ಅಡುಗೆ ಮನೆಯಲ್ಲಿ ದೊರೆಯುವ ಕೆಲವು ವಸ್ತುಗಳು ಸೌಂದರ್ಯ ವೃದ್ಧಿಯಲ್ಲಿ ಅತೀ ಪ್ರಮುಖ ಪಾತ್ರ ವಹಿಸುತ್ತವೆ.
ಅವುಗಳಲ್ಲಿ ಮೊಸರು ಮತ್ತು ಅರಿಶಿನ ಅತಿ ಮುಖ್ಯ ಪಾತ್ರ ವಹಿಸುತ್ತವೆ.
ಮೊಸರಿನ ಪೇಸ್ ಫ್ಯಾಕ್
●●●●●●●●●●●●●
ಬೇಕಾಗುವ ಸಾಮಗ್ರಿಗಳು
● ತಾಜಾ ಮೊಸರು 4 ಚಮಚ
● ಕಸ್ತೂರಿ ಅರಿಶಿಣ 1 ಚಮಚ
● ಕಡಲೆ ಹಿಟ್ಟು 2 ಚಮಚ
♤♤♤♤♤♤♤♤♤♡
ತಯಾರಿಸುವ ವಿಧಾನ
ಮೊಸರು , ಕಡಲೆ ಹಿಟ್ಟು ಮತ್ತು ಅರಿಶಿನ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
ಅದನ್ನು ಸ್ವಚ್ಛಗೊಳಿಸಿದ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ.
ನಂತರ ಉಳಿದ ಪೇಸ್ಟ್ ಅನ್ನು ಒಂದು ಪದರ ಮುಖಕ್ಕೆ ಹಚ್ಚಿ.
ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ಮುಖ ತೂಳೆಯಿರಿ.
ಇದು ಒಣ ತ್ವಚೆಗೆ ಬಹಳ ಉಪಯುಕ್ತವಾಗಿದ್ದು ಮುಖದ ಕಲೆಗಳು ಕಡಿಮೆಯಾಗುತ್ತವೆ.
ಜೊತೆಗೆ ಗೌರವರ್ಣ ಮೂಡುತ್ತದೆ.
No comments:
Post a Comment