Saturday, 7 July 2018

moral stories in kannada ಕನ್ನಡದ ನೀತಿ ಕತೆಗಳು

*ಮನಸ್ಪೂರ್ವಕವಾಗಿ ಓದಿ:*

ವಯಸ್ಸಾದ ತಂದೆಯನ್ನು ಮಗ ಊರಲ್ಲಿನ ಒಂದು ಪ್ರಸಿದ್ಧ ಹೋಟೆಲಿಗೆ ಊಟಕ್ಕೆಂದು ಕರೆದೊಯ್ದಿದ್ದ. ಹೋಟೆಲ್ ಜನಸಂದಣಿಯಿಂದ ತುಂಬಿತ್ತು. ಮಗ ಹೇಗೂ ಮಾಡಿ ಜಾಗ ಗಿಟ್ಟಿಸಿದ. ಇವರ ಟೇಬಲ್ಲಿನ ಮತ್ತೊಂದು ಭಾಗದಲ್ಲಿ ನವದಂಪತಿಗಳು ಕುಳಿತಿದ್ದರು. ಊಟ ಪ್ರಾರಂಭವಾಯಿತು, ಈ ವ್ಯಕ್ತಿಯ ತಂದೆ ತುತ್ತನ್ನು ಬಾಯಿಗೆ ಇಡುವಾಗ ಕೈ ನಡುಗಿ ಬಿಳಿ ಅಂಗಿಯ ಮೇಲೆ ಚೆಲ್ಲಿ ಹೋಯಿತು. ಎದುರಿಗೆ ಕುಳಿತಿದ್ದ ಯುವಕ,
"ಛೆ! ಇಷ್ಟು ವಯಸ್ಸಾದವರನ್ನು ಯಾಕಾದರೂ ಇಂತಹ ಹೋಟೆಲಿಗೆ ಕರೆದುಕೊಂಡು ಬರಬೇಕು. ಅಂಗಿಯೆಲ್ಲಾ ಕೊಳೆ ಮಾಡಿಕೊಂಡರು ನೋಡಿ. ಹೊರಗೆ ಹೇಗೆ ಕರೆದುಕೊಂಡು ಹೋಗುತ್ತೀರಿ"
ಎಂದು ಕೇಳಿದ ? ಆದರೆ ಈ ಮಾತುಗಳು 'ಕೇಳಿಯೇ ಇಲ್ಲವೇನೋ 'ಎಂಬಂತೆ ಆ ವ್ಯಕ್ತಿ ತಾನೇ ತುತ್ತು ಮಾಡಿ ತನ್ನ ತಂದೆಗೆ ಉಣ್ಣಿಸಿದ. ನಂತರ ವಾಷ್ ರೂಮಿನಲ್ಲಿ ತಂದೆಯ ಅಂಗಿಯ ಕಲೆಯನ್ನು ತಿಕ್ಕಿ ತೊಳೆದು ತನ್ನ ಅಂಗಿಯನ್ನು ತಂದೆಗೆ ಹಾಕಿ, ಆತನ ಅಂಗಿಯನ್ನು ತಾನು ಹಾಕಿಕೊಂಡು ಮೇಲೆ ಕೋಟು ಹಾಕಿಕೊಂಡ. ತಂದೆಯ ಕೆದರಿದ ಕೂದಲನ್ನು ಸರಿಪಡಿಸಿ ಬೆವರಿದ ಮುಖ ಒರೆಸಿ ಬಿಲ್ ಪಾವತಿಸಿ ಹೊರಡುವಷ್ಟರಲ್ಲಿ ರೆಸ್ಟೊರೆಂಟ್ ಗದ್ದಲ ಸ್ವಲ್ಪ ಕಡಿಮೆಯಾಗಿತ್ತು. ಇನ್ನೇನು ಹೊರ ನಡೆಯಬೇಕೆನ್ನುವಾಗ ಆ ಘಟನೆಯನ್ನು ವೀಕ್ಷಿಸಿದ್ದ ಪಕ್ಕದ ಟೇಬಲ್ಲಿನಲ್ಲಿದ್ದ ಓರ್ವ ವ್ಯಕ್ತಿ,
"'ಹಲೋ ಜಂಟಲ್ ಮ್ಯಾನ್ ನೀವೇನೋ ಬಿಟ್ಟು ಹೊರಟಿದ್ದೀರಿ'"
ಎಂದು ಜೋರಾಗಿ ಕೂಗಿದ. ಆ ಮಾತು ಕೇಳಿ ಹೋಟೆಲಲ್ಲಿದ್ದವರ ಚಿತ್ತ ಇವರತ್ತ ನೆಟ್ಟಿತು. 'ಇಲ್ಲ ನಾನೇನು ಬಿಟ್ಟು ಹೋಗಿಲ್ಲವಲ್ಲ' ಎಂದ ಮಗ. ಅದಕ್ಕೆ ಆ ವ್ಯಕ್ತಿ,
'ಮಗನಾದವನು ತನ್ನ ವಯಸ್ಸಾದ ತಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂಬ ಅಮೂಲ್ಯ ಪಾಠವನ್ನು ನಮಗೆ ಬಿಟ್ಟು ಹೊಗುತ್ತಿದ್ದೀರಿ'
ಎಂದ. ಮುಂಚೆ ಕೊಂಕು ನುಡಿದಿದ್ದ
ಆ ಯುವ ದಂಪತಿಗೆ ನಾಚಿಕೆಯಾಗಿ ಕ್ಷಮೆ ಕೇಳಿದರು.
"ನಾನು ಸಣ್ಣವನಿರುವಾಗ ಅಪ್ಪನನ್ನು ಅದೆಷ್ಟು ಗೋಳು ಹೊಯ್ದುಕೊಂಡಿಲ್ಲ, ಆಗೆಲ್ಲಾ ಆತ ಕೋಪಿಸಿಕೊಳ್ಳದೆ ನನ್ನನ್ನು ಮುದ್ದು ಮಾಡಿರಲಿಲ್ವ..? ಈಗ ಅವರು ಮಗು, ನಾನು ತಂದೆ"
ಎಂದು ಹೇಳಿದ. ಅಲ್ಲಿದ್ದವರ ಕಣ್ಣಾಲಿ ತುಂಬಿತು. ಮಗ ತಂದೆಯ ಕೈ ಹಿಡಿದುಕೊಂಡು ಮೆಲ್ಲನೆ ಕಾರಿನತ್ತ ಕರೆದೊಯ್ದ.

ಹೌದು,
ವಯಸ್ಸಾದ ಮೇಲೆ ಮನುಷ್ಯ ಮಗುವಿನಂತಾಗುತ್ತಾನೆ. ಮೊದಲು ತನ್ನ ಮಕ್ಕಳನ್ನು ಕೈ ಹಿಡಿದು ಬೆಳೆಸಿದ ನಮ್ಮ ತಂದೆ, ತಾಯಿಯರನ್ನ ನಾವು ಅವರನ್ನು ಮಕ್ಕಳಂತೆ ನೋಡಿಕೊಂಡಾಗ ಬದುಕಿಗೆ ಒಂದು ಅರ್ಥ..ಮತ್ತೆ ಅವರು ನಮಗೆ ಜನ್ಮ ಕೊಟ್ಟಿದ್ದಕ್ಕೆ ಸಾರ್ಥಕ.!! 💚💚


ನಿಮಗೆ ಎಷ್ಟು ಸಾದ್ಯವೋ ಅಷ್ಟು ಜನಕ್ಕೆ ಶೇರ್ ಮಾಡಿ..

ಕೃಪೆ; ಮಾನವೀಯತೆಯನ್ನ ಎಚ್ಚರಿಸುವವರು. 🍀🍀

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು