ಇತ್ತೀಚೆಗೆ ಪ್ರತಿ ವರ್ಷವೂ ಕೆ. ಪಿ.ಎಸ್. ಸಿ. ವಿವಿಧ ಇಲಾಖೆಗಳ ಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಮೊದಲಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದೆ.
ಸರ್ಕಾರಿ ಹುದ್ದೆ ಪಡೆಯುವುದು ಇಂದಿನ ಬಹುತೇಕ ಯುವ ಜನರ ಕನಸು.. ಅದರಲ್ಲಿ ಈ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆ ಯಾಗಲು ಬಹುತೇಕ ಸ್ಪರ್ಧಾರ್ಥಿಗಳು ಕನಸು ಕಾಣುತ್ತಾರೆ ಜೊತೆಗೆ ಪರಿಶ್ರಮ ಪಡುತ್ತಾರೆ..ಆದರೆ ಯಶಸ್ಸು ಎಂಬುದು ಒಂದು ತಪಸ್ಸು. ಅದರಲ್ಲಿ ಅಂತಿಮ ಗುರಿ ತಲುಪಲು ಕನಸಿನೊಂದಿಗೆ ಕಠಿಣ ಪರಿಶ್ರಮ, ಛಲ ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.. ಹಾಗೆಯೇ ಅತಿಯಾದ ಆತ್ಮವಿಶ್ವಾಸವೂ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತದೆ.ಆದುದರಿಂದ ಅಭ್ಯರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಅನುಸರಿಸಬೇಕಾದ ಕೆಲವೊಂದು ಸಲಹೆಗಳನ್ನು ಹಾಗು ಅಭ್ಯಸಿಸಬೇಕಾದ ಪುಸ್ತಕಗಳ ಮಾಹಿತಿ ನೀಡುವುದು ಈ ಲೇಖನದ ಉದ್ದೇಶ.
ಪರೀಕ್ಷೆಗೆ ತಯಾರಾಗಲು ಸಲಹೆಗಳು .
○ಮೊದಲನೆಯ ಪ್ರಮುಖ ಅಂಶವೆಂದರೆ ಪಠ್ಯಕ್ರಮವನ್ನು ಸಮಗ್ರ ವಾಗಿ ಅಧ್ಯಯನ ಮಾಡುವುದು. ಇದರಿಂದ ಯಾವ ಯಾವ ವಿಷಯಗಳ ಮೇಲೆ ಗಮನಹರಿಸಬೇಕು ಯಾವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಯುತ್ತದೆ. ಸಾಧ್ಯವಾದರೆ ಸಿಲಬಸ್ ನ ಒಂದು ಪ್ರಿಂಟ್ ಕೊಂಡು ಆಗ್ಗಾಗ್ಗೆ ಗಮನಿಸುವುದು ಒಳ್ಳೆಯದು.
○ ಎರಡನೆಯದಾಗಿ ಪರೀಕ್ಷೆಯ ತಯಾರಿಗೆ ಸಹಾಯಕವಾಗುವ ಅಧ್ಯಯನ ಸಾಮಾಗ್ರಿಗಳ ಸಂಗ್ರಹ ಮಾಡುವುದು . ಅಧ್ಯಯನ ಸಾಮಾಗ್ರಿಗಳ ಸಂಗ್ರಹ ಮಾಡುವುದು ಅಷ್ಟೇನು ಕಷ್ಟದ ಕೆಲಸವಲ್ಲ ಹಾಗೆಯೇ ಅತಿ ಸುಲಭದ ಕೆಲಸವೂ ಅಲ್ಲ. ಇದಕ್ಕೆ ಮುಖ್ಯವಾದ ಅಂಶವೆಂದರೆ ಸುಲಭವಾಗಿ ಅರ್ಥವಾಗುವ ಹಾಗೂ ಉಪಯುಕ್ತವಾದ ಪುಸ್ತಕಗಳನ್ನು ಸಂಗ್ರಹ ಮಾಡುವುದು ಮುಖ್ಯ. ಯಾರೋ ಹೇಳಿದರೆಂದು ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಪುಸ್ತಕಗಳನ್ನು ಕೊಳ್ಳುವ ಬದಲು ಪಠ್ಯ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿ, ಪುಸ್ತಕಗಳ ನ್ನು ಕೊಳ್ಳಬೇಕು.
○ಮೂರನೆಯದಾಗಿ ಸ್ವಂತ ಟಿಪ್ಪಣಿಗಳನಟಿಪ್ಪಣಿಗಳನ್ನು ತಯಾರಿಸಿಕೊಳ್ಳುವುದು ಮುಖ್ಯ. ಇದರಿಂದ ಪುನರಾವರ್ತಿಸುವ ಸಮಯದಲ್ಲಿ ಓದಿದ ವಿಷಯಗಳ ಮೇಲೆ ಹಿಡಿತ ದೊರೆಯುತ್ತದೆ.
○ನಾಲ್ಕನೆಯದಾಗಿ ಓದಲು ಒಂದು ಸೂಕ್ತವಾದ ವೇಳಾಪಟ್ಟಿ ತಯಾರಿಸಿಕೊಳ್ಳಬೇಕು. ನಿಮಗೆ ಸುಲಭವಾಗಿ ಅರ್ಥವಾಗುವ ವಿಷಯಗಳ ಅಧ್ಯಯನ ಕ್ಕೆ ಕಡಿಮೆ ಅವಧಿಯನ್ನು ಕಠಿಣ ಪರಿಶ್ರಮ ಬೇಡುವ ವಿಷಯಗಳ ಅಧ್ಯಯನ ಕ್ಕೆ ಹೆಚ್ಚು ಸಮಯ ಮೀಸಲಿಡಬೇಕು.
○ಐದನೆಯ ಅಂಶವೆಂದರೆ ಪ್ರತಿದಿನ ವಾರ್ತಾ ಪತ್ರಿಕೆಗಳಲ್ಲಿ ಬರುವ ಪ್ರಚಲಿತ ವಿಷಯಗಳ ಮೇಲೆ ಟಿಪ್ಪಣಿಗಳನ್ನು ತಯಾರಿಸಿಕೊಳ್ಳಬೇಕು.ಇದರಿಂದ ನಿಮ್ಮ ಪರೀಕ್ಷೆಯ ತಯಾರಿಗೆ ಬಹಳ ಉಪಯುಕ್ತವಾದ ಮಾಹಿತಿ ದೊರೆಯುತ್ತದೆ. ಇದಕ್ಕಾಗಿ ಪ್ರತಿದಿನ ಎರಡು ವೃತ್ತಪತ್ರಿಕೆ ಯ ಅಧ್ಯಯನ ಅಗತ್ಯ.ಪ್ರಜಾವಾಣಿ ಹಾಗು ಕನ್ನಡ ಪ್ರಭ ಪತ್ರಿಕೆ ಈ ನಿಟ್ಟಿನಲ್ಲಿ ಉಪಯುಕ್ತವಾದ ಮಾಹಿತಿ ಒದಗಿಸುತ್ತವೆ ಎನ್ನಬಹುದು. ಪ್ರಜಾವಾಣಿ ಪತ್ರಿಕೆಯ ಸಹಪಾಠಿಯೊಬ್ಸಹಪಾಠಿ ಪುರವಣಿಗಳು ಉಪಯುಕ್ತವಾದ ಮಾಹಿತಿ ಒದಗಿಸುತ್ತದೆ.

No comments:
Post a Comment