ಒತ್ತಡವಿಲ್ಲದ ಉದ್ಯೋಗವಿಲ್ಲ ,
ನಷ್ಟವಿಲ್ಲದ ವ್ಯಾಪಾರವಿಲ್ಲ ,
ಕಷ್ಟವಿಲ್ಲದ ವ್ಯವಸಾಯವಿಲ್ಲ ,
ನೋವಿಲ್ಲದ ಸಂಸಾರವಿಲ್ಲ ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ ,
ಇವೆಲ್ಲವನ್ನೂ ಜಯಸುವುದೇನೇ
"ಜೀವನ"
*"ಚಂದ್ರಗುಪ್ತ ಕೇಳುತ್ತಾನೆ"*
*"ಎಲ್ಲವೂ ಹಣೆಬರಹದಲ್ಲಿ ಬರೆದಿದ್ದಾರೆ ಅಂದ ಮೇಲೆ ಪ್ರಯತ್ನ ಪಟ್ಟು ಫಲವೇನು"?*
*"ಚಾಣಕ್ಯ ಉತ್ತರಿಸುತ್ತಾನೆ"*
*"ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ"...*
*"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"...*✍
*ಎಷ್ಟೊಂದು ಅರ್ಥಗರ್ಭಿತ ಮಾತು*
👉ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ….
ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ*
ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ...
- *ತಿಳಿದವರು ಹೇಳಿದ ಅಳಿಯದ ಮಾತು*
*"ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಲ್ಲ,*
*ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ*
*ಯಾಕೆಂದರೆ*
*ಸತ್ತ ಮೇಲೆ ಹೆಗಲು ಕೊಡುವವರು ಅವರೆ...*
*ಶ್ರೀಮಂತರು ನೇರವಾಗಿ* *ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"*
*"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ".🙏🏻*
*ಪ್ರಾಮಾಣಿಕ ಸಂಬಂಧಗಳು ಶುದ್ಧ ನೀರಿದ್ದಂತೆ. ವಾಸನೆ, ಬಣ್ಣ, ಆಕಾರಗಳಿಲ್ಲದಿದ್ದರೂ ಜೀವನಕ್ಕೆ ಅತೀ ಅವಶ್ಯ. ಕಲುಷಿತವಾಗದಂತೆ ನೋಡಿಕೊಳ್ಳೋಣ*
*ವೈರಿಯನ್ನು ಕೊಲ್ಲಬೇಕಾದರೆ ಅವನ ತಲೆಯನ್ನು ತೆಗೆಯಬೇಕಾದ ಅಗತ್ಯವಿಲ್ಲ!*
*ನಮ್ಮ ತಲೆಯಿಂದ ಅವನನ್ನು ತೆಗೆದರೆ ಸಾಕು!!😬*
*ಸಫಲತೆಯು ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸಿದರೆ ಸೋಲು ನಿನಗೆ ಜಗತ್ತನ್ನು ಪರಿಚಯಿಸುತ್ತದೆ. ಬದುಕಿನ ದಾರಿಯಲ್ಲಿ ಭರವಸೆ ಕಳೆದುಕೊಂಡು ಇದೇ ಕೊನೆ ಎಂದುಕೊಂಡರೆ ಭಗವಂತ ನಕ್ಕು ನುಡಿಯುತ್ತಾನೆ..." ಇದು ಬರೀ ಒಂದು ತಿರುವಷ್ಟೆ...ಕೊನೆಯಲ್ಲ" ಯಾವಾಗಲೂ ಸಂತಸದಿಂದಿರಿ.*
ಯಾವುದನ್ನೂ ಹಗುರವಾಗಿ ಭಾವಿಸಬಾರದೂ ಎಲ್ಲದಕ್ಕೂ ಒಂದು ಕಾಲ ಅಂತ ಇದೆ...
ಸಮಯ ಬಂದಾಗ ತಲೆಕೆಳಗೆ ಹಾಕಿ ನೇತಾಡುವ ಬಾವಲಿ ಕೂಡ ಎಲ್ಲರನ್ನೂ ಒಮ್ಮೆಗೆ ಮೇಲೆಕೆಳಗೆ ಮಾಡಬಲ್ಲದು🦇🤣😛
*ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು*
ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*
💐 *" ಅನುಮಾನ " ಮತ್ತು "ಅವಮಾನ "
ಬರೀ ಒಂದಕ್ಷರ ವ್ಯತ್ಯಾಸವಿರುವ
ಈ ಪದಗಳಿಗೆ ಸಾವಿರಾರು ಹೃದಯಗಳನ್ನು
ಛಿದ್ರ ಮಾಡುವಷ್ಟು "ಶಕ್ತಿ" ಇದೆ.. ಈ ಎರಡು ಪದಗಳು ನಮ್ಮ ಜೀವನದಲ್ಲಿ ಬಾರದಂತೆ ನೋಡಿಕೊಳ್ಳಬೆಕು.✍ *💐
*ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ.*
*ಆದರೆ........*
*ಬರೆದಿಡುವಂತಹ ಜೀವನ ಮಾಡಲು ಸಾಧ್ಯಇದೆ....*
ನಾವು ಚಿಕ್ಕವರಿದ್ದಾಗ ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!
*ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ ಒಂದು ದುಡಿಮೆ ಇನ್ನೊಂದು ತಾಳ್ಮೆ. ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ 'ಬದುಕು ಕಲಿಸುವ ಪಾಠ'.*
No comments:
Post a Comment