Wednesday, 31 January 2018

Kpsc SDA FDA Model question paper in Kannada medium

1. ಮೈಸೂರಿನಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಕೆ.ಸಿ.ರೆಡ್ಡಿ ನಾಯಕತ್ವದಲ್ಲಿ ಚಳುವಳಿ ನಡೆಯಿತು.ಅದೇ ಅರಮನೆ ಸತ್ಯಾಗ್ರಹ-1947.
2. ಮೈಸೂರಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ. ಮತ್ತು ರಾಜಪ್ರಮುಖರು ಜಯಚಾಮರಾಜ ಒಡೆಯರ್.
3. ಧಾರವಾಡದಲ್ಲಿ 1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಆರ್.ಹೆಚ್. ದೇಶಪಾಂಡೆ ಸ್ಥಾಪಿಸಿದರು.
4. ಆಲೂರು ವೆಂಕಟರಾಯರು ಕರ್ನಾಟಕದ ಸಭಾವನ್ನು ಧಾರವಾಡದಲ್ಲಿ 1916 ರಲ್ಲಿ ಸ್ಥಾಪಿಸಿದರು.
5. 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
6. ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆಯನ್ನು ರಚಿಸಿದವರು ಕುವೆಂಪು.
7. 1920 ರಲ್ಲಿ ಧಾರವಾಡದಲ್ಲಿ ಕರ್ನಾಟಕದ ಮೊದಲ ರಾಜಕೀಯ ಸಮಾವೇಶ ವಿ.ಪಿ.ಮಾಧವರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.
8. ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ಬೆಳಗಾವಿಯಲ್ಲಿ ಸಿದ್ದಪ್ಪ ಕಂಬಳಿಯ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆಯಿತು.
9. 1946 ರಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನ ಬಾಂಬೆಯಲ್ಲಿ ಖೇರ್ ಅಧ್ಯಕ್ಷತೆಯಲ್ಲಿ ನಡೆಯಿತು.
10. ಎಸ್.ನಿಜಲಿಂಗಪ್ಪ ಕರ್ನಾಟಕ ಏಕೀಕರಣ ಮಹಾಸಮಿತಿಯ ಅಧ್ಯಕ್ಷರಾಗಿದ್ದರು,ಅಂದಾನಪ್ಪ ದೊಡ್ಡಮೇಟಿ ಕಾರ್ಯದರ್ಶಿಗಳಾಗಿದ್ದರು.
11. 1947ರ ಕರ್ನಾಟಕ ಏಕೀಕರಣ ಸಮ್ಮೇಳನವು ಕಾಸರಗೋಡಿನಲ್ಲಿ ಆರ್.ಆರ್.ದಿವಾಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
12. ಜೆ.ವಿ.ಪಿ.ಕಮಿಟಿ.1948 ಆಂಧ್ರ ಪ್ರದೇಶ ರಚನೆಗೆ ಮಾತ್ರ ಅನುಮತಿಸಿತು.
13. ಆಂಧ್ರ ಪ್ರದೇಶ ರಚನೆಗೆ ಉಪವಾಸ ಸತ್ಯಾಗ್ರಹ ಮಾಡಿ ನಿಧನರಾದವರು ಪೊಟ್ಟಿ ಶ್ರೀರಾಮುಲು.
14. ಅಂದಾನಪ್ಪ ದೊಡ್ಡಮೇಟಿ ಕರ್ನಾಟಕ ಏಕೀಕರಣಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿದರು.
15. ವಾಂಚೂ ಸಮಿತಿಯ ವರದಿಯಂತೆ 1953 ರಲ್ಲಿ ಬಳ್ಳಾರಿ ಮೈಸೂರಿಗೆ ಸೇರಿತು.
16. SRC ಕಮಿಟಿಯ ಸದಸ್ಯರುಗಳು ಫಜಲ್ ಅಲಿ, H.N .ಕುಂಜ್ರು, ಮತ್ತು K.M.ಫಣಿಕ್ಕರ್.
17. 1956 ರ ನವೆಂಬರ್ 1 ರಲ್ಲಿ ಏಕೀಕೃತ ಮೈಸೂರು ಅಸ್ತಿತ್ವಕ್ಕೆ ಬಂದಿತು.
18. ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದವನ್ನು ಬಗೆಹರಿಸಲು 1965 ರಲ್ಲಿ ಮಹಾಜನ್ ಆಯೋಗವನ್ನು ನೇಮಿಸಲಾಯಿತು.
19. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ್ 1.1973 ರಲ್ಲಿ ನಾಮಕರಣ ಮಾಡಲಾಯಿತು. ಆಗಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು.
20. ವಿಶಾಲ ಏಕೀಕೃತ ಮೈಸೂರಿನ ಪ್ರಪ್ರಥಮ ಮುಖ್ಯ ಮಂತ್ರಿ ನಿಜಲಿಂಗಪ್ಪ. 

Tuesday, 30 January 2018

Model question paper for SDA FDA EXAM CONDUCTED BY KPSC

1) ಬರಗಾಲದ ಸಂದರ್ಭದಲ್ಲಿ ಕೃತಕ ಮಳೆಯನ್ನು ಸುರಿಸಲು ಈ ಕೆಳಕಂಡ ಯಾವ ರಸಾಯನಿಕವನ್ನು ಬಳಸುತ್ತಾರೆ.?
A.ಸಲ್ವರ್ ಅಯೋಡೈಡ್
B.ಅಯೋಡಿನ್
C.ಸೋಡಿಯಂ ಬೈ ಕಾರ್ಬೋನೆಟ್
D.ಪೊಟಾಷಿಯಂ

2 ) 2001 ರಿಂದ 2015 ರ ಅವಧಿಯಲ್ಲಿ ಕೇಂದ್ರ ರಫ್ತು ವಹಿವಾಟಿನ ಅಂಕಿ ಅಂಶಗಳ ಪ್ರಕಾರ ಯಾವ ದೇಶ ಭಾರತದಿಂದ ಹೆಚ್ಚು ಕಬ್ಬಿಣವನ್ನು ಆಮದು ಮಾಡಿಕೊಂಡಿದೆ.?
A.ಚೀನಾ
B.ಅಮೆರಿಕ
C.ಬ್ರಿಟನ್
D.ಜಪಾನ್

3) ದಕ್ಷಿಣ ಭಾರತದಲ್ಲಿ ಮ್ಯಾಂಗನೀಸ್ ಖನಿಜ ನಿಕ್ಷೇಪಗಳು ಹೆಚ್ಚಾಗಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
A.ಕೇರಳ
B.ಗೋವಾ
C.ಮಹಾರಾಷ್ಟ್ರ
D. ತಮಿಳುನಾಡು

4) ಡೋಲಮೈಟ್ ಮತ್ತು ಕ್ರೋಮೈಟ್ ಖನಿಜ ಸಂಪತ್ತಿನ ಉತ್ಪಾದನೆಯಲ್ಲಿ ಅಗ್ರ ಸ್ಥಾನ ಪಡೆದಿರುವ ರಾಜ್ಯ ಯಾವುದು?
A.ಮಧ್ಯಪ್ರದೇಶ
B.ಒಡಿಶಾ
C.ತ್ರಿಪುರ
D.ಜಮ್ಮು ಮತ್ತು ಕಾಶ್ಮೀರ

5) ಝಾರ್ಕಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಶೇ 90% ರಷ್ಟು ಯಾವ ನಿಕ್ಷೇಪಗಳು ದೊರೆತಿವೆ.?
A.ಕಲ್ಲಿದ್ದಲು
B.ಬಾಕ್ಸೈಟ್
C.ತಾಮ್ರ
D.ಕಬ್ಬಿಣ

6) ಭಾರತದಲ್ಲಿ ಖನಿಜಗಳ ಅನ್ವೇಷಣೆ ಮತ್ತು ಹೊರ ತೆಗೆಯುವ ಕೆಲಸವನ್ನು ಕೇಂದ್ರ ಸರ್ಕಾರದ ಯಾವ ಸಂಸ್ಥೆ ಮಾಡುತ್ತಿದೆ?
A. ಸರ್ವೇ ಆಫ್ ಇಂಡಿಯಾ
B. ಭಾರತ ಭೂವಿಜ್ಞಾನ ಸರ್ವೇ
C.ಭಾರತೀಯ ಖನಿಜ ಇಲಾಖೆ
D.ಭಾರತೀಯ ಖನಿಜ ಮತ್ತು ಅದಿರು ಸಂಸ್ಥೆ

7) ದಕ್ಷಿಣ ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಹೇರಳವಾಗಿ ಪೆಟ್ರೋಲಿಯಂ ದೊರೆಯುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ?
A.ಕಾವೇರಿ ನದಿ ಮುಖಜಭೂಮಿ
B.ತುಂಗಾ ಭದ್ರಾ ನದಿ ಮುಖಜಭೂಮಿ
C. ಗೋದಾವರಿ ನದಿ ಮುಖಜಭೂಮಿ
D.ಕೃಷ್ಣ ನದಿ ಮುಖಜಭೂಮಿ

8 ) 1965 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಆಫ್ರಿಕಾ ಖಂಡದ ಜಾಂಬಿಯಾ ದೇಶದ ರಾಜಧಾನಿ ಯಾವುದು?
A.ಹರಾರೆ
B.ನೈರೊಬಿ
C.ಇಸ್ತಾಂಬುಲ್
D.ಬಂಜುಲ್

9) 2011 ರ ಜನಗಣತಿಯ ಪ್ರಕಾರ 9.87 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಯಾವುದು?
A.ಕೊಡಗು
B.ರಾಮನಗರ
C.ಗದಗ
D.ಬೆಂಗಳೂರು ಗ್ರಾಮಾಂತರ

10) ರಾಜ್ಯದಲ್ಲಿ ಈ ಕೆಳಕಂಡ ಯಾವ ಸ್ಥಳದಲ್ಲಿ ನೂತನ ರೈಲು ಗಾಲಿ ಮತ್ತು ಅಚ್ಚಿನ ಕಾರ್ಖಾನೆ ಆರಂಭವಾಗುತ್ತಿದೆ.?
A.ಶ್ರೀನಿವಾಸ ಪುರ - ಕೋಲಾರ
B.ಬಾಗೇಪಲ್ಲಿ -ಚಿಕ್ಕಬಳ್ಳಾಪುರ
C.ಕೊಳ್ಳೆಗಾಲ-ಚಾಮರಾಜನಗರ
D.ಹೊಸಕೋಟೆ -ಬೆಂಗಳೂರು ಗ್ರಾಮಾಂತರ





ಉತ್ತರ
1)A

2)D

3)C

4) B

5)A

6)B

7)C

8)D

9)D

10)A



Friday, 19 January 2018

Good morning images in Kannada












ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ದ್ವೇಷ ಬದುಕಿನಲ್ಲಿ ಕತ್ತಲೆ ಕವಿಸುತ್ತದೆ. ಪ್ರೇಮ ಬದುಕನ್ನು ಉದ್ದೀಪನಗೊಳಿಸುತ್ತದೆ. ---- ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.
2. ನೆಮ್ಮದಿ ನಿಮ್ಮ ಮನಸ್ಸಿನೊಳಗೇ ಇದೆ. ಅದನ್ನು ಹೊರಗೆ ಹುಡುಕಬೇಡಿ. ----ಗೌತಮ ಬುದ್ಧ.
3. ಸಂದಿಗ್ಧದ ಸಮಯದಲ್ಲಿ ತುಂಬ ಬಲಶಾಲಿಗೂ ಅತ್ಯಂತ ದುರ್ಬಲನ ಸಹಾಯ ಪಡೆಯುವ ಅಗತ್ಯ ಬೀಳುತ್ತದೆ. ---- ಈಸೋಪ.
4. ದುರದೃಷ್ಟ ಆವರಿಸಿದೆ ಎಂದರೆ ನಿಮಗೆ ನೈಜ ಗೆಳೆಯರಿಲ್ಲ ಎಂದರ್ಥ. ---- ಅರಿಸ್ಟಾಟಲ್.
5. ನಮ್ಮಿಂದ ಸಾಧ್ಯವಾದದ್ದನ್ನೆಲ್ಲ ಮಾಡಿದರೂ ಸಾಕಾಗುವುದಿಲ್ಲ. ಕೆಲವೊಮ್ಮೆ ಅಗತ್ಯ ಇರುವುದನ್ನಷ್ಟೆ ಮಾಡಬೇಕು.---- ವಿನ್ ಸ್ಟನ್ ಚರ್ಚಿಲ್.
6. ಭಾಷಣದ ಸಾಮರ್ಥ್ಯ ಇರುವವರಿಗೆಲ್ಲ ಮಾತುಕತೆ ನಡೆಸಲು ಬರುತ್ತದೆ ಎಂದುಕೊಳ್ಳಬೇಡಿ.----- ಬೆಂಜಮಿನ್ ಡಿಸ್ರೇಲಿ.
7. ದೇಶಪ್ರೇಮ ಎಂದರೆ ದೇಶದ ಪರವಾಗಿ ನಿಲ್ಲುವುದು; ದೇಶವನ್ನು ಆಳುವವನ ಜತೆಗೆ ನಿಲ್ಲುವುದು ಎಂದಲ್ಲ.---- ಥಿಯೋಡರ್ ರೂಸ್ ವೆಲ್ಟ್.
8. ಎಲ್ಲರೂ ಹೀರೋಗಳಾಗಲು ಆಗುವುದಿಲ್ಲ.ಏಕೆಂದರೆ ಚಪ್ಪಾಳೆ ಹೊಡೆಯಲು ಕೆಲವರಾದರೂ ಬೇಕಲ್ಲ. ---- ವಿಲ್ ರೋಜರಸ್.
9. ಬುದ್ಧಿವಂತನ ಬಗ್ಗೆ ಮೂರ್ಖನ ವರದಿ ಯಾವತ್ತೂ ಸತ್ಯವಾಗಿರುವುದಿಲ್ಲ. ಏಕೆಂದರೆ ಮೂರ್ಖ ತನಗೆ ಅರ್ಥವಾದಷ್ಟನ್ನು ಮಾತ್ರ ಬರೆಯುತ್ತಾನೆ.----- ಬರ್ ಟ್ರೆಂಡ್ ರಸೆಲ್.
10. ಕೆಲವರು ವರ್ಷಕ್ಕೆ ಎರಡು ಅಥವಾ ಮೂರು ಸಲ ಯೋಚಿಸುತ್ತಾರೆ.ಹಾಗಾಗಿಯೇ ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಯೋಚಿಸುವವರು ಆಳುತ್ತಾರೆ.---- ಜಾರ್ಜ್ ಬರ್ನಾರ್ಡ್ ಷಾ.
11. ಮೇಧಾವಿತನ ಸೌಂದರ್ಯಕ್ಕಿಂತ ಹೆಚ್ಚು ಬಾಳಿಕೆ ಬರುತ್ತದೆ. ---- ಆಸ್ಕರ್ ವೈಲ್ಡ್.
12. ಇದು ನನಗೆ ಮೊದಲೇ ಗೊತ್ತಿದೆ ಎಂದು ಯಾರಾದರೂ ಭಾವಿಸಿದ್ದರೆ ಅವನು ಆ ವಿಷಯವನ್ನು ಕಲಿಯುವುದು ಅಸಾಧ್ಯ. ---- ಎಪಿಕ್ಟಿಟಸ್.
13. ನಿಮ್ಮ ಬಳಿ ಸುತ್ತಿಗೆ ಮಾತ್ರ ಇರುವುದಾದರೆ , ಪ್ರತಿಯೊಂದು ಸಮಸ್ಯೆಯನ್ನೂ ಮೊಳೆ ಎಂದೇ ಭಾವಿಸಿ. ---- ಅಬ್ರಹಾಂ ಮಾಸ್ಲೊ.
14. ಪಾಠ ಮಾಡುವುದು ಎಂದರೆ ಎರಡನೇ ಬಾರಿ ಆ ವಿಷಯವನ್ನು ಕಲಿತಂತೆ.---- ಜೋಸೆಫ್ ಜೋಬಟರ್.
15. ಕೇವಲ ಸುತ್ತಿಗೆ ಇದ್ದವನಿಗೆ ಎದುರಿಗೆ ಇರವುದೆಲ್ಲವೂ ಮೊಳೆಯಂತೆಯೇ ಕಾಣಿಸುತ್ತದೆ. ---- ಅಬ್ರಹಾಂ ಮಾಸ್ಲೊ.
16. ಜಗತ್ತು ಅಪಾಯಕಾರಿ. ದುಷ್ಟರಿಂದಾಗಿ ಅಲ್ಲ; ದುಷ್ಟತನವನ್ನು ನೋಡಿ ಸುಮ್ಮನಿರುವ ಒಳ್ಳೆಯವರಿಂದಾಗಿ.----- ಆಲ್ಬರ್ಟ್ ಐನ್ ಸ್ಟೀನ್.
17. ಸೋಮಾರಿಯಾಗಿರುವುದು ಸಾಯುವುದಕ್ಕಿಂತ ಅಡ್ಡದಾರಿ. ಕ್ರಿಯಾಶೀಲನಾಗಿರುವುದು ಬದುಕುವ ಮಾರ್ಗ.----ಗೌತಮ ಬುದ್ಧ.
18. ಯಾವ ಆದರ್ಶ ಮನುಷ್ಯನ ಹಿತವನ್ನು ಕಾಯುವುದೋ ಅದೇ ಧರ್ಮ. ----ಡಾ. ಎಸ್.ರಾಧಾಕೃಷ್ಣನ್.
19. ಜೀವನದಲ್ಲಿ ಇರುವುದೇ ಒಂದು ಸಂತೋಷದ ಸಂಗತಿ . ಅದೆಂದರೆ ಪ್ರೀತಿಸಲ್ಪಡುವುದು ಮತ್ತು ಪ್ರೀತಿಸುವುದು.----- ಜಾರ್ಜ್ ಸ್ಯಾಂಡ್.
20. ಬದಲಾವಣೆ ಬದುಕಿನ ನಿಯಮ. ಭೂತಕಾಲ ಮತ್ತು ವರ್ತಮಾನವನ್ನು ಮಾತ್ರ ನೋಡುವವರು ಭವಿಷ್ಯವನ್ನು ಕಳೆದುಕೊಳ್ಳುತ್ತಾರೆ.---- ಜಾನ್ ಎಫ್ ಕೆನಡಿ
21. ಮನುಷ್ಯರನ್ನು ಒಟ್ಟುಗೂಡಿಸುವುದು ಎರಡೇ - ಭಯ ಮತ್ತು ಆಸಕ್ತಿ. ----ನೆಪೋಲಿಯನ್ ಬೊನಪಾರ್ಟ್.
22. ಸಹಾಯ ಮಾಡುವ ಹೃದಯ ಇದ್ದವನಿಗೆ ಟೀಕಿಸುವ ಅಧಿಕಾರವೂ ಇರುತ್ತದೆ. ---- ಅಬ್ರಹಾಂ ಲಿಂಕನ್.
23. ನೀವು ಏನನ್ನು ಬೇಕಾದರೂ ಮಾಡಬಹುದು, ಆದರೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ----ಡೇವಿಡ್ ಆಲನ್.
24. ನಿಷ್ಪ್ರಯೋಜಕ ವ್ಯಕ್ತಿ ಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ---- ಸಾಕ್ರೆಟಿಸ್.
25. ಯಾವುದಾದರೂ ವಿಚಾರವನ್ನು ಒಪ್ಪಿಕೊಳ್ಳದೆ , ಮನಸ್ಸಿಗೆ ಬಿಟ್ಟುಕೊಂಡರೆ ನಿಮ್ಮದು ಶಿಕ್ಷಿತ ಮನಸ್ಸು ಎನ್ನಬಹ.----ಅರಿಸ್ಟಾಟಲ್.
26. ಶಾಲೆಯ ಬಾಗಿಲನ್ನು ತೆರೆಯುವಾತ ಜೈಲಿನ ಬಾಗಿಲು ಮುಚ್ಚಿದಂತೆ.----- ವಿಕ್ಟರ್ ಹ್ಯೂಗ್.
27. ಅತ್ಯುತ್ತಮ ಕಲಿಕೆಯ ತರಗತಿ ಹಿರಿಯರ ಪದತಲದಲ್ಲಿದೆ.----- ಆಂಡಿ ರೂನಿ.
28. ನೀವು ಸಿಟ್ಟಿಗೆದ್ದ ಪ್ರತಿ ನಿಮಿಷಕ್ಕೂ 60 ಸೆಕೆಂಡ್ ಗಳ ಸಂತೋಷವನ್ನು ಕಳೆದುಕೊಳ್ಳುತ್ತೀರಿ.-----ರಾಲ್ಫ್ ಎಮರ್ಸನ್.
29. ಮೂರ್ಖ ತಮಾಷೆಗಿಂತ ತಮಾಷೆಯಾಗಿ ಕಾಣುವ ಮೂರ್ಖ ಒಳ್ಳೆಯವನು.---- ವಿಲಿಯಂ ಷೇಕ್ಸ್ ಪಿಯರ್.
30. ಪ್ರತಿಯೊಬ್ಬ ಮಹಿಳೆಯೂ ಬಂಡಾಯಗಾರ್ತಿ.ಸಾಮಾನ್ಯವಾಗಿ ತನ್ನ ವಿರುದ್ಧವೇ ಆಕೆ ಬಂಡಾಯ ಏಳುತ್ತಾಳೆ.----ಆಸ್ಕರ್ ವೈಲ್ಡ್.
31. ಒಂದೋ ತುಂಬಾ ಸುಲಭ ; ಇಲ್ಲವೇ ಅಸಾಧ್ಯ. ಅದರ ನಡುವೆ ಯಾವುದೂ ಇಲ್ಲ. ---- ಸಾಲ್ವಡೋರ್ ಡಾಲಿ.
32. ನಾನು ವ್ಯಾಕರಣ ಬದ್ದವಾಗಿ ಮಾತನಾಡಲು ಬಯಸುವುದಿಲ್ಲ ; ನಾನು ಮಹಿಳೆಯರಂತೆ ಮಾತನಾಡಲು ಬಯಸುತ್ತೇನೆ. ಜಾರ್ಜ್ ಬರ್ನಾರ್ಡ್ ಷಾ.
33. ಕೆಟ್ಟ ಮನುಷ್ಯ ಭಯದಿಂದ ಅನುಸರಣೆ ಮಾಡುತ್ತಾನೆ ; ಒಳ್ಳೆಯ ಮನುಷ್ಯ ಪ್ರೀತಿಯಿಂದ ಅನುಸರಣೆ ಮಾಡುತ್ತಾನೆ. ---- ಅರಿಸ್ಟಾಟಲ್.
34. ದೊರೆಯಾಗಲೀ, ರೈತನಾಗಲೀ ; ಮನೆಯಲ್ಲಿ ನೆಮ್ಮದಿ ಇದ್ದವನು ಮಾತ್ರ ಸಂತೋಷವಾಗಿರಬಲ್ಲ.---- ಗಾಯಥೆ.
35. ದುಃಖವನ್ನು ಒಬ್ಬನೇ ಅನುಭವಿಸಬಹುದು .ಆದರೆ ಸಂತೋಷವನ್ನು ಪೂರ್ಣ ರೂಪದಲ್ಲಿ ಅನುಭವಿಸಲು ಇನ್ನೊಬ್ಬನ ಜತೆಗೆ ಹಂಚಿಕೊಳ್ಳಲೇಬೇಕಾಗುತತ್ತದೆ.------- ಮಾರ್ಕ್ ಟ್ವೈನ್.
36. ಸ್ವಾತಂತ್ರ್ಯವೆಂದರೆ ಜನರು ಯಾವುದನ್ನು ಕೇಳಲು ಬಯಸುವುದಿಲ್ಲವೋ ಅದನ್ನು ಹೇಳುವ ಹಕ್ಕು.----- ಜಾರ್ಜ್ ಆರ್ವೆಲ್.
37. ನಾವು ಯುವಕರಿಗಾಗಿ ಯಾವಾಗಲೂ ಭವಿಷ್ಯವನ್ನು ನಿರ್ಮಿಸಲು ಆಗುವುದಿಲ್ಲ; ಆದರೆ ಭವಿಷ್ಯಕ್ಕಾಗಿ ಯುವಕರನ್ನು ಸಜ್ಜುಗೊಳಿಸಬಹುದು.---- ಫ್ರಾಂಕ್ಲಿನ್ ರೂಸ್ ವೆಲ್ಟ್.

Sunday, 14 January 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಇತಿಹಾಸವನ್ನು ಯಾರು ಬೇಕಾದರೂ ಸೃಷ್ಟಿಸಬಹುದು. ಆದರೆ ಶ್ರೇಷ್ಠ ವ್ಯಕ್ತಿಗಳು ಮಾತ್ರ ಅದನ್ನು ಬರೆಯುತ್ತಾರೆ.-----ಆಸ್ಕರ್ ವೈಲ್ಡ್.
2. ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆಯೇ ಕಲಿಯಬೇಕೆಂದರೆ, ಅದನ್ನು ಮಾಡುತ್ತಲೇ ಕಲಿಯಬೇಕು.-----ಅರಿಸ್ಟಾಟಲ್.
3. ಯಾರಿಗೆ ಯಾರೂ ಇಲ್ಲ ಎನ್ನುವುದೇ ಈ ಜಗತ್ತಿನ ಅತಿದೊಡ್ಡ ರೋಗ.----- ಮದರ್ ತೆರೆಸಾ.
4. ನಮ್ಮ ಕನಸುಗಳೇ ನಾವು ನಿಜವಾಗಿ ಯಾರು ಎನ್ನುವುದನ್ನು ತೋರಿಸಿಕೊಡುತ್ತವೆ.----ಬಾರ್ಬರಾ ಶೆರ್.
5. ತಲೆಕೂದಲಿಗೆ ಬಣ್ಣ ಹಚ್ಚುವುದರಿಂದ ಯೌವನವನ್ನು ತಡೆದಿಟ್ಟುಕೊಳ್ಳಲು ಆಗುವುದಿಲ್ಲ.---- ಖಲೀಫಾ ಅಬೂಬಕರ್.
6. ಬುದ್ಧಿವಂತ ಮನುಷ್ಯನ ತಲೆಯಲ್ಲಿ ಹಣ ಇರುವುದಿಲ್ಲ; ಹೃದಯದಲ್ಲಿ ಹಣ ಇರುತ್ತದೆ.---- ಜೊನಾಥನ್ ಸ್ವಿಫ್ಟ್.
7. ಸಾಮಾನ್ಯ ಮನುಷ್ಯ ಪ್ರಾರ್ಥಿಸುವುದಿಲ್ಲ ; ಕೇವಲ ಬೇಡುತ್ತಾನೆ.----ಜಾರ್ಜ್ ಬರ್ನಾರ್ಡ್.
8. ಕಲೆಯನ್ನು ಶಾಲೆಗಳಲ್ಲಿ ಕಲಿಸಲಾಗುವುದಿಲ್ಲ.ಕಲಾವಿದನಿಗೆ ರಸ್ತೆಗಳೇ ನಿಜವಾದ ಶಾಲೆಗಳು.-----ಆಸ್ಕರ್ ವೈಲ್ಡ್.
9. ಪ್ರತಿಯೊಬ್ಬ ಮಗುವೂ ಒಬ್ಬ ಕಲಾವಿದ. ಆದರೆ ಬೆಳೆಯುತ್ತಾ ಹೋದಂತೆ ಈ ಕಲಾವಿದ ಉಳಿದುಕೊಳ್ಳುತ್ತಾನೆಯೋ ಎನ್ನುವುದಷ್ಟೇ ಪ್ರಶ್ನೆ. ----- ಪಾಬ್ಲೊ ಪಿಕಾಸೊ.
10. ದಾರಿಯಲ್ಲಿ ಬೊಗಳುವ ಎಲ್ಲಾ ನಾಯಿಗಳತ್ತಲೂ ಕಲ್ಲೆಸೆಯುತ್ತಾ ನಿಂತರೆ , ನಿಮ್ಮ ಗುರಿಯನ್ನು ನೀವು ಎಂದಿಗೂ ತಲುಪಲಾರಿರಿ.-----ವಿನ್ ಸ್ಟನ್ ಚರ್ಚಿಲ್.
11. ಪುಸ್ತಕಗಳು ಒಂದೋ ಕನಸುಗಳಾಗಿರುತ್ತವೆ ಅಥವಾ ಖಡ್ಗಗಳಾಗಿರುತ್ತವೆ.----ಅಮಿ ಲೊವೆಲ್.
12. ದೇವರು ಬುದ್ಧಿವಂತ ಆದರೆ ಅಪ್ರಾಮಾಣಿಕ ಅಲ್ಲ. ------ ಆಲ್ಬರ್ಟ್ ಐನ್ ಸ್ಟೀನ್.
13. ಸರ್ಕಾರ ಅಂದ ಮೇಲೆ , ಕುರಿಗಳೂ ಇರಬೇಕು, ಕಟುಕರೂ ಇರಬೇಕು. -----ವಾಲ್ಟೇರ್.
14. ನಿಮ್ಮ ಪ್ರತಿಷ್ಠೆಗಿಂತ ನಿಮ್ಮ ಚಾರಿತ್ರ್ಯಕ್ಕೆ ಗಮನ ಕೊಡಿ.ಚಾರಿತ್ರ್ಯ ಎಂದರೆ ನೀವು ಏನಾಗಿದ್ದೀರೋ ಅದು.ಪ್ರತಿಷ್ಠೆ ಎಂದರೆ ನಿಮ್ಮ ಬಗ್ಗೆ ಬೇರೆಯವರು ಏನು ತಿಳಿದುಕೊಂಡಿದ್ದಾರೋ ಅದು.-----ಜಾನ್ ವೂಡನ್.
15. ಹೂವಿನ ಪರಿಮಳ ಗಾಳಿ ಬಂದ ದಿಕ್ಕಿಗೆ ಮಾತ್ರ ಪಸರಿಸುತ್ತದೆ.ಆದರೆ ಮನುಷ್ಯನ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲೂ ಪಸರಿಸುತ್ತದೆ.-----ಚಾಣಕ್ಯ.
16. ಬಹಳಷ್ಟು ಜನರು ತಮ್ಮ ಕನಸುಗಳನ್ನು ನನಸುಗೊಳಿಸಲು ವಿಫಲರಾಗುತ್ತಾರೆ. ಏಕೆಂದರೆ ಅವರು ಸಾಯಲು ಹೆದರುತ್ತಾರೆ.-----ಲೆಸ್ ಬ್ರೌನ್
17. ಹೆಚ್ಚು ಕಷ್ಟ ಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ. -----ಥಾಮಸ್ ಜಫರ್ಸನ್.
18. ದುಃಖ ನಿಮ್ಮನ್ನು ಆಳವಾಗಿ ಕೊರೆದಷ್ಟೂ ನಿಮ್ಮ ಸಂತೋಷದ ಪ್ರಮಾಣ ಹೆಚ್ಚಾಗುತ್ತದೆ.-----ಖಲೀಲ್ ಗಿಬ್ರಾನ್.
19. ಶಿಕ್ಷಣವಿಲ್ಲದ ಬುದ್ಧಿವಂತ, ಗಣಿಯೊಳಗಿರುವ ಬೆಳ್ಳಿಯಂತೆ.----ಬೆಂಜಮಿನ್ ಫ್ರಾಂಕ್ಲಿನ್.
20. ಅನುಭವವೇ ಅತಿದೊಡ್ಡ ಶಿಕ್ಷಕ.ಅವನು ಮೊದಲು ಪರೀಕ್ಷೆ ಕೊಡುತ್ತಾನೆ, ಬಳಿಕ ಪಾಠ ಮಾಡುತ್ತಾನೆ. ----ವರ್ಮನ್ ಲಾ.
21. ಯಾವ ಮನುಷ್ಯನ ಜ್ಞಾನವೂ ಅವನ ಅನುಭವಕ್ಕಿಂತ ಮುಂದೆ ಹೋಗಲಾರದು.---- ಜಾನ್ ಲಾಕ್.
22. ತಪ್ಪುಗಳಿಂದ ಪಾಠ ಕಲಿಯುವುದಿದ್ದರೆ ಮಾತ್ರ ಹಿಂದೆ ತಿರುಗಿ ನೋಡಿ---ಜಾರ್ಜ್ ವಾಷಿಂಗ್ಟನ್.
23. ಒಂದು ಕ್ಷಣದ ಒಳನೋಟ ಕೆಲವೊಮ್ಮೆ ಇಡೀ ಜೀವನದ ಒಟ್ಟು ಅನುಭವವಾಗುತ್ತದೆ.----ಒಲಿವರ್ ಹೋಮ್ಸ್.
24. ನಮ್ಮ ಹೃದಯದಲ್ಲಿ ಮತ್ತು ಇನ್ನೊಬ್ಬ ಮನುಷ್ಯನಲ್ಲಿ ದೇವರು ಕಾಣಿಸಲಿಲ್ಲ ಎಂದಾದರೆ ಬೇರೆಲ್ಲಿ ದೇವರನ್ನು ಹುಡುಕುತ್ತೀರಿ. ? ---- ಸ್ವಾಮಿ ವಿವೇಕಾನಂದ.
25. ಸರಳತೆಯನ್ನು ಸಾಧಿಸುವುದು ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸ. ಅದು ಅನುಭವದ ಕೊನೆಯ ಮಿತಿ ; ಬುದ್ಧಿವಂತನ ಕೊನೆಯ ಪ್ರಯತ್ನ. ----- ಜಾರ್ಜ್ ಸ್ಯಾಂಡ್.

Thursday, 11 January 2018

Makara sankranti wishes images free download.ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು








Makara sankranti wishes images 2018 in kannada language











Kannada images kannada shubhashitagalu images.ಕನ್ನಡ ಸುಭಾಷಿತಗಳು













ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ನಕಲು ಮಾಡಿ ಗೆಲ್ಲುವುದಕ್ಕಿಂತ ಸ್ವಂತ ಸೃಷ್ಟಿಯಲ್ಲಿ ಸೋಲುವುದು ಒಳ್ಳೆಯದು.---- ಹರ್ಮನ್ ಮೆಲ್ವಿಲ್.
2. ಇತರರ ಬಗ್ಗೆ ಹೆಚ್ಚು ಗೊತ್ತಿರುವವನು ಬುದ್ಧಿವಂತ. ಆದರೆ ತನ್ನ ಬಗ್ಗೆಯೇ ಹೆಚ್ಚು ಗೊತ್ತಿರುವವನು ಜ್ಞಾನಿ.----- ಲಾವೊ ತ್ಸೆ.
3. ಕಾಲು ಜಾರಿದರೆ ಎದ್ದು ನಿಲ್ಲಬಹುದು.ನಾಲಗೆ ಜಾರಿದರೆ ಎದ್ದು ನಿಲ್ಲುವುದು ಕಷ್ಟ. ----ಬೆಂಜಮಿನ್ ಫ್ರಾಂಕ್ಲಿನ್.
4. ನೀವು ಯಶಸ್ಸು ಹೊಂದಬೇಕೆಂದು ದೇವರು ಬಯಸುವುದಿಲ್ಲ; ಆದರೆ ನೀವು ಪ್ರಯತ್ನಿಸಬೇಕೆಂದು ಬಯಸುತ್ತಾನೆ.---- ಮದರ್ ತೆರೆಸಾ.
5. ನಿಮ್ಮ ದುರದೃಷ್ಟದಿಂದ ಕಲಿತುಕೊಳ್ಳುವುದಕ್ಕಿಂತ ಇತರರ ದುರದೃಷ್ಟದಿಂದ ಕಲಿತುಕೊಳ್ಳುವುದು ಒಳ್ಳೆಯದು.-----ಈಸೋಪ.
6. ಕಾದಂಬರಿ ಬರೆಯಲು ಮೂರು ನಿಯಮಗಳಿವೆ.ಆದರೆ ದುರದೃಷ್ಟವಶಾತ್ ಆ ಮೂರು ನಿಯಮಗಳು ಯಾವುದೆಂದು ಯಾರಿಗೂ ಗೊತ್ತಿಲ್ಲ. ---- ಸಾಮರ್ ಸೆಟ್ ಮಾಮ್.
7. ಮನುಷ್ಯ ನಿನಗೇನು ಬೆಲೆಯಿದೆ? ನಿನ್ನ ಮೂಳೆಗಳಿಂದ ಆಭರಣ ಮಾಡಲಾಗದು, ತೊಗಲಿನಿಂದ ಸಂಗೀತ ಉಪಕರಣಗಳನ್ನೂ ಮಾಡಲಾಗದು ! ---- ಸಂತ ಕಬೀರ.
8. ಮನುಷ್ಯ ತನ್ನನ್ನು ತಾನು ಗೆಲ್ಲುವುದೇ ಅತ್ಯುತ್ತಮವಾದ ಜಿಹಾದ್.------ ಮೊಹಮ್ಮದ್ ಪೈಗಂಬರ್.
9. ನಿರ್ಧಾರವನ್ನು ನಿಧಾನವಾಗಿಯೇ ಕೈಗೊಳ್ಳಿ. ಆದರೆ ಒಮ್ಮೆ ನಿರ್ಧರಿಸಿದ ಬಳಿಕ ಅದನ್ನು ಗಟ್ಟಿಯಾಗಿ ಸಮರ್ಥಿಸಿ.----ಮಹಾತ್ಮಾ ಗಾಂಧಿ.
10. ಸ್ವಾತಂತ್ರ್ಯ ಮತ್ತು ಪ್ರೀತಿ ಜತೆಗೂಡಿ ಹೋಗುತ್ತದೆ. ಇನ್ನೊಬ್ಬರು ಪ್ರೀತಿಸುತ್ತಾರೆಂದು ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರೀತಿಸಿದರೆ ಅದು ವ್ಯಾಪಾರ. ಯಾವ ಅಪೇಕ್ಷೆಯೂ ಇಲ್ಲದೆ ಪ್ರೀತಿಸಿ.---- ಜಿಡ್ಡು ಕೃಷ್ಣ ಮೂರ್ತಿ.
11. ಸಮಾಜಕ್ಕೆ ಸೇವೆ ಸಲ್ಲಿಸಲು ಯಾವ ಡಿಗ್ರಿಯೂ ಬೇಕಾಗಿಲ್ಲ. ಘನತೆ ತುಂಬಿದ ಹೃದಯ ಮತ್ತು ಪ್ರೀತಿ ತುಂಬಿದ ಆತ್ಮವಿದ್ದರೆ ಸಾಕು.----- ಮಾರ್ಟಿನ್ ಲೂಥರ್ ಕಿಂಗ್.
12. ಬಡತನವೇ ಕ್ರಾಂತಿ ಮತ್ತು ಅಪರಾಧಗಳ ಪೋಷಕ.-----ಅರಿಸ್ಟಾಟಲ್.
13. ಜನ ನಿಮ್ಮನ್ನು ಏಕಾಂಗಿಯಾಗಿರಲು ಬಿಟ್ಟರೆ ಬದುಕು ಅದ್ಭುತವಾಗಿರುತ್ತದೆ.---- ಚಾರ್ಲಿ ಚಾಪ್ಲಿನ್.
14. ಜಗತ್ತನ್ನು ಪ್ರೀತಿಸಿದರೆ ಮಾತ್ರ ಅಲ್ಲಿ ಜೀವಿಸಲು ಸಾಧ್ಯ. ----- ರವೀಂದ್ರನಾಥ ಟ್ಯಾಗೋರ್.
15. ಪ್ರೀತಿಯ ಸ್ಪರ್ಶವಿದ್ದರೆ ಪ್ರತಿಯೊಬ್ಬನೂ ಕವಿಯಾಗುತ್ತಾನೆ.-------- ಪ್ಲೇಟೋ.
16. ಗೆಳೆಯರನ್ನು ನಿಧಾನಕ್ಕೆ ಆಯ್ಕೆ ಮಾಡಿ. ಅವರನ್ನು ಬದಲಾಯಿಸುವಾಗ ಇನ್ನಷ್ಟು ನಿಧಾನಿಸಿ.------ಬೆಂಜಮಿನ್ ಫ್ರಾಂಕ್ಲಿನ್.
17. ದೇಹ ಮತ್ತು ಮನಸ್ಸಿನ ಆರೋಗ್ಯದ ಗುಟ್ಟು ಕಳೆದುಹೋದದ್ದಕ್ಕೆ ದುಃಖಿಸುವುದರಲ್ಲಾಗಲೀ ಭವಿಷ್ಯದ ಬಗ್ಗೆ ಭಯ ಪಡುವುದರಲ್ಲಾಗಲೀ ಇಲ್ಲ. ವರ್ತಮಾನವನ್ನು ಗೌರವ ಮತ್ತು ಬುದ್ಧಿವಂತಿಕೆಯಿಂದ ಬದುಕುವುದರಲ್ಲಿ ಇದೆ.---- ಗೌತಮ ಬುದ್ಧ.
18. ಜಗತ್ತಿನಲ್ಲಿ ಎಲ್ಲಾ ಸವಲತ್ತುಗಳು ಇದ್ದರೂ ಸ್ನೇಹಿತರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ------ಅರಿಸ್ಟಾಟಲ್.
19. ಯಾವುದಾದರೂ ಕೆಲಸ ಆಗಬೇಕೆಂದಿದ್ದರೆ ನೀವೇ ಹೋಗಿ.ಆಗಬಾರದು ಎಂದಿದ್ದರೆ ಯಾರನ್ನಾದರೂ ಕಳಿಸಿ.------ ಬೆಂಜಮಿನ್ ಫ್ರಾಂಕ್ಲಿನ್.
20. ನಿಮಗೆ ನೀವು ಏನನ್ನು ಮಾಡಲು ಬಯಸುವುದಿಲ್ಲವೋ ಅದನ್ನು ಇನ್ನೊಬ್ಬರಿಗೂ ಮಾಡಬೇಡಿ.-----ಕನ್ ಪ್ಯೂಸಿಯಸ್.
21. ಹೆತ್ತವರು ಒಳ್ಳೆಯ ದಾರಿಯಲ್ಲಿ ನಡೆಯಲು ಸಲಹೆ ಕೊಡಬಹುದು.ಆದರೆ ವ್ಯಕ್ತಿಯ ಗುಣ ನಡತೆ ಉತ್ತಮಗೊಳ್ಳುವುದು ಅವನ ಕೈಯಲ್ಲೇ ಇದೆ.----- ಆನ್ ಫ್ರಾಂಕ್.
22. ಲೇಖಕನಾದವನು ಏನನ್ನು ಹೇಳಬಯಸುತ್ತಾನೋ ಅದನ್ನು ಬರೆಯಬೇಕು, ಮಾತನಾಡಬಾರದು.-----ಆರ್ನೆಸ್ಟ್ ಹೆಮಿಂಗ್ ವೇ.
23. ನಿಮ್ಮನ್ನು ಸಾಮಾನ್ಯ ಎಂದು ತಿಳಿದುಕೊಂಡವರನ್ನು ಯಾವತ್ತೂ ಪ್ರೀತಿಸಬೇಡಿ.----- ಆಸ್ಕರ್ ವೈಲ್ಡ್.
24. ಪ್ರೀತಿಸುವವರ ಒಂದು ಸ್ಪರ್ಶ ಸಾಕು, ಪ್ರತಿಯೊಬ್ಬರೂ ಕವಿಯಾಗುತ್ತಾರೆ.---ಪ್ಲೆಟೋ.
25. ನಾನು ಪ್ರೀತಿಗೆ ಅಂಟಿಕೊಳ್ಳಲು ನಿರ್ಧರಿಸಿದ್ದೇನೆ.ದ್ವೇಷದ ಹೊರೆಯನ್ನು ಹೊರುವುದು ಸಾಧ್ಯವಿಲ್ಲ. ------ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.
26. ಹೃದಯ ಇರುವದೇ ಭಗ್ನಗೊಳ್ಳಲು ! ಆಸ್ಕರ್ ವೈಲ್ಡ್.
27. ಜೀವನ ಸುದೀರ್ಘ ಅನ್ನಿಸಿಕೊಳ್ಳುವುದಕ್ಕಿಂತ ಶ್ರೇಷ್ಠ ಅನ್ನಿಸಿಕೊಳ್ಳಬೇಕು.----- ಬಾಬಾ ಸಾಹೇಬ್ ಅಂಬೇಡ್ಕರ್ .
28. ಬೆಳಕು ಕೊಡಿ, ಜನರು ಅವರ ದಾರಿಯನ್ನು ಅವರೇ ಹುಡುಕಿಕೊಳ್ಳುತ್ತಾರೆ.--------ಎಲ್ಲಾ ಬೇಕರ್.
29. ಸೂರ್ಯನ ಬೆಳಕು ಇದ್ದಾಗ ನಾನು ಏನೆಲ್ಲವನ್ನೂ ಮಾಡಬಲ್ಲೆ.ಯಾವ ಪರ್ವತವೂ ನನಗೆ ಎತ್ತರವಲ್ಲ.----- ವಿಲ್ಮಾ ರುಡೋಲ್ಫ್.
30. ಇವತ್ತು ಏನು ಮಾಡುತ್ತೀಯೋ ಅದರ ಮೇಲೆ ನಿನ್ನ ನಾಳೆಯ ಭವಿಷ್ಯ ನಿಂತಿದೆ.----- ಮಹಾತ್ಮಾ ಗಾಂಧಿ.
31. ಹಕ್ಕಿಯೊಂದು ತನ್ನ ಸ್ವಂತ ಬದುಕಿನಿಂದಲೇ ಶಕ್ತಿ ಮತ್ತು ಸಾಧಿಸುವ ಛಲವನ್ನು ಪಡೆಯುತ್ತದೆ.------ಎ.ಪಿ.ಜೆ.ಅಬ್ದುಲ್ ಕಲಾಂ.
32. ಯಾರು ಸಂತೋಷವಾಗಿರುತ್ತಾರೋ ಅವರು ಉಳಿದವರನ್ನೂ ಸಂತೋಷಗೊಳಿಸಬಲ್ಲರು.----ಆಯ್ನ್ ಫ್ರಾಂಕ್.
33. ನಿಮಗೆ ಯಾವ ಕೆಲಸ ಅಸಾಧ್ಯ ಎನ್ನಿಸುತ್ತದೋ ಅದನ್ನೇ ಮಾಡಿ.-----'ಎಲಿನಾರ್ ರೂಸ್ ವೆಲ್ಟ್.
34. ನಿಷ್ಪ್ರಯೋಜಕ ವ್ಯಕ್ತಿಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ----- ಸಾಕ್ರೆಟಿಸ್.
35. ಬಹಳಷ್ಟು ಜನರಿಗೆ ಸ್ವಾತಂತ್ರ್ಯ ಬೇಕಿಲ್ಲ. ಏಕೆಂದರೆ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯು ಇರುತ್ತದೆ. ಬಹಳಷ್ಟು ಜನ ಜವಾಬ್ದಾರಿಯ ಬಗ್ಗೆ ಭಯ ಹೊಂದಿದ್ದಾರೆ. ----- ಸಿಗ್ಮಂಡ್ ಫ್ರಾಯ್ಡ್.
36. ಮುಗ್ಧರ ನಂಬಿಕೆಯೇ ಮೋಸಗಾರರ ಬಲವಾದ ಆಯುಧ. ------ ಸ್ಟೀಫನ್ ಕಿಂಗ್.
37. ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆಗಳಿಲ್ಲದ ಹಕ್ಕಿಯಂತೆ. ----- ಸಾಲ್ವಡೋರ್ ಡಾಲಿ.
38. ದುಃಖದ ಮೌನ ಭಾಷೆಯೇ ಕಣ್ಣೀರು. ------ವಾಲ್ಟೇರ್.
39. ಕ್ರೀಡೆಯಲ್ಲಿ ಕೆಲವೊಮ್ಮೆ ನೀವು ಅಪಾಯಗಳನ್ನು ಆಹ್ವಾನಿಸಲೇಬೇಕು. ಆದರೆ ವಾಸ್ತವದ ಅಪಾಯಗಳನ್ನು ಎದುರಿಸಿ, ಹುಚ್ಚು ಅಪಾಯಗಳನ್ನಲ್ಲ. ------ ಸರ್ಗಿ ಬುಬ್ಕಾ.
40. ಯಶಸ್ಸು ಸದಾ ಇರಬೇಕೆಂದರೆ ವಿನಯದಿಂದಿರಿ. ಕೀರ್ತಿ ಅಥವಾ ಹಣ ತಲೆಗೆ ಹತ್ತದಂತೆ ನೋಡಿಕೊಳ್ಳಿ. ------- ಎ.ಆರ್.ರೆಹಮಾನ್.
41. ಬೆಂಕಿಯಿಲ್ಲದೆ ಮೇಣದ ಬತ್ತಿ ಉರಿಯುವುದಿಲ್ಲ. ಹಾಗೆಯೇ ಆಧ್ಯಾತ್ಮಿಕ ಜೀವನವಿಲ್ಲದೆ ಮನುಷ್ಯ ಬದುಕಲಾರ. -----ಗೌತಮ ಬುದ್ಧ.
42. ಜೀವನದ ಭಯದಿಂದಲೇ ಸಾವಿನ ಭಯವೂ ಹುಟ್ಟುವುದು. ಜೀವನವನ್ನು ಸಂಪೂರ್ಣವಾಗಿ ಜೀವಿಸುವವನು ಸಾಯಲು ಸದಾ ಸಿದ್ಧನಾಗಿರುತ್ತಾನೆ. ------ ಮಾರ್ಕ್ ಟ್ವೈನ್.
43. ಶಿಕ್ಷಣ ಎನ್ನುವುದು ಅತ್ಯಂತ ಶಕ್ತಿ ಶಾಲಿ ಆಯುಧ. ಅದರ ಮೂಲಕ ಜಗತ್ತನ್ನು ಬದಲಿಸಬಹುದು. -----'ನೆಲ್ಸನ್ ಮಂಡೇಲಾ.
44. ನಿಮಗೆ ಶತ್ರುಗಳಿದ್ದಾರಾ ? ತುಂಬಾ ಒಳ್ಳೆಯದು.ಅದರ ಅರ್ಥ ಜೀವನದಲ್ಲಿ ನೀವು ಯಾವತ್ತೋ ಒಂದು ಸಲ ಒಳ್ಳೆಯದಕ್ಕಾಗಿ ಎದ್ದು ನಿಂತಿದ್ದೀರಿ.----- ವಿನ್ ಸ್ಟನ್ ಚರ್ಚಿಲ್.
45. ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ. -----ಸ್ವಾಮಿ ವಿವೇಕಾನಂದ.
46. ದ್ವೇಷವನ್ನು ದ್ವೇಷದಿಂದಲೇ ಮುಗಿಸಲು ಹೊರಟರೆ ಪ್ರಪಂಚವೇ ಕುರುಡಾಗುತ್ತದೆ.-----ಮಹಾತ್ಮಾ ಗಾಂಧಿ.
47. ಜೀವನವು ಹೋರಾಟದ ಕಣ.ಹೋರಾಟದ ಮೂಲಕವೇ ನಾವು ಮುಂದಕ್ಕೆ ಸಾಗಬೇಕಿದೆ.-----ಸ್ವಾಮಿ ವಿವೇಕಾನಂದ.
48. ಮೂರ್ಖನ ಹಣ ಮಾತ್ರ ಅತ್ಯಧಿಕ ಪ್ರಚಾರ ಪಡೆಯುತ್ತದೆ. ----ಅಲ್ ಬೆರ್ಸೀನ್.
49. ಶಕ್ತಿ ಬರುವುದು ದೈಹಿಕ ಸಾಮರ್ಥ್ಯದಿಂದ ಅಲ್ಲ; ಮಾನಸಿಕ ದೃಡತೆಯಿಂದ. ----ಮಹಾತ್ಮಾ ಗಾಂಧಿ.
50. ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಗ್ರಹಿಸಿದರೆ ನಿಮ್ಮ ಹೃದಯದಲ್ಲಿರುವ ದೇವರು ಕಾಣಿಸುತ್ತಾನೆ.---ಆದಿ ಶಂಕರ. 

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಹೇಳಿದರೆ ಮರೆತು ಬಿಡುತ್ತೇನೆ.ತೋರಿಸಿದರೆ ನೆನಪಿಟ್ಟುಕೊಳ್ಳಬಹುದು.ನನ್ನನ್ನೂ ಜತೆಗೆ ಸೇರಿಸಿಕೊಂಡರೆ ಖಂಡಿತಾ ಅರ್ಥ ಮಾಡಿಕೊಳ್ಳುತ್ತೇನೆ.-----ಚೀನಿ ಗಾದೆ.
2. ಹೊಸತೆ ಇರಲಿ, ಹಳತೆ ಇರಲಿ: ಒಳಿತು ಯಾವುದೋ ಬಾಳ್ಗೆ ಬರಲಿ.------ಆನಂದಕಂದ
3. ಪರಭಾಷೆಯ ಮೇಲಿನ ಮೋಹವೇ ಸಂಸ್ಕೃತಿಯ ರಾಹು. ----ಮಹಾತ್ಮಾ ಗಾಂಧಿ.
4. ದುಷ್ಟ ವಿಚಾರಗಳು ದುಃಖಕ್ಕೆ ಮೂಲ ಕಾರಣ. ----ಗೌತಮ ಬುದ್ಧ.
5. ಜ್ಞಾನದ ಅತಿದೊಡ್ಡ ಶತ್ರು ಅಜ್ಞಾನ ಅಲ್ಲ; ಜ್ಞಾನದ ಭ್ರಮೆ.----ಡೇನಿಯಲ್ ಬೂಸ್ಟಿನ್.
6. ಗಾಳಿ ವಿರುದ್ಧ ದಿಕ್ಕಿಗೆ ಬೀಸಿದರೆ ಮಾತ್ರ ಗಾಳಿಪಟ ಅತ್ಯಧಿಕ ಮೇಲಕ್ಕೆ ಏರುವುದು.-----ವಿನ್ ಸ್ಟನ್ ಚರ್ಚಿಲ್.
7. ಗೆಳೆಯರು ಕಷ್ಟ ಕಾಲದಲ್ಲಿ ಪ್ರೀತಿ ತೋರುತ್ತಾರೆ,ಸಂತೋಷದ ಸಮಯದಲ್ಲಿ ಅಲ್ಲ. ----ಯುರಿಪಿಡೀಸ್.
8. ನಿಮ್ಮ ಕೊನೆಯ ಉಸಿರು ಸಮೀಪಿಸಿದಾಗ ವ್ಯಾಕರಣದಿಂದ ಏನೂ ಪ್ರಯೋಜನ ಆಗುವುದಿಲ್ಲ. -----ಆದಿ ಶಂಕರ.
9. ನಿಮ್ಮ ಮುಗುಳ್ನಗೆಯನ್ನು ಜಗತ್ತಿನ ಜತೆ ಹಂಚಿಕೊಳ್ಳಿ. ಅದು ಸ್ನೇಹ ಮತ್ತು ಶಾಂತಿಯನ್ನು ಹರಡುತ್ತದೆ. -----ಕ್ರಿಸ್ಟೀ ಬ್ರಿಂಕ್ಲೀ.
10. ಕನಸುಗಳಲ್ಲಿ ಭರವಸೆ ಇಡಿ.ಸ್ವರ್ಗದ ಬಾಗಿಲು ಅಲ್ಲೇ ಅಡಗಿದೆ.---- ಖಲೀಲ್ ಗಿಬ್ರಾನ್.
11. ನನ್ನ ಒಳಗಿರುವ ಅತ್ಯುತ್ತಮವಾದುದನ್ನು ಹೊರತೆಗೆಯುವವನೇ ನನ್ನ ಅತ್ಯುತ್ತಮ ಗೆಳೆಯ.---- ಹೆನ್ರಿ ಫೋರ್ಡ್.
12. ಪ್ರಾಮಾಣಿಕ ಮನುಷ್ಯ ಯಾವಾಗಲೂ ಮಗುವಿನಂತೆ ಇರುತ್ತಾನೆ.----ಸಾಕ್ರೆಟಿಸ್.
13. ಸತ್ಯವನ್ನು ಸಾವಿರ ತರಹ ಹೇಳಬಹುದು.ಹಾಗಿದ್ದೂ ಪ್ರತಿಯೊಂದೂ ಸತ್ಯವೇ ಆಗಿರುತ್ತದೆ. -------ಸ್ವಾಮಿ ವಿವೇಕಾನಂದ.
14. ನಿಮ್ಮ ವೈಫಲ್ಯಗಳನ್ನು ನಿರ್ಲಕ್ಷಿಸಿ , ಯಶಸ್ಸನ್ನು ಸಹಿಸಿಕೊಳ್ಳವವನೇ ನಿಜವಾದ ಗೆಳೆಯ.---- ಡೋಗ್ ಲಾರ್ಸನ್.
15. ನಗು ಎನ್ನುವುದು ಟಾನಿಕ್, ಪರಿಹಾರ ಮತ್ತು ನೋವಿಗೆ ಮುಲಾಮು.---- ಚಾರ್ಲಿ ಚಾಪ್ಲಿನ್ .
16. ಈ ಪ್ರಪಂಚದಲ್ಲಿ ಯಾರೂ ನಿಮಗೆ ಅಪರಿಚಿತರಲ್ಲ.ಅವರೆಲ್ಲರೂ ನೀವಿನ್ನೂ ಭೇಟಿಯಾಗದ ನಿಮ್ಮ ಗೆಳೆಯರು. ------ ವಿಲಿಯಂ ಬಟ್ಲರ್ ಯೇಟ್ಸ್.
17. ಮಕ್ಕಳ ಶಿಕ್ಷಣದ ಬಗ್ಗೆ ಮಾತ್ರ ತನಗೆ ಜವಾಬ್ದಾರಿ ಇದೆ ಎಂದು ಸಮಾಜ ಏಕೆ ತಿಳಿದುಕೊಳ್ಳಬೇಕು.? ದೊಡ್ಡವರ ಶಿಕ್ಷಣದ ಬಗ್ಗೆಯೂ ಸಮಾಜಕ್ಕೆ ಜವಾಬ್ದಾರಿ ಇದೆ.---- ಎರಿಕ್ ಫ್ರಾಮ್.
18. ನಿಮ್ಮ ಹೆಬ್ಬಯಕೆಗಳನ್ನು ನಿರುತ್ತೇಜಿಸುವ ಜನರಿಂದ ದೂರವಿರಿ.ನಿಜಕ್ಕೂ ಶ್ರೇಷ್ಠ ಮನುಷ್ಯರು ಮಾತ್ರ ನೀವೂ ಶ್ರೇಷ್ಠರಾಗಬಲ್ಲಿರಿ ಎಂದು ಪ್ರೋತ್ಸಾಹ ನೀಡುತ್ತಾರೆ. ----- ಮಾಕರ್ ಟ್ವೈನ್.
19. ಮಕ್ಕಳು ಹಿರಿಯರು ಹೇಳಿದ್ದನ್ನು ಆಲಿಸುವುದರಲ್ಲಿ ಯಾವತ್ತೂ ಚುರುಕಾಗಿರುವುದಿಲ್ಲ.ಆದರೆ ಹಿರಿಯರನ್ನು ಅನುಕರಿಸುವಲ್ಲಿ ಯಾವತ್ತೂ ವಿಫಲರಾಗುವುದಿಲ್ಲ.-----ಜೇಮ್ಸ್ ಬಾಲ್ಡ್ವಿನ್ .
20. ಸುಶಿಕ್ಷಿತ ಮನಸ್ಸಿನಲ್ಲಿ ಉತ್ತರಗಳಿಗಿಂತ ಹೆಚ್ಚು ಪ್ರಶ್ನೆಗಳೇ ತುಂಬಿರುತ್ತವೆ.-----ಹೆಲನ್ ಕೆಲ್ಲರ್.
21. ಬುದ್ಧಿವಂತರ ಗುರಿ ಸಂತೋಷವನ್ನು ಹೊಂದುವುದಲ್ಲ, ನೋವುಗಳನ್ನು ದೂರ ಮಾಡುವುದು.----- ಅರಿಸ್ಟಾಟಲ್.
22. ಅನುಭವ ಪುಕ್ಕಟೆ ಬರುವುದಿಲ್ಲ. ಅದಕ್ಕಾಗಿ ಏನನ್ನಾದರೂ ಖರ್ಚು ಮಾಡಬೇಕು.-----ಆಸ್ಕರ್ ವೈಲ್ಡ್.
23. ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ, ಇಲ್ಲದನ್ನು ಹೇಳುವಾಗ ಮಾತು ಕಡಿಮೆಯಾಗಲಿ.----ಬಿ.ಎಂ.ಶ್ರೀ.
24. ಕೈಲಾದವನು ಮಾಡಿ ತೋರಿಸುತ್ತಾನೆ.ಕೈಲಾಗದವನು ಉಪದೇಶ ಮಾಡುತ್ತಾನೆ.----ಜಾರ್ಜ್ ಬರ್ನಾರ್ಡ್ ಷಾ.
25. ಇನ್ನೊಬ್ಬರಿಗೆ ಒಳಿತು ಮಾಡಿದಷ್ಟೂ ನಮ್ಮ ಹೃದಯ ಶುದ್ಧವಾಗುತ್ತದೆ.ದೇವರು ನಮಗೆ ಹತ್ತಿರವಾಗುತ್ತಾನೆ.----ಸ್ವಾಮಿ ವಿವೇಕಾನಂದ.
26. ಎಲ್ಲಕ್ಕೂ ಮನಸ್ಸೇ ಕಾರಣ. ಅದು ಪರಿಶುದ್ಧವಾಗದೆ ಯಾವ ಒಳ್ಳೆಯ ಕೆಲಸವೂ ಆಗುವುದಿಲ್ಲ. ------ಶ್ರೀ ಶಾರದಾದೇವಿ.
27. ಹೊಸ ಪುಸ್ತಕವೊಂದನ್ನು ನೀವು ನಿಮ್ಮ ಮನೆಗೆ ತಂದಿರೆಂದರೆ, ಹೊಸ ಹಿತೈಷಿಯೊಬ್ಬ ನಿಮ್ಮ ಮನೆಗೆ ಬಂದನೆಂದು ತಿಳಿಯಬೇಕು. -----ಹಾ.ಮಾ.ನಾಯಕ.
28. ಕೀರ್ತಿ ಯನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. -----ಕುವೆಂಪು.
29. ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ.-----ಎಮರ್ಸನ್.
30. ಕರೆ ಕಳುಹಿಸದೆ ಬರುವುದು ಎಷ್ಟು ತಪ್ಪೋ , ಕೇಳದೇ ಬುದ್ದಿವಾದ ಹೇಳುವುದು ಅಷ್ಟೇ ತಪ್ಪು. ----- ತ.ರಾ.ಸು.
31. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ.-----ಸ್ವಾಮಿ ವಿವೇಕಾನಂದ
32. ಚಿಂತನೆ ಇಲ್ಲದಿದ್ದರೆ ಯಶಸ್ಸು ಸಿಗುವುದಿಲ್ಲ. -----ಜಿಡ್ಡು ಕೃಷ್ಣ ಮೂರ್ತಿ.
33. ಎಷ್ಟು ಕಾಲ ಬದುಕುವೆ ಎಂಬುದಕ್ಕಿಂತ ಹೇಗೆ ಬದುಕುವೆ ಎಂಬುದೇ ಮುಖ್ಯ. -----ಪಿ.ಸೈರಸ್.
34. ನೀವು ತಪ್ಪು ಮಾಡದಂತಿರಲು ನಿಮ್ಮನ್ನು ನೀವೇ ಸಂದೇಹದಿಂದ ನೋಡಿರಿ.------ಸ್ವಾಮಿ ವಿವೇಕಾನಂದ .
35. ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.----- ಇಟಲಿ ಗಾದೆ.
36. ನಮಗೆ ಒಪ್ಪದ ವಿಚಾರಗಳನ್ನು ವಿಚಾರಗಳಿಂದಲೇ ಹೊಡೆದು ಹಾಕಬೇಕು.ವ್ಯಕ್ತಿಗಳನ್ನು ಹೊಡೆಯುವುದರಿಂದ ವಿಚಾರಗಳನ್ನು ಅಳಿಸಲಾಗುವುದಿಲ್ಲ.----- ಹಾ.ಮಾ.ನಾಯಕ.
37. ತಿಳಿದು ಬದುಕುವುದು ಮನುಷ್ಯ ಧರ್ಮ; ತಿಂದು ಬದುಕುವುದು ಪ್ರಾಣಿ ಧರ್ಮ.-----ದ.ರಾ.ಬೇಂದ್ರೆ.
38. ಸ್ವರ್ಗವೆನ್ನುವುದು ಇನ್ನೆಲ್ಲಿಯೂ ಇಲ್ಲ. ಅದು ಸುಖೀ ಸಂಸಾರದಲ್ಲಿಯೇ ಇದೆ.-----ಪಾಟೀಲ ಪುಟ್ಟಪ್ಪ.
39. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.-----ಮಹಾತ್ಮಾ ಗಾಂಧಿ.
40. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ ಸರ್ ಫಿಲಿಪ್ ಸಿಡ್ನಿ.
41. ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು.-----ರಾಮಕೃಷ್ಣ ಪರಮಹಂಸ.
42. ಶೀಲಬಾಹಿರವಾದ ಶಿಕ್ಷಣ ಪಾಪದಿಂದ ಕೂಡಿರುತ್ತದೆ.-----ಮಹಾತ್ಮಾ ಗಾಂಧಿ.
43. ಕಷ್ಟಗಳಲ್ಲಿ ಧೈರ್ಯವನ್ನು ತಳೆದವನೇ ದೊಡ್ಡವನು.------ ಆಚಾರ್ಯ ಸೋಮದೇವ.
44. ಪ್ರಮುಖ ತತ್ವಗಳು ಬದಲಾಯಿಸಲಾರದಷ್ಟು ದೃಢವಾಗಿರಬೇಕು.-----ಅಬ್ರಹಾಂ ಲಿಂಕನ್.
45. ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.----'ಭಗವದ್ಗೀತೆ.
46. ಸ್ವಸಹಾಯದಲ್ಲಿ ನಂಬಿಕೆ ಇರುವವರಿಗೆ ದೇವರು ಸಹಾಯ ಮಾಡುತ್ತಾನೆ.---- ಬೆಂಜಮಿನ್ ಫ್ರಾಂಕ್ಲಿನ್.
47. ಮನುಷ್ಯನ ಬೆಳವಣಿಗೆಗೆ ಬೇಕಾದ ಸ್ವಾರ್ಥವು ಅವನಲ್ಲಿರಬೇಕು.ಆದರೆ ಮಿತಿ ಮೀರಿದ ಸ್ವಾರ್ಥವಿರಕೂಡದು-----ಶಿವರಾಮ ಕಾರಂತ.
48. ಆತ್ಮವಿಶ್ವಾಸ, ಜಯದ ಮೊದಲ ಗುಟ್ಟು. ----ಎಮರ್ಸನ್.
49. ಬಾಳನ್ನು ಹಸನಾಗಿಸಿಕೊಳ್ಳಬೇಕು.ಪ್ರಹಸನವಾಗಿಸಿಕೊಳ್ಳಬಾರದು.------ಕೆ.ಎಸ್.ನಿಸಾರ್ ಅಹಮದ್.
50. ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.-----ಷೇಕ್ಸ್ ಪಿಯರ್. 

Sunday, 7 January 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu





1. ಬೇಸರಕ್ಕೆ ಕುತೂಹಲವೇ ಔಷಧಿ. ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. -----ಎಲೆನ್ ಪಾರ್.
2. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.
3. ನಾವೇನು ಯೋಚಿಸುತ್ತೇವೆ , ತಿಳಿದುಕೊಂಡಿದ್ದೇವೆ ಅಥವಾ ನಂಬದ್ದೇವೆ ಎಲ್ಲವೂ ಕೊನೆಯಲ್ಲಿ ಬೀರುವ ಪರಿಣಾಮ ಅಷ್ಟಕ್ಕಷ್ಟೆ. ನಾವೇನು ಮಾಡಿದ್ದೇವೆ ಎನ್ನುವುದಷ್ಟೇ ಪರಿಣಾಮ ಬೀರುವುದು.---- ಜಾನ್ ರಸ್ಕಿನ್.
4. ದುಷ್ಟ ವಿಚಾರಗಳು , ದುಃಖಕ್ಕೆ ಮೂಲ ಕಾರಣ.---- ಗೌತಮ ಬುದ್ಧ.
5. ಗಂಡಾಂತರ ಅನಿರೀಕ್ಷಿತವಾಗಿ ಅನಿರೀಕ್ಷಿತ ಸ್ಥಳಗಳಲ್ಲಿ ನಮ್ಮನ್ನೇ ಕಾದಿರುತ್ತವೆ.ಆದ್ದರಿಂದ ನಾವು ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡಬೇಕು.----- ಗಯಟೆ.

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu






1. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.---- ಡಾ.ಬಿ.ಆರ್.ಅಂಬೇಡ್ಕರ್.
2. ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ ನಾವೆಂದೂ ದೊಡ್ಡವರಾಗುವುದಿಲ್ಲ.----ವಲ್ಲಭ ಭಾಯಿ ಪಟೇಲ್.
3. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.---ಮಹಾತ್ಮಾ ಗಾಂಧಿ.
4. ಬೇಟೆಯ ನಂತರ,ಯುದ್ಧದ ವೇಳೆ ಮತ್ತು ಚುನಾವಣೆಗೆ ಮುನ್ನ ಹೇಳುವಷ್ಟು ಸುಳ್ಳುಗಳನ್ನು ಜನ ಇನ್ಯಾವ ಹೊತ್ತಲ್ಲೂ ಹೇಳುವುದಿಲ್ಲ. ----ಬಿಸ್ಮಾರ್ಕ್.
5. ಸತ್ಯಕ್ಕೆ ಒಂದು ಬಣ್ಣ. ಸುಳ್ಳಿಗೆ ನಾನಾ ಬಣ್ಣ. ----ಲ್ಯಾಟಿನ್ ಗಾದೆ.
6. ಶಕ್ತಿ ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ.----ಮಹಾತ್ಮಾ ಗಾಂಧಿ.
7. ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಮಹಾನ್ ಆಗುವುದಿಲ್ಲ. ----ಎಮರ್ಸನ್.
8. ಜೀವನದಲ್ಲಿ ಪ್ರಾಮಾಣಿಕತೆಗಿಂತ ಐಶ್ವರ್ಯ ದೊಡ್ಡದಲ್ಲ.----ಜಾನ್ ರಸ್ಕಿನ್.
9. ಅರ್ಹರ ಮುಂದೆ ಕೊಂಕಿಲ್ಲದ ತಪ್ಪೊಪ್ಪಿಗೆ , ಮತ್ತೆ ಮಾಡೆನೆಂಬ ಭರವಸೆ ಇವೇ ಪರಿಶುದ್ಧವಾದ ಪಶ್ಚಾತ್ತಾಪ. ----ಮಹಾತ್ಮಾ ಗಾಂಧಿ.
10. ಸೌಂದರ್ಯವೇ ಸತ್ಯ. ಸತ್ಯವೇ ಸೌಂದರ್ಯ. ಬದುಕಿಗೆ ಬೇಕಾಗಿರುವುದು ಇದೇ.---- ಜಾನ್ ಕೀಟ್ಸ್.
11. ತಾಳ್ಮೆ ಕಹಿಯಾದರೂ ಅದರ ಫವ ಸಿಹಿ. ---- ರೂಸೊ.
12. ತೆಗೆದುಕೊಳ್ಳುವುದಕ್ಕಿಂತ ಮೊದಲು ಕೊಡು.ಅದರಿಂದ ನಿನಗೆ ಅತ್ಯಂತ ಒಳ್ಳೆಯದೇ ಸಿಕ್ಕೀತು.----ಸ್ವಾಮಿ ರಂಗನಾಥಾನಂದ.
13. ದುಃಖಿಸಬೇಡಿ.ನೀವು ಕಳೆದುಕೊಂಡದ್ದು ಇನ್ನೊಂದು ರೂಪದಲ್ಲಿ ನಿಮ್ಮೆದುರು ಬಂದೇ ಬರುತ್ತದೆ. ---- ಜಲಾಲುದ್ದೀನ್ ರೂಮಿ.
14. ಅನುಭವವೆಂದರೆ ತಪ್ಪುಗಳನ್ನು ಮಾಡುವುದು ಮತ್ತು ಅದರಿಂದ ಕಲಿಯುವುದು.---- ಬಿಲ್ ಆಕ್ಮನ್.
15. ದಾರಿ ಗೊತ್ತಿರುವವನು , ದಾರಿಯಲ್ಲಿ ನಡೆಯುವವನು ಮತ್ತು ದಾರಿ ತೋರಿಸುವವನೇ ನಿಜವಾದ ನಾಯಕ. ---- ಜಾನ್ ಮ್ಯಾಕ್ಸ್ ವೆಲ್.
16. ಆಡಳಿತ ಕೆಲಸವನ್ನು ಸರಿ ಮಾಡಿಸುತ್ತದೆ.ನಾಯಕತ್ವ ಸರಿಯಾದ ಕೆಲಸವನ್ನು ಮಾಡಿಸುತ್ತದೆ.-----ಪೀಟರ್ ಡ್ರೆಕರ್.
17. ತಪ್ಪುಗಳನ್ನು ಹುಡುಕಬೇಡಿ; ಪರಿಹಾರಗಳನ್ನು ಹುಡುಕಿ. ----ಹೆನ್ರಿ ಫೋರ್ಡ್.
18. ಹುಟ್ಟು ಹಾಕದೆ ಕುಳಿತವನಿಗೆ ಮಾತ್ರ ದೋಣಿಯಲ್ಲಿ ತೂತು ಕೊರೆಯಲು ಸಮಯವಿರುತ್ತದೆ.---- ಜೀನ್ ಪಾಲ್ ಸಾರ್ತ್ರೆ.
19. ನೀವು ಚಟುವಟಿಕೆಯಿಂದ ಇದ್ದಾಗ ಎಲ್ಲ ಕೆಲಸಗಳೂ ಸುಲಭ.ನೀವು ಸೋಮಾರಿಯಾಗಿದ್ದಾಗ ಎಲ್ಲಾ ಕೆಲಸವೂ ಕಷ್ಟ. ----ಸ್ವಾಮಿ ವಿವೇಕಾನಂದ.
20. ನಿಮ್ಮ ಜೀವನದಲ್ಲಿ ಕೆಲವರು ಆಶೀರ್ವಾದದಂತೆ ಬರುತ್ತಾರೆ; ಇನ್ನು ಕೆಲವರು ಪಾಠದಂತೆ ಬರುತ್ತಾರೆ ----ಮದರ್ ತೆರೆಸಾ.
21. ಕಣ್ಣಿದ್ದು ದೂರದೃಷ್ಟಿ ಇಲ್ಲದಿರುವುದು ,ಕುರುಡರಾಗಿರುವುದಕ್ಕಿಂತ ಕೆಟ್ಟದ್ದು.----- ಹೆಲನ್ ಕೆಲ್ಲರ್.
22. ಸುಖದ ದಾಹ ಮನೆಯೊಳಗೆ ಅತಿಥಿಯಂತೆ ಬರುತ್ತದೆ, ಬಳಿಕ ಅತಿಥೇಯನಾಗುತ್ತದೆ.ಕೊನೆಗೆ ಮನೆಯನ್ನೇ ಆಳುತ್ತದೆ.-----ಗಲೀಲ್ ಗಿಬ್ರಾನ್.
23. ಸಾಮಾನ್ಯವಾಗಿ ನಾಳೆ ಎನ್ನುವುದು ಇಡೀ ವಾರದಲ್ಲಿ ಪುರುಸೊತ್ತೇ ಇಲ್ಲದ ದಿನ. -----ಸ್ಪೇನ್ ಗಾದೆ.
24. ಸತ್ಯವನ್ನು ಹುಡುಕಾಡುವವನನ್ನು ನಂಬಿ; ಸತ್ಯವನ್ನು ಕಂಡುಹಿಡಿದವನನ್ನು ಸಂಶಯಿಸಿ.----ಆಂಡ್ರೆ ಗೈಡ್.
25. ಬರಿಹೊಟ್ಟೆಯಲ್ಲಿ ಇರುವವನಿಗೆ ಆಹಾರವೇ ದೇವರು.---- ಮಹಾತ್ಮಾ ಗಾಂಧಿ.

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು