ಆದರೆ ಭವಿಷ್ಯಕ್ಕಾಗಿ ಯುವಕರನ್ನು ಸಜ್ಜುಗೊಳಿಸಬಹುದು.---- ಫ್ರಾಂಕ್ಲಿನ್ ರೂಸ್ ವೆಲ್ಟ್.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು