Sunday, 14 January 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಇತಿಹಾಸವನ್ನು ಯಾರು ಬೇಕಾದರೂ ಸೃಷ್ಟಿಸಬಹುದು. ಆದರೆ ಶ್ರೇಷ್ಠ ವ್ಯಕ್ತಿಗಳು ಮಾತ್ರ ಅದನ್ನು ಬರೆಯುತ್ತಾರೆ.-----ಆಸ್ಕರ್ ವೈಲ್ಡ್.
2. ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆಯೇ ಕಲಿಯಬೇಕೆಂದರೆ, ಅದನ್ನು ಮಾಡುತ್ತಲೇ ಕಲಿಯಬೇಕು.-----ಅರಿಸ್ಟಾಟಲ್.
3. ಯಾರಿಗೆ ಯಾರೂ ಇಲ್ಲ ಎನ್ನುವುದೇ ಈ ಜಗತ್ತಿನ ಅತಿದೊಡ್ಡ ರೋಗ.----- ಮದರ್ ತೆರೆಸಾ.
4. ನಮ್ಮ ಕನಸುಗಳೇ ನಾವು ನಿಜವಾಗಿ ಯಾರು ಎನ್ನುವುದನ್ನು ತೋರಿಸಿಕೊಡುತ್ತವೆ.----ಬಾರ್ಬರಾ ಶೆರ್.
5. ತಲೆಕೂದಲಿಗೆ ಬಣ್ಣ ಹಚ್ಚುವುದರಿಂದ ಯೌವನವನ್ನು ತಡೆದಿಟ್ಟುಕೊಳ್ಳಲು ಆಗುವುದಿಲ್ಲ.---- ಖಲೀಫಾ ಅಬೂಬಕರ್.
6. ಬುದ್ಧಿವಂತ ಮನುಷ್ಯನ ತಲೆಯಲ್ಲಿ ಹಣ ಇರುವುದಿಲ್ಲ; ಹೃದಯದಲ್ಲಿ ಹಣ ಇರುತ್ತದೆ.---- ಜೊನಾಥನ್ ಸ್ವಿಫ್ಟ್.
7. ಸಾಮಾನ್ಯ ಮನುಷ್ಯ ಪ್ರಾರ್ಥಿಸುವುದಿಲ್ಲ ; ಕೇವಲ ಬೇಡುತ್ತಾನೆ.----ಜಾರ್ಜ್ ಬರ್ನಾರ್ಡ್.
8. ಕಲೆಯನ್ನು ಶಾಲೆಗಳಲ್ಲಿ ಕಲಿಸಲಾಗುವುದಿಲ್ಲ.ಕಲಾವಿದನಿಗೆ ರಸ್ತೆಗಳೇ ನಿಜವಾದ ಶಾಲೆಗಳು.-----ಆಸ್ಕರ್ ವೈಲ್ಡ್.
9. ಪ್ರತಿಯೊಬ್ಬ ಮಗುವೂ ಒಬ್ಬ ಕಲಾವಿದ. ಆದರೆ ಬೆಳೆಯುತ್ತಾ ಹೋದಂತೆ ಈ ಕಲಾವಿದ ಉಳಿದುಕೊಳ್ಳುತ್ತಾನೆಯೋ ಎನ್ನುವುದಷ್ಟೇ ಪ್ರಶ್ನೆ. ----- ಪಾಬ್ಲೊ ಪಿಕಾಸೊ.
10. ದಾರಿಯಲ್ಲಿ ಬೊಗಳುವ ಎಲ್ಲಾ ನಾಯಿಗಳತ್ತಲೂ ಕಲ್ಲೆಸೆಯುತ್ತಾ ನಿಂತರೆ , ನಿಮ್ಮ ಗುರಿಯನ್ನು ನೀವು ಎಂದಿಗೂ ತಲುಪಲಾರಿರಿ.-----ವಿನ್ ಸ್ಟನ್ ಚರ್ಚಿಲ್.
11. ಪುಸ್ತಕಗಳು ಒಂದೋ ಕನಸುಗಳಾಗಿರುತ್ತವೆ ಅಥವಾ ಖಡ್ಗಗಳಾಗಿರುತ್ತವೆ.----ಅಮಿ ಲೊವೆಲ್.
12. ದೇವರು ಬುದ್ಧಿವಂತ ಆದರೆ ಅಪ್ರಾಮಾಣಿಕ ಅಲ್ಲ. ------ ಆಲ್ಬರ್ಟ್ ಐನ್ ಸ್ಟೀನ್.
13. ಸರ್ಕಾರ ಅಂದ ಮೇಲೆ , ಕುರಿಗಳೂ ಇರಬೇಕು, ಕಟುಕರೂ ಇರಬೇಕು. -----ವಾಲ್ಟೇರ್.
14. ನಿಮ್ಮ ಪ್ರತಿಷ್ಠೆಗಿಂತ ನಿಮ್ಮ ಚಾರಿತ್ರ್ಯಕ್ಕೆ ಗಮನ ಕೊಡಿ.ಚಾರಿತ್ರ್ಯ ಎಂದರೆ ನೀವು ಏನಾಗಿದ್ದೀರೋ ಅದು.ಪ್ರತಿಷ್ಠೆ ಎಂದರೆ ನಿಮ್ಮ ಬಗ್ಗೆ ಬೇರೆಯವರು ಏನು ತಿಳಿದುಕೊಂಡಿದ್ದಾರೋ ಅದು.-----ಜಾನ್ ವೂಡನ್.
15. ಹೂವಿನ ಪರಿಮಳ ಗಾಳಿ ಬಂದ ದಿಕ್ಕಿಗೆ ಮಾತ್ರ ಪಸರಿಸುತ್ತದೆ.ಆದರೆ ಮನುಷ್ಯನ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲೂ ಪಸರಿಸುತ್ತದೆ.-----ಚಾಣಕ್ಯ.
16. ಬಹಳಷ್ಟು ಜನರು ತಮ್ಮ ಕನಸುಗಳನ್ನು ನನಸುಗೊಳಿಸಲು ವಿಫಲರಾಗುತ್ತಾರೆ. ಏಕೆಂದರೆ ಅವರು ಸಾಯಲು ಹೆದರುತ್ತಾರೆ.-----ಲೆಸ್ ಬ್ರೌನ್
17. ಹೆಚ್ಚು ಕಷ್ಟ ಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ. -----ಥಾಮಸ್ ಜಫರ್ಸನ್.
18. ದುಃಖ ನಿಮ್ಮನ್ನು ಆಳವಾಗಿ ಕೊರೆದಷ್ಟೂ ನಿಮ್ಮ ಸಂತೋಷದ ಪ್ರಮಾಣ ಹೆಚ್ಚಾಗುತ್ತದೆ.-----ಖಲೀಲ್ ಗಿಬ್ರಾನ್.
19. ಶಿಕ್ಷಣವಿಲ್ಲದ ಬುದ್ಧಿವಂತ, ಗಣಿಯೊಳಗಿರುವ ಬೆಳ್ಳಿಯಂತೆ.----ಬೆಂಜಮಿನ್ ಫ್ರಾಂಕ್ಲಿನ್.
20. ಅನುಭವವೇ ಅತಿದೊಡ್ಡ ಶಿಕ್ಷಕ.ಅವನು ಮೊದಲು ಪರೀಕ್ಷೆ ಕೊಡುತ್ತಾನೆ, ಬಳಿಕ ಪಾಠ ಮಾಡುತ್ತಾನೆ. ----ವರ್ಮನ್ ಲಾ.
21. ಯಾವ ಮನುಷ್ಯನ ಜ್ಞಾನವೂ ಅವನ ಅನುಭವಕ್ಕಿಂತ ಮುಂದೆ ಹೋಗಲಾರದು.---- ಜಾನ್ ಲಾಕ್.
22. ತಪ್ಪುಗಳಿಂದ ಪಾಠ ಕಲಿಯುವುದಿದ್ದರೆ ಮಾತ್ರ ಹಿಂದೆ ತಿರುಗಿ ನೋಡಿ---ಜಾರ್ಜ್ ವಾಷಿಂಗ್ಟನ್.
23. ಒಂದು ಕ್ಷಣದ ಒಳನೋಟ ಕೆಲವೊಮ್ಮೆ ಇಡೀ ಜೀವನದ ಒಟ್ಟು ಅನುಭವವಾಗುತ್ತದೆ.----ಒಲಿವರ್ ಹೋಮ್ಸ್.
24. ನಮ್ಮ ಹೃದಯದಲ್ಲಿ ಮತ್ತು ಇನ್ನೊಬ್ಬ ಮನುಷ್ಯನಲ್ಲಿ ದೇವರು ಕಾಣಿಸಲಿಲ್ಲ ಎಂದಾದರೆ ಬೇರೆಲ್ಲಿ ದೇವರನ್ನು ಹುಡುಕುತ್ತೀರಿ. ? ---- ಸ್ವಾಮಿ ವಿವೇಕಾನಂದ.
25. ಸರಳತೆಯನ್ನು ಸಾಧಿಸುವುದು ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸ. ಅದು ಅನುಭವದ ಕೊನೆಯ ಮಿತಿ ; ಬುದ್ಧಿವಂತನ ಕೊನೆಯ ಪ್ರಯತ್ನ. ----- ಜಾರ್ಜ್ ಸ್ಯಾಂಡ್.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು