Wednesday, 31 January 2018

Kpsc SDA FDA Model question paper in Kannada medium

1. ಮೈಸೂರಿನಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಕೆ.ಸಿ.ರೆಡ್ಡಿ ನಾಯಕತ್ವದಲ್ಲಿ ಚಳುವಳಿ ನಡೆಯಿತು.ಅದೇ ಅರಮನೆ ಸತ್ಯಾಗ್ರಹ-1947.
2. ಮೈಸೂರಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ. ಮತ್ತು ರಾಜಪ್ರಮುಖರು ಜಯಚಾಮರಾಜ ಒಡೆಯರ್.
3. ಧಾರವಾಡದಲ್ಲಿ 1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಆರ್.ಹೆಚ್. ದೇಶಪಾಂಡೆ ಸ್ಥಾಪಿಸಿದರು.
4. ಆಲೂರು ವೆಂಕಟರಾಯರು ಕರ್ನಾಟಕದ ಸಭಾವನ್ನು ಧಾರವಾಡದಲ್ಲಿ 1916 ರಲ್ಲಿ ಸ್ಥಾಪಿಸಿದರು.
5. 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
6. ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆಯನ್ನು ರಚಿಸಿದವರು ಕುವೆಂಪು.
7. 1920 ರಲ್ಲಿ ಧಾರವಾಡದಲ್ಲಿ ಕರ್ನಾಟಕದ ಮೊದಲ ರಾಜಕೀಯ ಸಮಾವೇಶ ವಿ.ಪಿ.ಮಾಧವರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.
8. ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ಬೆಳಗಾವಿಯಲ್ಲಿ ಸಿದ್ದಪ್ಪ ಕಂಬಳಿಯ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆಯಿತು.
9. 1946 ರಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನ ಬಾಂಬೆಯಲ್ಲಿ ಖೇರ್ ಅಧ್ಯಕ್ಷತೆಯಲ್ಲಿ ನಡೆಯಿತು.
10. ಎಸ್.ನಿಜಲಿಂಗಪ್ಪ ಕರ್ನಾಟಕ ಏಕೀಕರಣ ಮಹಾಸಮಿತಿಯ ಅಧ್ಯಕ್ಷರಾಗಿದ್ದರು,ಅಂದಾನಪ್ಪ ದೊಡ್ಡಮೇಟಿ ಕಾರ್ಯದರ್ಶಿಗಳಾಗಿದ್ದರು.
11. 1947ರ ಕರ್ನಾಟಕ ಏಕೀಕರಣ ಸಮ್ಮೇಳನವು ಕಾಸರಗೋಡಿನಲ್ಲಿ ಆರ್.ಆರ್.ದಿವಾಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
12. ಜೆ.ವಿ.ಪಿ.ಕಮಿಟಿ.1948 ಆಂಧ್ರ ಪ್ರದೇಶ ರಚನೆಗೆ ಮಾತ್ರ ಅನುಮತಿಸಿತು.
13. ಆಂಧ್ರ ಪ್ರದೇಶ ರಚನೆಗೆ ಉಪವಾಸ ಸತ್ಯಾಗ್ರಹ ಮಾಡಿ ನಿಧನರಾದವರು ಪೊಟ್ಟಿ ಶ್ರೀರಾಮುಲು.
14. ಅಂದಾನಪ್ಪ ದೊಡ್ಡಮೇಟಿ ಕರ್ನಾಟಕ ಏಕೀಕರಣಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿದರು.
15. ವಾಂಚೂ ಸಮಿತಿಯ ವರದಿಯಂತೆ 1953 ರಲ್ಲಿ ಬಳ್ಳಾರಿ ಮೈಸೂರಿಗೆ ಸೇರಿತು.
16. SRC ಕಮಿಟಿಯ ಸದಸ್ಯರುಗಳು ಫಜಲ್ ಅಲಿ, H.N .ಕುಂಜ್ರು, ಮತ್ತು K.M.ಫಣಿಕ್ಕರ್.
17. 1956 ರ ನವೆಂಬರ್ 1 ರಲ್ಲಿ ಏಕೀಕೃತ ಮೈಸೂರು ಅಸ್ತಿತ್ವಕ್ಕೆ ಬಂದಿತು.
18. ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದವನ್ನು ಬಗೆಹರಿಸಲು 1965 ರಲ್ಲಿ ಮಹಾಜನ್ ಆಯೋಗವನ್ನು ನೇಮಿಸಲಾಯಿತು.
19. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ್ 1.1973 ರಲ್ಲಿ ನಾಮಕರಣ ಮಾಡಲಾಯಿತು. ಆಗಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು.
20. ವಿಶಾಲ ಏಕೀಕೃತ ಮೈಸೂರಿನ ಪ್ರಪ್ರಥಮ ಮುಖ್ಯ ಮಂತ್ರಿ ನಿಜಲಿಂಗಪ್ಪ. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು