Thursday 11 January 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ನಕಲು ಮಾಡಿ ಗೆಲ್ಲುವುದಕ್ಕಿಂತ ಸ್ವಂತ ಸೃಷ್ಟಿಯಲ್ಲಿ ಸೋಲುವುದು ಒಳ್ಳೆಯದು.---- ಹರ್ಮನ್ ಮೆಲ್ವಿಲ್.
2. ಇತರರ ಬಗ್ಗೆ ಹೆಚ್ಚು ಗೊತ್ತಿರುವವನು ಬುದ್ಧಿವಂತ. ಆದರೆ ತನ್ನ ಬಗ್ಗೆಯೇ ಹೆಚ್ಚು ಗೊತ್ತಿರುವವನು ಜ್ಞಾನಿ.----- ಲಾವೊ ತ್ಸೆ.
3. ಕಾಲು ಜಾರಿದರೆ ಎದ್ದು ನಿಲ್ಲಬಹುದು.ನಾಲಗೆ ಜಾರಿದರೆ ಎದ್ದು ನಿಲ್ಲುವುದು ಕಷ್ಟ. ----ಬೆಂಜಮಿನ್ ಫ್ರಾಂಕ್ಲಿನ್.
4. ನೀವು ಯಶಸ್ಸು ಹೊಂದಬೇಕೆಂದು ದೇವರು ಬಯಸುವುದಿಲ್ಲ; ಆದರೆ ನೀವು ಪ್ರಯತ್ನಿಸಬೇಕೆಂದು ಬಯಸುತ್ತಾನೆ.---- ಮದರ್ ತೆರೆಸಾ.
5. ನಿಮ್ಮ ದುರದೃಷ್ಟದಿಂದ ಕಲಿತುಕೊಳ್ಳುವುದಕ್ಕಿಂತ ಇತರರ ದುರದೃಷ್ಟದಿಂದ ಕಲಿತುಕೊಳ್ಳುವುದು ಒಳ್ಳೆಯದು.-----ಈಸೋಪ.
6. ಕಾದಂಬರಿ ಬರೆಯಲು ಮೂರು ನಿಯಮಗಳಿವೆ.ಆದರೆ ದುರದೃಷ್ಟವಶಾತ್ ಆ ಮೂರು ನಿಯಮಗಳು ಯಾವುದೆಂದು ಯಾರಿಗೂ ಗೊತ್ತಿಲ್ಲ. ---- ಸಾಮರ್ ಸೆಟ್ ಮಾಮ್.
7. ಮನುಷ್ಯ ನಿನಗೇನು ಬೆಲೆಯಿದೆ? ನಿನ್ನ ಮೂಳೆಗಳಿಂದ ಆಭರಣ ಮಾಡಲಾಗದು, ತೊಗಲಿನಿಂದ ಸಂಗೀತ ಉಪಕರಣಗಳನ್ನೂ ಮಾಡಲಾಗದು ! ---- ಸಂತ ಕಬೀರ.
8. ಮನುಷ್ಯ ತನ್ನನ್ನು ತಾನು ಗೆಲ್ಲುವುದೇ ಅತ್ಯುತ್ತಮವಾದ ಜಿಹಾದ್.------ ಮೊಹಮ್ಮದ್ ಪೈಗಂಬರ್.
9. ನಿರ್ಧಾರವನ್ನು ನಿಧಾನವಾಗಿಯೇ ಕೈಗೊಳ್ಳಿ. ಆದರೆ ಒಮ್ಮೆ ನಿರ್ಧರಿಸಿದ ಬಳಿಕ ಅದನ್ನು ಗಟ್ಟಿಯಾಗಿ ಸಮರ್ಥಿಸಿ.----ಮಹಾತ್ಮಾ ಗಾಂಧಿ.
10. ಸ್ವಾತಂತ್ರ್ಯ ಮತ್ತು ಪ್ರೀತಿ ಜತೆಗೂಡಿ ಹೋಗುತ್ತದೆ. ಇನ್ನೊಬ್ಬರು ಪ್ರೀತಿಸುತ್ತಾರೆಂದು ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರೀತಿಸಿದರೆ ಅದು ವ್ಯಾಪಾರ. ಯಾವ ಅಪೇಕ್ಷೆಯೂ ಇಲ್ಲದೆ ಪ್ರೀತಿಸಿ.---- ಜಿಡ್ಡು ಕೃಷ್ಣ ಮೂರ್ತಿ.
11. ಸಮಾಜಕ್ಕೆ ಸೇವೆ ಸಲ್ಲಿಸಲು ಯಾವ ಡಿಗ್ರಿಯೂ ಬೇಕಾಗಿಲ್ಲ. ಘನತೆ ತುಂಬಿದ ಹೃದಯ ಮತ್ತು ಪ್ರೀತಿ ತುಂಬಿದ ಆತ್ಮವಿದ್ದರೆ ಸಾಕು.----- ಮಾರ್ಟಿನ್ ಲೂಥರ್ ಕಿಂಗ್.
12. ಬಡತನವೇ ಕ್ರಾಂತಿ ಮತ್ತು ಅಪರಾಧಗಳ ಪೋಷಕ.-----ಅರಿಸ್ಟಾಟಲ್.
13. ಜನ ನಿಮ್ಮನ್ನು ಏಕಾಂಗಿಯಾಗಿರಲು ಬಿಟ್ಟರೆ ಬದುಕು ಅದ್ಭುತವಾಗಿರುತ್ತದೆ.---- ಚಾರ್ಲಿ ಚಾಪ್ಲಿನ್.
14. ಜಗತ್ತನ್ನು ಪ್ರೀತಿಸಿದರೆ ಮಾತ್ರ ಅಲ್ಲಿ ಜೀವಿಸಲು ಸಾಧ್ಯ. ----- ರವೀಂದ್ರನಾಥ ಟ್ಯಾಗೋರ್.
15. ಪ್ರೀತಿಯ ಸ್ಪರ್ಶವಿದ್ದರೆ ಪ್ರತಿಯೊಬ್ಬನೂ ಕವಿಯಾಗುತ್ತಾನೆ.-------- ಪ್ಲೇಟೋ.
16. ಗೆಳೆಯರನ್ನು ನಿಧಾನಕ್ಕೆ ಆಯ್ಕೆ ಮಾಡಿ. ಅವರನ್ನು ಬದಲಾಯಿಸುವಾಗ ಇನ್ನಷ್ಟು ನಿಧಾನಿಸಿ.------ಬೆಂಜಮಿನ್ ಫ್ರಾಂಕ್ಲಿನ್.
17. ದೇಹ ಮತ್ತು ಮನಸ್ಸಿನ ಆರೋಗ್ಯದ ಗುಟ್ಟು ಕಳೆದುಹೋದದ್ದಕ್ಕೆ ದುಃಖಿಸುವುದರಲ್ಲಾಗಲೀ ಭವಿಷ್ಯದ ಬಗ್ಗೆ ಭಯ ಪಡುವುದರಲ್ಲಾಗಲೀ ಇಲ್ಲ. ವರ್ತಮಾನವನ್ನು ಗೌರವ ಮತ್ತು ಬುದ್ಧಿವಂತಿಕೆಯಿಂದ ಬದುಕುವುದರಲ್ಲಿ ಇದೆ.---- ಗೌತಮ ಬುದ್ಧ.
18. ಜಗತ್ತಿನಲ್ಲಿ ಎಲ್ಲಾ ಸವಲತ್ತುಗಳು ಇದ್ದರೂ ಸ್ನೇಹಿತರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ------ಅರಿಸ್ಟಾಟಲ್.
19. ಯಾವುದಾದರೂ ಕೆಲಸ ಆಗಬೇಕೆಂದಿದ್ದರೆ ನೀವೇ ಹೋಗಿ.ಆಗಬಾರದು ಎಂದಿದ್ದರೆ ಯಾರನ್ನಾದರೂ ಕಳಿಸಿ.------ ಬೆಂಜಮಿನ್ ಫ್ರಾಂಕ್ಲಿನ್.
20. ನಿಮಗೆ ನೀವು ಏನನ್ನು ಮಾಡಲು ಬಯಸುವುದಿಲ್ಲವೋ ಅದನ್ನು ಇನ್ನೊಬ್ಬರಿಗೂ ಮಾಡಬೇಡಿ.-----ಕನ್ ಪ್ಯೂಸಿಯಸ್.
21. ಹೆತ್ತವರು ಒಳ್ಳೆಯ ದಾರಿಯಲ್ಲಿ ನಡೆಯಲು ಸಲಹೆ ಕೊಡಬಹುದು.ಆದರೆ ವ್ಯಕ್ತಿಯ ಗುಣ ನಡತೆ ಉತ್ತಮಗೊಳ್ಳುವುದು ಅವನ ಕೈಯಲ್ಲೇ ಇದೆ.----- ಆನ್ ಫ್ರಾಂಕ್.
22. ಲೇಖಕನಾದವನು ಏನನ್ನು ಹೇಳಬಯಸುತ್ತಾನೋ ಅದನ್ನು ಬರೆಯಬೇಕು, ಮಾತನಾಡಬಾರದು.-----ಆರ್ನೆಸ್ಟ್ ಹೆಮಿಂಗ್ ವೇ.
23. ನಿಮ್ಮನ್ನು ಸಾಮಾನ್ಯ ಎಂದು ತಿಳಿದುಕೊಂಡವರನ್ನು ಯಾವತ್ತೂ ಪ್ರೀತಿಸಬೇಡಿ.----- ಆಸ್ಕರ್ ವೈಲ್ಡ್.
24. ಪ್ರೀತಿಸುವವರ ಒಂದು ಸ್ಪರ್ಶ ಸಾಕು, ಪ್ರತಿಯೊಬ್ಬರೂ ಕವಿಯಾಗುತ್ತಾರೆ.---ಪ್ಲೆಟೋ.
25. ನಾನು ಪ್ರೀತಿಗೆ ಅಂಟಿಕೊಳ್ಳಲು ನಿರ್ಧರಿಸಿದ್ದೇನೆ.ದ್ವೇಷದ ಹೊರೆಯನ್ನು ಹೊರುವುದು ಸಾಧ್ಯವಿಲ್ಲ. ------ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.
26. ಹೃದಯ ಇರುವದೇ ಭಗ್ನಗೊಳ್ಳಲು ! ಆಸ್ಕರ್ ವೈಲ್ಡ್.
27. ಜೀವನ ಸುದೀರ್ಘ ಅನ್ನಿಸಿಕೊಳ್ಳುವುದಕ್ಕಿಂತ ಶ್ರೇಷ್ಠ ಅನ್ನಿಸಿಕೊಳ್ಳಬೇಕು.----- ಬಾಬಾ ಸಾಹೇಬ್ ಅಂಬೇಡ್ಕರ್ .
28. ಬೆಳಕು ಕೊಡಿ, ಜನರು ಅವರ ದಾರಿಯನ್ನು ಅವರೇ ಹುಡುಕಿಕೊಳ್ಳುತ್ತಾರೆ.--------ಎಲ್ಲಾ ಬೇಕರ್.
29. ಸೂರ್ಯನ ಬೆಳಕು ಇದ್ದಾಗ ನಾನು ಏನೆಲ್ಲವನ್ನೂ ಮಾಡಬಲ್ಲೆ.ಯಾವ ಪರ್ವತವೂ ನನಗೆ ಎತ್ತರವಲ್ಲ.----- ವಿಲ್ಮಾ ರುಡೋಲ್ಫ್.
30. ಇವತ್ತು ಏನು ಮಾಡುತ್ತೀಯೋ ಅದರ ಮೇಲೆ ನಿನ್ನ ನಾಳೆಯ ಭವಿಷ್ಯ ನಿಂತಿದೆ.----- ಮಹಾತ್ಮಾ ಗಾಂಧಿ.
31. ಹಕ್ಕಿಯೊಂದು ತನ್ನ ಸ್ವಂತ ಬದುಕಿನಿಂದಲೇ ಶಕ್ತಿ ಮತ್ತು ಸಾಧಿಸುವ ಛಲವನ್ನು ಪಡೆಯುತ್ತದೆ.------ಎ.ಪಿ.ಜೆ.ಅಬ್ದುಲ್ ಕಲಾಂ.
32. ಯಾರು ಸಂತೋಷವಾಗಿರುತ್ತಾರೋ ಅವರು ಉಳಿದವರನ್ನೂ ಸಂತೋಷಗೊಳಿಸಬಲ್ಲರು.----ಆಯ್ನ್ ಫ್ರಾಂಕ್.
33. ನಿಮಗೆ ಯಾವ ಕೆಲಸ ಅಸಾಧ್ಯ ಎನ್ನಿಸುತ್ತದೋ ಅದನ್ನೇ ಮಾಡಿ.-----'ಎಲಿನಾರ್ ರೂಸ್ ವೆಲ್ಟ್.
34. ನಿಷ್ಪ್ರಯೋಜಕ ವ್ಯಕ್ತಿಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ----- ಸಾಕ್ರೆಟಿಸ್.
35. ಬಹಳಷ್ಟು ಜನರಿಗೆ ಸ್ವಾತಂತ್ರ್ಯ ಬೇಕಿಲ್ಲ. ಏಕೆಂದರೆ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯು ಇರುತ್ತದೆ. ಬಹಳಷ್ಟು ಜನ ಜವಾಬ್ದಾರಿಯ ಬಗ್ಗೆ ಭಯ ಹೊಂದಿದ್ದಾರೆ. ----- ಸಿಗ್ಮಂಡ್ ಫ್ರಾಯ್ಡ್.
36. ಮುಗ್ಧರ ನಂಬಿಕೆಯೇ ಮೋಸಗಾರರ ಬಲವಾದ ಆಯುಧ. ------ ಸ್ಟೀಫನ್ ಕಿಂಗ್.
37. ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆಗಳಿಲ್ಲದ ಹಕ್ಕಿಯಂತೆ. ----- ಸಾಲ್ವಡೋರ್ ಡಾಲಿ.
38. ದುಃಖದ ಮೌನ ಭಾಷೆಯೇ ಕಣ್ಣೀರು. ------ವಾಲ್ಟೇರ್.
39. ಕ್ರೀಡೆಯಲ್ಲಿ ಕೆಲವೊಮ್ಮೆ ನೀವು ಅಪಾಯಗಳನ್ನು ಆಹ್ವಾನಿಸಲೇಬೇಕು. ಆದರೆ ವಾಸ್ತವದ ಅಪಾಯಗಳನ್ನು ಎದುರಿಸಿ, ಹುಚ್ಚು ಅಪಾಯಗಳನ್ನಲ್ಲ. ------ ಸರ್ಗಿ ಬುಬ್ಕಾ.
40. ಯಶಸ್ಸು ಸದಾ ಇರಬೇಕೆಂದರೆ ವಿನಯದಿಂದಿರಿ. ಕೀರ್ತಿ ಅಥವಾ ಹಣ ತಲೆಗೆ ಹತ್ತದಂತೆ ನೋಡಿಕೊಳ್ಳಿ. ------- ಎ.ಆರ್.ರೆಹಮಾನ್.
41. ಬೆಂಕಿಯಿಲ್ಲದೆ ಮೇಣದ ಬತ್ತಿ ಉರಿಯುವುದಿಲ್ಲ. ಹಾಗೆಯೇ ಆಧ್ಯಾತ್ಮಿಕ ಜೀವನವಿಲ್ಲದೆ ಮನುಷ್ಯ ಬದುಕಲಾರ. -----ಗೌತಮ ಬುದ್ಧ.
42. ಜೀವನದ ಭಯದಿಂದಲೇ ಸಾವಿನ ಭಯವೂ ಹುಟ್ಟುವುದು. ಜೀವನವನ್ನು ಸಂಪೂರ್ಣವಾಗಿ ಜೀವಿಸುವವನು ಸಾಯಲು ಸದಾ ಸಿದ್ಧನಾಗಿರುತ್ತಾನೆ. ------ ಮಾರ್ಕ್ ಟ್ವೈನ್.
43. ಶಿಕ್ಷಣ ಎನ್ನುವುದು ಅತ್ಯಂತ ಶಕ್ತಿ ಶಾಲಿ ಆಯುಧ. ಅದರ ಮೂಲಕ ಜಗತ್ತನ್ನು ಬದಲಿಸಬಹುದು. -----'ನೆಲ್ಸನ್ ಮಂಡೇಲಾ.
44. ನಿಮಗೆ ಶತ್ರುಗಳಿದ್ದಾರಾ ? ತುಂಬಾ ಒಳ್ಳೆಯದು.ಅದರ ಅರ್ಥ ಜೀವನದಲ್ಲಿ ನೀವು ಯಾವತ್ತೋ ಒಂದು ಸಲ ಒಳ್ಳೆಯದಕ್ಕಾಗಿ ಎದ್ದು ನಿಂತಿದ್ದೀರಿ.----- ವಿನ್ ಸ್ಟನ್ ಚರ್ಚಿಲ್.
45. ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ. -----ಸ್ವಾಮಿ ವಿವೇಕಾನಂದ.
46. ದ್ವೇಷವನ್ನು ದ್ವೇಷದಿಂದಲೇ ಮುಗಿಸಲು ಹೊರಟರೆ ಪ್ರಪಂಚವೇ ಕುರುಡಾಗುತ್ತದೆ.-----ಮಹಾತ್ಮಾ ಗಾಂಧಿ.
47. ಜೀವನವು ಹೋರಾಟದ ಕಣ.ಹೋರಾಟದ ಮೂಲಕವೇ ನಾವು ಮುಂದಕ್ಕೆ ಸಾಗಬೇಕಿದೆ.-----ಸ್ವಾಮಿ ವಿವೇಕಾನಂದ.
48. ಮೂರ್ಖನ ಹಣ ಮಾತ್ರ ಅತ್ಯಧಿಕ ಪ್ರಚಾರ ಪಡೆಯುತ್ತದೆ. ----ಅಲ್ ಬೆರ್ಸೀನ್.
49. ಶಕ್ತಿ ಬರುವುದು ದೈಹಿಕ ಸಾಮರ್ಥ್ಯದಿಂದ ಅಲ್ಲ; ಮಾನಸಿಕ ದೃಡತೆಯಿಂದ. ----ಮಹಾತ್ಮಾ ಗಾಂಧಿ.
50. ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಗ್ರಹಿಸಿದರೆ ನಿಮ್ಮ ಹೃದಯದಲ್ಲಿರುವ ದೇವರು ಕಾಣಿಸುತ್ತಾನೆ.---ಆದಿ ಶಂಕರ. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು