Thursday, 14 September 2017

Books list for KAS mains exam in kannada medium by kpsc...ಕ ೆಎಎಸ್ ಮುಖ್ಯ ಪರೀಕ್ಷೆ ಬರೆಯಲು ಸಹಾಯಕವಾದ ಪುಸ್ತಕಗಳು

ಕೆ.ಪಿ.ಎಸ್. ಸಿ ನಡೆಸುವ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಯು ಕೆ.ಎ.ಎಸ್  ಎಂಬ ಹೆಸರಿನಿಂದಲಹೆಸರಿನಿಂದಲೇ ಜನಪ್ರಿಯವಾಗಿದೆ. ಆಗಸ್ಟ್ 20-2017 ರಲ್ಲಿ ನಡೆದ ಪೂರ್ವಭಾವಿ ಪರೀಕ್ಷೆ ಯ ಮುಂದಿನ ಹಂತವಾದ ಮುಖ್ಯ ಪರೀಕ್ಷೆ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮುಖ್ಯ ಅಳಲೆಂದರೆ, ಅಧ್ಯಯನ ಸಾಮಾಗ್ರಿಗಳ ಕೊರತೆ. ಬಹುತೇಕ ಅಭ್ಯರ್ಥಿಗಳು ಕನ್ನಡ ಮಾಧ್ಯಮವನ್ನು ತಮ್ಮ ಬರವಣಿಗೆಯ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಲು ಬಹಳ ಶ್ರಮಿಸುತ್ತಿರುತ್ತಾರೆ. ಆದರೆ ಸ್ವಲ್ಪ ಪರಿಶ್ರಮ ಪಟ್ಟರೆ ಕನ್ನಡ ಮಾಧ್ಯಮದ ಪುಸ್ತಕಗಳ ಸಂಗ್ರಹ ಅಷ್ಟೇನು ಕಷ್ಟದ ಕೆಲಸವಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಮುಖ್ಯ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಗತ್ಯವಾದ ಪುಸ್ತಕಗಳ ಪಟ್ಟಿ ಮಾಡಿ ಈ ಲೇಖನದ ಮೂಲಕ ನೀಡಲಾಗಿದೆ. ಇದೊಂದು ಪರಿಪೂರ್ಣ ಸಂಗ್ರಹವಲ್ಲ. ಆದರೆ ಗರಿಷ್ಠ ಮಟ್ಟದಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಮಾಹಿತಿ ಕ್ರೋಢೀಕರಿಸಲಾಗಿದೆ. ಅದನ್ನು ವಿಭಾಗವಾರು ವಿಂಗಡಣೆ ಮಾಡಿ ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

ಪತ್ರಿಕೆ -1 ಪ್ರಬಂಧ ಬರವಣಿಗೆ.
ಪ್ರಚಲಿತ ವಿಷಯಗಳ ಮೇಲೆ ಎರಡು ಪ್ರಬಂಧ ರಚನೆ ಈ ಪತ್ರಿಕೆ ಒಳಗೊಂಡಿರುತ್ತದೆ. ತಲಾ 125 ಅಂಕದ ಈ ಪ್ರಬಂಧ ಬರವಣಿಗೆಗೆ ಅಭ್ಯರ್ಥಿಗಳಿಗೆ ವಿಷಯದ ಆಳ ಜ್ಞಾನದ ಅವಶ್ಯಕತೆ ಹಾಗು ಪ್ರಬಂಧ ಮಂಡಿಸುವ ಶೈಲಿ ತುಂಬಾ ಮುಖ್ಯವಾಗುತ್ತದೆ. ಈ ಪತ್ರಿಕೆಯ ತಯಾರಿಗೆ ಸಹಾಯಕವಾಗುವ ಅಧ್ಯಯನ ಸಾಮಾಗ್ರಿಗಳೆಂದರೆ.
1-ಸ್ಪರ್ಧಾಚೈತ್ರ ಮಾಸಪತ್ರಿಕೆ.
2-ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ದಿ ಹಿಂದೂ ದಿನಪತ್ರಿಕೆಗಳ ಸಂಪಾದಕೀಯ, ವಿಶೇಷ ಪುರವಣಿಗಳು ಹಾಗು ಪ್ರಚಲಿತ ವಿಷಯಗಳ ಮೇಲೆ ನಡೆದಿರುವ ಚರ್ಚೆ, ವಿಸ್ತ್ರತ ಲೇಖನಗಳು.
3-ಪ್ರಬಂಧ ಮಾದರಿಯನ್ನು ಗ್ರಹಿಸಲು ಸ್ಪರ್ಧಾಚೈತ್ರ ಮತ್ತು ಸ್ಪರ್ಧಾಉನ್ನತಿ ಪ್ರಕಾಶನ ಸಂಸ್ಥೆಗಳು ಹೊರ ತಂದಿರುವ ಪ್ರಬಂಧಗಳು ಎಂಬ ಪುಸ್ತಕಗಳನ್ನು ಗಮನಿಸಬಹುದು.
4-ಯೋಜನಾ ಮಾಸಪತ್ರಿಕೆಯ ಕಳೆದ ಒಂದು ವರ್ಷದ ಸಂಚಿಕೆಗಳನ್ನು ಗಮನಿಸುವುದು ಒಳ್ಳೆಯದು.
ಪತ್ರಿಕೆ- 2 ಸಾಮಾನ್ಯ ಅಧ್ಯಯನ- 
ಭಾಗ-1 ಇತಿಹಾಸ ಹಾಗು ಸಾಂಸ್ಕೃತಿಕ ಪರಂಪರೆ  (ಭಾರತ ಮತ್ತು ಕರ್ನಾಟಕ) 
●ಆಧುನಿಕ ಭಾರತದ ಇತಿಹಾಸ- ಬಿಪಿನ್ ಚಂದ್ರ, ಕನ್ನಡಕ್ಕೆ ಹೆಚ್. ಎಸ್. ಗೋಪಾಲ ರಾವ್. 
●ಸಮಗ್ರ ಭಾರತದ ಇತಿಹಾಸ- ಕೆ.ಎನ್. ಎ.
●ಸಮಗ್ರ ಕರ್ನಾಟಕದ ಇತಿಹಾಸ -ಕೆ. ಎನ್. ಎ.
●ಸಮಗ್ರ ಭಾರತದ ಇತಿಹಾಸ- ಕೆ.ಸದಾಶಿವ 
●ಕರ್ನಾಟಕದ ಸಂಕ್ಷಿಪ್ತ ಇತಿಹಾಸ- ಡಾ.ಸೂರ್ಯ ನಾಥ್ ಕಾಮತ್. 




●ಭಾರತದ ಇತಿಹಾಸ- ಮಾಲಿ ಮದ್ದಣ 
●ಕರ್ನಾಟಕ ಕೈಪಿಡಿ- ಕರ್ನಾಟಕ ಗೆಜೆಟಿಯರ್ ಇಲಾಖೆ. 
●ಕರ್ನಾಟಕ ಸಂಸ್ಕೃತಿ ಸಮೀಕ್ಷೆ- ಡಾ.ಎಚ್. ತಿಪ್ಪೇರುದ್ರಸ್ವಾಮಿ. 
ಭಾಗ-2---ಸಾಮಾಜಿಕ ಮತ್ತು ರಾಜಕೀಯ ಗ್ರಹಿಕೆ.
●ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ. 
●ಭಾರತ ಸರ್ಕಾರ ಮತ್ತು ರಾಜಕೀಯ- ಹೆಚ್. ಎಂ. ರಾಜಶೇಖರ್. 
●ಇಂಡಿಯನ್ ಪಾಲಿಟಿ- ಟಿ
ಡಿ.ದೇವೇಗೌಡ. 
●ಪ್ರಥಮ ಮತ್ತು ದ್ವಿತೀಯ ಪಿ. ಯು. ಸಿ.ಸಮಾಜಶಾಸ್ತ್ರ ಪಠ್ಯಪುಸ್ತಕಗಳು. 
●ಕರ್ನಾಟಕ ಆರ್ಥಿಕ ಸಮೀಕ್ಷೆ. 
●ಸಾರ್ವಜನಿಕ ಆಡಳಿತ- ಹಾಲಪ್ಪ. 
●ಭಾರತೀಯ ಸಮಾಜ ಅಧ್ಯಯನ- ಕೆ.ಭೈರಪ್ಪ. 

ಭಾಗ- 3 ಭಾರತದ ಆರ್ಥಿಕತೆ, ಯೋಜನೆ,ಗ್ರಾಮೀಣ ಅಭಿವೃದ್ಧಿ, ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ, ವ್ಯಾಖ್ಯಾನ. 
●ಒಂದು ವರ್ಷದ ಯೋಜನಾ ಮತ್ತು ಕುರುಕ್ಷೇತ್ರ ಮಾಸಪತ್ರಿಕೆ. 
●ಕರ್ನಾಟಕ ವಾರ್ತಾ ಇಲಾಖೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಮಾಸಪತ್ರಿಕೆ. 
●ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ಅರ್ಥಶಾಸ್ತ್ರ ಪಠ್ಯಪುಸ್ತಕಗಳು. 
●ಭಾರತದ ಆರ್ಥಿಕ ವ್ಯವಸ್ಥೆ- ಹೆಚ್ ಆರ್ ಕೆ.
●ಭಾರತದ ಆರ್ಥಿಕ ಸಮೀಕ್ಷೆ. -ಭಾರತ ಸರ್ಕಾರ 
●ಕರ್ನಾಟಕ ಆರ್ಥಿಕ ಸಮೀಕ್ಷೆ- ಕರ್ನಾಟಕ ಸರ್ಕಾರ.
●ಪಂಚಾಯತ್ ರಾಜ್ ಕೈಪಿಡಿ- ಕರ್ನಾಟಕ ಸರ್ಕಾರ.
●ಕರ್ನಾಟಕದ ಆರ್ಥಿಕ ಅಭಿವೃದ್ಧಿ- ನೇ.ತಿ.ಸೋಮಶೇಖರ್. 
●ಗ್ರಾಮೀಣ ಅಭಿವೃದ್ಧಿ- ಹೆಚ್. ಆರ್. ಕೆ. 



ಪತ್ರಿಕೆ- -3
ಭಾಗ---1ಭೌತಿಕ ಲಕ್ಷಣಗಳು ಹಾಗು ನೈಸರ್ಗಿಕ ಸಂಪನ್ಮೂಲಗಳು. 
●ಪ್ರಾಕೃತಿಕ ಭೂಗೋಳ ಶಾಸ್ತ್ರ ದ ಮೂಲತತ್ವಗಳು- ಡಾ.ರಂಗನಾಥ. 
●ಕರ್ನಾಟಕದ ಪ್ರಾದೇಶಿಕ ಭೂಗೋಳ ಶಾಸ್ತ್ರ- ಡಾ.ರಂಗನಾಥ. 

●ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳ ಶಾಸ್ತ್ರ- ಡಾ.ರಂಗನಾಥ. 
●ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ಭೂಗೋಳ ಶಾಸ್ತ್ರ ಪಠ್ಯಪುಸ್ತಕಗಳು. 



ಭಾಗ- --2ಭಾರತದ ಸಂವಿಧಾನ ಅವಲೋಕನ/ ಪಕ್ಷಿನೋಟ 

ಭಾರತದ ಸರ್ಕಾರ ಮತ್ತು ರಾಜಕೀಯ- ಹೆಚ್. ಎಂ. ರಾಜಶೇಖರ್. 
●ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ. 

●ಇಂಡಿಯನ್ ಪಾಲಿಟಿ- ಟಿ. ಡಿ.ದೇವೇಗೌಡ. 
●ಭಾರತದ ಸಂವಿಧಾನ- ಸರ್ಕಾರಿ ಪಠ್ಯಪುಸ್ತಕ ಮುದ್ರಣಾಲಯ.


ಭಾಗ- --3 
ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ, ಅಂತರರಾಷ್ಟ್ರೀಯ ಸಂಬಂಧಗಳು. 
●ಆಡಳಿತಾತ್ಮಕ ಸಿದ್ದಾಂತ- ಎನ್. ಹಾಲಪ್ಪ. 
●ಭಾರತೀಯ ಆಡಳಿತ- ಎನ್.ಹಾಲಪ್ಪ. 



ಪತ್ರಿಕೆ- -4 ಸಾಮಾನ್ಯ ಅಧ್ಯಯನ 
ಭಾಗ- ----1 
ಭಾರತದ ಬೆಳವಣಿಗೆ ಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಪಾತ್ರ ಮತ್ತು ಪ್ರಭಾವ, ಸಾರ್ವಜನಿಕ ರಂಗದಲ್ಲಿ ಮಾಹಿತಿ ತಂತ್ರಜ್ಞಾನ. 
●ವಿಜ್ಞಾನ ಮತ್ತು ತಂತ್ರಜ್ಞಾನ- ಜಿ.ಹರಿಪ್ರಸಾದ


●ವಿಜ್ಞಾನ ಮತ್ತು ತಂತ್ರಜ್ಞಾನ- ಸ್ಪರ್ಧಾಸ್ಪೂರ್ತೀ ಪ್ರಕಾಶನ ಭಾಗ- --2 
ನೈಸರ್ಗಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ಸಂಸ್ಕೃತಿ. ಆರೋಗ್ಯ ಮತ್ತು ನೈರ್ಮಲ್ಯ ದಲ್ಲಿ ಉನ್ನತಿ ಮತ್ತು ಆಧುನಿಕ ಪ್ರವೃತ್ತಿ.
●ನವಕರ್ನಾಟಕ ಪ್ರಕಾಶನದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಪುಸ್ತಕಗಳು..ಉದಾಹರಣೆಗೆ ಪರಿಸರ ಅಧ್ಯಯನ, ಪರಮಾಣು ನ್ಯೂಕ್ಲಿಯಸ್, ಜೈವಿಕ ತಂತ್ರಜ್ಞಾನ, ಇಂಧನಗಳು, ನ್ಯಾನೋಪ್ರಪಂಚ ಇತ್ಯಾದಿ. 



ಭಾಗ- -3 
ಪರಿಸರ ಮತ್ತು ಪರಿಸರ ವಿಜ್ಞಾನದಬೆಳವಣಿಗೆಯಲ್ಲಿರುವ ಸವಾಲುಗಳು ಹಾಗು ಅದಕ್ಕೆ ಸಂಬಂಧಪಟ್ಟ ಪ್ರಮುಖ ಅಂಶಗಳು. 
●ಪರಿಸರ ಅಧ್ಯಯನ- ಕೆ.ಭೈರಪ್ಪ 
●ಪರಿಸರ ಅಧ್ಯಯನ- ಚಾಣಕ್ಯ ಪ್ರಕಾಶನ 
●ಪರಿಸರ ಅಧ್ಯಯನ- ಡಾ.ರಂಗನಾಥ ಮತ್ತು ಎ.ಎನ್. ಸೋಮಶೇಖರ್. 
●ಪರಿಸರ ಮತ್ತು ಜೀವಿ ಪರಿಸರ ವಿಜ್ಞಾನ- ವಿನೋದ ಕುಮಾರ್ ಚೌಹಾಣ್. 


●ಪರಿಸರ ಶಾಸ್ತ್ರ ಮತ್ತು ಪರಿಸರ ಅಧ್ಯಯನ- ಅಝ್ರಾ ಪರ್ವೀನ್. ಆರ್.ಶೇಖ್ 

ಪತ್ರಿಕೆ- --5 
ಸಾಮಾನ್ಯ ಅಧ್ಯಯನ 
ನೀತಿ. ಸಮಗ್ರತೆ, ಪ್ರವೃತ್ತಿ/ ಯೋಗ್ಯತೆ
●ನೈತಿಕತೆ, ಸಮಗ್ರತೆ, ಅಭಿಕ್ಷಮತೆ- ಪರಶುರಾಮ ಕಟ್ಟೀಮನಿ..ಸ್ಪರ್ಧಾಚೈತ್ರ ಪ್ರಕಾಶನ 
●ನೈತಿಕತೆ- ಸ್ಪರ್ಧಾಉನ್ನತಿ ಪ್ರಕಾಶನ 




ಮತ್ತು ಪತ್ರಿಕೆ 6ಕ್ಕೆ ನಿಮ್ಮ ನೆಚ್ಚಿನ ವಿಷಯಗಳ ಆಯ್ಕೆ ಮಾಡಿಕೊಳ್ಳಿ. 
ನಿಮ್ಮ ಸಲಹೆ ಅಭಿಪ್ರಾಯಗಳಿಗೆ ಸ್ವಾಗತ. 
ಪೂರ್ಣಿಮ ವೇದವ್ಯಾಸ್.


1 comment:

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು