Tuesday, 14 November 2017

carrot face pack ಕ್ಯಾರೆಟ್ ಪೇಸ್ ಫ್ಯಾಕ್

ಪ್ರತಿಯೊಂದು ಮನೆಯಲ್ಲಿಯೂ ಸುಲಭವಾಗಿ ದೊರೆಯುವ ಕೆಲವು ವಸ್ತುಗಳನ್ನು ಬಳಸಿ ಮಹಿಳೆ ತನ್ನ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು.
ಅದಕ್ಕೆ ಉತ್ತಮ ಉದಾಹರಣೆ ಈ ಕೆಳಗಿನ ಸರಳ ಹಾಗೂ ಪರಿಣಾಮಕಾರಿ ಪೇಸ್ ಫ್ಯಾಕ್.

ಬೇಕಾಗುವ ಸಾಮಗ್ರಿಗಳು
♤ ಕ್ಯಾರೆಟ್ ತುರಿ ಒಂದು ಕಪ್
♤ ಎರಡು ಚಮಚ ಜೇನುತುಪ್ಪ
■■■■■■■■
ಕ್ಯಾರೆಟ್ ತುರಿ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
ಅದನ್ನು ಸ್ವಚ್ಛಮಾಡಿದ ಮುಖಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ.
ಐದು ನಿಮಿಷದ ಮಸಾಜ್ ನಂತರ ಉಳಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ.
ನಂತರ ತಣ್ಣನೆಯ ನೀರಿನಿಂದ ಮುಖ ತೊಳೆದು ಅದನ್ನು ಸಹಜವಾಗಿ ಒಣಗಲು ಬಿಡಿ.
■■■■■■■■■
ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಮುಖದ ಒಣ ಚರ್ಮ ಹೋಗಿ ಕಪ್ಪು ಕಲೆಗಳು ಕಡಿಮೆಯಾಗಿ ಮುಖ ಕಾಂತಿಯುತವಾಗಿ ನಳನಳಿಸುತ್ತದೆ.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು