ಮಹನೀಯರ ಮೇರು ನುಡಿಗಳು – ೨
ಇಲ್ಲಿರುವ ಮೇರು ನುಡಿಗಳಿಗೆ ಮೂಲಗಳು : ಅಂತರ್ಜಾಲ , ಕನ್ನಡ ಪುಸ್ತಕಗಳು ಹಾಗು ಕನ್ನಡ ದಿನಪತ್ರಿಕೆಗಳು
ಆಲೂರು ವೆಂಕಟರಾಯರು
ಕರ್ನಾಟಕವು ನಮ್ಮ ಕನ್ನಡಿಗರ ಕುರುಕ್ಷೇತ್ರ , ಭಾರತವು ನಮ್ಮ ಧರ್ಮ ಕ್ಷೇತ್ರ .
ಭಾರತಿದೇವಿಯು ವಿಶ್ವದ ಉತ್ಸವಮೂರ್ತಿಯು, ಕರ್ನಾಟಕ ದೇವಿಯು ಭಾರತಿದೇವಿಯ ಉತ್ಸವಮೂರ್ತಿಯು.
ಕರ್ನಾಟಕತ್ವವವು ಅತ್ಯಂತ ಪರಿಶುದ್ಧ ಭಾವನೆ, ಅತ್ಯಂತ ವಿಶಾಲವಾದ ಭಾವನೆ. ಅದು ಕರ್ನಾಟದ ಹಿತಗಳೆಲ್ಲವನ್ನೂ ತನ್ನಲ್ಲಿ ಅಡಗಿಸಿಕೊಂಡಿದೆ.
ಅಖಂಡ ಕರ್ನಾಟಕವು ಮೊದಲು ಹೃದಯದಲ್ಲಿ.
ಭಾರತೀಯ ಸಂಸ್ಕೃತಿಯೂ ಕರ್ನಾಟಕ ಸಂಸ್ಕೃತಿ .
ಇತಿಹಾಸವೆಂದರೆ ಸತ್ತವರ ಮೇಲೆ ಕಟ್ಟುವ ಗೋರಿಯಲ್ಲ ಅದೊಂದು ಆಳವಾದ ತತ್ವಜ್ಞಾನ.
ಕರ್ನಾಟಕ ಬಾಳೆಯ ಗಿಡಕ್ಕೆ ಈಗ ಗೊನೆ ಬಿಟ್ಟಂತಾಗಿದೆ. ಅದರೊಳಗಿನ ಕಾಯಿಗಳನ್ನು ಹಣ್ಣು ಮಾಡಿಕೊಂಡು ಉಣ್ಣುವ ಕೆಲಸ ಕನ್ನಡಿಗರದು .
ಈಗಿನ ಕಾಲಕ್ಕೆ ಮಾತೃ ಭಾಷೆಗಿಂತ ದೇಶ ಭಾಷೆಗೆ ಮನ್ನಣೆ ಹೆಚ್ಚು ಎಂಬುದನ್ನು ಯಾರು ಮರೆಯದಿರಲಿ.
ನಾನು ಮೊದಲು ಭಾರತೀಯನು , ಅನಂತರ ಕರ್ನಾಟಕದವನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದುಗಡೆಗಳಿಲ್ಲ. ಎರಡು ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವಿಶಿಷ್ಟತ್ವವು ಸಮಷ್ಟಿತ್ವವೂ ಎಕಸಮಯಾವಛೇದದಿಂದ ಬೇಕು.
————————————————————————————————–
ಕೆ.ಎಸ್.ನರಸಿಂಹ ಸ್ವಾಮಿ
ಬರವೇ ಇರಲಿ, ಸಮೃದ್ಧಿ ಬರಲಿ- ತಾಳುವ ಬಾಳಿನ ಬಾವುಟವಿರಲಿ.
ಬದಲಾವಣೆಯೇ ಬಾಳಿನೊಗ್ಗರಣೆ.
ಯಾವುದಿಹವೋ, ಬಂಧನವೋ, ಭ್ರಾಂತಿಯೋ ಅದಾಗಲಿ ನನ್ನ ನೆಲೆ
ಯಾವುದನುಭವದ ಸಹಜ ಕ್ರಾಂತಿಯೋ ಅದಾಗಲಿ ನನ್ನ ಕಲೆ.
————————————————————————————————–
ಕುವೆಂಪು
ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ.
ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು, ಕಲ್ಲಿದ್ದಲ ಕಾವಾಗಬೇಕು.
ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು
ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ”
ಇಂದಿನ ಕನಸು, ನಾಳೆಯ ಮನಸು, ನಾಡಿದ್ದಿನ ಉಣಿಸು.
ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ
————————————————————————————————–
ದ.ರಾ.ಬೇಂದ್ರೆ
ನಾಳೆ ಎಂಬುವುದು ನಿನ್ನಿನ ಮನಸು, ಮುಂದೆ ಎಂಬುವುದು ಇಂದಿನ ಕನಸು.
ರಸವೆ ಜನನ, ವಿರಸ ಮರಣ, ಸಮರಸವೇ ಜೀವನ!
ಕೃತಿ ಕೆಟ್ಟದಿದ್ದು,ಮನಸ್ಸು ಸದಾ ಕೆಡುಕು ಬಯಸುತ್ತಿದ್ದು,
ಸಜ್ಜನರಂತೆ ಮುಖವಾಡ ಧರಿಸುತ್ತಿರುವ ಜನರ ಬಗ್ಗೆ ಎಚ್ಚರದಿಂದಿರಬೇಕು.
ಕುರಿಯಂತೆ ನಡೆಯುವವರು ಬಹಳಷ್ಟು ಜನರು,
ಗುರಿಯಿಟ್ಟು ನಡೆಯುವವರು ತುಂಬಾ ಕಡಿಮೆ.
ಬೇವಿನ ಕಹಿ ಬಾಳಿನಲ್ಲಿ ಹೂವಿನ ನರುಗಂಪು ಸೂಸಿ ಜೀವಕಳೆಯ ತರುತಿದೆ.
ಬದುಕು ಮತ್ತು ಬಾಳು ಬೇರೆ ಬೇರೆ – ಬದುಕು ವ್ರುದ್ಧಿ , ಬಾಳು ಸಿದ್ಧಿ
ತಾ೦ತ್ರಿಕ ಶಿಕ್ಶಣ ಬದುಕಿಗಾಗಿ – ಆಧ್ಯಾತ್ಮಿಕ ಶಿಕ್ಶಣ ಬಾಳಿಗಾಗಿ
ಯಾರಿಗೇತರಲಿ ಇಷ್ಟವೋ ಅದುವೇ ಸುಖ.
————————————————————————————————–
ವಿ.ಕೃ.ಗೋಕಾಕ್
ಓದಿ ಮರುಳಾಗಬಾರದು; ಓದದೆಯೂ ಮರುಳಾಗಬಾರದು; ಓದಿ ಹುರುಳಾಗಬೇಕು.
ಬರಲಿರುವ ಸನ್ನಿವೇಶಗಳನ್ನು ಸದಾ ನಿಮ್ಮ ಪರವಾಗಿ ಇಟ್ಟುಕೊಳ್ಳುವುದು ಜಾಣತನ.
————————————————————————————————–
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಜೀವಂತವಾದ ಯಾವ ಭಾಷೆಯೂ ತಾನು ಕಡಿಮೆ ಯೋಗ್ಯತೆಯ ಭಾಷೆಯೆಂದು ಕುಗ್ಗಬಾರದು.
ಕನ್ನಡ ಜಗತ್ತಿನ ಯಾವ ಭಾಷೆಗೂ ಕಡಿಮೆಯದಲ್ಲ.
ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು
ಅಂದಂದಿನ ಕೆಲಸವನ್ನು ಅಂದಂದು ಮಾಡಿ , ಅದರ ವಿಷಯವಾಗಿ ಬಹಳವಾಗಿ ಚಿಂತೆ ಮಾಡದೆ ಇರಬೇಕು.ಅದೇ ಒಳ್ಳೆಯ ಜೀವನ.
————————————————————————————————–
ಪೂರ್ಣ ಚಂದ್ರ ತೇಜಸ್ವಿ
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ
————————————————————————————————–
ಪಿ.ಲಂಕೇಶ್
ಪ್ರೀತಿ ಎ೦ಬುದು ಆರೋಗ್ಯವ೦ತರ ಖಾಯಿಲೆ.
ಸಾರ್ವಜನಿಕ ಬದುಕಿನಲ್ಲಿ ತೊಡಗಿರುವ ಪ್ರತಿಯೊಬ್ಬರೂ ಟೀಕೆ, ವಿಮರ್ಶೆ, ತಮಾಷೆಯನ್ನು ಎದುರಿಸಲು ಸಿದ್ಧರಾಗಿರಬೇಕು.
————————————————————————————————–
ಡಾ॥ಡಿ.ವೀರೇಂದ್ರ ಹೆಗ್ಗಡೆಯವರು
ಮೂರು ವರ್ಷ ಸತತ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುವುದು ಹೆಚ್ಚುಅರ್ಥಪೂರ್ಣವಾದದ್ದು”
————————————————————————————————–
ಚೆನ್ನವೀರ ಕಣವಿ
ಅಹಂಕಾರಿ ಮನುಷ್ಯ ಒಂಟಿಯಾಗಿರಬೇಕಾಗುತ್ತದೆ.
————————————————————————————————–
ಶಿವರಾಮ ಕಾರಂತ
ಬೇರೆಯವರನ್ನು ತೆಗಳುವುದರಿಂದ ನಿಮ್ಮ ವ್ಯಕ್ತಿತ್ವಕ್ಕೇ ಹೆಚ್ಚು ಕುಂದುಂಟಾಗುತ್ತದೆ.
————————————————————————————————–
ಅ.ನ.ಕೃಷ್ಣರಾವ್
ಕೆಲವರಿಗೆ ಯಶಸ್ಸು ಸಿಕ್ಕುತ್ತದೆ. ಆದರೆ ಅದಕ್ಕೆ ಪಾತ್ರರು ಬೆರೆಯವರು ಆಗಿರುತ್ತಾರೆ.
————————————————————————————————–
ಗೋಪಾಲಕೃಷ್ಣ ಅಡಿಗ
ಭಾಷೆ ವೈಯಕ್ತಿಕವೂ ಹೌದು, ಸಾಮಾಜಿಕವೂ ಹೌದು- ಏಕಕಾಲಕ್ಕೆ.
————————————————————————————————–
ಮಧುರ ಚೆನ್ನ
ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು. ಬಯಕೆ ಬರುವುದರ ಕಣ್ಸನ್ನೆ ಕಾಣೋ.
————————————————————————————————–
ಕನಕದಾಸ
ನುಡಿ ನಡೆವ ಕಾಲದಲ್ಲಿ ದಾನಧರ್ಮ ಮಾಡದೆ, ಅಡವಿಯೊಳಗೆ ಕೆರೆ ತುಂಬಿ ಬತ್ತಿದಂತೆ.
————————————————————————————————–
ಚದುರಂಗ
ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.
————————————————————————————————–
ಎ.ಎನ್. ಮೂರ್ತಿರಾವ್
ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ,ನಾವು ಬದುಕುವ ರೀತಿ ಮುಖ್ಯ.
————————————————————————————————–
ಬೀಚಿ
ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆಯ ಮೇಲೆ!
————————————————————————————————–
ಬಿ.ಎಂ.ಶ್ರೀ
ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ. ಅಲ್ಲದ್ದನ್ನು ಕಂಡಾಗ ಮಾತು ಕೊಂಚಾಗಲಿ.
————————————————————————————————–
ಕೃಷ್ಣಮೂರ್ತಿ ಪುರಾಣಿಕ
ಅಸಹನೆಯಿಂದ ಭಾವೋದ್ವೇಗ, ಅದರಿಂದ ಆತಂಕ, ಆತಂಕದಿಂದ ಆಪತ್ತು ಬರುತ್ತದೆ.
ಆದ್ದರಿಂದಲೇ ಅಸಹನೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು.
————————————————————————————————–
ಬಸವಣ್ಣ
ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯಾ .
ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು.
————————————————————————————————–
ಕಮಲಾಹಂಪನಾ
ಯಾವ ಕನ್ನಡಿಗನ ಮನೆಯಲ್ಲಿ ಕೆಲವಾದರೂ ಕನ್ನಡ ಕೃತಿಗಳಿಲ್ಲವೋ,
ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು.
————————————————————————————————–
ಅನುಪಮಾ ನಿರಂಜನ
ನಾವು ಮಾಡುವ ಕಾರ್ಯವು ಕಾರಣಗಳ ಅನುರೂಪವಾಗಿರುತ್ತದೆ.
————————————————————————————————–
ಕೈಲಾಸಂ
ಹೆಂಡ ಎಲ್ಲರನ್ನೂ upset ಮಾಡಿದ್ದರೆ , ನನ್ನನ್ನೂ setup ಮಾಡುತ್ತೆ .
ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ.
————————————————————————————————–
ಸರ್ ಎಂ. ವಿಶ್ವೇಶ್ವರಯ್ಯ
ತುಕ್ಕು ಹಿಡಿದು ಹೋಗಬೇಡ, ತೇದು ಹೋಗು.
————————————————————————————————–
ಶೇಷಗಿರಿರಾವ್
ಶೇಷಗಿರಿರಾವ್
ಮಾನವ ಕೆಟ್ಟ ಕೆಲಸಗಳನ್ನು ಮಾಡಲು ಯೋಚಿಸುವುದಿಲ್ಲ. ಆದರೆ ಒಳ್ಳೆ ಕೆಲಸ ಮಾಡಲು ಬಹಳ ಯೋಚಿಸುತ್ತಾನೆ .
————————————————————————————————–
ಶ್ರೀರಂಗ
ಭಾಷೆಯು ಭಾವನೆಯ ಪ್ರತಿಬಿಂಬ
————————————————————————————————–
ಕಡಗ್ಲೋಡ್ಲು ಶಂಕರಭಟ್ಟ
ಅನುಭವವು ಸವಿಯಲ್ಲ; ಅದರ ನೆನಪೇ ಸವಿವು,
ಅನುಭವವು ಸವಿಯಲ್ಲ; ಅದರ ನೆನಪೇ ಸವಿವು,
ಅದಕದ್ದು ಮೇಯದೆ ಮನವು!
————————————————————————————————–
ನಾ. ಕಸ್ತೂರಿ
ಹೊಟ್ಟೆ ತುಂಬಿದವರಿಗೆ ಬೇರೆಯವರು ಕಷ್ಟದಲ್ಲಿದ್ದಾಗ ಮರುಕ ಹುಟ್ಟುವುದೇ ?
————————————————————————————————–
ಜಿ.ಎಸ್.ಶಿವರುದ್ರಪ್ಪ
ಕ್ರಾಂತಿ ಎಂದರೆ ಹಳೆಯದರ ನಾಶವಲ್ಲ. ಹಳೆಯದರಲ್ಲಿ ಏನೇನು ಒಳ್ಳೆಯದು ಇದೆಯೋ ಅದನ್ನು ಉಳಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳುವುದು.
————————————————————————————————–
ಪಿ.ಲಂಕೇಶ್
ಸಾರ್ವಜನಿಕ ಬದುಕಿನಲ್ಲಿ ತೊಡಗಿರುವ ಪ್ರತಿಯೊಬ್ಬರೂ ಟೀಕೆ, ವಿಮರ್ಶೆ, ತಮಾಷೆಯನ್ನು ಎದುರಿಸಲು ಸಿದ್ಧರಾಗಿರಬೇಕು.
————————————————————————————————–
ಎಸ್.ವಿ.ರಂಗಣ್ಣ
ನಂಬಿಕೆ ಇರಬೇಕು, ನಂಬಿಕೆಗೆ ಕಣ್ಣಿರಬೇಕು, ನಂಬಿಕೆಯ ಕಣ್ಣು ತೆರೆದಿರಬೇಕು; ಆಗ ನಂಬಿಕೆಯ ನಂಬಬಹುದು.
————————————————————————————————–
ತೀ.ನಂ.ಶ್ರೀ.
ಪ್ರತಿಭೆ ನಿಜವಾಗಿಯೂ ಒಂದು ರೀತಿಯ ದೃಷ್ಟಿ. ಅದು ಬುದ್ಧಿಯ ಕಣ್ಣಲ್ಲ; ಹೃದಯದ ಕಣ್ಣು. ಈ ಒಳಗಣ್ಣು ತೆರೆದಾಗ ವಿಶ್ವದ ಹೃದಯವೇ ತೆರೆಯುತ್ತದೆ.
————————————————————————————————–
ತರಾಸು
ಅರಸಾದೋನು ಆಳಬೇಕು; ಅಳಬಾರದು. ಅಳೋ ಸಮಯ ಬಂದರೂ ಅದು ಮಾನಸಿಕವಾಗಿರಬೇಕು. ಕಣ್ಣಲ್ಲಿ, ಮುಖದಲ್ಲಿ ಕಾಣಬಾರದು.
————————————————————————————————–
ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ
ನೀತಿ ಎಂಬುದು ಸಾಧಿಸಬೇಕಾದ ಧರ್ಮವೇ ಹೊರತು ಸಹಜವಾದ ಗುಣವಲ್ಲ.
————————————————————————————————–
ಗೋಪಾಲ ಕೃಷ್ಣ ಅಡಿಗ
ಒಳ್ಳೆತನ ಸಹಜವೇನಲ್ಲ
ಒಳ್ಳೆತನ ಅಸಹಜವೂ ಅಲ್ಲ
————————————————————————————————–
ಸಿಂಪಿ ಲಿಂಗಣ್ಣ
ಇಂದು ಮಿತಿಮೀರಿದ ಆಸೆಯೇ ಜಗತ್ತಿನ ಜೀವನವನ್ನೆಲ್ಲಾ ರೂಪಿಸುತ್ತಿದೆ.
ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಸಹಿಸಲು ಸಿದ್ಧವಾಗಿದೆ.
————————————————————————————————–
ಅನುಪಮಾ ನಿರಂಜನ
ನಾವು ಮಾಡುವ ಕಾರ್ಯವು ಕಾರಣಗಳ ಅನುರೂಪವಾಗಿರುತ್ತದೆ.
————————————————————————————————–
ನಿರಂಜನ
ಸ್ನೇಹಿತ ನಿಸರ್ಗ ಕೊಟ್ಟಿರುವ ಸೋದರ ಸ್ನೇಹಿತರನ್ನು ಹೊಂದಿರುವವರೇ ನಿಜವಾಗಿ ಧನ್ಯರು.
————————————————————————————————–
ಎಸ್.ಎಲ್.ಭೈರಪ್ಪ
ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ.
ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ.
ಯುದ್ಧ ಮಾಡುವವನು ತಾನು ಯಾಕೆ ಯುದ್ಧ ಮಾಡುತ್ತಿದ್ದೇನೆ ಎನ್ನುವ ಕಾರಣವನ್ನು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ತಿಳಿದಿರಬೇಕು.
ಅಂತರಂಗದ ನಿಷ್ಠೆ ಇಲ್ಲದಿದ್ದರೆ ಸೇಹ ಧೈರ್ಯ ಎಲ್ಲಿಂದ ಬರುತ್ತದೆ?
————————————————————————————————–
ರಂ. ಶ್ರೀ. ಮುಗಳಿ
ಎಂಥ ನಾಡಿದು ಯೆಂಥ ಕಾಡಾಯಿತೋ”
————————————————————————————————–
No comments:
Post a Comment