Saturday, 7 July 2018

ನೀತಿ ಕತೆಗಳು ಕನ್ನಡ ನೀತಿ ಕತೆಗಳು ಕನ್ನಡ ಸಣ್ಣ ಕತೆಗಳು ನೀತಿ ಕತೆಗಳು kannada neethi kathegalu Kannada nithi kathegalu

*ಸ್ವಾರಸ್ಯವಾದ ಕಥೆ*                               

*ತೋಟದ ದಂಡೆಗುಂಟ ಹಚ್ಚಿದ ಮಾವಿನ ಮರಗಳಲ್ಲಿ ಆ ವರ್ಷ ಸಾಕಷ್ಟು ಕಾಯಿಗಳಾಗಿದ್ದವು. ಮಾಲಿಕನು ಅವುಗಳನ್ನೆಲ್ಲ ಕೋಣೆಯ ಒಣಹುಲ್ಲು ಹಾಸಿನ ಮೇಲೆ ಹರವಿ ಮೇಲೆ ಒಂದಿಷ್ಟು ಹುಲ್ಲು ಹಾಕಿ ಕಂಬಳಿ, ಗೋಣಿಚೀಲ ಹೊದಿಸಿ ಹಣ್ಣು ಮಾಡಲೆಂದು ಇಟ್ಟನು. ವಾರದ ನಂತರ ಕೋಣೆಯೊಳಗಿಂದ ಮಾವಿನ ಹಣ್ಣಿನ ಪರಿಮಳ ಬರಲಾರಂಭಿಸಿತು. ಅವುಗಳಲ್ಲಿ ಎಂಟ್ಹತ್ತು ಕಾಯಿಗಳು ಒಳ್ಳೆ ಹಣ್ಣುಗಳಾಗಿ ತಿನ್ನಲಿಕ್ಕೆ ತಯಾರಾಗಿದ್ದವು. ಉಳಿದವು ಸ್ವಲ್ಪ ಸ್ವಲ್ಪ ಹಣ್ಣುಗಳಾಗಿ ಕೆಲ ದಿನಗಳಲ್ಲಿ ಮಾಗಲಿದ್ದವು. ಅಷ್ಟರಲ್ಲಿ ಮಾಲಿಕನ ದೃಷ್ಟಿ ಒಂದು ಮೂಲೆಯ ಕಡೆಗೆ ಹೊರಳಿತು. ಅಲ್ಲಿ ನಾಲ್ಕೈದು ಕಾಯಿಗಳು ಸಂಪೂರ್ಣ ಹಣ್ಣುಗಳಾಗಿ ಮೇಲ್ಭಾಗದಲ್ಲಿ ಕೊಳೆಯಲಾರಂಭಿಸಿದ್ದವು.* ಅವನು ಆ ಹಣ್ಣುಗಳನ್ನು ಮಾತ್ರ ಅಲ್ಲಿಂದ ಹೊರತೆಗೆದು-
*‘ಇವಷ್ಟನ್ನು ಇಂದು ತಿಂದರಾಯಿತು. ಹೇಗೂ ನಾಳೆಯಿಂದ ಒಳ್ಳೆಯ ಹಣ್ಣುಗಳು ಸಿಗುತ್ತವೆ’ ಎಂದೆಣಿಸಿ ಮೇಲಿನ ಕೊಳೆತ ಭಾಗವನ್ನು ಚಾಕುವಿನಿಂದ ತೆಗೆದು ಅರ್ಧರ್ಧ ಭಾಗವನ್ನು ತಿಂದನು*.
ಮರುದಿನ ಮತ್ತೆ ಐದಾರು ಹಣ್ಣುಗಳು ತಯಾರಾಗಿದ್ದವು. *ಆದರೆ ನಿನ್ನೆ ತಿನ್ನಲು ತಯಾರಾಗಿದ್ದ ಆ ಎಂಟ್ಹತ್ತು ಹಣ್ಣುಗಳು ಇಂದು ಅರ್ಧ ಕೊಳೆತಿದ್ದವು. ಆಗ ಅವುಗಳನ್ನು ಬಿಸಾಡಲು ಮನಸ್ಸಾಗದೆ ಮತ್ತೆ ಅವುಗಳನ್ನಷ್ಟೇ ಹೊರಗೆ ತೆಗೆದು ಅರ್ಧಭಾಗವನ್ನು ತಿಂದ.*
*ಮೂರನೇ ದಿನವೂ ಇದೇ ಪರಿಯಾಯಿತು. ಅಂತೂ ಅವನು ಆ ಎಲ್ಲ ಹಣ್ಣುಗಳನ್ನು ಅರ್ಧಕೊಳೆತ ಸ್ಥಿತಿಯಲ್ಲೇ ತಿಂದ*.
*ನಿಜ ಹೇಳಬೇಕೆಂದರೆ ಅವುಗಳನ್ನು ಕೊಳೆಯಿಸಿಯೇ ತಿಂದ*. ಒಂದು ವೇಳೆ ಮೊದಲನೇ ದಿನವೇ ಧೈರ್ಯಮಾಡಿ, ಯೋಚಿಸಿ ಕೊಳೆತ ಹಣ್ಣುಗಳನ್ನು ಬಿಸಾಡಿ ಒಳ್ಳೆಯ ಹಣ್ಣುಗಳನ್ನು ತಿನ್ನಲಾರಂಭಿಸಿದ್ದರೆ *ಪ್ರತಿದಿನವೂ ಒಳ್ಳೆಯ ಹಣ್ಣುಗಳನ್ನೇ ಅವನು ತಿನ್ನಬಹುದಾಗಿತ್ತಲ್ಲವೇ?*

ನಮ್ಮಲ್ಲಿಯೂ ಬಹುತೇಕರು ಇದೇ ರೀತಿ ಜೀವನ ವ್ಯಯಿಸುತ್ತೇವೆ.
*ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ.* ಸುಖವೆನ್ನುವುದು ಬರೀ ಮರೀಚಿಕೆಯಾಗುತ್ತದೆ.
*ಊಟ ಆರಂಭಿಸಿದ ತಕ್ಷಣ ತಂಗುಳ ಏನಾದರೂ ಉಳಿದಿದ್ದರೆ ತೀರಿಸಿ ಆ ಮೇಲೆ ಹಸಿವೆಯುಳಿದಿದ್ದರೆ ಬಿಸಿ ಅನ್ನ ಉಣ್ಣುತ್ತೇವೆ*.
 *ಆ ಉಳಿದ ಬಿಸಿ ಅನ್ನವನ್ನು ಮತ್ತೆ ಮರುದಿನ ತಿನ್ನುತ್ತೇವೆ* ಯಾರಾದರೂ ಉಡುಗೊರೆಯಾಗಿ ಕೊಟ್ಟ *ಒಳ್ಳೆಯ ಪೆನ್ನುಗಳನ್ನು ಬೀರುವಿನಲ್ಲಿಟ್ಟು ಪ್ಲಾಸ್ಟಿಕ್ ಪೆನ್ನಲ್ಲಿ ಬರೆಯುತ್ತೇವೆ*. ಸ್ವಲ್ಪದಿನಗಳ ಬಳಿಕ ನೋಡಿದಾಗ
*ಆ ಒಳ್ಳೆಯ ಪೆನ್ನುಗಳೂ ಬರೆಯಲಾರದ ಸ್ಥಿತಿಗೆ ಬಂದಿರುತ್ತವೆ.*
*ಹೊಸ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟು ಹಳೆಯ ಚಿಕ್ಕದಾದ ಮನೆಯಲ್ಲಿ ಇರುತ್ತೇವೆ.*
*ಸಮಯವನ್ನೂ ಹೀಗೆ ಕಳೆದು ಸೃಜನಾತ್ಮಕ, ಸಮಾಜಮುಖಿ ಅಥವಾ ಆಧ್ಯಾತ್ಮಿಕ ಕಾರ್ಯದ ಅವಕಾಶ ಬಂದಾಗ ಈಗ ಸಮಯವಿಲ್ಲವೆಂದು ಬಿಡುತ್ತೇವೆ. ಹಾಗಾದರೆ ಜೀವನವನ್ನು ಆನಂದಿಸುವುದು ಯಾವಾಗ?*

ಭಗವದ್ಗೀತೆಯ ಕರ್ಮಯೋಗವು ಜೀವನವನ್ನು ಹೇಗೆ ಜೀವಿಸಬೇಕೆಂದು ಸುಂದರವಾಗಿ ಹೇಳಿದೆ. *ನಾವೆಲ್ಲರೂ ಕರ್ಮ ಮಾಡುತ್ತೇವೆ ಆದರೆ ಅದು ಲೋಭಮಯವಾಗಿರುವ ತಪ್ಪು ನಿರ್ಧಾರಗಳಿಂದಾಗಿ ‘ದೈವ ಕೊಟ್ಟರೂ ದರಿದ್ರತನ ತಪ್ಪಲಿಲ್ಲ’ ಎಂಬಂತೆ ಆಗಿ ಬಿಡುತ್ತದೆ*.
*ಹಾಗಾಗದಂತೆ ಪ್ರಸನ್ನತೆಯಿಂದ ಜೀವಿಸೋಣ*

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

💮💮💮
ಮರೆತು ಬಿಡಿ : ನಿಮ್ಮ ಅಸಫಲತೆಯ
ಮರೆತು ಬಿಡಿ : ಬೇರೆಯವರ ತಪ್ಪನ್ನು
ಮರೆತು ಬಿಡಿ : ಹಿಂದಿನ ಕಹಿ ಕ್ಷಣಗಳ

💮💮💮
ಬಿಟ್ಟುಬಿಡಿ : ಇನ್ನೊಬ್ಬರನ್ನು ಕೀಳಾಗಿ ಕಾಣುವುದನು
ಬಿಟ್ಟುಬಿಡಿ : ಇನ್ನೊಬ್ಬರ ಏಳಿಗೆಗೆ ಹೊಟ್ಟೆ ಕಿಚ್ಚನು
ಬಿಟ್ಟುಬಿಡಿ : ಇನ್ನೊಬ್ಬರ ಹಣದ ಆಸೆಯನು
ಬಿಟ್ಟುಬಿಡಿ : ಇನ್ನೊಬ್ಬರ ಅಪಹಾಸ್ಯವನು
ಬಿಟ್ಟುಬಿಡಿ : ಇನ್ನೊಬ್ಬರ ಸಫಲತೆಗೆ ದುಃಖವನು

*💎  ಸುಖ ಜೀವನದ ಮಂತ್ರಗಳು  💎*

1  ಹಿತವಾಗಿ ಮಾತಾಡಿ 👉 ಶಾಂತಿ ಸಿಗುತ್ತದೆ
2 ಅಹಂಕಾರ ಬಿಡಿ 👉  ದೊಡ್ಡವರಾಗುವಿರಿ
3 ಭಕ್ತಿಯಿರಲಿ 👉  ಮುಕ್ತಿ ಸಿಗುತ್ತದೆ
4 ವಿಚಾರ ಮಾಡಿ 👉  ಜ್ಞಾನ ಸಿಗುತ್ತದೆ
5 ಸೇವೆ ಮಾಡಿ 👉  ಶಕ್ತಿ ದೊರೆಯುತ್ತದೆ
6 ಸಹನೆಯಿಂದಿರಿ 👉  ದೈವತ್ವ ದೊರೆಯುತ್ತದೆ
7 ಸಂತೋಷದಿಂದಿರಿ 👉  ಸುಖ ದೊರೆಯುತ್ತದೆ

              👌 ಒಂದೊಳ್ಳೆj ವಿಚಾರ👌

       ಪರಕೆಯ ಕಡ್ಡಿಗಳು ದಾರದಿಂದ ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಸಂಬಂಧ ಎಂಬ ದಾರದಿಂದ ಒಂದಾಗೋಣ.

🙏🏻🙏🏻💐💐🙏🏻🙏🏻🙏🏻💐💐💐

kannada moral stories in kannada kannada neethi kathegalu Kannada ಕನ್ನಡ ನೀತಿ ಕತೆಗಳು ಕನ್ನಡ ಸಣ್ಣ ಕತೆ ಗಳು ನೀತಿ ಕತೆಗಳು

*ನಿನ್ನ ಬೆಲೆ ಎಷ್ಟು....?*

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " *ನನ್ನ ಜೀವನದ ಬೆಲೆ ಏನು* ? "
ಎಂದು.

ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು *ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ*

*ಆದರೆ ಅದನ್ನು ನೀನು ಮಾರಬಾರದು* ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ.

ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.

ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ "ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ.

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ.

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು.

ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, 'ಇದನ್ನು ಮಾರುವುದಿಲ್ಲ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ.

ನಾನು ನನ್ನ ಆಸ್ತಿಯನ್ನೆಲ್ಲಾ
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. .........

ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.

ಆಗ ದೇವರು "ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು.

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.

*ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ*.

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ.

*ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ*.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.

ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " *ಮಾನವ ಜನ್ಮ ಬಹು ಶ್ರೇಷ್ಠವಾದದ್ದು*" ಎಂದು.

ಹಾಗಾಗಿ *ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.🌼🌹

ನೀತಿ ಕತೆಗಳು ಕನ್ನಡ ಸಣ್ಣ ಕತೆಗಳು ಕನ್ನಡ ನೀತಿ ಕತೆಗಳು moral stories in kannada kannada neethi kathegalu Kannada nithikathegalu

ಮದುವೆ ಮನೆಗಳಲ್ಲಿ ಊಟ ಮಾಡಿರಲಿ ಬಿಡಲಿ.. ತಪ್ಪದೇ ಈ ಕರುಳು ಹಿಂಡುವ ಕಥೆಯನ್ನೊಮ್ಮೆ ಓದಿ..

ಜಾನಕಿಯ ಮದುವೆ ಸಂಭ್ರಮ.. ಮನೆಯ ತುಂಬೆಲ್ಲಾ ಹೆಣ್ಣು ಮಕ್ಕಳು ಲಂಗ ರವಿಕೆ ತೊಟ್ಟು ಓಡಾಡುತ್ತಿದ್ದದ್ದು ಕಾಣುತ್ತಿತ್ತು.. ಅಮ್ಮನೋ ಪುರುಸೊತ್ತಿಲ್ಲದ ಹಾಗೆ ಕೆಲಸದ ಮೇಲೆ ಕೆಲಸ ಮಾಡುತ್ತಲೇ ಇದ್ದಳು..

ಅತ್ತ ಜಾನಕಿಯ ಅಪ್ಪ ನಾಗರಾಜಣ್ಣನಿಗೆ ಗಂಡಿನ ಮನೆಯಿಂದ ಫೋನ್ ಬಂದಿತು.. ನಮಗೆ ಎರೆಡು ಬಸ್ ಹೆಚ್ಚಿಗೆ ಬೇಕು.. ನಮ್ಮ ಕಡೆಯ ನೆಂಟರು ಹೆಚ್ಚಾಗಿದ್ದಾರೆ ಎಂದರು..

ತಡಬಡಾಯಿಸಿಕೊಂಡು.. ಆಯಿತು ಎಂದು ಫೋನ್ ಇಟ್ಟು ಹೋದ ನಾಗರಾಜಣ್ಣ.. ಶೆಟ್ಟರ ಬಳಿ ಅದೇನೋ ಮಾತು ಕತೆಯಾಡುತ್ತಲೇ ಇದ್ದ..

ನಂತರ ಎಲ್ಲರೂ ಮದುವೆ ಮನೆಗೆ ಹೊರಡುವ ಸಮಯ ಬಂದಿತು.. ಜಾನಕಿಯು ಮನೆಯಿಂದ ಬಲಗಾಲಿಟ್ಟು ಹೊರಗೆ ಬಂದದ್ದೇ ಸಾಕಿತ್ತು ಪ್ರೀತಿಯಿಂದ ಸಾಕಿದ ಅಪ್ಪ ಅಮ್ಮನ ಕಣ್ಣಲ್ಲಿ ಕಣ್ಣೀರು ಯಾರನ್ನೂ ಹೇಳದೇ ಕೇಳದೇ ಬಂದು ಸುರಿಯುತಿತ್ತು..

ಈ ಕಣ್ಣೀರೇ ಹೀಗೆ.. ಅದಕ್ಕೇ ಬುದ್ದೀನೇ ಇಲ್ಲ.. ಎಷ್ಟು ಅಳಬಾರದು ಎಂದರೂ ಕೇಳೋದೇ ಇಲ್ಲಾ ಅಲ್ವಾ.. ಅಪ್ಪ ಅಮ್ಮನನ್ನು ನೋಡಿದ ಜಾನಕಿ ಕೂಡ ಅಪ್ಪನನ್ನು ತಬ್ಬಿಕೊಂಡು ಅಳ ತೊಡಗಿದಳು.. ಅಪ್ಪನ ಹೊಸ ಶರ್ಟ್ ಎಲ್ಲಾ ಮಗಳ ಕಣ್ಣೀರು ತಾಕಿ ಕರೆಯಾಯಿತು..

ಮನೆ ಸದಸ್ಯರೆಲ್ಲರೂ ಕಾರ್ ಗೆ ಪೂಜೆ ಮಾಡಿ ಹತ್ತಿದರು.. ಸಂಬಂಧಿಕರೆಲ್ಲರೂ ಬಸ್ ಕಡೆ ಮುಖ ಮಾಡಿದರು.. ಅಬ್ಬಾ 2 ತಾಸಿನ ಜರ್ನಿ.. ಕೊನೆಗೆ ಮದುವೆ ಮಂಟಪ ಸಿಕ್ಕಿತು..

ಆರತಿ ಮಾಡಿ ವಧುವನ್ನು ಮದುವೆಯ ಮಂಟಪಕ್ಕೆ ಕರೆದೊಯ್ದರು.. ಸಂಜೆ ಯಾಗಿದ್ದರಿಂದ ಎಲ್ಲರಿಗೂ ಹೊಟ್ಟೆ ಸ್ವಲ್ಪ ಹಸಿವಲು ಶುರುವಾಯಿತು.. ಗಂಡಿನ ಮನೆಯವರಿಗಾಗಿ ಶಾವಿಗೆ ಉಪ್ಪಿಟ್ಟು ರೆಡಿಯಾಗುತಿತ್ತು.. ಅದರಲ್ಲೇ ಸ್ವಲ್ಪ ತಂದು ಎಲ್ಲರಿಗೂ ಬಡಿಸಿದರು..

ದೂರದಿಂದ ಯಾರೋ ಕೂಗಿದರು.. ನಾಗರಾಜಪ್ಪಾ……. ಎಲ್ಲಿದ್ದೀಯೋ ಮಾರಾಯಾ?? ಇಲ್ಲಿ ಗಂಡಿನ ಕಡೆಯವರು ಬಂದಿದ್ದಾರೆ.. ಏನೂ ಅಡುಗೆ ಮನೆ ಸೇರ್ಕೊಂಡ್ ಚೆನ್ನಾಗಿ ತಿಂತಾ ಕೂತ್ತಿದ್ದೀಯಾ ಅಂದರು..

ತಕ್ಷಣ ಇನ್ನೇನು ಬಾಯಿಗೆ ಮೊದಲ ತುತ್ತು ಇಡಬೇಕೆಂದಿದ್ದ ಶಾವಿಗೆ ಉಪ್ಪಿಟ್ಟನ್ನು ತಟ್ಟೆಯಲ್ಲೇ ಹಾಕಿ.. ಹೆಂಡತಿಗೆ ಕೊಟ್ಟು.. ತಿಂದುಕೋ ವೇಸ್ಟ್ ಆಗಿಬಿಡುತ್ತದೆ.. ಎಂದು ಹೊರ ನಡೆದ.. ಅಮ್ಮನೂ ಗಬಗಬನೇ ಆತುರದಿಂದ ತಿಂದು ಬಂದರು.. ಕಾರಣ ಮಧ್ಯಾಹ್ನ ನಾಗರಾಜಣ್ಣ ಹಾಗೂ ಶ್ರೀಮತಿಯವರು ಏನನ್ನೂ ತಿಂದಿರಲಿಲ್ಲ..

ಅತ್ತಕಡೆ ಗಂಡಿನ ಮನೆಯವರು ಅರಳಿ ಮರದ ಕಟ್ಟೆಯ ಬಳಿ ಕೂತಿದ್ದರು.. ವಾದ್ಯದ ಸಮೇತ ಸಂಬಂಧಿಕರ ಜೊತೆ ನಾಗರಾಜಣ್ಣ ಹೋಗಿ ಕಾಲು ತೊಳೆದು ಗಂಡನ್ನು ಹಾಗೂ ಗಂಡಿನ ಮನೆಯವರನ್ನು ಮದುವೆ ಮಂಟಪಕ್ಕೆ ಕರೆತಂದ..

ಬಂದವರೇ ಗಂಡಿನ ಅಮ್ಮ ನಮಗೇ 6 ರೂಮ್ ಬೇಕು ಎಂದರು.. 4 ಸಾಕು ಎಂದಿದ್ದಿರಲ್ಲಾ ತಾಯಿ ಎಂದು ನಾಗರಾಜಣ್ಣ ಕೇಳಿದ.. ಇಲ್ಲಾ ಇಲ್ಲಾ ನಮಗೆ ನೆಂಟರು ಜಾಸ್ತಿ 6 ರೂಮ್ ಬೇಕಲೇ ಬೇಕು ಎಂದರು..

ಮದುವೆ ಮನೆಯಲ್ಲಿ ವಧು ವರರ ಕೋಣೆ ಬಿಟ್ಟರೇ ಇದ್ದದ್ದೇ 6 ರೂಮು.. ತಕ್ಷಣ ತನ್ನ ಸಂಬಂಧಿಕರನ್ನು ಚೌಟರಿಯ ಪಕ್ಕದಲ್ಲಿದ್ದ ಸಣ್ಣ ಹೋಟೇಲ್ ಒಂದರಲ್ಲಿ ರೂಮ್ ಮಾಡಿ ಅಲ್ಲಿಗೆ ಕಳುಹಿಸಿಕೊಟ್ಟನು.. ಇತ್ತ 6 ರೂಮನ್ನು‌ ಗಂಡಿನ ಮನೆಯವರಿಗೆ ಬಿಟ್ಟು ಕೊಟ್ಟ ನಾಗರಾಜಣ್ಣ..

ಸರಿ.. ಶಾಸ್ತ್ರ ಸಂಪ್ರದಾಯಗಳು ಶುರುವಾದವು.. ಹುಡುಗನ ಹೆಸರು ರಾಮ್.. ರಾಮನ ಕೈ ಹಿಡಿಯಲು ಜಾನಕಿ ತಯಾರಾಗುತ್ತಿದ್ದಳು.. ಇತ್ತ ರಾಮ್ ಕೂಡ ಜಾನಕಿ ಎಲ್ಲಾದರೂ ಕಾಣಬಹುದೇನೋ ಎಂದು ಅಲ್ಲಿ ಇಲ್ಲಿ ಇಣುಕುತ್ತಲೇ ಇದ್ದ..

ಆನಂತರ ಗಂಡು ಹೆಣ್ಣನ್ನು ಅಕ್ಕ ಪಕ್ಕದಲ್ಲಿ ಕೂರಿಸಿ ಶಾಸ್ತ್ರ ಮಾಡಲು ಶುರು ಮಾಡಿದರು..

ಮಗಳ ಶಾಸ್ತ್ರವನ್ನು ಕಣ್ತುಂಬಿಕೊಳ್ಳಲು ನಾಗರಾಜಣ್ಣ ಹಾಗೂ ಶ್ರೀಮತಿ ಸಾವಿತ್ರಕ್ಕ ನಿಂತು ಮಗಳಿನ ಮಧು ಮಗಳ ಅಲಂಕಾರ ನೋಡಿ ಸಂತೋಷ ಪಡುತ್ತಿದ್ದರು..

ಅತ್ತ ಮತ್ತೆ ಇನ್ಯಾರೋ.. ನಾಗರಾಜಣ್ಣಾ ಈರುಳ್ಳಿ ತರಿಸಬೇಕಂತೆ.. ಭಟ್ಟರು ಕರಿತಿದಾರೆ ಬಾ ಎಂದರು.. ಪಂಚೆಯನ್ನು ಎತ್ತಿ‌ ಮೇಲಕ್ಕೆ ಕಟ್ಟಿಕೊಂಡು ಅಡುಗೆ ಮನೆ ಕಡೆ ಹೊರಟ ನಾಗರಾಜಣ್ಣ.. ಇತ್ತ ಇನ್ಯಾರೋ ಸಾವಿತ್ರಕ್ಕಾ ನೆಂಟರಿಗೆ ಕೊಡಬೇಕಾದ ತಾಂಬೂಲ ಎಲ್ಲಿಟ್ಟಿದ್ದೀಯಾ?? ಕೊಡು ಬಾ ಎಂದು ಕೂಗಿದರು.. ಸಾವಿತ್ರಕ್ಕಾ, ತಡಿ ಬಂದೆ ಎಂದು ಹೋಡಿ ಹೋದಳು..

ಜಾನಕಿ ತಲೆ ಎತ್ತಿ ನೋಡುವಷ್ಟರಲ್ಲಿ ಅಪ್ಪ ಅಮ್ಮ ಇಬ್ಬರೂ ಹೊರಟು ಹೋಗಿದ್ದರು.. ಕಣ್ಣಂಚಲ್ಲಿ ನೀರು ತುಂಬಿಕೊಂಡಿತು.. ಹೆಣ್ಣು ತನ್ನ ಈ ವಿಶೇಷ ಕ್ಷಣದಲ್ಲಿ ಅಪ್ಪ ಅಮ್ಮನಲ್ಲದೇ ಇನ್ಯಾರನ್ನು ಬಯಸುತ್ತಾಳೆ ಹೇಳಿ..

ಇನ್ನೇನು ಕಣ್ಣೀರು ಮದುವೆ ಮನೆಯ ನೆಲಕ್ಕೆ ಬೀಳಬೇಕು.. ಅಷ್ಟರಲ್ಲಿ ಪಕ್ಕದಲ್ಲಿದ್ದ ರಾಮ್ ಜಾನಕಿಯ ಕೈ ಯನ್ನು ಒತ್ತಿದ.. ಆ ಸ್ಪರ್ಶದಲ್ಲಿ.. ನಾನಿರುವೆ ಅಳಬೇಡ ಎಂಬ ಸಮಾಧಾನದ ಮಾತುಗಳು ಅಡಗಿದ್ದವು..

ಜಾನಕಿಗೆ ಅಷ್ಟೇ ಸಾಕಿತ್ತು.. ಕಣ್ಣು ಒರೆಸಿಕೊಂಡು ಸಮಾಧಾನ ಮಾಡಿಕೊಂಡಳು..

ಪುರೋಹಿತರು ರಾಮ್, ಜಾನಕಿಗೆ ಕುಂಕುಮ ಇಡು ಎಂದರು.. ಕುಂಕುಮ ಇಡಲು ಜಾನಕಿಗೆ ಬಹಳ ಹತ್ತಿರ ಬಂದ ರಾಮ್..‌ ನೀನು ಇಂದು ಬಹಳ ಸುಂದರವಾಗಿ ಕಾಣ್ತಿದ್ದೀಯಾ ಎಂದನು..

ಜಾನಕಿ ಅಯ್ಯೊ ಯಾರಾದರು ಕೇಳಿಸಿಕೊಂಡರೆ ಎಂದು.. ಕೇಳಿಯೂ ಕೇಳದವಳಂತೆ.. ತಲೆ ಬಗ್ಗಿಸಿಬಿಟ್ಟಳು..‌

ರಾಮ್ ಜಾನಕಿಗೆ ಕುಂಕುಮ ಇಡುವ ಆ ಸಂದರ್ಭ ಜಾನಕಿಯ ಜೀವನದ ಬಹು ಸಂತೋಷದ ಕ್ಷಣ ವಾಗಿತ್ತು..

ಶಾಸ್ತ್ರಗಳೆಲ್ಲಾ ಮುಗಿಯಿತು.. ರಾತ್ರಿ 12 ಆಯಿತು… ಜಾನಕಿ ಹೋಗಮ್ಮಾ ಮಲ್ಕೋ.. ಬೆಳಗ್ಗೆ ಬೇಗ ಏಳಬೇಕು.. ಇಲ್ಲದಿದ್ದರೆ ಮುಖ ಫ್ರೆಶ್ ಇರೊಲ್ಲಾ ಅಂತ ಹೇಳಿ ಅಮ್ಮ ಮಲಗಿಸಿದರು.. ನಾಗರಾಜಣ್ಣನೋ ಅಡುಗೆ ಮನೆ ಕಡೆ ಹೋದವನು ಮತ್ತೆ ಬರಲೇ ಇಲ್ಲ.. ಅಲ್ಲೇ ಒಂದರ ಮೇಲೊಂದು ಕೆಲಸದಲ್ಲಿ ತೊಡಗಿಕೊಂಡ…

ಮಧ್ಯ ರಾತ್ರಿ 2 ಘಂಟೆಯಾಗಿತ್ತು.. ನಾಗರಾಜಣ್ಣ ಶ್ರೀಮತಿ ಸಾವಿತ್ರಕ್ಕನ ಬಳಿ ಬಂದು… ನಿನಗೆ ಸಂಜೆ 20 ಸಾವಿರ ಕೊಟ್ಟಿದ್ದೆನಲ್ಲಾ ಕೊಡು ಎಂದು ತೆಗೆದುಕೊಂಡು ಹೋದನು.. ಇತ್ತ ಸಾವಿತ್ರಕ್ಕಾ ಸಂಬಂಧಿಕರನ್ನೆಲ್ಲಾ ಸೇರಿಸಿಕೊಂಡು ಹೂ ಕಟ್ಟುತ್ತಿದ್ದಳು..

ಅತ್ತ..ಬೆಳಗಾಗುತ್ತಲೆ.. ಜಾನಕಿ ನನ್ನ ಬಾಳಿನ ಜ್ಯೋತಿಯಾಗುತ್ತಾಳೆಂದು ಕನಸು ಕಾಣುತ್ತಾ ಮಲಗಿದ ರಾಮ್..

ನೋಡು ನೋಡುತ್ತಲೆ ಬೆಳಗಾಯಿತು.. ಅರೆಗಳಿಗೆಯಲ್ಲಿ ನಾಗರಾಜಣ್ಣ ವಧುವಿನ ಕೋಣೆಗೆ ಬಂದು ಸ್ನಾನ ಮಾಡಿಕೊಂಡು ಬಿಳಿ ಪಂಚೆ ಬಿಳಿ ಶರ್ಟು ಧರಿಸಿ ಹೊರಟೇ ಹೋದನು.. ಇತ್ತ ಸಾವಿತ್ರಕ್ಕನು 2 ನಿಮಿಷದಲ್ಲಿ ಸ್ನಾನ ಮುಗಿಸಿ.. ಅದು ಇದು ಕೆಲಸ ಕಾರ್ಯ ನೋಡುತ್ತಿದ್ದಳು.. ಮಗಳನ್ನು ಎಬ್ಬಿಸಿ ಸ್ನಾನಕ್ಕೆ ಕಳುಹಿಸಿದರು.. ಅಷ್ಟರಲ್ಲಿ ಗಂಡಿನ ಮನೆ ಕಡೆಯವರು ಬಂದು ವಧುವಿದ್ದ ರೂಮಿನ ಬಾಗಿಲು ತಟ್ಟಲು ಆರಂಭಿಸಿದರು.. ಸಾವಿತ್ರಕ್ಕ ಬಾಗಿಲು ತೆರೆದು ನೋಡಿದಳು..

ಯಾರೋ ಒಬ್ಬ ಹೆಂಗಸು.. ನಾವಿರುವ ರೂಮಿನಲ್ಲಿ ಬಿಸಿ ನೀರು ಬರುತ್ತಿಲ್ಲ.. ಎಂದು ಹೇಳಿದರು.. ಇನ್ನೊಬ್ಬರು ಬಂದು.. ನಾವು ಗಂಡಿನ ಕಡೆಯವರು.. ನಮಗೆ ಸೋಪು ಟೂತ್ ಪೇಸ್ಟು ಸಿಕ್ಕಿಲ್ಲ ಎಂದರು.. ಅಷ್ಟರಲ್ಲಿ ಒಳಗಿದ್ದ ಯಾವುದೋ ಕವರ್ ಹುಡುಕಿ ಟೂತ್ ಪೇಸ್ಟ್ ಮತ್ತು ಸೋಪನ್ನು ತಂದು ಕೊಟ್ಟಳು ಸಾವಿತ್ರಕ್ಕ.. ಇತ್ತ ಜಾನಕಿ ಕೂಡ ಬೇಗನೆ ಸ್ನಾನ ಮುಗಿಸಿ ಬಂದು ಆ ಹೆಂಗಸಿಗೆ ಹೇಳಿದಳು.. ನೀವು ಇದೇ ರೂಮಿನಲ್ಲಿ ಸ್ನಾನ ಮಾಡಿ.. ಬಿಸಿ ನೀರು ಬರುತ್ತಿದೆ ಎಂದಳು..

ಆನಂತರ ಗಂಡಿನ ಪಾದಪೂಜೆ ಮಾಡಬೇಕು ಎಂದು ನಾಗರಾಜಣ್ಣ ಮತ್ತು‌ ಸಾವಿತ್ರಕ್ಕನನ್ನು ಕರೆದರು..

ಸರಿ ಅದೆಲ್ಲೋ ಇದ್ದ ನಾಗರಾಜಣ್ಣ ಓಡೋಡಿ ಬಂದನು.. ಇತ್ತ ಸಾವಿತ್ರಕ್ಕ ಕೂಡ ವರನಿಗೆ ಕೊಡವೇಕಾದ ವಾಚು ಉಂಗುರ ಚೈನನ್ನು ಜೋಪಾನವಾಗಿ ಹಿಡಿದು ತಂದಳು…

ರಾಮ್ ಬಿಳಿ ಪಂಚೆ ಶರ್ಟು ಧರಿಸಿ ಮದು ಮಗನಾಗಿ ಕಂಗೊಳಿಸುತ್ತಿದ್ದ..

ಅವನನ್ನು ಚೇರ್ ಮೇಲೆ ಕೂರಲು ಹೇಳಿದರು ಪುರೋಹಿತರು.. ಆನಂತರ ಕಾಲು ತೊಳೆಯಲು ಬಂದ ನಾಗರಾಜಣ್ಣ ಹಾಗೂ ಸಾವಿತ್ರಕ್ಕನನ್ನು ದಯಮಾಡಿ ಬೇಡ ಮಾವ.. ನನಗೆ ಮುಜುಗರವಾಗುತ್ತದೆ ಎಂದ..

ಆದರೆ ಅತ್ತ.. ಏಯ್ ರಾಮ್ ಇದು ಶಾಸ್ತ್ರ ಸುಮ್ಮನೆ ತೊಳುಸ್ಕೊ ಎಂದರು.. ಇರಲಿ ಬಿಡಪ್ಪ ಶಾಸ್ತ್ರ ಅಲ್ಲವಾ ಎಂದು ನಾಗರಾಜಣ್ಣ ಹೇಳಿದ‌… ಒಲ್ಲದ ಮನಸ್ಸಿನಲ್ಲಿಯೂ ರಾಮ್ ಒಪ್ಪಿಗೆ ಕೊಟ್ಟ.. ನಾಗರಾಜಣ್ಣ ಕಾಲು ತೊಳೆಯುವಾಗ ನೀರಿನ ಜೊತೆಗೆ ಜಾನಕಿಯ ಅಪ್ಪ ಅಮ್ಮನ ಕಣ್ಣೀರು ಕೂಡ ರಾಮ್ ನ ಕಾಲಿನ ಮೇಲೆ ಬಿದ್ದದ್ದು.. ರಾಮ್ ಗೆ ಗೊತ್ತಾಯಿತು.. ಹೆಣ್ಣು ಹೆತ್ತವರ ಸಂಕಟ ತಿಳಿಯದಷ್ಟು ಕಲ್ಲು ಮನಸಿನವನಲ್ಲ ರಾಮ್..

ಹ.. ಮುಂದೆ ಎಲ್ಲಾ ಶಾಸ್ತ್ರಗಳು ಆದವು.. ರಾಮ್ ಪಕ್ಕ ಜಾನಕಿ ಬಂದು ನಿಂತಳು ಅನೇಕ ಶಾಸ್ತ್ರ ನಡೆದವು..

ಆನಂತರ ಪುರೋಹಿತರು.. ರಾಮ್ ಕೈಗೆ ತಾಳಿಯನ್ನು ತಂದು ಕೊಟ್ಟರು… ಇನ್ನೇನು ಜಾನಕಿಯ ಕೊರಳಿಗೆ ತಾಳಿ ಕಟ್ಟುವ ಸಮಯ.. ಆದರೆ ಅಲ್ಲಿ ನಾಗರಾಜಣ್ಣ ಇರಲಿಲ್ಲ.. ಜಾನಕಿ ಅಮ್ಮನ ಬಳಿ ಸನ್ನೆ ಮಾಡುತ್ತಲೇ ಇದ್ದಳು ಅಪ್ಪ ಎಲ್ಲಿ?? ಅಂತ.. ಅತ್ತ ಒಂದು ಕಡೆ ಮೂಲೆಯಲ್ಲಿ ಶೆಟ್ಟರ ಬಳಿ ನಾಗರಾಜಣ್ಣ ಏನನ್ನೋ ಮಾತನಾಡುತ್ತಿದ್ದ..

ಜಾನಕಿಯ ಚಡಪಡಿಕೆ ರಾಮನಿಗೆ ಅರ್ಥವಾಯಿತು.. ಪುರೋಹಿತರು ತಾಳಿ ಕಟ್ಟಲು ಹೇಳಿದರು.. ಆದರೆ ರಾಮ್ ದೂರದಲ್ಲಿ ಇದ್ದ ನಾಗರಾಜಣ್ಣನನ್ನು ನೋಡಿದ.. ಪಕ್ಕದಲ್ಲಿ ನಿಂತಿದ್ದ ಸ್ನೇಹಿತನೊಬ್ಬನಿಗೆ ಕಿವಿಯಲ್ಲಿ..‌ಹೋಗಿ ನಮ್ಮ ಮಾವನನ್ನು ಕರೆದುಕೊಂಡು ಬಾ ಎಂದ..

ಆ ಸ್ನೇಹಿತ ಹೋಗಿ ನಾಗರಾಜಣ್ಣ ನನ್ನು ಕರೆ ತಂದ.. ಜಾನಕಿಯ ಮುಖದಲ್ಲಿ ಸಂತೋಷ ಎದ್ದು ಕಂಡಿತು.. ಅದನ್ನು ನೋಡಿ ರಾಮನು ಖುಷಿ ಪಟ್ಟ…

ಮತ್ತೊಮ್ಮೆ ಪುರೋಹಿತರು ತಾಳಿ ಕಟ್ಟಲು ಹೇಳಿದರು.. ರಾಮ್ ಒಮ್ಮೆ ತನ್ನ ಅಪ್ಪ ಅಮ್ಮನನ್ನು ನೋಡಿದ.. ಇತ್ತ ಜಾನಕಿಯೂ ತನ್ನ ಅಪ್ಪ ಅಮ್ಮನನ್ನು ನೋಡಿದಳು.. ಎಲ್ಲರೂ ಅಕ್ಕಪಕ್ಕವೇ ಇದ್ದರು..

ಈಗ ರಾಮ್ ತನ್ನ ಕೈನಲ್ಲಿ ತಾಳಿಯನ್ನು ಹಿಡಿದು ಜಾನಕಿಗೆ ಬಹಳ ಹತ್ತಿರ ಬಂದ.. ಅವಳ ಬಿಸಿ ಉಸಿರು ರಾಮನ ಕತ್ತನ್ನು ಸ್ಪರ್ಶಿಸುತಿತ್ತು.. ಇನ್ನೂ ಹತ್ತಿರ ಮುಖವನ್ನು ತಂದು.. “ಇನ್ನು ಮುಂದೆ ಈ ದೇಹದ ಆತ್ಮ ನೀನು” ನಾನು ನಿನಗೆ ಒಪ್ಪಿಗೆ ನಾ?? ಅಂತ ಕೇಳ್ತಾನೆ ರಾಮ್..

ಅವನು ಹಾಗೆ ಕೇಳಲು ಸಂತೋಷಕ್ಕೆ ಕಣ್ಣಲ್ಲಿ ನೀರು ತುಂಬಿಕೊಳ್ಳತ್ತೆ ಜಾನಕಿಗೆ.. ತಲೆಯಾಡಿಸುತ್ತಲೇ ತನ್ನ ಒಪ್ಪಿಗೆ ಸೂಚಿಸುತ್ತಾಳೆ ಜಾನಕಿ..

ಗಟ್ಟಿ ಮೇಳ ಮೊಳಗುತ್ತದೇ..‌ಎಲ್ಲರೂ ಅಕ್ಷತೆಯ ಮಳೆಗರೆಯುತ್ತಾರೆ.. ಇತ್ತ ರಾಮ್ ತನ್ನ ಸಂಪೂರ್ಣ ಮನಸ್ಸಿನಿಂದ ಜಾನಕಿಗೆ ತಾಳಿಯನ್ನು ಕಟ್ಟುತ್ತಾನೆ.. ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಾರೆ..

ಜಾನಕಿಯ ಕಾಲಿನ ಹೆಬ್ಬೆರಳನ್ನು ಹಿಡಿದು ಸಪ್ತಪದಿ ತುಳಿಸುತ್ತಾನೆ ರಾಮ್.. ಇತ್ತ ರಾಮ್ ನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾಳೆ ಜಾನಕಿ..

ಆನಂತರ ಹೊರಗೆ ಬಂದು ಅರುಂಧತಿ ನಕ್ಷತ್ರ ತೋರಿಸುತ್ತಾನೆ ರಾಮ್.. ಪುರೋಹಿತರು ನಕ್ಷತ್ರ ಕಾಣ್ತೇನಮ್ಮ ಜಾನಕಿ.. ಎನ್ನಲು.. ಹೂ ಕಂಡಿತು ಎನ್ನುತ್ತಾಳೆ ಜಾನಕಿ..

ಕೈ ಹಿಡಿದು ಮದುವೆ ಮನೆಯ ಒಳಗೆ ಕರೆತರುತ್ತಾನೆ ರಾಮ್..

ಆನಂತರ ಎಲ್ಲರೂ ಊಟಕ್ಕೆ ಬನ್ನಿ ಎನ್ನಲು.. ಎಲ್ಲರೂ ಊಟಕ್ಕೆ ಹೋಗುತ್ತಾರೆ.. ಅಷ್ಟರಲ್ಲಾಗಲೇ ಬಂದ ನೆಂಟರೆಲ್ಲರ ಊಟವೂ ಆಗಿ.. ಕೊನೆ ಪಂಕ್ತಿಯಾಗಿರುತ್ತದೆ… ಪಲ್ಯವೆಲ್ಲಾ ಖಾಲಿಯಾಗಿ.. ಅನ್ನ ಸಾರು ಮಾತ್ರ ಉಳಿದಿರುತ್ತದೆ..

ವಧು ವರರ ಜೊತೆಗೆ ಮನೆಯವರೂ ಊಟಕ್ಕೆ ಕುಳಿತಿರುತ್ತಾರೆ.. ಅನ್ನ ಸಾಂಬಾರ್ ಹಾಗೂ ಒಂದು ಸ್ವೀಟನ್ನು ತಂದು ಬಡಿಸುತ್ತಾರೆ ಭಟ್ಟರು..

ಶುಭ ಸಮಾರಂಭಗಳಲ್ಲಿ ಕೊಂಕನ್ನು ಆಡಬೇಕು ಎಂದೇ ಕೆಲವರು ಹುಟ್ಟಿರುತ್ತಾರೆ.. ಅವರು ಇದೇನು ಹೀಗಿದೆ ಊಟ ಎನ್ನುತ್ತಾರೆ.. ಎದುರಲ್ಲಿ ಕೂತಿದ್ದ ನಾಗರಾಜಣ್ಣನಿಗೆ ಮುಜುಗರ ವಾಗುತ್ತದೆ.. ಅದನ್ನು ನೋಡಿದ ರಾಮ್.. ಯಾವುದೇ ಹಮ್ಮು ಬಿಮ್ಮಿಲ್ಲದೇ ಊಟ ಬಹಳ ಚೆನ್ನಾಗಿದೆ ಮಾವ ಎನ್ನುತ್ತಾನೆ.. ಅಷ್ಟರಲ್ಲಿ ಉಳಿದ ಕೊಂಕಿನ ಬಾಯಿಗಳೆಲ್ಲಾ ಮುಚ್ವಿಕೊಳ್ಳುತ್ತವೆ..

ಆನಂತರ ಮಗಳನ್ನು ರಾಮ್ ಜೊತೆ ಕಳುಹಿಸಿಕೊಡುವ ಸಮಯ..

23 ವರ್ಷ ಪ್ರೀತಿಯಿಂದ ಸಾಕಿದ್ದ ಮಗಳನ್ನು ಇಂದು ಗಂಡನ ಮನೆಗೆ ಕಳುಹಿಸಿಕೊಡುವ ಸಮಯ ಬಂದೇ ಬಿಟ್ಟಿತು ಎಂದು ನಾಗರಾಜಣ್ಣ ಕಣ್ಣೀರು ಹಾಕುತ್ತಾನೆ.. ನನ್ನ ಕಣ್ಣ ಮುಂದೆ ಕೆಂಪು ಬಣ್ಣದ ಫ್ರಾಕ್ ಒಂದನ್ನು ತೊಟ್ಟು ಇನ್ನೂ ಪುಟ್ಟ ಪುಟ್ಟ ಹೆಜ್ಜೆಯನಿಟ್ಟು ಅಪ್ಪಾ ಅಪ್ಪಾ ಎನ್ನುತ್ತಿದ್ದ ಜಾನಕಿಗೆ.. ಇಷ್ಟು ಬೇಗ ಮದುವೆ ಮಾಡಿಬಿಟ್ಟೆನಾ ಅಂದುಕೊಳ್ಳುತ್ತಾನೆ ನಾಗರಾಜಣ್ಣ.. ಇತ್ತ ಸಾವಿತ್ರಕ್ಕ ಮಗಳನ್ನು ತಬ್ಬಿಕೊಂಡು.. ಹೋದ ಮನೆಯಲ್ಲಿ ಅನುಸರಿಸಿಕೊಂಡು ಹೋಗು ಮಗಳೆ ಎಂದು ಅಳುತ್ತಾ ಬುದ್ದಿವಾದ ಹೇಳುತ್ತಿರುತ್ತಾಳೆ..

ಕೊನೆಗೂ ಆ ಸಮಯ ಬಂದೇ ಬಿಟ್ಟಿತು.. ಜಾನಕಿಯ ಕೈ ಯನ್ನು ರಾಮ್ ಕೈನಲ್ಲಿ ಇರಿಸಿ.. ಇನ್ನು ಮುಂದೆ ಇವಳು ನಿನ್ನ ಮನೆಯವಳಪ್ಪಾ.. ಚೆನ್ನಾಗಿ ನೋಡಿಕೋ ಎನ್ನುತ್ತಾನೆ ನಾಗರಾಜಣ್ಣ..

ನಾಗರಾಜಣ್ಣ ಹಾಗೂ ಸಾವಿತ್ರಕ್ಕ ಅಳು ನಿಲ್ಲದ್ದಾಗಿರುತ್ತದೆ.. ಅದನ್ನು ನೋಡಿದ ರಾಮ್.. ಅಳಬೇಡಿ ಮಾವ… ಜಾನಕಿ ಇನ್ನು ಮುಂದೆಯೂ ಚೆನ್ನಾಗಿರುತ್ತಾಳೆ ಎನ್ನುತ್ತಾನೆ..

ಅಳಿಯನ ಆ ಒಂದು ಮಾತು ಸಾಕಿತ್ತು.. ನಾಗರಾಜಣ್ಣ ಹಾಗೂ ಸಾವಿತ್ರಕ್ಕ ಖುಷಿ ಪಡಲು.. ಬಡಜೀವಗಳು ಸಂತೋಷ ಪಟ್ಟುಕೊಂಡವು..

ಅಳುತ್ತಿದ್ದ ಜಾನಕಿಯ ಕಣ್ಣನ್ನು ಸ್ವತಃ ರಾಮನೇ ಒರೆಸುತ್ತಾನೆ..‌ ಹಿಡಿದಿದ್ದ ಕೈ ಯನ್ನು ಗಟ್ಟಿಗೊಳಿಸುತ್ತಾನೆ..‌

ಜಾನಕಿಗೆ ಅದು ತಿಳಿಯುತ್ತದೆ.. ಅವನು ಹಿಡಿದಿದ್ದ ಜಾನಕಿಯ ಕೈ ಯನ್ನು ಇನ್ನಷ್ಟು ಬಿಗಿ ಗೊಳಿಸುತ್ತಾನೆ.. ಕಣ್ಣಿನಲ್ಲಿ‌ ನಾನಿದ್ದೇನೆ ಎನ್ನುವ ಮಾತು ಜಾನಕಿಗಾಗಿ ಹೊರಬರುತ್ತದೆ.. ಅರ್ಥ ಮಾಡಿಕೊಂಡ ಜಾನಕಿ ಸ್ವಲ್ಪ ಸಮಾಧಾನವಾಗುತ್ತಾಳೆ..

ಜಾನಕಿಯನ್ನು ಕರೆದುಕೊಂಡು ಕಾರ್ ಹತ್ತುತ್ತಾನೆ ರಾಮ್… ಎಲ್ಲರಿಗೂ ಹೋಗಿ ಬರುವೆವು ಎಂದು ಆಶೀರ್ವಾದ ಪಡೆದು ಹೊರಡುತ್ತಾರೆ.. ಜಾನಕಿಯ ಅಪ್ಪ ಅಮ್ಮ ಅಳುತ್ತಿರುವುದು ಕಾರಿನ ಕನ್ನಡಿಯಲ್ಲಿ ಕಾಣುತ್ತಿರುತ್ತದೆ.. ಕಾರ್ ಇನ್ನೇನು ಮದುವೆ ಮನೆಯ ಗೇಟಿನಿಂದ ಹೊರ ಬಂತು ಅಷ್ಟರಲ್ಲಿ ರಾಮ್ ನ ಮನಸ್ಸು ಕೇಳಲೇ ಇಲ್ಲ.. ಒಂದು ನಿಮಿಷ ಕಾರ್ ನಿಲ್ಲಿಸು ಎಂದು ಡ್ರೈವರ್ ಗೆ ಹೇಳುತ್ತಾನೆ..

ಕಾರ್ ನಿಂದ ಇಳಿದು ಸೀದಾ ಮಾವನ ಬಳಿ ಬಂದು.. ಇನ್ನು ಮುಂದೆ ನಾನು ನಿಮ್ಮ ಮಗ.. ಎಂದೂ ಯಾವತ್ತೂ ಚಿಂತಿಸದಿರಿ… ಎಂದು ಕೈ ಹಿಡಿದು ಸಮಾಧಾನ ಹೇಳಿ ಹೊರಡುತ್ತಾನೆ..

ನಾಗರಾಜಣ್ಣನ ಮನಸ್ಸು ತುಂಬಿ ಬಂತು… ಮಗಳಿಗೆ ಒಳ್ಳೆಯ ವರನನ್ನು ಹುಡುಕಿರುವೆ ಎಂಬ ಆತ್ಮ ತೃಪ್ತಿ ನೆಮ್ಮದಿ ನಾಗರಾಜಣ್ಣನ ಕಣ್ಣಲ್ಲಿ ಕಾಣುತಿತ್ತು…

ಇತ್ತ ಎಲ್ಲರೂ ಉಳಿದ ಸಾಮಾನನ್ನು ಬಸ್ಸಿಗೆ ತುಂಬಲು ಆರಂಭಿಸಿದರು..

ರಾತ್ರಿಯೇ ಶೆಟ್ಟರ ಬಳಿ ಇನ್ನೂ 80 ಸಾವಿರ ಹಣವನ್ನು ಸಾಲವಾಗಿ ಪಡೆದಿದ್ದ ನಾಗರಾಜಣ್ಣ.. ಇನ್ನು ಯಾರು ಯಾರಿಗೆ ಬಾಕಿ ಕೊಡಬೇಕೋ ಅವರಿಗೆ ಹಣ ಕೊಡಲು ಬಂದ..

ಭಟ್ಟರ ಬಳಿ ಬಂದು ಉಳಿದ 20 ಸಾವಿರ ಹಣ ಕೊಡಲು ಬಂದಾಗ.. ಇಲ್ಲಾ ನಾಗರಾಜಣ್ಣ… ರಾತ್ರಿಯೇ ನಿಮ್ಮ ಅಳಿಯ ಬಂದು 3 ಸಾವಿರ ಹೆಚ್ವಿಗೆಯಾಗಿಯೇ ಹಣ ನೀಡಿದರು.. ಎನ್ನುತ್ತಾರೆ ಭಟ್ಟರು..

ಒಂದು ಕ್ಷಣ ನಾಗರಾಜಣ್ಣನಿಗೆ ಆಶ್ಚರ್ಯವಾಗುತ್ತದೆ..‌ಅಯ್ಯೊ ಇದೇನಾಯ್ತು ಎನ್ನುತ್ತಾ… ಶಾಮಿಯಾನ ಬಿಚ್ಚುತ್ತಿದ್ದ ಜಾಗಕ್ಕೆ ಬಂದು.. ಅವರಿಗೆ ಹಣ ಕೊಡಲು ಮುಂದಾಗುತ್ತಾನೆ.. ಅವರೂ ಕೂಡ ಇದನ್ನೇ ಹೇಳುತ್ತಾರೆ..

ಇನ್ನೇಕೆ ಈ ಹಣ ಎಂದು ಶೆಟ್ಟರಿಗೆ ವಾಪಸ್ ನೀಡಲು ಬಂದಾಗ… ಶೆಟ್ಟರು.. ಇಲ್ಲಾ ನಾಗರಾಜಣ್ಣ.. ಈ ಹಣ ನನ್ನದಲ್ಲ.. ನಿನ್ನ ಅಳಿಯ ರಾತ್ರಿಯೇ ತಂದು ನನ್ಮ ಬಳಿ ಕೊಟ್ಟಿದ್ದರು… ಜೊತೆಗೆ ನೀನು ಮದುವೆಗಾಗಿ ಮಾಡಿದ್ದ 5 ಲಕ್ಷ ಸಾಲಕ್ಕೆ ರಾತ್ರಿಯೇ ಚೆಕ್ ನೀಡಿದ್ದಾರೆ ಎಂದರು..

ಒಂದು ಕ್ಷಣ ನಾಗರಾಜಣ್ಣನಿಗೆ ಏನು‌ಮಾಡಬೇಕೆಂದು ತೋಚುವುದಿಲ್ಲ.. ತಕ್ಷಣ ಜೇಬಿನಿಂದ ಫೋನ್ ತೆಗೆದು ರಾಮನಿಗೆ ಫೋನ್ ಮಾಡುತ್ತಾರೆ..

ಇತ್ತ ಕಾರಿನಲ್ಲಿ ಅತ್ತು ಅತ್ತು ಸುಸ್ತಾಗಿದ್ದ ಜಾನಕಿ ರಾಮನ ಭುಜಕ್ಕೆ ಒರಗಿ ಮಲಗಿರುತ್ತಾಳೆ.. ರಾಮನ ಫೋನ್ ರಿಂಗ್ ಆಗುತ್ತದೆ.. ಜಾನಕಿಗೆ ಎಚ್ಚರ ವಾಗಿಬಿಡುತ್ತದೆ ಎಂದು.. ಮೆಲ್ಲಗೆ ಜೇಬಿನಲ್ಲಿದ್ದ ಫೋನ್ ತೆಗೆದು ರಿಸೀವ್ ಮಾಡುತ್ತಾನೆ..

ಅತ್ತ ಯಾಕಪ್ಪಾ ರಾಮ್ ಹೀಗೆ ಮಾಡಿದೆ ಎಂದು ನಾಗರಾಜಣ್ಣ ಕೇಳುತ್ತಾನೆ…

ಆಗ ರಾಮ್ ಹೇಳುವುದು ಒಂದೇ ಮಾತು… “ನಾನು ಬಾಯಿ ಮಾತಿಗೆ ಮಾತ್ರ ನಿಮ್ಮ ಮಗನಾಗಿರುತ್ತೇನೆ ಎಂದು ಹೇಳಲಿಲ್ಲ ಮಾವ… ನನ್ನ ಕರ್ತವ್ಯ ನಾನು ಮಾಡಿದ್ದೇನೆ… ನನ್ನ ದೇಹಕ್ಕೆ ಆತ್ಮವಾಗುವ ಜೀವನದುದ್ದಕ್ಕೂ ಜೊತೆಯಾಗಿ ಬಾಳುವ.. ಜಾನಕಿಯನ್ನು ಕೊಟ್ಟಿದ್ದೀರಾ ನೀವು… ನಿಮಗೆ ನಾನು ಏನು ಮಾಡಿದರೂ ಕಡಿಮೆಯೇ ಎನ್ನುತ್ತಾನೆ.. ಇದನ್ನು ಯಾರ ಬಳಿಯೂ ಹೇಳಬೇಡಿ… ಇಲ್ಲಿಗೆ ಸುಮ್ಮನೆ ಬಿಟ್ಟುಬಿಡಿ” ಎಂದು ಹೆಚ್ಚಿಗೆ ಮಾತನಾಡದೆ ಫೋನ್ ಕಟ್ ಮಾಡುತ್ತಾನೆ ರಾಮ್…

ಇತ್ತ ಭುಜಕ್ಕೆ ಒರಗಿ ಮಲಗಿದ್ದ ಜಾನಕಿಯ ಕಿವಿಗೆ ಅಷ್ಟೂ ಮಾತುಗಳು ಬೀಳುತ್ತವೆ.. ಮನಸ್ಸಿನಲ್ಲಿಯೇ ಒಬ್ಬ ಪರಿಪೂರ್ಣ ಮನಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದುಕೊಳ್ಳೂತ್ತಾಳೆ ಜಾನಕಿ…

ಕೊನೆಯಲ್ಲಿ ನನ್ನದೊಂದು ಮಾತು…

ಮದುವೆ ಮನೆಯ ಊಟದಲ್ಲಿ ಉಪ್ಪು ಹೆಚ್ಚಾಗಿದ್ದಲ್ಲಿ‌ ದಯಮಾಡಿ ಅದನ್ನು ಹೇಳಬೇಡಿ.. ಆ ಹೆಣ್ಣಿನ ಅಪ್ಪ ಅಮ್ಮನ ಕಣ್ಣೀರು ಆ ಊಟದಲ್ಲಿ ಸೇರಿ ಹೋಗಿ ಉಪ್ಪು ಹೆಚ್ಚಾಗಿರುತ್ತದೆಯೇ ಹೊರತು… ಬೇರೆ ಯಾವ ಕಾರಣದಿಂದಲೂ ಅಲ್ಲ..

ಇಷ್ಟವಾಗಿದ್ದರೆ ಶೇರ್ ಮಾಡಿ..

moral stories in kannada kannada neethi kathegalu ಕನ್ನಡ ನೀತಿಕಥೆಗಳು ಕನ್ನಡ ಸಣ್ಣ ಕತೆಗಳು ನೀತಿ ಕತೆಗಳು

ತುಂಬು ಗರ್ಭಿಣಿಯೊಬ್ಬಳು ಹೆರಿಗೆ ನೋವಿಂದ ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತಾಳೆ. ಕಾರಿನಲ್ಲಿ ಬಂದ ಯುವಕನೊಬ್ಬ ನೋಡಿಯೂ ನೋಡದಂತೆ ಕಾರನ್ನು ಮುಂದೆ ಚಲಾಯಿಸುತ್ತಾನೆ. ಅವನ ಕಾರಿನ ಹಿಂದೆ *ಮಾತೃ ದೇವೋಭವ* ಎಂದು ಬರೆದಿರುತ್ತದೆ.
ಮತ್ತೆ ಅದೇ ರಸ್ತೆಯಲ್ಲಿ ಆಟೋ ಒಂದು ಬರುತ್ತದೆ, ಸಹಾಯಕ್ಕಾಗಿ ಆ ಹೆಣ್ಣು ಮಗಳು ಅಂಗಲಾಚುತ್ತಾಳೆ. ಆಕೆಯೊಂದಿಗೆ ಯಾರೂ ಇಲ್ಲವೆಂದು ಗಮನಿಸಿ ನನಗ್ಯಾಕೀ ಉಸಾಬರಿ ಎಂಬಂತೆ ಆಟೋ ಡ್ರೈವರ್ ಹೊರಟು ಹೋಗುತ್ತಾನೆ. *ಗರ್ಭಿಣಿಯರಿಗೆ ಉಚಿತ ಸೇವೆ* ಆಟೋ ಹಿಂದೆ ಹೀಗೆಂದು ಬರೆದಿತ್ತು. ಹೀಗೇ ಹಲವರು ನೋಡಿಯೂ ನೋಡದಂತೆ ಹೊರಟು ಹೋಗುತ್ತಾರೆ. ಒಬ್ಬೊಬ್ಬರ ವಾಹನಗಳ ಹಿಂದೆಯೂ ದೊಡ್ಡ ದೊಡ್ಡ ಸಾಲುಗಳು, *ತಾಯಿಯೇ ದೇವರು*, *ತಾಯಿಗಿಂತ ದೇವರಿಲ್ಲ*, *ಹೆಣ್ಣನ್ನು ರಕ್ಷಿಸಿ;ಹೆಣ್ಣನ್ನು ಗೌರವಿಸಿ*, *ಹೆಣ್ಣೇ ಸಂಸಾರದ ಕಣ್ಣು*, ಇತ್ಯಾದಿ ಬೋಧನೆಗಳು.

ಸ್ವಲ್ಪ ಹೊತ್ತಿನ ನಂತರ ನಾಲ್ಕೈದು ಯುವಕರು ಬೈಕುಗಳಲ್ಲಿ ಗುಂಪಾಗಿ ಕೂಗಾಡುತ್ತಾ ಬರುತ್ತಾರೆ. ಆ ಗರ್ಭಿಣಿ ಹೆಣ್ಣು ಸಹಾಯಕ್ಕಾಗಿ ಒದ್ದಾಡುತ್ತಿರುವುದು ಕಂಡ ಯುವಕರು ಆಕೆಯನ್ನು ಹೇಗೋ ಆಸ್ಪತ್ರೆ ತಲುಪಿಸುತ್ತಾರೆ. ಆಗ ಆಕೆ ಆ ಯುವಕರಿಗೆ ಕೃತಜ್ಞತೆಯಿಂದ ಕೈ ಮುಗಿಯುತ್ತಾಳೆ. ತಮಾಷೆ ಅಂದ್ರೆ ಆ ಯುವಕರ ಬೈಕುಗಳ ಹಿಂದೆ *ಬ್ಯಾಡ್ ಬಾಯ್ಸ್* ಎಂದು ಬರೆದಿತ್ತು.

ಕಥೆಯ ನೀತಿ ಇಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡುವುದರಿಂದ, ಬೋಧಿಸುವುದರಿಂದ ದೊಡ್ಡ ವ್ಯಕ್ತಿಗಳಾಗೋದಿಲ್ಲ, ಒಳ್ಳೊಳ್ಳೇ ಸಂದೇಶಗಳು ವಾಹನಗಳ ಮೇಲೆ ಬರೆಸಿದ ಮಾತ್ರಕ್ಕೆ ಒಳ್ಳೆಯವರಾಗಲ್ಲ. ಅವಶ್ಯಕತೆಯಿರುವವರಿಗೆ ಅಗತ್ಯ ಸಮಯದಲ್ಲಿ ಮಾಡುವ ಸಣ್ಣ-ಪುಟ್ಟ ಸಹಾಯಗಳು ಪರಮ ಶ್ರೇಷ್ಠವಾಗುತ್ತವೆ.
MOUNESH BADIGER
[29/05, 10:13 pm] Manjula N H: ಸಫಲ ಸಂವಹನಕ್ಕೆ ಸಲಹೆಗಳು:
-----------------------------------
ಮಾತನಾಡುವಾಗ......
# ತಾಯಿಯೊಂದಿಗೆ ಮಮತೆಯಿಂದ
ಮಾತನಾಡಿ
# ತಂದೆಯೊಂದಿಗೆ ಗೌರವದಿಂದ
ಮಾತನಾಡಿ
# ಗುರುವಿನೊಂದಿಗೆ ವಿನಮ್ರತೆಯಿಂದ
ಮಾತನಾಡಿ
# ಪತ್ನಿಯೊಂದಿಗೆ ಸತ್ಯವಾಗಿ
ಮಾತನಾಡಿ
# ಸಹೋದರರೊಂದಿಗೆ ಸಂಯಮದಿಂದ
ಮಾತನಾಡಿ
# ಸಹೋದರಿಯೊಂದಿಗೆ ಪ್ರೀತಿಯಿಂದ
ಮಾತನಾಡಿ
# ಮಕ್ಕಳೊಂದಿಗೆ ಉತ್ಸಾಹದಿಂದ
ಮಾತನಾಡಿ
# ಸಂಭಂದಿಕರೊಂದಿಗೆ ಪರಾನುಭೂತಿಯಿಂದ
ಮಾತನಾಡಿ
# ಸ್ನೇಹಿತರೊಂದಿಗೆ ಮುಕ್ತವಾಗಿ
ಮಾತನಾಡಿ
# ಅಧಿಕಾರಿಗಳೊಂದಿಗೆ ನಯವಾಗಿ
ಮಾತನಾಡಿ
# ವ್ಯಾಪಾರಿಗಳೊಂದಿಗೆ ಕಟ್ಟುನಿಟ್ಟಾಗಿ
ಮಾತನಾಡಿ
# ಗ್ರಾಹಕರೊಂದಿಗೆ ಪ್ರಾಮಾಣಿಕವಾಗಿ
ಮಾತನಾಡಿ
# ಕೆಲಸಗಾರರೊಂದಿಗೆ ಸೌಜನ್ಯದಿಂದ ಮಾತನಾಡಿ
# ರಾಜಕಾರಣಿಗಳೊಂದಿಗೆ ಎಚ್ಚರಿಕೆಯಿಂದ
ಮಾತನಾಡಿ

ನೀತಿ ಕತೆಗಳು ಕನ್ನಡ ನೀತಿ ಕತೆಗಳು moral stories in kannada kannada neethi kathegalu

ನೀತಿ ಕತೆಗಳು ಕನ್ನಡ ನೀತಿ ಕತೆಗಳು ಕನ್ನಡ ಸಣ್ಣ ಕತೆಗಳು moral stories in kannada kannada stories kannada nithi kathegalu

*ಮನುಷ್ಯ, ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ. ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ. ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ. ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾ ಹೋಗುತ್ತಾನೆ. ಇವೆಲ್ಲವನ್ನೂ ಮೀರಿ ನಡೆದವನು ಮಾತ್ರ ವಿಶೇಷನಾಗುತ್ತಾನೆ.*

*🔘"ಪುರುಷರೆಂದರೆ ಯಾರು?"ಎಲ್ಲಾ ಮಹಿಳೆಯರು ತಪ್ಪದೆ ಇದನ್ನು ಓದಿ...*

⚫ *ಮೊದಲ ಬಾರಿ ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!*

▪ *ಪುರುಷ ಎಂದರೆ ಯಾರು?*

▪ *ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ*

▪ *ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..*

▪ *ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..*

▪ *ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆ ಖರೀದಿಸಿ ಖಾಲಿ ಮಾಡುವವನು..*

▪ *ತನ್ನ ಇಡೀ ಯೌವನವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..*

▪ *ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.*

▪ *ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ, ಪತ್ನಿ ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....*

▪ *ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....*

▪ *ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಆತ ಮನೆಯಲ್ಲೇ ಇದ್ದರೆ ಸೋಮಾರಿ...*

▪ *ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ*

▪ *ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವ*

▪ *ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಳಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...*

▪ *ಒಂದು ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ*

▪ *ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ*

▪ *ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ..*

*ಇದೊಂದು ಫಾರ್ವರ್ಡ್ ಮೆಸೇಜ್ ಬಹಳ ಸುಂದರ ಅರ್ಥಗರ್ಭಿತವಾದ ರಚನೆ ಓದಲು ಮರೆಯದಿರಿ...*
🌺🌺🌺

*1. ನಾವೆಷ್ಟೇ ಸುಂದರ ಮತ್ತು ಹ್ಯಾಂಡ್‌ಸಂ ಆಗಿದ್ದರೂ, ಬಬೂನ್‌ಗಳು ಮತ್ತು ಗೊರಿಲ್ಲಾಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂಬುದನ್ನು ಮರೆಯದಿರೋಣ.*

*ನಮ್ಮನ್ನು ನಾವು ವಿಪರೀತವಾಗಿ ಹೊಗಳಿಕೊಳ್ಳುವುದನ್ನು ಬಿಟ್ಟುಬಿಡೋಣ.*

🌺🌺🌺

*2. ನಾವೆಷ್ಟೇ ಗಟ್ಟಿಯಾಗಿ ಶಕ್ತಿವಂತರಾಗಿದ್ದರೂ ಸರಿಯೇ, ನಮ್ಮನ್ನು ನಾವು ನಮ್ಮ ಸಮಾಧಿಗೆ ಹೊತ್ತುಕೊಂಡು ಹೋಗಲಾರೆವು.*

*ವಿನಮ್ರತೆಯಿಂದಿರೋಣ*

🌼🌼🌼🌼

*3. ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನೆಂದೂ ನೋಡಲಾರೆವು*.

*ತಾಳ್ಮೆಯಿಂದ ಇರೋಣ.*

🌹🌹🌹

*4. ನಾವೆಷ್ಟೇ ಬಿಳುಪಾದ ಚರ್ಮ ಹೊಂದಿರುವವರಾದರೂ ಕತ್ತಲೆಯಲ್ಲಿ ನಮಗೆ ಬೆಳಕು ಬೇಕೇ ಬೇಕು.*

*ಜಾಗರೂಕರಾಗಿರೋಣ*

🌺🌺🌺
*5. ನಾವೆಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಕಾರುಗಳನ್ನು ಹೊಂದಿದ್ದರೂ, ನಮ್ಮ ಹಾಸಿಗೆಗೆ ನಾವು ನಡೆಯಲೇಬೇಕು.*

🌼🌼🌼

*ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ ತೆಗೆದುಕೊಳ್ಳೋಣ. ಜೀವನ ಬಲು ಚಿಕ್ಕದು.*

*ನಾವು ಜೀವಿಸುವ ಜೀವನ...*

🌻🌻🌻

*ನಮ್ಮನ್ನು ಈ ಬೆಳಗ್ಗೆ ಎಬ್ಬಿಸಿದ್ದು ನಮ್ಮ ಅಲಾರಂ ಗಡಿಯಾರ ಎಂದುಕೊಂಡರೆ, ಅದನ್ನು ಒಂದು ಶವದ ಪಕ್ಕದಲ್ಲಿ ಇಟ್ಟು ನೋಡಿದಾಗ, ದೇವರ ಕೃಪೆಯು ನಮ್ಮನ್ನು ಇಂದು ಎಬ್ಬಿಸಿದ್ದು ಎಂಬ ಸತ್ಯ ಹೊಳೆಯುತ್ತದೆ. ನಾವು ಬದುಕಿರುವುದೇ ಆ ದೇವದೇವನ ಕೃಪೆಯಿಂದಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.*

*ಯೋಗವು ಒಮ್ಮೇ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ*

🌹🌹🌹

*ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಅರ್ಥವಾಗುವದಿಲ್ಲ ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವದಿಲ್ಲ ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವವನ್ನು ಬಿಡಬೇಡಿ. ಬೇರೆಯವರು ಸದ್ಭಾವನೆ ಸ್ವೀಕರಿಸುವದಿದ್ದರೆ ಅದು ನಿಮ್ಮ ತಪ್ಪಲ್ಲ*.

*ಧನ್ಯವಾದಗಳು*
🙏🙏🙏

*ಸರ್ವೇ ಜನ ಸುಖಿನೋ ಭವಂತು*
🌹🌹🌹🌹
 ಕೋಪದಿಂದ ಮಾತನಾಡಿದರೆ
"ಗುಣ" ವನ್ನು ಕಳೆದುಕೊಳ್ಳುತ್ತೇವೆ.

ಹೆಚ್ಚಾಗಿ ಮಾತನಾಡಿದರೆ
"ಶಾಂತಿ"ಯನ್ನು ಕಳೆದುಕೊಳ್ಳುತ್ತೇವೆ.

ಅನಗತ್ಯವಾಗಿ ಮಾತನಾಡಿದರೆ
"ಕೆಲಸ" ವನ್ನು ಕಳೆದುಕೊಳ್ಳುತ್ತೇವೆ.

ಅಹಂಕಾರದಿಂದ ಮಾತನಾಡಿದರೆ
"ಪ್ರೀತಿ" ಯನ್ನು ಕಳೆದುಕೊಳ್ಳುತ್ತೇವೆ.

ಸುಳ್ಳು ಸುಳ್ಳು ಮಾತನಾಡಿದರೆ
"ಹೆಸರು" ಕಳೆದುಕೊಳ್ಳುತ್ತೇವೆ.

ವೇಗವಾಗಿ ಮಾತನಾಡಿದರೆ
"ಅರ್ಥ" ವನ್ನು ಕಳೆದುಕೊಳ್ಳುತ್ತೇವೆ.

ಪ್ರೀತಿಯಿಂದ ಮಾತನಾಡಿದರೆ
"ಎಲ್ಲವನ್ನು" ಗಳಿಸಿಕೊಳ್ಳುತ್ತೇವೆ
🌿* 🌿
🏹 *🏹

ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ ಏನು ಅಂತ ತಿಳಿದುಕೊಳ್ಳೋಣ ;

೧) ಮೊಣಕಾಲು ಮೇಲೆ ನಿಲ್ಲಿಸಿದರೆ
*"ವಿನಯವನ್ನು ರೂಢಿಸಿಕೋ"* ಎಂದರ್ಥ.

೨) *"ಬಾಯಿಯ ಮೇಲೆ ಬೆರಳಿಟ್ಟುಕೋ ಎಂದರೆ ಸ್ವ-ಪ್ರಶಂಸೆ ಮಾಡಿಕೊಳ್ಳಬೇಡ "* ಎಂದು.

೩)ಕಿವಿ ಹಿಡಿದು ನಿಲ್ಲೆಂದರೆ *"ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು"* ಅಂತ.

೪) ಬೆಂಚಿನ ಮೇಲೆ ನಿಲ್ಲು ಅಂದರೆ *"ಎಲ್ಲರಿಗಿಂತ ಓದಿನಲ್ಲಿ ಮುಂದೆ ಇರು"* ಅಂತರ್ಥ.

೫) ಕೈಯೆತ್ತಿ ನಿಲ್ಲು ಅಂದರೆ
*"ನಿನ್ನ ಗುರಿ ಉನ್ನತವಾಗಿ ನಿಶ್ಚಲವಾಗಿರಲಿ"* ಎಂದು.

೬) ಗೋಡೆಗೆ ಮುಖಮಾಡಿ ನಿಲ್ಲು ಎಂದರೆ *"ಆತ್ಮಾವಲೋಕನ ಮಾಡಿಕೋ"* ಅಂತ.

೭) ತರಗತಿಯ (ಕ್ಲಾಸಿಂದ) ಹೊರಗೆ ನಿಲ್ಲಿಸಿದರೆ *"ಪರಿಸರದ ಜ್ಞಾನ ಪಡೆದುಕೋ"* ಎಂದು.

೮) ಕರಿಹಲಗೆ (ಬ್ಲ್ಯಾಕ್ ಬೋರ್ಡು) ಒರೆಸು ಎಂದರೆ
*"ಯಾವಾಗಲೂ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು"* ಎಂದರ್ಥ.

೯) ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ *"ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು. ಸೋಲೊಪ್ಪಿಕೊಳ್ಳಬೇಡ"* ಎಂದು.

ಎಷ್ಟು ಚೆನ್ನಾಗಿದೆಯಲ್ವಾ ಶಿಕ್ಷೆಯೆಂಬ ನವರತ್ನಗಳು.
ಗೂಢಾರ್ಥವ ಜೋಡಿಸಿ ಬದುಕ ತಿದ್ದುವ ಗುರುಗಳಿಗೆ ನಮೋ.ಜೀವನದ ಸತ್ಯವು_ಇಷ್ಟೇ*

*ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ* *ಮಾಡುವ ದಿನಗಳಷ್ಟು ಮಾತ್ರ*
*ಒಳ್ಳೆಯವರು ಅಗಿ ಕಾಣುತ್ತೇವೆ*
*ನಮ್ಮಿಂದ ಒಂದು ಚಿಕ್ಕ ತಪ್ಪು* *ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ*
*ನಾವು ಮಾಡುವ ಕೆಲಸಗಳು*
*ಜನರನ್ನು* *ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲಲ
*ಸಮುದ್ರಕ್ಕೆ ಬಿದ್ದ ಮಳೆ,*
? *ಹಸಿವಿಲ್ಲದವನಿಗೆ ನೀಡಿದ ಆಹಾರ,*
? *ಧನವಂತನಿಗೆ ನೀಡಿದ ಹಣ,*
? *ದರಿದ್ರವಂತನಿಗೆ ಬಂದ ಯೌವ್ವನ,*
*ಯಾವಾಗಲೂ ವ್ಯರ್ಥ.*
*ಜೀವನ ನಮಗೆ ಏನು ಕೊಟ್ಟಿದ್ದೆ ಅನ್ನುವದಕ್ಕಿಂತ*
*ಜೀವನದಲ್ಲಿ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಅನ್ನೋದು ಮುಖ್ಯ.*
*"ಚಿಂತೆ ಮತ್ತು ಚಿತೆಗೆ "ಇರುವ ವ್ಯತ್ಯಾಸ ಒಂದು ಸೊನ್ನೆ ಆದರೆ ಅದೇ ಜೀವನದ ನಿಜವಾದ ಸತ್ಯ

"ಒಬ್ಬರ ಅತಿಯಾದ ದ್ವೇಷದಿಂದ ಮನಸ್ಸಿಗೆ ಆಗುವ ದುಃಖಕ್ಕಿಂತ ಒಬ್ಬರನ್ನು ಅತಿಯಾಗಿ ಹಚ್ಚಿಕೊಳ್ಳುವುದರಿಂದ ನಮ್ಮ ಮನಸ್ಸು ಘಾಸಿಗೊಳ್ಳುತ್ತದೆ. ಯಾರೂ ಯಾರಿಗೂ ಅನಿವಾಯ೯ವಲ್ಲ. ಎಲ್ಲರನ್ನೂ ಎಲ್ಲಾ ಸಮಯದಲ್ಲೂ ಪ್ರೀತಿಸುವುದಾಗಲಿ, ದ್ವೇಷಿಸುವುದಾಗಲೀ, ಸಾಧ್ಯವಾಗಲ್ಲ ಆದರೇ... ಎಂಥಾ ಪರಿಸ್ಥಿತಿಯಲ್ಲೂ ಮಾನವೀಯತೆಯಿಂದ ವತಿ೯ಸುವವರೆ ನಿಜವಾದ ಮನುಷ್ಯರು.*"

ಜಗತ್ತನ್ನೇ ಗೆಲ್ಲಬೇಕೆಂಬ ಇಚ್ಛೆ ನಿನಗಿದ್ದರೆ ಅದಕ್ಕೆ ಬೇಕಾದದ್ದು ಒಂದೇ ಒಂದು ಮಾರ್ಗ, ಅದು ಬೇರೆಯವರಿಗೆ ಕೆಟ್ಟದಾಗಿ ಮಾತನಾಡದಿರುವುದು

*ಕೈಯಿಂದ ಎಸೆದ ಕಲ್ಲು*
*ನೂರು ಅಡಿ ಹೋಗಿ ಬೀಳುತ್ತದೆ*

*ಬಂದೂಕಿನಂದ ಹೊರಟ ಗುಂಡು*
*ಸಾವಿರ ಅಡಿ ದೂರ ಬೀಳುತ್ತದೆ*

ಆದರೆ.......!!

*ಹಸಿದವನಿಗೆ ಕೊಟ್ಟ ರೊಟ್ಟಿಯ ತುಂಡು*
*ಸ್ವರ್ಗದ ಬಾಗಿಲಿನವರೆಗೂ ಹೋಗುತ್ತದೆ*
" *ಶುದ್ಧ ಮನಸ್ಸಿನಿಂದ ಆಡುವ ಮಾತು ಲಕ್ಷಾಂತರ ಜನರ ಹ್ರದಯ ಗೆಲ್ಲಬಹುದು.., ಅದೇ ಒಂದು ದ್ವೇಷದ ನುಡಿ ಲಕ್ಷಾಂತರ ಜನ ವಿರೋಧಿಗಳನ್ನು ಸ್ರಷ್ಠಿಸಬಹುದು...ಮಾತಿಗಿರುವ ಶಕ್ತಿಯೇ ಅಂತಹದು ಮಾತಿಗಿರುವ ಬೆಲೆ ಮಾತು ಆಡುವವರಿಗೂ ಇರಲ್ಲ*..."

*🌼🌺🌼🌺🌼🌺🌼🌺🌼🌺
ತೊಂದರೆಗಳಿಗೆ ಎರಡು ಕಾರಣವಂತೆ
ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು. ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು..!

*ಕೆಲವೇ ಕ್ಷಣಗಳಲ್ಲಿ ಹಣ ಎನ್ನುವುದು ಬರೀ ಕಾಗದದ ಚೂರುಗಳಾಗಬಹುದು...!!*

*ಚಿನ್ನವು ಕೇವಲ ಒಂದು ಲೋಹವಾಗಿಬಿಡಬಹುದು...!!*

*ಆದರೆ ಸಂಬಂಧ ಗಳಿಗಿರುವ ಬೆಲೆಯನ್ನು ದೇವರಿಗೂ ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲ...!!*

*ನಮ್ಮ ಸ್ನೇಹಿತರು ಹಾಗೂ ಪರಿವಾರದವರೇ ನಮ್ಮ ನಿಜವಾದ ಸಂಪತ್ತು...!!*

💐 " ನಾವೆಷ್ಟು ಖುಷಿಯಾಗಿದ್ದೇವೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ ಸಂತೋಷವಾಗಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸಾಧ್ಯವಾದಷ್ಟು ಎಲ್ಲರನ್ನೂ ಖುಷಿ ಯಾಗಿಡಲು ಪ್ರಯತ್ನಿಸೋಣ*."

[
ಒಂದು ದಿನ ಕನಸು, ಜೀವನವನ್ನು ಕೇಳುತ್ತೆ ನಾನು ಯಾವಾಗಲು ನನಸು ಆಗೋದಿಲ್ಲಾ ಯಾಕೆ? ಅಂತಾ...... ಆಗ ಜೀವನ ನಗುತ್ತಾ ಹೇಳುತ್ತೆ, ಪ್ರಯತ್ನ ಪಡದೆ ಎಲ್ಲಾ ಕನಸು ನನಸಾದರೆ ಜೀವನಕ್ಕೆ ಅಥ೯ನೇ ಇರೋದಿಲ್ಲ ಅಂತಾ..*

 *ನೊಣಗಳು ನಮ್ಮ ಸುಂದರವಾದ ಇಡೀ ದೇಹವನ್ನು ಬಿಟ್ಟು ಗಾಯದ ಮೇಲೆ ಕುಳಿತುಕೊಳ್ಳುವ ಹಾಗೇ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.*

_*ಚಿಂತಿಸದಿರಿ*_

*ಹುಡುಕುವವರು ಏನಾದರೂ ಹುಡುಕಿಕೊಂಡು ಇರಲಿ ನಮಗೆ ನಮ್ಮತನದ ಅರಿವಿರಲಿ ನಮ್ಮ ಅಂತರಾಳ ಯಾವಾಗಲೂ ಒಳ್ಳೆಯದನ್ನೇ ಬಯಸಲಿ."*

_*ಅಬ್ದುಲ್  ಕಲಾಂ

💮💮
ಮರೆತು ಬಿಡಿ : ನಿಮ್ಮ ಅಸಫಲತೆಯ
ಮರೆತು ಬಿಡಿ : ಬೇರೆಯವರ ತಪ್ಪನ್ನು
ಮರೆತು ಬಿಡಿ : ಹಿಂದಿನ ಕಹಿ ಕ್ಷಣಗಳ

💮💮💮
ಬಿಟ್ಟುಬಿಡಿ : ಇನ್ನೊಬ್ಬರನ್ನು ಕೀಳಾಗಿ ಕಾಣುವುದನು
ಬಿಟ್ಟುಬಿಡಿ : ಇನ್ನೊಬ್ಬರ ಏಳಿಗೆಗೆ ಹೊಟ್ಟೆ ಕಿಚ್ಚನು
ಬಿಟ್ಟುಬಿಡಿ : ಇನ್ನೊಬ್ಬರ ಹಣದ ಆಸೆಯನು
ಬಿಟ್ಟುಬಿಡಿ : ಇನ್ನೊಬ್ಬರ ಅಪಹಾಸ್ಯವನು
ಬಿಟ್ಟುಬಿಡಿ : ಇನ್ನೊಬ್ಬರ ಸಫಲತೆಗೆ ದುಃಖವನು

*💎 ಸುಖ ಜೀವನದ ಮಂತ್ರಗಳು 💎*

1 ಹಿತವಾಗಿ ಮಾತಾಡಿ 👉 ಶಾಂತಿ ಸಿಗುತ್ತದೆ
2 ಅಹಂಕಾರ ಬಿಡಿ 👉 ದೊಡ್ಡವರಾಗುವಿರಿ
3 ಭಕ್ತಿಯಿರಲಿ 👉 ಮುಕ್ತಿ ಸಿಗುತ್ತದೆ
4 ವಿಚಾರ ಮಾಡಿ 👉 ಜ್ಞಾನ ಸಿಗುತ್ತದೆ
5 ಸೇವೆ ಮಾಡಿ 👉 ಶಕ್ತಿ ದೊರೆಯುತ್ತದೆ
6 ಸಹನೆಯಿಂದಿರಿ 👉 ದೈವತ್ವ ದೊರೆಯುತ್ತದೆ
7 ಸಂತೋಷದಿಂದಿರಿ 👉 ಸುಖ ದೊರೆಯುತ್ತದೆ

👌 ಒಂದೊಳ್ಳೆj ವಿಚಾರ👌

ಪರಕೆಯ ಕಡ್ಡಿಗಳು ದಾರದಿಂದ ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಸಂಬಂಧ ಎಂಬ ದಾರದಿಂದ ಒಂದಾಗೋಣ.

*ಕಟ್ಟಿದ ಮನೆ ಬಾಡಿಗೆದಾರನಿಗೆ ಆಯ್ತು*_
▫ *ಕೊಂಡ ಹೊಲ* *ಗೇಣಿದಾರನಿಗಾಯ್ತು*
▫ _*ಮುದ್ದಾಗಿ ಬೆಳೆಸಿದ ಮಗಳು ಅಳಿಯನಿಗಾಯ್ತು*_
▫ *ಹತ್ತಾರು ದೇವರಿಗೆ ಹರಕೆ ಹೊತ್ತು ಹೆತ್ತ ಮಗ ಸೊಸೆಯ ಪಾಲಾಯ್ತು*

ವಯಸ್ಸಾದ ಮೇಲೆ ಯಾರಿಗೆ ಯಾರಿಲ್ಲ ಎರವಿನ ಸಂಸಾರ

*ಆದರೂ ಆಸೆಗೆ ಕೊನೆಯಿಲ್ಲ..*
""ತಿದ್ದದೆ ತೀಡದೆ ಅಂದ ಕಾಣದು ಗೊಂಬೆ.*
*ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ.*
*ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು."*
*ಕಂಬಳಿ ಹುಳುವಿನಿಂದಲೇ*
*ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ*! *ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ* ""...

**👨‍❤‍👨ಸ್ನೇಹ ಅನ್ನೋದು ನೆನಪು ಅಲ್ಲ ಕನಸು ಅಲ್ಲ*
*ನಮ್ಮ ಜೊತೆ ಸದಾ ಇರೋ ಇನ್ನೊoದು ಮನಸ್ಸು* 😘❤
*ಯಶಸ್ಸು ಎಂದರೆ ವೈಯಕ್ತಿಕವಾಗಿ ನಾವೆಷ್ಟು ಬೆಳೆದೆವು ಎಂಬುದಲ್ಲ ,* *ನಮ್ಮ ಬೆಳವಣಿಗೆಗಳಿಂದ*
*ಎಷ್ಟು ಜನರು ಸ್ಪೂರ್ತಿ ಪಡೆದರು ಎಂಬುದು ಮುಖ್ಯವಾಗುತ್ತದೆ !*

*ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ*
*ಹಾಗೆಯೇ ಜೀವನ, ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ*

kannada moral stories in kannada kannada neeti kathegalu nithikathegaluಕನ್ನಡ ಕನ್ನಡ ನೀತಿ ಕತೆಗಳು

ದೇವಸ್ಥಾನಕ್ಕೆ ಹೋಗಿಬಂದ ಆಕೆ ತಂದೆಗೆ ಇನ್ನುಮುಂದೆ ದೇವಸ್ಥಾನಕ್ಕೆ ಹೋಗಲ್ಲ ಎಂದಳು.. ಯಾಕೆ ಗೊತ್ತಾ..? ಬಳಿಕ ತಂದೆ ಏನೆಂದರೆಂದರೆ..?
2 ನಿಮಿಷ ಸಮಯ ಕೊಟ್ಟು ಓದಿ

ಓರ್ವ ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಬಂದಳು.. ದರ್ಶನ ಚೆನ್ನಾಗಿ ಆಯಿತಾ ಮಗಳೇ, ಎಂದು ತಂದೆ ಪ್ರಶ್ನಿಸಿದರು….
ಮಗಳು: ಇನ್ನು ಮುಂದೆ ನನ್ನನ್ನು ದೇವಸ್ಥಾನಕ್ಕೆ ಹೋಗು ಎಂದು ಹೇಳಬೇಡಿ.. ಕೋಪದಿಂದ ನುಡಿದಳು…
ತಂದೆ: ಏನು ನಡೆಯಿತು ಮಗಳೇ..
ಮಗಳು: ದೇವಸ್ಥಾನದಲ್ಲಿ ಒಬ್ಬರಿಗೂ ಭಕ್ತಿ ಇಲ್ಲ, ದೇವರ ಮೇಲೆ ಧ್ಯಾನ ಇಲ್ಲ. ಎಲ್ಲರೂ ಅವರ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದು, ಫೋಟೋಗಳನ್ನು ತೆಗೆಯುವುದು,
ಭಕ್ತಿಗೆ ಸಂಬಂಧಿಸಿದ್ದು ಅಲ್ಲವೆ ಬೇರೆ ಸಂಗತಿಗಳನ್ನು ಚರ್ಚಿಸುವುದನ್ನು ಮಾಡುತ್ತಿದ್ದಾರೆ. ಕನಿಷ್ಠ ಭಜನೆಗಳ ಬಳಿ ಸಹ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಯಾರಲ್ಲೂ ನನಗೆ ಭಕ್ತಿ ಕಾಣಿಸಲಿಲ್ಲ.

ತಂದೆ: (ಸ್ವಲ್ಪ ಹೊತ್ತು ಮೌನವಾಗಿದ್ದು) ಸರಿ.. ನೀನು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನನ್ನದೊಂದು ಸಣ್ಣ ಕೋರಿಕೆ… ನೆರವೇರಿಸುತ್ತೀಯಾ..?
ಮಗಳು: ಖಂಡಿತ ಅಪ್ಪಾ… ನಿಮ್ಮ ಮಾತನ್ನು ನಾನು ಯಾವಾಗಲೂ ಇಲ್ಲ ಎಂದಿಲ್ಲ. ಹೇಳಿ ಏನು ಮಾಡಬೇಕು…
ತಂದೆ: ಒಂದು ಗಾಜಿನ ಗ್ಲಾಸಿನ ತುಂಬ ನೀರು ತೆಗೆದುಕೊಂಡು ಹೋಗು ದೇವಸ್ಥಾನಕ್ಕೆ.. ಮೂರೇ ಮೂರು ಪ್ರದಕ್ಷಿಣೆ ಮಾಡಿ ಬರಬೇಕು.. ಆದರೆ ಸಣ್ಣ ಸೂಚನೆ…ನಿನ್ನ ಗ್ಲಾಸ್‌ನಿಂದ ಒಂದೇ ಒಂದು ಹನಿ ನೀರು ಚೆಲ್ಲಬಾರದು. ಈ ಕೆಲಸ ಮಾಡುತ್ತೀಯಾ…….
ಮಗಳು: ಹಾಗೆಯೇ ಆಗಲಿ. ಖಂಡಿತ ತರುತ್ತೇನೆ ನಿಮಗಾಗಿ ಎಂದು.. ಒಂದು ಗ್ಲಾಸ್ ತುಂಬ ನೀರು ತೆಗೆದುಕೊಂಡು ಹೊರಟಳು.. ಮೂರು ಗಂಟೆಗಳ ಬಳಿಕ ಮನೆಗೆ ಗ್ಲಾಸ್ ನೀರಿನಿಂದ ಹಿಂತಿರುಗಿದಳು..
ಮಗಳು: ತಗೋ ಅಪ್ಪಾ…ನಾನು ದೇವಸ್ಥಾನಕ್ಕೆ ಈ ಗ್ಲಾಸ್ ನೀರಿನಿಂದ ಹೋಗಿ ನೀವು ಹೇಳಿದ ರೀತಿ ಮೂರು ಪ್ರದಕ್ಷಿಣೆ ಪೂರ್ಣಗೊಳಿಸಿ ಬಂದೆ. ಒಂದೇ ಒಂದು ಹನಿ ನೀರು ಸಹ ಚೆಲ್ಲಲಿಲ್ಲ…

ತಂದೆ ಮೂರು ಪ್ರಶ್ನೆಗಳನ್ನು ಕೇಳಿದರು.
1. ನೀನು ಪ್ರದಕ್ಷಿಣೆ ಮಾಡುತ್ತಿದ್ದಾಗ ಎಷ್ಟು ಮಂದಿ ತಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.?
2. ಎಷ್ಟು ಮಂದಿ ಅನಗತ್ಯ ವಿಚಾರಗಳನ್ನು ದೇವಸ್ಥಾನದಲ್ಲಿ ಚರ್ಚಿಸುತ್ತಿದ್ದರು?
3. ಎಷ್ಟು ಮಂದಿ ಸ್ವಲ್ಪವೂ ಭಕ್ತಿ ಇಲ್ಲದೆ ನಡೆದುಕೊಂಡರು?
ಮಗಳು: ನಾನೇಗೆ ಹೇಳಲು ಸಾಧ್ಯ ಅಪ್ಪಾ.. ನನ್ನ ದೃಷ್ಟಿಯೆಲ್ಲಾ ಗ್ಲಾಸ್‌ನಿಂದ ಒಂದೇ ಒಂದು ಹನಿ ನೀರು ಚೆಲ್ಲದಂತೆ ಎಚ್ಚರ ವಹಿಸಿದ್ದೆ, ನನ್ನ ದೃಷ್ಟಿಯೆಲ್ಲಾ ಅದರ ಮೇಲೇ ಇತ್ತು…
ತಂದೆ: ಇದೇನಮ್ಮಾ ನಾನು ಹೇಳಬೇಕೆಂದುಕೊಂಡಿದ್ದು. ನೀನು ದೇವಸ್ಥಾನಕ್ಕೆ ಹೋದಾಗ ನಿನ್ನ ದೃಷ್ಟಿ ಭಗವಂತನ ವಿಗ್ರಹದ ಮೇಲೆ, ನಿನ್ನ ಧ್ಯಾನ ಅವರ ಮೇಲೆ ಇರಬೇಕು. ಆಗ ನೀನು ಅಂತಃ ಮುಖಿಯಾಗಿ ಭಗವಂತನ ಪಡೆಯುತ್ತೀಯ. ಜೀವನ ವೃದ್ಧಿಗೊಳ್ಳಲು ಈ ವಿಧವಾದ ಏಕಾಗ್ರತೆ ಸಾಧಿಸಬೇಕು.

ಮಗಳು: ತುಂಬಾ ಥ್ಯಾಂಕ್ಸ್ ಅಪ್ಪಾ… ಈ ದಿನ ನನಗೆ ಭಗವಂತನ ದೇವಾಲಯ ಯಾಕೆ ಕಟ್ಟಿದ್ದಾರೆ, ಅಂತಃರ್ಮುಖಿ ಆಗುವುದು ಎಂದರೆ ಏನು ಎಂಬ ವಿಷಯಗಳ ಬಗ್ಗೆ ಅರಿವು ಮೂಡಿಸಿದಿರಿ..

ನಿಮ್ ಮಕ್ಕಳಲ್ಲಿ ಧರ್ಮ ಪ್ರಜ್ಞೆ ಜಾಗೃತಗೊಳಿಸಿ.

ನಗೆಹನಿಗಳು ಕನ್ನಡ ನಗೆಹನಿಗಳು ಕನ್ನಡ ನಗೆಹನಿಗಳು ಕನ್ನಡ ಜೋಕ್ಸ್ Kannada jokes

 ವಿಜಯ್ ಮಲ್ಯ RCB ಬದಲು ಮೂರು JCB ತಗೊಳ್ತಿದ್ರೆ ಲೋನ್ ಆದ್ರೂ ಕ್ಲಿಯರ್ ಮಾಡಬಹುದಿತ್ತು.

ಗಂಡ ಹೆಂಡತಿಯ ನಡುವೆ.. ಮಾತಿಲ್ಲಾ ಕಥೆಯಿಲ್ಲ.. ಆದರೆ ಅಲ್ಲಿ ನಡೆದದ್ದೇ ಬೇರೆ..
ರಾತ್ರಿ ಸಮಯ 9 ಘಂಟೆ ಆಗಿ ಹೋಗಿತ್ತು.. ಗಂಡ ಇನ್ನೂ ಮನೆಗೆ ಬಂದಿಲ್ಲ.. ಕಾದು ಕಾದು ಸುಸ್ತಾದ ಸುಮತಿ.. ಕಲರ್ಸ್ ಕನ್ನಡ ಚಾನಲ್ ನ ರಾಧ ರಮಣ ಸೀರಿಯಲ್ ನೋಡುತ್ತಾ ಕುಳಿತಿದ್ದಳು..
ಮನೆಯ ಕಾಲಿಂಗ್ ಬೆಲ್ ಶಬ್ದವಾಯಿತು.. ಎದ್ದು ಹೋಗಿ ಬಾಗಿಲು ತೆರೆದಳು.. ನೋಡಿದರೆ ಗಂಡ ಬಹಳ ಸುಸ್ತಾಗಿ ಬಂದಿದ್ದ..
ಬಂದವನೇ ಸೀದಾ ರೂಮಿನಲ್ಲಿ ಹೋಗಿ ಮಲಗಿದ.. ಹೆಂಡತಿಯ ಕಡೆ ಮುಖವನ್ನು ಮಾಡಲಿಲ್ಲ..

ಹೆಂಡತಿಯ ಮನಸ್ಸಲ್ಲಿ ಆತಂಕ.. ರೀ ಊಟ ಮಾಡುವುದಿಲ್ಲವಾ ಎಂದಳು.. ಗಂಡನಿಗಾಗಿ ಕಾಯುತ್ತಾ ತಾನೂ ಕೂಡ ಊಟ ಮಾಡಿರಲಿಲ್ಲ..
ನನಗೆ ಹಸಿವಿಲ್ಲವೆಂದ ಗಂಡ ಸುಮ್ಮನೆ ಅದೇನೋ ಯೋಚಿಸುತ್ತಾ ಮಲಗಿದ.. ಹೆಂಡತಿ ತಾನೂ ಊಟ ಮಾಡದೇ ಬಂದು ಮಲಗಿದಳು..
ಹೆಂಡತಿಯ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಒಮ್ಮೆಲೆ ಬಂದು ಹೋದವು.. ಗಂಡನ ಬಳಿ ತಿರುಗಿ ನೋಡಿದಳು.. ಗಂಡ ತನ್ನ ಪಾಡಿಗೆ ತಾನು ತುಂಬಾ ಆಲೋಚನೆಯ ಜೊತೆ ಟೆಂಶನ್ ನಲ್ಲಿ ಇದ್ದ..
ಹೆಂಡತಿಯು ತನ್ನ ಮನಸ್ಸಿನಲ್ಲಿ ಆಲೋಚಿಸಲು ಶುರು ಮಾಡಿದಳು.. ನನ್ನ ಗಂಡ ಏನಾದರೂ ಪರಸ್ತ್ರೀ ಜೊತೆಗೆ ಪ್ರೀತಿಯಲ್ಲಿ ಬಿದ್ದಿರಬಹುದ ಎಂದು.. ನನಗೇನಾದರೂ ಡಿವೋರ್ಸ್ ಕೊಡಲು ಯೋಚಿಸುತ್ತಿರಬಹುದ ಎಂದು ದೀರ್ಘ ಆಲೋಚನೆಗಿಳಿದಳು..
ಮಲಗಿದ್ದ ಗಂಡ ಮೆಲ್ಲನೆ ಎದ್ದು ಕುಳಿತ.. ಎದ್ದು ತನ್ನ ಹೆಂಡತಿಯನ್ನು ಮೆಲು ಧ್ವನಿಯಲ್ಲಿ ಎಬ್ಬಿಸಿದ..
ಅವಳ ಕೈ ಹಿಡಿದ.. ಕೈ ಹಿಡಿದು.. ನಿನ್ನ ಬಳಿ ಏನನ್ನೋ ಕೇಳಬೇಕೆಂದಿದ್ದೇನೆ ಎಂದ..
ಹೆಂಡತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.. ಓ ನನ್ನ ಗಂಡ ನನ್ನ ಬಳಿ ಡಿವೋರ್ಸ್ ಕೇಳುವವನಿದ್ದಾನೆ ಎಂದುಕೊಂಡಳು..
ಹಿಡಿದಿದ್ದ ಕೈಗಳನ್ನು ಇನ್ನೂ ಬಿಗಿ ಮಾಡಿದ.. ಹೆಂಡತಿಯ ಬಳಿ ಕೇಳಿಯೇ ಬಿಟ್ಟ..
“ಸುಮತಿ ನಾನು ಬಹಳ ಟೆಂಶನ್ ನಲ್ಲಿ ಇದ್ದೇನೆ.. ದಯಮಾಡಿ ಹೇಳು.. ಈ ಬಾರಿ.. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಸರ್ಕಾರ ಬರಬಹುದು ಎಂದ” 😀😀😀😀

ಅಯ್ಯೋ ನಿನ್ನ ಬಾಯಿಗಿಟ್ಟಾಕ ಹೋಗಿ ಮಲ್ಕೊ ಎಂದವಳೇ.. ಎದ್ದು ಹೋಗಿ ಅಡುಗೆ ಮನೆಯಲ್ಲಿ ತಟ್ಟೆಗೆ ಊಟ ಬಡಿಸಿಕೊಂಡು ಬಂದು.. ಜೀ ಕನ್ನಡದ ನಿಗೂಢ ರಾತ್ರಿ ಧಾರವಾಹಿ ನೋಡುತ್ತಾ ಊಟ ಮಾಡಿ ಮಲಗಿದಳು..

“ಮತದಾನ ನಮ್ಮೆಲ್ಲರ ಹಕ್ಕು.. 18 ವರ್ಷ ಮೇಲ್ಪಟ್ಟವರು ಎಲ್ಲರೂ ತಪ್ಪದೇ ಮತದಾನ ಮಾಡಿ”

😅😂😅😂😅😂😅😂😅😂

ಒಂದು ಮನೆಯಲ್ಲಿ ಮಹಿಳೆಯರ ಕಿಟಿಪಾರ್ಟಿ ನಡೀತಿತ್ತು. ಗಂಡಂದಿರಿಗೆ I LOVE YOU ಅಂತ ಹೇಳಿದರೆ ಎಷ್ಟು ಚೆಂದ ಅಲ್ಲ್ವಾ ಅಂತ ಮಾತು ಬಂದಿತು. ನೀವು ಆ ತರಹ ಹೇಳಿ ಎಷ್ಟು ದಿನ ಆಯ್ತು ಎಂದು ಒಬ್ಬರಿಗೊಬ್ಬರು ಕೇಳಿಕೊಂಡರು. ಒಬ್ಬೊಬ್ಬರದೂ ಒಂದೊಂದು ತರಹದ ಉತ್ತರ ಬಂತು. ಹಾಗಾದರೆ ಸರಿ ಈಗಲೇ ಎಲ್ಲರೂ ನಮ್ಮ ಗಂಡಂದಿರಿಗೆ ಮೆಸೇಜ್ ಕಳುಹಿಸೋಣ ಏನು ಪ್ರತಿಕ್ರಿಯೆ ಬರುತ್ತದೆ ನೋಡೋಣ.... ತುಂಬಾ ರೊಮಾಂಟಿಕ್ ಪ್ರತಿಕ್ರಿಯೆಗೆ ಬಹುಮಾನ ಅಂತ ತೀರ್ಮಾನಿಸಿದರು . ಪ್ರತಿಯೊಬ್ಬರು ತಂತಮ್ಮ ಗಂಡಂದಿರ ಮೊಬೈಲಿಗೆ
I LOVE YOU ಮೆಸೇಜ್ ಕಳುಹಿಸಿದರು.

ಸ್ವಲ್ಪ ಸಮಯದ ನಂತರ ಆ HUSBANDS ಕಡೆಯಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಕೊಟ್ಟಿದೆ.ಓದಿ ಓದಿ👌👌👌👌

*Husband 1 :*
SWEETY... ತಲೆ ಕೆಟ್ಟುಗಿಟ್ಟು ಹೋಗಿಲ್ಲ ತಾನೇ ನಿನಗೆ ? 😝😝😝😝

*Husband 2* : ಸರಿ ಬಿಡು ಇವತ್ತೂ ಅಡುಗೆ ಮಾಡಿಲ್ವಾ 😊😊

*Husband 3* : Darling,
ಈ ತಿಂಗಳ ಮನೆ ಖರ್ಚಿನ ದುಡ್ಡು ಮುಗಿದೋಯ್ತಾ?
😅😅😅

*Husband 4 :*ಏಕೆ ಏನಾಯ್ತು ? ಏನ್ ವಿಷಯ ?

*Husband 5 :*ಏನು ನೀನು ಕನಸು ಕಾಣ್ತಾ ಇದೀಯೋ,, ಅಥವಾ ನನಗೇ ಭ್ರಮೇನೋ
😜😜😜

*Husband 6;:
ಮುಂದಿನ ವಾರದ ನಿನ್ನ ತಂಗಿ ಮದುವೇಗೆ ಹೊಸಾ ಒಡವೆ ಸೆಟ್ ಬೇಕಾ ?.... ಅದಕ್ಕೇ ಈ ಮಸಾಜಾ?

*Husband 7* ::
ಇಲ್ಲಿ ಆಫೀಸಲ್ಲಿ ನಂದೇ ನಂಗಾಗಿದೆ... ಟೆನ್ಷನ್ನಲ್ಲಿ ಸಾಯ್ತಿದೀನಿ.... ನಿಂದೊಂದು ಬೇರೆ ಗೋಳು ಏನೇ ಇದು ದರಿದ್ರದ ಮೆಸೇಜು
😝😜😛

*Husband 8* :
ಲೇ ನಿನಗೆಷ್ಟು ಸರ್ತಿ ಬಡುಕೊಂಡ್ರೂ ಆ ಕಿತ್ತೋದ್ ಸೀರಿಯಲ್ಗಳ್ನ ನೋಡೋದು ಬಿಡಲ್ವಲ್ಲೆ .... ಆ ಕಚಡಾ ನೋಡಿ ಇಂಥಾ ಮೆಸೇಜ್ ಥೂ 😛😛😛

Husband 9::
ಹೂಂ ,,,, ಯಾರಿಗೆ ಗುದ್ದಿದೆಯೆ ನನ್ನ ಕಾರು ,, ಏನು ಒಂದೈವತ್ತು ಸಾವಿರಕ್ಕೆ ತಂದಾ ತಲೆಗೆ,,, ನನ್ ಕಾರು ಮುಟ್ಟಬೇಡ ಅಂತ ಎಷ್ಟು ಸಲ ಹೇಳಿದೀನಿ.. ಹೂಂ ಎಲ್ಲಿದೀಯ ಬೊಗಳು 😳😳😳😳😳

*Husband 10* :
ಏನ್ ತಾಯೀ ಇದು ನಿನ್ನ ಗೋಳು? ಇವತ್ತೂ, ಹುಡುಗರನ್ನ ಸ್ಕೂಲಿಂದ ನಾನೇ ಕರಕೊಂಡ್ ಬರ್ಬೇಕು ತಾನೇ ?🤑😖😣

ಕೊನೆಯ ಹಾಗೂ ಅದ್ಭುತ ಪ್ರತಿಕ್ರಿಯೆ :::::::::::::::::::::::::

Husband :: 11*
ಯಾರ್ರೀ ಇದು ? ನನ್ನ ಹೆಂಡತಿ ಫೋನಿಂದ ಮೆಸೇಜ್ ಕಳಿಸ್ತಿರೋದು? 😡😡
🤣🤣🤣🤣🤣🤣🤣🤣🤣🤣
Dont laugh alone pass it on. ಕಂಜೂಸ್ ತರಹ ಒಬ್ಬರೇ ನಗಬೇಡಿ. ಮುಂದಕ್ಕೆ ಕಳಿಸಿಕೊಡಿ ಮೆಸೇಜ್ ನ.
🤗🤗🤗🤗🤗🤗🤗🤗🤗🤗

ರಾಹುಲ್ ಗಾಂಧಿ - 'ಮಹಾಭಾರತ'ದಲ್ಲೂ ಮುಸ್ಲಿಂ ಗೆಳೆಯರಿದ್ದರು.....

ಪತ್ರಕರ್ತ - ಅದು ಹೇಗೆ ಸರ್?

ರಾಹುಲ್ ಗಾಂಧಿ - ಭೀಷ್ಮ ಪಿತಾಮಹಾರು ಯಾವಾಗಲೂ 'ಆವೋ ಉಸ್ಮಾನ್ ಭಾಯೀ' ಎಂದು ತನ್ನ ಮುಸ್ಲಿಂ ಸ್ನೇಹಿತನನ್ನು ಕರೆಯುತ್ತಿದ್ದರು.

ಪತ್ರಕರ್ತ - ಅವರು 'ಆವೋ ಉಸ್ಮಾನ್ ಭಾಯ್' ಅಂತಲ್ಲ😡... 'ಆಯುಷ್ಮಾನ್ ಭವ !' ಎಂದು ಹೇಳುತಿದ್ದರು...

ಗಂಡ ಹೆಂಡತಿಯ ನಡುವೆ.. ಮಾತಿಲ್ಲಾ ಕಥೆಯಿಲ್ಲ.. ಆದರೆ ಅಲ್ಲಿ ನಡೆದದ್ದೇ ಬೇರೆ..
ರಾತ್ರಿ ಸಮಯ 9 ಘಂಟೆ ಆಗಿ ಹೋಗಿತ್ತು.. ಗಂಡ ಇನ್ನೂ ಮನೆಗೆ ಬಂದಿಲ್ಲ..
ಕಾದು ಕಾದು ಸುಸ್ತಾದ ಸುಮತಿ.. ಕಲರ್ಸ್ ಕನ್ನಡ ಚಾನಲ್ ನ ರಾಧ ರಮಣ ಸೀರಿಯಲ್ ನೋಡುತ್ತಾ ಕುಳಿತಿದ್ದಳು..

ಮನೆಯ ಕಾಲಿಂಗ್ ಬೆಲ್ ಶಬ್ದವಾಯಿತು.. ಎದ್ದು ಹೋಗಿ ಬಾಗಿಲು ತೆರೆದಳು.. ನೋಡಿದರೆ ಗಂಡ ಬಹಳ ಸುಸ್ತಾಗಿ ಬಂದಿದ್ದ..

ಬಂದವನೇ ಸೀದಾ ರೂಮಿನಲ್ಲಿ ಹೋಗಿ ಮಲಗಿದ.. ಹೆಂಡತಿಯ ಕಡೆ ಮುಖವನ್ನು ಮಾಡಲಿಲ್ಲ..
ಹೆಂಡತಿಯ ಮನಸ್ಸಲ್ಲಿ ಆತಂಕ.. ರೀ ಊಟ ಮಾಡುವುದಿಲ್ಲವಾ ಎಂದಳು.. ಗಂಡನಿಗಾಗಿ ಕಾಯುತ್ತಾ ತಾನೂ ಕೂಡ ಊಟ ಮಾಡಿರಲಿಲ್ಲ..
ನನಗೆ ಹಸಿವಿಲ್ಲವೆಂದ ಗಂಡ ಸುಮ್ಮನೆ ಅದೇನೋ ಯೋಚಿಸುತ್ತಾ ಮಲಗಿದ.. ಹೆಂಡತಿ ತಾನೂ ಊಟ ಮಾಡದೇ ಬಂದು ಮಲಗಿದಳು..

ಹೆಂಡತಿಯ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಒಮ್ಮೆಲೆ ಬಂದು ಹೋದವು.. ಗಂಡನ ಬಳಿ ತಿರುಗಿ ನೋಡಿದಳು.. ಗಂಡ ತನ್ನ ಪಾಡಿಗೆ ತಾನು ತುಂಬಾ ಆಲೋಚನೆಯ ಜೊತೆ ಟೆಂಶನ್ ನಲ್ಲಿ ಇದ್ದ..

ಹೆಂಡತಿಯು ತನ್ನ ಮನಸ್ಸಿನಲ್ಲಿ ಆಲೋಚಿಸಲು ಶುರು ಮಾಡಿದಳು..
ನನ್ನ ಗಂಡ ಏನಾದರೂ ಪರಸ್ತ್ರೀ ಜೊತೆಗೆ ಪ್ರೀತಿಯಲ್ಲಿ ಬಿದ್ದಿರಬಹುದ ಎಂದು.. ನನಗೇನಾದರೂ ಡಿವೋರ್ಸ್ ಕೊಡಲು ಯೋಚಿಸುತ್ತಿರಬಹುದ ಎಂದು ದೀರ್ಘ ಆಲೋಚನೆಗಿಳಿದಳು..

ಮಲಗಿದ್ದ ಗಂಡ ಮೆಲ್ಲನೆ ಎದ್ದು ಕುಳಿತ.. ಎದ್ದು ತನ್ನ ಹೆಂಡತಿಯನ್ನು ಮೆಲು ಧ್ವನಿಯಲ್ಲಿ ಎಬ್ಬಿಸಿದ..
ಅವಳ ಕೈ ಹಿಡಿದ.. ಕೈ ಹಿಡಿದು.. ನಿನ್ನ ಬಳಿ ಏನನ್ನೋ ಕೇಳಬೇಕೆಂದಿದ್ದೇನೆ ಎಂದ..

ಹೆಂಡತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.. ಓ ನನ್ನ ಗಂಡ ನನ್ನ ಬಳಿ ಡಿವೋರ್ಸ್ ಕೇಳುವವನಿದ್ದಾನೆ ಎಂದುಕೊಂಡಳು..

ಹಿಡಿದಿದ್ದ ಕೈಗಳನ್ನು ಇನ್ನೂ ಬಿಗಿ ಮಾಡಿದ.. ಹೆಂಡತಿಯ ಬಳಿ ಕೇಳಿಯೇ ಬಿಟ್ಟ..

“ಸುಮತಿ ನಾನು ಬಹಳ ಟೆಂಶನ್ ನಲ್ಲಿ ಇದ್ದೇನೆ.. ದಯಮಾಡಿ ಹೇಳು.. ಈ ಬಾರಿ.. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಸರ್ಕಾರ ಬರಬಹುದು ಎಂದ” 😀😀😀😀

ಅಯ್ಯೋ ನಿನ್ನ ಬಾಯಿಗಿಟ್ಟಾಕ ಹೋಗಿ ಮಲ್ಕೊ ಎಂದವಳೇ.. ಎದ್ದು ಹೋಗಿ ಅಡುಗೆ ಮನೆಯಲ್ಲಿ ತಟ್ಟೆಗೆ ಊಟ ಬಡಿಸಿಕೊಂಡು ಬಂದು.. ಜೀ ಕನ್ನಡದ ನಿಗೂಢ ರಾತ್ರಿ ಧಾರವಾಹಿ ನೋಡುತ್ತಾ ಊಟ ಮಾಡಿ ಮಲಗಿದಳು..
ಕೊನೆಯಲ್ಲಿ ನನ್ನದೊಂದು ಮಾತು

“ಮತದಾನ ನಮ್ಮೆಲ್ಲರ ಹಕ್ಕು.. 18 ವರ್ಷ ಮೇಲ್ಪಟ್ಟವರು ಎಲ್ಲರೂ ತಪ್ಪದೇ ಮತದಾನ ಮಾಡಿ”
ಒಬ್ಬರೇ ನಗಬೇಡಿ.. ಇಷ್ಟವಾಗಿದ್ದರೆ ಶೇರ್ ಮಾಡಿ.. ಹಾಗೆ ಸುಮ್ಮನೇ ಬರೆದಿರುವೆ..‌ 😊
[09/06, 6:01 pm] Mamatha Ded: *ಸರೋಜಕ್ಕ*: ಏನ್ರೀ ರತ್ನಕ್ಕ, ನೇತ್ರದಾನಕ್ಕೆ ಒಪ್ಪಿಗೆ ಕೊಟ್ಟ್ ಅರ್ಜಿ ತುಂಬಿ ಸಹಿ ಮಾಡಿದ್ಯಂತೆ
ಇಷ್ಟ್ ಒಳ್ಳೆ ಬುದ್ದಿ ಹೆಂಗೆ ಬಂತೇ ನಿಂಗೆ..??!

*ರತ್ನಕ್ಕ*: ಹಾಗೇನೂ ಇಲ್ಲ ಕಣೇ.. ಸತ್ತ್ ಮೇಲೂ ಈ ಪುಟ್ ಗೌರಿ,ಅಗ್ನಿಸಾಕ್ಷಿ ಎಲ್ಲಾ ನೋಡ್ಬೇಕಲ್ಲಾ...ಅದ್ಕೇ ಒಪ್ಕಂಡೆ..!!

kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

 🙏ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!
ಮನ ಮುಟ್ಟಿದ ಮಾತು.

*ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*

ಮಳೆ ಬಂದಾಗ ಕೊಚ್ಚಿ ‌‌‌ಹೋದ ಇರುವೆಗಳನ್ನ ಮೀನುಗಳು ತಿನ್ನುತ್ತವೆ.*

*ಅದೇ ನೀರು ಬತ್ತಿ ಹೋದಾಗ ಸತ್ತು ಬಿದ್ದ ಮೀನುಗಳನ್ನು ಇರುವೆಗಳು ತಿನ್ನುತ್ತವೆ.*

*ಅವಕಾಶ* ಎಲ್ಲರಿಗೂ ಇರುತ್ತದೆ.
ಆ *ಸಮಯ*ಕ್ಕೋಸ್ಕರ ಎಲ್ಲರು ಕಾಯಬೇಕು..

*ಪ್ರೀತಿಗೆ ಪಾತ್ರ ಎಂದು ಕರೆಸಿಕೊಳ್ಳುವ ಬದಲು ನಂಬಿಕೆಗೆ ಪಾತ್ರ ಎಂದು ಕರೆಸಿಕೊಳ್ಳುವುದು ತುಂಬಾ ಮುಖ್ಯ*
*ಯಾಕೆಂದರೆ ನಂಬಿಕೆಗೆ ಪಾತ್ರವಾದರೆ ಎಲ್ಲರೂ ಪ್ರೀತಿಸುತ್ತಾರೆ*

*ಯೋಚನೆ ಮತ್ತು ಸಲಹೆಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತವೆ*.
*ನೀರಿನ ಲೋಟದಲ್ಲಿ ನೊಣ ಬಿದ್ದರೆ ನೀರು ಚೆಲ್ಲುತ್ತೇವೆ*.
*ತುಪ್ಪದ ಡಬ್ಬಿಯಲ್ಲಿ ನೊಣ ಬಿದ್ದರೆ ನೊಣವನ್ನು ಎತ್ತಿ ಬಿಸಾಕ್ತೀವಿ*....

*ಇದೇ ಜೀವನ*.......

ಜೀವನ ಹೇಗಿರಬೇಕು ಅಂದರೆ ನಾವು ಹುಟ್ಟಿದರೆ ತಾಯಿ ಸಂತೋಷ ಪಡುವಂತಿರಬೇಕು.
ಬೆಳೆದರೆ ತಂದೆ ಆನಂದಿಸುವಂತಿರಬೇಕು
ಬಾಳಿದರೆ‌ ಸಮಾಜ ಸಂಭ್ರಮಿಸುವಂತಿರಬೇಕು
ಸತ್ತರೆ ಸ್ಮಶಾನ ಕೂಡ ಕಣ್ಣೀರಿಡುವಂತಿಬೇಕು.....

 ಜೀವನ ಶಾಶ್ವತವೂ ಅಲ್ಲ, ದೀರ್ಘವೂ ಅಲ್ಲ. ಕಳೆದ ಕ್ಷಣಗಳೆಂದೂ ಕೈಗೆ ಸಿಗುವುದಿಲ್ಲವೆಂಬ ಎಚ್ಚರಿಕೆಯಿಂದಲೇ ಇಂದಿನ ಸಮಯದ ಸದ್ಬಳಕೆ ಮಾಡಿಕೊಳ್ಳೋಣ.

*ಸಮುದ್ರದಲ್ಲಿ ಸ್ನಾನಕ್ಕೆಂದೆ ಬೇರೆ ತೆರೆಗಳಿರುವುದಿಲ್ಲ, ಬಂದ ತೆರೆಗಳಿಗೆ ತಲೆಯೊಡ್ಡಿ ಸ್ನಾನ ಮುಗಿಸಬೇಕು. ಹಾಗೆಯೇ ಬದುಕಿನಲ್ಲಿ ಖುಷಿಗೆಂದೇ ಬೇರೆ ದಿನಗಳಿರುವುದಿಲ್ಲ, ಎಲ್ಲ ದಿನದಲ್ಲೂ ಖುಷಿ ಪಡಲು ಸಾಧ್ಯವಿದೆ, ಅದನ್ನು ಅನುಭವಿಸುವ ಮನಸ್ಸು ನಮ್ಮದಾಗಿರಬೇಕು.

ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆಯ ಹುಲ್ಲಾಗಬೇಕು,*
*ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು,*
*ತೂರಿದಷ್ಟು ಎತ್ತರದ ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು,*
*ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಬೇಕು,*
*ಇವೆಲ್ಲವೂ ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು ಬೆಳಕ ಚಲ್ಲಬೇಕು.

*"ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ."*
*--ಸ್ವಾಮಿ ವಿವೇಕಾನಂದ 

ಒತ್ತಡವಿಲ್ಲದ ಉದ್ಯೋಗವಿಲ್ಲ ,
ನಷ್ಟವಿಲ್ಲದ ವ್ಯಾಪಾರವಿಲ್ಲ ,
ಕಷ್ಟವಿಲ್ಲದ ವ್ಯವಸಾಯವಿಲ್ಲ ,
ನೋವಿಲ್ಲದ ಸಂಸಾರವಿಲ್ಲ ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ ,

ಇವೆಲ್ಲವನ್ನೂ ಜಯಸುವುದೇನೇ
"ಜೀವನ"

*"ಚಂದ್ರಗುಪ್ತ ಕೇಳುತ್ತಾನೆ"*
*"ಎಲ್ಲವೂ ಹಣೆಬರಹದಲ್ಲಿ ಬರೆದಿದ್ದಾರೆ ಅಂದ ಮೇಲೆ ಪ್ರಯತ್ನ ಪಟ್ಟು ಫಲವೇನು"?*

*"ಚಾಣಕ್ಯ ಉತ್ತರಿಸುತ್ತಾನೆ"*
*"ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ"...*

*"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"...*✍

*ಎಷ್ಟೊಂದು ಅರ್ಥಗರ್ಭಿತ ಮಾತು*
👉ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ….
ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ*
ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ...
- *ತಿಳಿದವರು ಹೇಳಿದ ಅಳಿಯದ ಮಾತು*

*"ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಲ್ಲ,*
*ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ*
*ಯಾಕೆಂದರೆ*
*ಸತ್ತ ಮೇಲೆ ಹೆಗಲು ಕೊಡುವವರು ಅವರೆ...*
*ಶ್ರೀಮಂತರು ನೇರವಾಗಿ* *ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"*

*"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ".🙏🏻*

*ಪ್ರಾಮಾಣಿಕ ಸಂಬಂಧಗಳು ಶುದ್ಧ ನೀರಿದ್ದಂತೆ. ವಾಸನೆ, ಬಣ್ಣ, ಆಕಾರಗಳಿಲ್ಲದಿದ್ದರೂ ಜೀವನಕ್ಕೆ ಅತೀ ಅವಶ್ಯ. ಕಲುಷಿತವಾಗದಂತೆ ನೋಡಿಕೊಳ್ಳೋಣ*

*ವೈರಿಯನ್ನು ಕೊಲ್ಲಬೇಕಾದರೆ ಅವನ ತಲೆಯನ್ನು ತೆಗೆಯಬೇಕಾದ ಅಗತ್ಯವಿಲ್ಲ!*
*ನಮ್ಮ ತಲೆಯಿಂದ ಅವನನ್ನು ತೆಗೆದರೆ ಸಾಕು!!😬*

*ಸಫಲತೆಯು ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸಿದರೆ ಸೋಲು ನಿನಗೆ ಜಗತ್ತನ್ನು ಪರಿಚಯಿಸುತ್ತದೆ. ಬದುಕಿನ ದಾರಿಯಲ್ಲಿ ಭರವಸೆ ಕಳೆದುಕೊಂಡು ಇದೇ ಕೊನೆ ಎಂದುಕೊಂಡರೆ ಭಗವಂತ ನಕ್ಕು ನುಡಿಯುತ್ತಾನೆ..." ಇದು ಬರೀ ಒಂದು ತಿರುವಷ್ಟೆ...ಕೊನೆಯಲ್ಲ" ಯಾವಾಗಲೂ ಸಂತಸದಿಂದಿರಿ.*

ಯಾವುದನ್ನೂ ಹಗುರವಾಗಿ ಭಾವಿಸಬಾರದೂ ಎಲ್ಲದಕ್ಕೂ ಒಂದು ಕಾಲ ಅಂತ ಇದೆ...
ಸಮಯ ಬಂದಾಗ ತಲೆಕೆಳಗೆ ಹಾಕಿ ನೇತಾಡುವ ಬಾವಲಿ ಕೂಡ ಎಲ್ಲರನ್ನೂ ಒಮ್ಮೆಗೆ ಮೇಲೆಕೆಳಗೆ ಮಾಡಬಲ್ಲದು🦇🤣😛

*ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು*

ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*

💐 *" ಅನುಮಾನ " ಮತ್ತು "ಅವಮಾನ "
ಬರೀ ಒಂದಕ್ಷರ ವ್ಯತ್ಯಾಸವಿರುವ
ಈ ಪದಗಳಿಗೆ ಸಾವಿರಾರು ಹೃದಯಗಳನ್ನು
ಛಿದ್ರ ಮಾಡುವಷ್ಟು "ಶಕ್ತಿ" ಇದೆ.. ಈ ಎರಡು ಪದಗಳು ನಮ್ಮ ಜೀವನದಲ್ಲಿ ಬಾರದಂತೆ ನೋಡಿಕೊಳ್ಳಬೆಕು.✍ *💐

*ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ.*

*ಆದರೆ........*

*ಬರೆದಿಡುವಂತಹ ಜೀವನ ಮಾಡಲು ಸಾಧ್ಯಇದೆ....*

ನಾವು ಚಿಕ್ಕವರಿದ್ದಾಗ ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!

*ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ ಒಂದು ದುಡಿಮೆ ಇನ್ನೊಂದು ತಾಳ್ಮೆ. ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ 'ಬದುಕು ಕಲಿಸುವ ಪಾಠ'.*

kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

*ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆಯ ಹುಲ್ಲಾಗಬೇಕು,*
*ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು,*
*ತೂರಿದಷ್ಟು ಎತ್ತರದ ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು,*
*ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಬೇಕು,*
*ಇವೆಲ್ಲವೂ ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು ಬೆಳಕ ಚಲ್ಲಬೇಕು..!*

🍀 *ಖುಷಿ ,ಸಂತೋಷ ಎನ್ನುವುದು* *ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ*. *ಅದು ಎಂದಿಗೂ ಬರಿದಾಗುವುದಿಲ್ಲ.* *ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ ಹಂಚುವ* *ಮೂಲಕ* , *ಇನ್ನೊಬ್ಬರ* *ಮೊಗದಲ್ಲೂ ಆ ಸಂತಸವನ್ನು* *ಕಾಣಬಹುದು.

ಎಲ್ಲಾ ಕಷ್ಟಗಳಿಗೂ, ಸಮಸ್ಯೆಗಳಿಗೂ ಎರಡು ಔಷದಿಗಳಿವೆ, ಒಂದು ದುಡಿಮೆ ಮತ್ತೊಂದು ತಾಳ್ಮೆ.
ಇವೆರಡು ನಿಮ್ಮಲ್ಲಿರಲಿ.

*ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂಥ ಗೆಳೆಯರು ಬೇಕು..!*

*ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ..*
*ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ..!*

ಯಾವಾಗ ತಾಯಿ ಸಂತೋಷವಾಗಿರುತ್ತಾಳೋ ಆಗ ಕುಟುಂಬ ಆನಂದವಾಗಿರುತ್ತದೆ. ಯಾವಾಗ ಕುಟುಂಬ ಸಂತೋಷವಾಗಿರುತ್ತದೆಯೋ ಆಗ ಇಡೀ ರಾಷ್ಟ್ರವೇ ಆನಂದವಾಗಿರುತ್ತದೆ..
✍🏻ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.

ಬದುಕಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವಂತೆ ಬದುಕೋದು ಸ್ವಾಭಿಮಾನದ ಜೀವನ. ನಮ್ಮನ್ನ ಮತ್ತೊಬ್ಬರು ಗುರುತಿಸುವಂತೆ ಬದುಕುವುದು ಅಭಿಮಾನದ ಸನ್ಮಾನ".*

🌈ದೂರ ಇದ್ದ ತಕ್ಷಣ ಸಂಬಂಧ ಹಾಳುಗುವುದಿಲ್ಲ.*
*ಹತ್ತಿರ ಇದ್ದ ತಕ್ಷಣ ಸಂಬಂಧ ಬೇಸುಯುದಿಲ್ಲ.*
*ಯಾರು ಎಷ್ಟು ಚೆನ್ನಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದರೆ ಅನ್ನುವ ಮೇಲೆ ಸಂಬಂಧಗಳು ಗಟ್ಟಿಯಾಗುತ್ತದೆ.🌈*

ಜೀವನ ಹೇಗಿರಬೇಕು ಅಂದರೆ ನಾವು ಹುಟ್ಟಿದರೆ ತಾಯಿ ಸಂತೋಷ ಪಡುವಂತಿರಬೇಕು.
ಬೆಳೆದರೆ ತಂದೆ ಆನಂದಿಸುವಂತಿರಬೇಕು
ಬಾಳಿದರೆ‌ ಸಮಾಜ ಸಂಭ್ರಮಿಸುವಂತಿರಬೇಕು
ಸತ್ತರೆ ಸ್ಮಶಾನ ಕೂಡ ಕಣ್ಣೀರಿಡುವಂತಿಬೇಕು.....

ನಗೆಹನಿಗಳು ಕನ್ನಡ ನಗೆಹನಿಗಳು jokes in Kannada

 ಮೊಬೈಲ್ ಬಂದ ನಂತರ ಏನಾಯ್ತು ಗೊತ್ತಾ? ಓದಿ

📱📱📱📱📱📱📱📱📱📱📱 mobile phone

👆👆👆👆ಇದೊಂದು ವಸ್ತು ಬಂದ ನಂತರ ಮಾಯವಾದ ವಸ್ತುಗಳು👇👇👇

🎥🎥ವೀಡಿಯೋ ಕ್ಯಾಮರಾ ಹೋಯ್ತು😀

📷📷ಕ್ಯಾಮರ ಹೋಯ್ತು😃

📼.📼 ವೀಡಿಯೋ ಕ್ಯಾಸೆಟ್ ಹೋಯ್ತು😃

💿💿ವೀಡಿಯೋ mp3 cd ಹೋಯ್ತು 😄

📀📀DVD ಹೋಯ್ತು😀

🖥ಕಂಪ್ಯೂಟರ್ ಹೋಯ್ತು😀

☎☎ಲ್ಯಾಂಡ್ ಫೋನ್ ಹೋಯ್ತು 😄

📺📺ಟೀವಿ ಹೋಯ್ತು 😄

📻📻ರೇಡಿಯೋ ಎಂದೋ ಹೋಯ್ತು😄

🔊🔊ಹಾಡುಕೇಳ್ತಾ ಇದ್ದ ಸ್ಪೀಕರ್ಗಳು ಹೋಯ್ತು😀

⏰⏰ಅಲರಾಂ ಟೈಂಪೀಸ್ ಹೋಯ್ತು😃

⌚⌚ ಕೈಗಡಿಯಾರ ಹೋಯ್ತು😃

🔦🔦ಟಾರ್ಚ್ ಹೋಯ್ತು😃

✉✉ಕಾಗದ ಹೋಯ್ತು😃

📅📅 ಕ್ಯಾಲೆಂಡರ್ ಹೋಯ್ತು😄

📚 ಪುಸ್ತಕ ಹೋದವು😃

📝📝ಪೇಪರ್ ಹೋಯ್ತು😄

🎮🎮tv ಗೇಮ್ ಹೋಯ್ತು😄

😴😴ಇನ್ನೊಂದು ಮುಖ್ಯವಾದುದು ನಿದ್ದೆ. ಅದೂ ಹೋಯ್ತು😴😴
☹☹ಆಮೇಲೆ ಹುಡುಗರ ಲೈಫ್ ಹೋಯ್ತು😕😕

ಕೊನೇಗೆ ಮಗ 👦 ಬೆಳಗ್ಗೆ
3:00 ಗಂಟೆವರೆಗೆ ಆನ್ಲೈನ್ ಇರ್ತಾನೆ ಅಂತ ತಿಳ್ಕೊಂಡ ಅಪ್ಪ 🐺🐺 ನಾಯಿಯನ್ನೂ ಮಾರಿಬಿಟ್ರು
😂😉😝😉😝😉😝😉😂

ಅಳಿಯ ಕೋಪಗೊಂಡು ಪತ್ನಿಯ ತಾಯಿಗೆ ಹೀಗೆಂದು ಸಂದೇಶ ಕಳುಹಿಸುತ್ತಾನೆ
"Your product is not working properly now a days,cooking tasteless food,abnormal arguing,restless talking,too much shopping "
ಬುದ್ದಿವಂತ ಅತ್ತೆ ಹೀಗೆ ಮರು ಸಂದೇಶ ಕಳುಹಿಸುತ್ತಾಳೆ
"Product was sold 3years back.Warranty expired. Manufacturer is not responsible.😄😄

ಲವರ್ ಬಂದು sorry ಹೆಳಿದ್ರೇ ಉಲ್ಲಾಸ..
ಡಾಕ್ಟರ್ ಬಂದು sorry ಹೆಳಿದ್ರೇ ಕೈಲಾಸ...😇

ಕೆಟ್ಟವರೆನಿಸಿಕೊಳ್ಳಲು ಕೆಟ್ಟ ಕೆಲಸವನ್ನೇ ಮಾಡಬೇಕೆಂದೇನಿಲ್ಲ; ಸಾರಾಯಿ ಅಂಗಡಿ ಮುಂದೆ ಕಾಲು ಜಾರಿ ಬಿದ್ದರೂ ಸಾಕು!🤣🤣

ಹತ್ತಿ ಕಿವೀಲಿ ಇಟ್ಟರೆ *"ಶೀತ"* ಅಂತ ಅರ್ಥ....!!

ಅದೇ ಹತ್ತಿ.. ಮೂಗಿನಲ್ಲಿ ಇಟ್ಟರೆ *"ಗೋತ"* ಅಂತ ಅರ್ಥ....!!

ಹತ್ತಿ ... ಕಿವಿಯಿಂದ ಮೂಗಿಗೆ ಬರುವಷ್ಟರಲ್ಲಿ... *ಜೀವನವನ್ನು ಅನುಭವಿಸಿ*....!!
👆👏👌😊🙏

ಹಿಂದೆಲ್ಲಾ"ಶೇಂಗಾಎಣ್ಣೆ" ಉಪಯೋಗಿಸುತ್ತಿದ್ದರು..
.🥜🥜🥜🥜
ಇಂದು..
ಎಣ್ಣೆ ಜೊತೆ ಶೇಂಗಾ ಉಪಯೋಗಿಸ್ತಾಯಿದ್ದಾರೆ...😜 😜🍺🍺🥜🥃

ಬೆಳಗ್ಗೆ ಬೇಗ ಎದ್ದರೆ ಅಯುಷ್ಯ ವೃದ್ದಿಸುತ್ತದಂತೆ..😌

ಊರಿಗೆ ಮುಂಚೆ ಎದ್ದಿದ್ದ ಹುಂಜ...
ರಾತ್ರಿ ಕುಕ್ಕರ್ ನಲ್ಲಿತ್ತು..🐓😐

😀😀
ಮನುಷ್ಯರಿಗೆ
ನೂರೆಂಟು ರೋಗ
ಇರೋದ್ರಿಂದ
ಅಂಬುಲೆನ್ಸ್ ಗೆ
108 ಎಂದು ಹೆಸರಿಟ್ಟಿರಬಹುದು.! 🤣😅😅🤣

moral stories in kannada ಕನ್ನಡದ ನೀತಿ ಕತೆಗಳು

ಒಬ್ಬ ತನ್ನ ಹೊಸ ಕಾರಿಗೆ ಪಾಲಿಶ್ ಮಾಡುತ್ತಿದ್ದ. ತುಂಬಾ ಶ್ರದ್ಧೆಯಿಂದ ಧೂಳಿನ ಚಿಕ್ಕ ಕಣವೂ ಇರದಂತೆ ಫಳಫಳನೆ ಹೊಳೆಯುವಂತೆ ಮತ್ತೆ ಮತ್ತೆ ಉಜ್ಜುತ್ತಿದ್ದ.

🏃🏻

ಅಷ್ಟರಲ್ಲಿ ಅಲ್ಲೇ ಆಡುತ್ತಿದ್ದ ಆತನ ಆರು ವರ್ಷದ ಪುಟ್ಟ ಮಗ ಕಲ್ಲಿನ ಚೂರಿನಿಂದ ಕಾರಿನ ಮೇಲೆ ಗೀರತೊಡಗಿದ.
😡
ಈತನಿಗೆ ಕೋಪ ಉರಿದುಹೋಯಿತು. ಅಲ್ಲೇ ಇದ್ದ ಕಬ್ಬಿಣದ ಸರಳಿನಿಂದ ಮಗನ ಕೈ ಮೇಲೆ ರಪರಪನೆ ಹೊಡೆಯತೊಡಗಿದ. ತನ್ನ ಕೋಪ ತಣಿದಮೇಲೆ ರಕ್ತ ಸುರಿಯುತ್ತಿದ್ದ ಮಗನ ಕೈಯ್ಯನ್ನು ನೋಡಿ ಗಾಬರಿಯಿಂದ ಆಸ್ಪತ್ರೆಗೆ ಒಯ್ದ.
🚑
ಅಲ್ಲಿ ಡಾಕ್ಟರ್ ನೋಡಿ ಬೆರಳುಗಳಿಗೆ ತುಂಬಾ ಪೆಟ್ಟು ಬಿದ್ದಿರುವ ಕಾರಣ ಬೆರಳುಗಳನ್ನು ಉಳಿಸಲಾಗದೆಂದು ಕತ್ತರಿಸಿ ತೆಗೆದು ಬ್ಯಾಂಡೇಜ್ ಮಾಡಿದರು.
🚶🏿
ಸ್ವಲ್ಪ ದಿನದಲ್ಲಿ ಮಗ ಮನೆಗೆ ಬಂದ. ಚಿಂತಿತನಾಗಿ ಕುಳಿತಿದ್ದ ತನ್ನ ಅಪ್ಪನ ಬಳಿ ಮಗ ತನ್ನ ಮೊಂಡಾದ ಕೈ ತೋರಿಸಿ ಕೇಳಿದ, ಅಪ್ಪಾ ನನ್ನ ಕೈಬೆರಳು ಚಿಗುರಿ ಬೆಳೆದು ಮತ್ತೆ ಮೊದಲಿನಂತಾಗಲು ಎಷ್ಟುದಿನ ಬೇಕಾಗತ್ತಪ್ಪಾ?
😞
ಅಪ್ಪನಿಗೆ ದುಃಖ ಉಮ್ಮಳಿಸಿಬಂತು. ಏನೂ ಹೇಳಲಾರದೇ ಮಗನ ಕೈಯ್ಯನ್ನೊಮ್ಮೆ, ಕಾರನ್ನೊಮ್ಮೆ ನೋಡಿದ.
🚗
ಎಲ್ಲದಕ್ಕೂ ಈ ಹಾಳಾದ ಕಾರೇ ಕಾರಣ ಅನಿಸಿತು. ಕಾರನ್ನು ದಬದಬನೆ ಒದ್ದ. ಕಾಲು ಸೋಲುವ ವರೆಗೂ ಕಂಡಕಂಡಲ್ಲಿ ಒದ್ದ. ಅಲ್ಲೇ ಕುಸಿದು ಕುಳಿತ.
ಮಗ ಕಾರಿನ ಮೇಲೆ ಅಂದು ಗೀಚಿದ್ದು ಕಂಡಿತು.

"ನನ್ನ ಪ್ರೀತಿಯ ಅಪ್ಪ".
😢
ಅಪ್ಪ ಕರಗಿಹೋದ.
😍😡
ಪ್ರೀತಿ ಮತ್ತು ಕೋಪಕ್ಕೆ ಯಾವುದೇ ಮಿತಿ ಇರುವಪದಿಲ್ಲ.
ಪ್ರೀತಿಪೂರ್ಣ ಸುಖಜೀವನಕ್ಕಾಗಿ ಬದುಕಿನ ಮಾರ್ಗವನ್ನು ನಾವೇ ಆಯ್ದುಕೊಳ್ಳಬೇಕು.
😇
ಮನುಷ್ಯರನ್ನು ಪ್ರೀತಿಸಬೇಕು.
ವಸ್ತುಗಳನ್ನು ಉಪಯೋಗಿಸಬೇಕು.
😤
ಆದರೆ ಈಗಿನ ನಮ್ಮ ಸಮಸ್ಯೆಯೆಂದರೆ ಜನರು ವಸ್ತುಗಳನ್ನು ಪ್ರೀತಿಸುತ್ತಾರೆ. ಜನರನ್ನು ಉಪಯೋಗಿಸುತ್ತಾರೆ!
🌷
ಬನ್ನಿ ಗೆಳೆಯರೇ!
ಈ ವರ್ಷ ನಾವು ಈ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಮುಂದುವರಿಯೋಣ.
👪
ವಸ್ತುಗಳನ್ನು ಉಪಯೋಗಿಸಿ: ಆದರೆ ಮಾನವರನ್ನು ಪ್ರೀತಿಸಿ.
😇
ಮನದಲ್ಲಿ ಮೂಡುವ ವಿಚಾರಗಳನ್ನು ಅವಲೋಕಿಸಿ: ಅವೇ ಮುಂದೆ ಮಾತುಗಳಾಗುತ್ತವೆ.
😁
ಮಾತನ್ನು ನಿಯಂತ್ರಿಸಿ: ಅವೇ ಮುಂದೆ ಕೃತಿಗಳಾಗುತ್ತವೆ.
😎
ಕೃತಿಗಳನ್ನು ಗಮನಿಸಿ: ಅವೇ ನಿಮ್ಮ ಸ್ವಭಾವವಾಗುತ್ತದೆ.
😊
ಸ್ವಭಾವವನ್ನು ಸುಧಾರಿಸಿಕೊಳ್ಳಿ:. ಅದೇ ನಿಮ್ಮ ವ್ಯಕ್ತಿತ್ವವಾಗುತ್ತದೆ.
😀
ವ್ಯಕ್ತಿತ್ವವನ್ನು ಬೆಳೆಸಿ
👍🏼👌😊

moral stories in kannada ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

ತುಂಬು ಗರ್ಭಿಣಿಯೊಬ್ಬಳು ಹೆರಿಗೆ ನೋವಿಂದ ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತಾಳೆ. ಕಾರಿನಲ್ಲಿ ಬಂದ ಯುವಕನೊಬ್ಬ ನೋಡಿಯೂ ನೋಡದಂತೆ ಕಾರನ್ನು ಮುಂದೆ ಚಲಾಯಿಸುತ್ತಾನೆ. ಅವನ ಕಾರಿನ ಹಿಂದೆ *ಮಾತೃ ದೇವೋಭವ* ಎಂದು ಬರೆದಿರುತ್ತದೆ.
ಮತ್ತೆ ಅದೇ ರಸ್ತೆಯಲ್ಲಿ ಆಟೋ ಒಂದು ಬರುತ್ತದೆ, ಸಹಾಯಕ್ಕಾಗಿ ಆ ಹೆಣ್ಣು ಮಗಳು ಅಂಗಲಾಚುತ್ತಾಳೆ. ಆಕೆಯೊಂದಿಗೆ ಯಾರೂ ಇಲ್ಲವೆಂದು ಗಮನಿಸಿ ನನಗ್ಯಾಕೀ ಉಸಾಬರಿ ಎಂಬಂತೆ ಆಟೋ ಡ್ರೈವರ್ ಹೊರಟು ಹೋಗುತ್ತಾನೆ. *ಗರ್ಭಿಣಿಯರಿಗೆ ಉಚಿತ ಸೇವೆ* ಆಟೋ ಹಿಂದೆ ಹೀಗೆಂದು ಬರೆದಿತ್ತು. ಹೀಗೇ ಹಲವರು ನೋಡಿಯೂ ನೋಡದಂತೆ ಹೊರಟು ಹೋಗುತ್ತಾರೆ. ಒಬ್ಬೊಬ್ಬರ ವಾಹನಗಳ ಹಿಂದೆಯೂ ದೊಡ್ಡ ದೊಡ್ಡ ಸಾಲುಗಳು, *ತಾಯಿಯೇ ದೇವರು*, *ತಾಯಿಗಿಂತ ದೇವರಿಲ್ಲ*, *ಹೆಣ್ಣನ್ನು ರಕ್ಷಿಸಿ;ಹೆಣ್ಣನ್ನು ಗೌರವಿಸಿ*, *ಹೆಣ್ಣೇ ಸಂಸಾರದ ಕಣ್ಣು*, ಇತ್ಯಾದಿ ಬೋಧನೆಗಳು.

ಸ್ವಲ್ಪ ಹೊತ್ತಿನ ನಂತರ ನಾಲ್ಕೈದು ಯುವಕರು ಬೈಕುಗಳಲ್ಲಿ ಗುಂಪಾಗಿ ಕೂಗಾಡುತ್ತಾ ಬರುತ್ತಾರೆ. ಆ ಗರ್ಭಿಣಿ ಹೆಣ್ಣು ಸಹಾಯಕ್ಕಾಗಿ ಒದ್ದಾಡುತ್ತಿರುವುದು ಕಂಡ ಯುವಕರು ಆಕೆಯನ್ನು ಹೇಗೋ ಆಸ್ಪತ್ರೆ ತಲುಪಿಸುತ್ತಾರೆ. ಆಗ ಆಕೆ ಆ ಯುವಕರಿಗೆ ಕೃತಜ್ಞತೆಯಿಂದ ಕೈ ಮುಗಿಯುತ್ತಾಳೆ. ತಮಾಷೆ ಅಂದ್ರೆ ಆ ಯುವಕರ ಬೈಕುಗಳ ಹಿಂದೆ *ಬ್ಯಾಡ್ ಬಾಯ್ಸ್* ಎಂದು ಬರೆದಿತ್ತು.

ಕಥೆಯ ನೀತಿ ಇಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡುವುದರಿಂದ, ಬೋಧಿಸುವುದರಿಂದ ದೊಡ್ಡ ವ್ಯಕ್ತಿಗಳಾಗೋದಿಲ್ಲ, ಒಳ್ಳೊಳ್ಳೇ ಸಂದೇಶಗಳು ವಾಹನಗಳ ಮೇಲೆ ಬರೆಸಿದ ಮಾತ್ರಕ್ಕೆ ಒಳ್ಳೆಯವರಾಗಲ್ಲ. ಅವಶ್ಯಕತೆಯಿರುವವರಿಗೆ ಅಗತ್ಯ ಸಮಯದಲ್ಲಿ ಮಾಡುವ ಸಣ್ಣ-ಪುಟ್ಟ ಸಹಾಯಗಳು ಪರಮ ಶ್ರೇಷ್ಠವಾಗುತ್ತವೆ.

kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

ಸ್ನೇಹ ಅನ್ನೋದು ನೆನಪು ಅಲ್ಲ ಕನಸು ಅಲ್ಲ*
*ನಮ್ಮ ಜೊತೆ ಸದಾ ಇರೋ ಇನ್ನೊoದು ಮನಸ್ಸು* 😘❤
 *ಯಶಸ್ಸು ಎಂದರೆ ವೈಯಕ್ತಿಕವಾಗಿ ನಾವೆಷ್ಟು ಬೆಳೆದೆವು ಎಂಬುದಲ್ಲ ,* *ನಮ್ಮ  ಬೆಳವಣಿಗೆಗಳಿಂದ*
*ಎಷ್ಟು ಜನರು ಸ್ಪೂರ್ತಿ ಪಡೆದರು ಎಂಬುದು ಮುಖ್ಯವಾಗುತ್ತದೆ !*

🌹🍂🌹

*ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ*
*ಹಾಗೆಯೇ ಜೀವನ.

*ಕಾಲು ಒದ್ದೆಯಾಗದೆ ಸಮುದ್ರ ದಾಟಬಹುದು....*
*ಅದರೆ ಕಣ್ಣು ಒದ್ದೆಯಾಗದೆ ಜೀವನ ದಾಟಲಾಗದು......*

*ಗೌರವಿಸಬೇಕಾದ ಮೂರು ವಿಷಯಗಳು
 ಅಷ್ಟಐಶ್ವರ್ಯ ಅಂದ್ರೆ. : -*
1.) ದಿನವೂ ತಂದೆ ತಾಯಿಯರ ದರ್ಶನ,
2.) ಅರ್ಥ ಮಾಡಿಕೊಳ್ಳುವ ಸಂಗಾತಿ. (ಗಂಡ ಅಥವಾ ಹೆಂಡತಿ.),
3.) ಮಾತು ಕೇಳುವ ಮಕ್ಕಳಿರುವುದು,
4.) ಯಾವುದೇ ಋಣ ಅಥವಾ ಸಾಲಗಳಿಲ್ಲದಿರುವುದು,
5.) ನಮ್ಮ ಅವಸರಕ್ಕೆ ತಕ್ಕಷ್ಟು ಹಣವಿರುವುದು,
6.) ಏನೇ ತಿಂದರೂ ಅರಗಿಸಿಕೊಳ್ಳುವ ಶಕ್ತಿ ಇರುವುದು,
7.) ಹತ್ತು ಜನರ ನಡುವೆ ಗೌರವಾನ್ವಿತರಾಗಿರುವುದು.
8.) ನಮಗಾಗಿ ಒಳ್ಳೆಯದನ್ನು ಬಯಸುವ ಸ್ನೇಹಿತರಿರುವುದು.

moral stories in kannada ಕನ್ನಡದ ನೀತಿ ಕತೆಗಳು

*ಮನಸ್ಪೂರ್ವಕವಾಗಿ ಓದಿ:*

ವಯಸ್ಸಾದ ತಂದೆಯನ್ನು ಮಗ ಊರಲ್ಲಿನ ಒಂದು ಪ್ರಸಿದ್ಧ ಹೋಟೆಲಿಗೆ ಊಟಕ್ಕೆಂದು ಕರೆದೊಯ್ದಿದ್ದ. ಹೋಟೆಲ್ ಜನಸಂದಣಿಯಿಂದ ತುಂಬಿತ್ತು. ಮಗ ಹೇಗೂ ಮಾಡಿ ಜಾಗ ಗಿಟ್ಟಿಸಿದ. ಇವರ ಟೇಬಲ್ಲಿನ ಮತ್ತೊಂದು ಭಾಗದಲ್ಲಿ ನವದಂಪತಿಗಳು ಕುಳಿತಿದ್ದರು. ಊಟ ಪ್ರಾರಂಭವಾಯಿತು, ಈ ವ್ಯಕ್ತಿಯ ತಂದೆ ತುತ್ತನ್ನು ಬಾಯಿಗೆ ಇಡುವಾಗ ಕೈ ನಡುಗಿ ಬಿಳಿ ಅಂಗಿಯ ಮೇಲೆ ಚೆಲ್ಲಿ ಹೋಯಿತು. ಎದುರಿಗೆ ಕುಳಿತಿದ್ದ ಯುವಕ,
"ಛೆ! ಇಷ್ಟು ವಯಸ್ಸಾದವರನ್ನು ಯಾಕಾದರೂ ಇಂತಹ ಹೋಟೆಲಿಗೆ ಕರೆದುಕೊಂಡು ಬರಬೇಕು. ಅಂಗಿಯೆಲ್ಲಾ ಕೊಳೆ ಮಾಡಿಕೊಂಡರು ನೋಡಿ. ಹೊರಗೆ ಹೇಗೆ ಕರೆದುಕೊಂಡು ಹೋಗುತ್ತೀರಿ"
ಎಂದು ಕೇಳಿದ ? ಆದರೆ ಈ ಮಾತುಗಳು 'ಕೇಳಿಯೇ ಇಲ್ಲವೇನೋ 'ಎಂಬಂತೆ ಆ ವ್ಯಕ್ತಿ ತಾನೇ ತುತ್ತು ಮಾಡಿ ತನ್ನ ತಂದೆಗೆ ಉಣ್ಣಿಸಿದ. ನಂತರ ವಾಷ್ ರೂಮಿನಲ್ಲಿ ತಂದೆಯ ಅಂಗಿಯ ಕಲೆಯನ್ನು ತಿಕ್ಕಿ ತೊಳೆದು ತನ್ನ ಅಂಗಿಯನ್ನು ತಂದೆಗೆ ಹಾಕಿ, ಆತನ ಅಂಗಿಯನ್ನು ತಾನು ಹಾಕಿಕೊಂಡು ಮೇಲೆ ಕೋಟು ಹಾಕಿಕೊಂಡ. ತಂದೆಯ ಕೆದರಿದ ಕೂದಲನ್ನು ಸರಿಪಡಿಸಿ ಬೆವರಿದ ಮುಖ ಒರೆಸಿ ಬಿಲ್ ಪಾವತಿಸಿ ಹೊರಡುವಷ್ಟರಲ್ಲಿ ರೆಸ್ಟೊರೆಂಟ್ ಗದ್ದಲ ಸ್ವಲ್ಪ ಕಡಿಮೆಯಾಗಿತ್ತು. ಇನ್ನೇನು ಹೊರ ನಡೆಯಬೇಕೆನ್ನುವಾಗ ಆ ಘಟನೆಯನ್ನು ವೀಕ್ಷಿಸಿದ್ದ ಪಕ್ಕದ ಟೇಬಲ್ಲಿನಲ್ಲಿದ್ದ ಓರ್ವ ವ್ಯಕ್ತಿ,
"'ಹಲೋ ಜಂಟಲ್ ಮ್ಯಾನ್ ನೀವೇನೋ ಬಿಟ್ಟು ಹೊರಟಿದ್ದೀರಿ'"
ಎಂದು ಜೋರಾಗಿ ಕೂಗಿದ. ಆ ಮಾತು ಕೇಳಿ ಹೋಟೆಲಲ್ಲಿದ್ದವರ ಚಿತ್ತ ಇವರತ್ತ ನೆಟ್ಟಿತು. 'ಇಲ್ಲ ನಾನೇನು ಬಿಟ್ಟು ಹೋಗಿಲ್ಲವಲ್ಲ' ಎಂದ ಮಗ. ಅದಕ್ಕೆ ಆ ವ್ಯಕ್ತಿ,
'ಮಗನಾದವನು ತನ್ನ ವಯಸ್ಸಾದ ತಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂಬ ಅಮೂಲ್ಯ ಪಾಠವನ್ನು ನಮಗೆ ಬಿಟ್ಟು ಹೊಗುತ್ತಿದ್ದೀರಿ'
ಎಂದ. ಮುಂಚೆ ಕೊಂಕು ನುಡಿದಿದ್ದ
ಆ ಯುವ ದಂಪತಿಗೆ ನಾಚಿಕೆಯಾಗಿ ಕ್ಷಮೆ ಕೇಳಿದರು.
"ನಾನು ಸಣ್ಣವನಿರುವಾಗ ಅಪ್ಪನನ್ನು ಅದೆಷ್ಟು ಗೋಳು ಹೊಯ್ದುಕೊಂಡಿಲ್ಲ, ಆಗೆಲ್ಲಾ ಆತ ಕೋಪಿಸಿಕೊಳ್ಳದೆ ನನ್ನನ್ನು ಮುದ್ದು ಮಾಡಿರಲಿಲ್ವ..? ಈಗ ಅವರು ಮಗು, ನಾನು ತಂದೆ"
ಎಂದು ಹೇಳಿದ. ಅಲ್ಲಿದ್ದವರ ಕಣ್ಣಾಲಿ ತುಂಬಿತು. ಮಗ ತಂದೆಯ ಕೈ ಹಿಡಿದುಕೊಂಡು ಮೆಲ್ಲನೆ ಕಾರಿನತ್ತ ಕರೆದೊಯ್ದ.

ಹೌದು,
ವಯಸ್ಸಾದ ಮೇಲೆ ಮನುಷ್ಯ ಮಗುವಿನಂತಾಗುತ್ತಾನೆ. ಮೊದಲು ತನ್ನ ಮಕ್ಕಳನ್ನು ಕೈ ಹಿಡಿದು ಬೆಳೆಸಿದ ನಮ್ಮ ತಂದೆ, ತಾಯಿಯರನ್ನ ನಾವು ಅವರನ್ನು ಮಕ್ಕಳಂತೆ ನೋಡಿಕೊಂಡಾಗ ಬದುಕಿಗೆ ಒಂದು ಅರ್ಥ..ಮತ್ತೆ ಅವರು ನಮಗೆ ಜನ್ಮ ಕೊಟ್ಟಿದ್ದಕ್ಕೆ ಸಾರ್ಥಕ.!! 💚💚

ನಿಮಗೆ ಎಷ್ಟು ಸಾದ್ಯವೋ ಅಷ್ಟು ಜನಕ್ಕೆ ಶೇರ್ ಮಾಡಿ..

ಕೃಪೆ; ಮಾನವೀಯತೆಯನ್ನ ಎಚ್ಚರಿಸುವವರು. 🍀🍀

kcsr rules in kannada ಕೆ.ಸಿ.ಎಸ್.ಆರ್ ನಿಯಮಗಳು ಕನ್ನಡದಲ್ಲಿ

Wednesday, 4 July 2018

moral stories in kannada ಕನ್ನಡದ ನೀತಿ ಕತೆಗಳು

“ಕೋಪ ಬರುತ್ತಿದೆ”

ಎಂದು ಮಗ ಪ್ರತಿ ಸಲ ಹೇಳಿದಾಗ…

ಗೋಡೆಗೆ ಮೊಳೆ ಹೊಡಿ ಎನ್ನುತ್ತಾನೆ ತಂದೆ!

ಯಾಕೆ ಗೊತ್ತಾ?

ಗೋಡೆಗೆ ಹೊಡೆದ ಮೊಳೆಗಳು…
ಅದ್ಭುತವಾದ ಜೀವನ ಸತ್ಯ.

ಮಗನೊಬ್ಬನಿಗೆ…
ತಂದೆ ಕೆಲವು ಮೊಳೆಗಳನ್ನು ಕೊಟ್ಟು…

ನಿನಗೆ ನಿತ್ಯ ಎಷ್ಟು ಮಂದಿಯ ಮೇಲೆ ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡಿ ಎಂದು ಹೇಳುತ್ತಾನೆ..!

ಮೊದಲ ದಿನ 20, ಬಳಿಕ 15, ಮೂರನೇ ದಿನ 10 ಹೀಗೆ..

ತನ್ನ ಕೈಯಲ್ಲಿ ಇರುವ ಮೊಳೆಗಳನ್ನೆಲ್ಲಾ ಗೋಡೆಗೆ ಹೊಡೆದುಬಿಟ್ಟ ಮಗ.

ಮೊಳೆಗಳು ಮುಗಿದ ಕೂಡಲೆ…

ಮಗ ತಂದೆ ಬಳಿ ಬಂದು ಅಪ್ಪಾ ನೀವು ಕೊಟ್ಟ ಮೊಳೆಗಳೆಲ್ಲಾ ಮುಗಿದುಹೋದವು ಎಂದ.

ಓ…

ಅಂದರೆ ನಿನಗೆ ತುಂಬಾ ಮಂದಿ ಮೇಲೆ ಕೋಪ ಬಂದಂತಿದೆ..
ಎನ್ನುತ್ತಾರೆ ತಂದೆ..!

ಆ…ಆದರೆ…

ನಾಳೆಯಿಂದ ನಿತ್ಯ, ಗೋಡೆಗೆ ನೀನು ಹೊಡೆದ ಕೆಲವು ಮೊಳೆಗಳನ್ನು ತೆಗೆದುಬಿಡು ಎಂದು ಮಗನಿಗೆ ತಂದೆ ಹೇಳುತ್ತಾನೆ…

ತಂದೆ ಹೇಳಿದಂತೆ…

ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದ ಮಗ..

ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಟ್ಟ.

ಏನಾಯಿತು ಎಂದು ಮಗನನ್ನು ಕೇಳಿದ ತಂದೆ…

ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದುಬಿಟ್ಟೆ ಅಪ್ಪ ಎಂದ ಮಗ.

ಹಾಗಿದ್ದರೆ ಗೋಡೆ ಹೇಗಿದೆ? ಮೊಳೆಗಳೇನೋ ತೆಗೆದುಬಿಟ್ಟೆ..

ಆದರೆ ಇದರಿಂದ ಗೋಡೆಗೆ ಆದ ರಂಧ್ರಗಳು ಮಾತ್ರ ಹಾಗೆಯೇ ಇವೆ ಎಂದ ಮಗ.

ಆಗ ತಂದೆ…ಮಗನೊಂದಿಗೆ.. “ನೋಡಿದೆಯಾ”.. ಮೊಳೆಗಳನ್ನು ಹೊಡೆಯುವಾಗ ಸುಲಭವಾಗಿ ಹೊಡೆದೆ..!

ತೆಗೆಯುವಾಗ ತುಂಬಾ ಕಷ್ಟಪಟ್ಟೆ.
ಮೊಳೆಗಳನ್ನು ತೆಗೆದ ರಂಧ್ರಗಳು ಮಾತ್ರ ಹಾಗೆಯೇ ಇವೆ..

ಎಂದರೆ ನಮಗೆ ತುಂಬಾ ಮಂದಿ ಮೇಲೆ ಕೋಪ ಬರುತ್ತದೆ,

ಆ ಕೋಪದಲ್ಲಿ ಅವರ ಮನಸ್ಸನ್ನು ಗಾಯಪಡಿಸುತ್ತೇವೆ.. (ಅಂದರೆ ಮೊಳೆ ಹೊಡೆಯುತ್ತೇವೆ), ಬಳಿಕ sorry ಹೇಳುತ್ತೇವೆ (ಅಂದರೆ ಹೊಡೆದ ಮೊಳೆಗಳನ್ನು ತೆಗೆಯುತ್ತೇವೆ), ಆದರೆ sorry ಹೇಳಿಬಿಟ್ಟರೆ ಅವರ ಮನಸ್ಸಿಗೆ ಆದ ಗಾಯ (ಅಂದರೆ ರಂಧ್ರಗಳನ್ನು) ಮಾತ್ರ ಮುಚ್ಚಲು ಸಾಧ್ಯವಿಲ್ಲ.

ಹಾಗಾಗಿಯೇ ಮಾತುಗಳು-ಬುಲೆಟ್‌ನಂತಹವು, ಅಳೆದು ತೂಗಿ ಮಾತನಾಡಬೇಕು, ಇತರರನ್ನು ನೋಯಿಸದಂತೆ ಮಾತನಾಡಬೇಕು –

*ಪ್ರೀತಿಯಿಂದ ಮಾತನಾಡೋಣ.*

tips for parents..tips for parents in Kannada

ಪೋಷಕರೇ ಕೇಂದ್ರ ಸರ್ಕಾರ ನಿಮ್ಮ ಚಿಕ್ಕ ಮಕ್ಕಳಿಗಾಗಿಯೇ ಮಾಡಿರುವ ಈ ವಿಶೇಷ ಯೋಜನೆಯ ಸದುಪಯೋಗ ಪಡೆದುಕೊಳ್ಳಿ....

ಕೇಂದ್ರ ಸರ್ಕಾರ 'ರಾಷ್ಟ್ರೀಯ ಲಸಿಕಾ ಜ್ಞಾಪನಾ' ಅನ್ನುವ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ನಿಮ್ಮ ಮಗುವಿನ ಹೆಸರು ಮತ್ತು ವಯಸ್ಸಿನ ವಿವರವನ್ನು ಸರ್ಕಾರಕ್ಕೆ ನೀಡಿದರೆ, ಸರ್ಕಾರವೇ ನಿಮ್ಮ ಮಗುವಿಗೆ ಕಾಲಕಾಲಕ್ಕೆ ಹಾಕಬೇಕಾದ ಲಸಿಕೆಯ ಕುರಿತು ನಿಮ್ಮ ಮೊಬೈಲ್ ಮೂಲಕ ಮಾಹಿತಿ ನೀಡುತ್ತದೆ.

ನಿಮ್ಮ ಮಗುವಿನ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು 566778 ನಂ.ಗೆ ಕೆಳಗೆ ಹೇಳಿರುವಂತೆ ಮೆಸೇಜ್ ಮಾಡಿ. ನಿಮ್ಮ ಮಗು 12 ವರ್ಷ ತಲುಪುವವರೆಗೆ ಸರಿಯಾದ ಸಮಯಕ್ಕೆ ಕಡ್ಡಾಯವಾಗಿ ಹಾಕಬೇಕಾದ ಲಸಿಕೆಯ ಕುರಿತು 2 ದಿನಗಳ ಮೊದಲೇ ನಿಮಗೆ ಮಾಹಿತಿ ನೀಡಿ, ನೆನಪಿಸುತ್ತದೆ.

ಮೆಸೇಜ್ ಮಾಡಬೇಕಾದ ವಿಧಾನ:
Immunize [space] Child's Name [space] Child's date of birth

ಇಮ್ಯುನೈಜ್[ಸ್ಪೇಸ್] ಮಗುವಿನ ಹೆಸರು[ಸ್ಪೇಸ್] ಮಗುವಿನ ಹುಟ್ಟಿದ ದಿನ[ಸ್ಪೇಸ್]

ಉದಾಹರಣೆಗೆ:
Immunize Ram 01-01-2015

ನೆನಪಿರಲಿ, ಲಸಿಕೆ ಹಾಕಬೇಕಾದ 2 ದಿನಗಳ ಮೊದಲೇ ನಿಮ್ಮ ಮೊಬೈಲ್ ಗೆ ಸಂಪೂರ್ಣ ಮಾಹಿತಿಯೊಡನೆ ಸಂದೇಶ ಬರುತ್ತೆ..

12 ವರ್ಷದೊಳಗಿನ ಮಗುವನ್ನು ಹೊಂದಿರುವ ಪ್ರತಿಯೊಬ್ಬ ಪೋಷಕರು ಈ ಯೋಜನೆಗೆ ಹೆಸರು ನೋಂದಾಯಿಸಿ...

kannada moral stories ಕನ್ನಡ ನೀತಿಕಥೆಗಳು

*ಮನುಷ್ಯ, ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ. ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ. ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ. ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾ ಹೋಗುತ್ತಾನೆ. ಇವೆಲ್ಲವನ್ನೂ ಮೀರಿ ನಡೆದವನು ಮಾತ್ರ ವಿಶೇಷನಾಗುತ್ತಾನೆ.*

*🔘"ಪುರುಷರೆಂದರೆ ಯಾರು?"ಎಲ್ಲಾ ಮಹಿಳೆಯರು ತಪ್ಪದೆ ಇದನ್ನು ಓದಿ...*

⚫ *ಮೊದಲ ಬಾರಿ ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!*

▪ *ಪುರುಷ ಎಂದರೆ ಯಾರು?*

▪ *ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ*

▪ *ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..*

▪ *ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..*

▪ *ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆ ಖರೀದಿಸಿ ಖಾಲಿ ಮಾಡುವವನು..*

▪ *ತನ್ನ ಇಡೀ ಯೌವನವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..*

▪ *ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.*

▪ *ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ, ಪತ್ನಿ ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....*

▪ *ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....*

▪ *ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಆತ ಮನೆಯಲ್ಲೇ ಇದ್ದರೆ ಸೋಮಾರಿ...*

▪ *ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ*

▪ *ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವ*

▪ *ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಳಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...*

▪ *ಒಂದು ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ*

▪ *ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ*

▪ *ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ..*

*ಇದೊಂದು ಫಾರ್ವರ್ಡ್ ಮೆಸೇಜ್ ಬಹಳ ಸುಂದರ ಅರ್ಥಗರ್ಭಿತವಾದ ರಚನೆ ಓದಲು ಮರೆಯದಿರಿ...*
🌺🌺🌺

*1. ನಾವೆಷ್ಟೇ ಸುಂದರ ಮತ್ತು ಹ್ಯಾಂಡ್‌ಸಂ ಆಗಿದ್ದರೂ, ಬಬೂನ್‌ಗಳು ಮತ್ತು ಗೊರಿಲ್ಲಾಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂಬುದನ್ನು ಮರೆಯದಿರೋಣ.*

*ನಮ್ಮನ್ನು ನಾವು ವಿಪರೀತವಾಗಿ ಹೊಗಳಿಕೊಳ್ಳುವುದನ್ನು ಬಿಟ್ಟುಬಿಡೋಣ.*

🌺🌺🌺

*2. ನಾವೆಷ್ಟೇ ಗಟ್ಟಿಯಾಗಿ ಶಕ್ತಿವಂತರಾಗಿದ್ದರೂ ಸರಿಯೇ, ನಮ್ಮನ್ನು ನಾವು ನಮ್ಮ ಸಮಾಧಿಗೆ ಹೊತ್ತುಕೊಂಡು ಹೋಗಲಾರೆವು.*

*ವಿನಮ್ರತೆಯಿಂದಿರೋಣ*

🌼🌼🌼🌼

*3. ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನೆಂದೂ ನೋಡಲಾರೆವು*.

*ತಾಳ್ಮೆಯಿಂದ ಇರೋಣ.*

🌹🌹🌹

*4. ನಾವೆಷ್ಟೇ ಬಿಳುಪಾದ ಚರ್ಮ ಹೊಂದಿರುವವರಾದರೂ ಕತ್ತಲೆಯಲ್ಲಿ ನಮಗೆ ಬೆಳಕು ಬೇಕೇ ಬೇಕು.*

*ಜಾಗರೂಕರಾಗಿರೋಣ*

🌺🌺🌺
*5. ನಾವೆಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಕಾರುಗಳನ್ನು ಹೊಂದಿದ್ದರೂ, ನಮ್ಮ ಹಾಸಿಗೆಗೆ ನಾವು ನಡೆಯಲೇಬೇಕು.*

🌼🌼🌼

*ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ ತೆಗೆದುಕೊಳ್ಳೋಣ. ಜೀವನ ಬಲು ಚಿಕ್ಕದು.*

*ನಾವು ಜೀವಿಸುವ ಜೀವನ...*

🌻🌻🌻

*ನಮ್ಮನ್ನು ಈ ಬೆಳಗ್ಗೆ ಎಬ್ಬಿಸಿದ್ದು ನಮ್ಮ ಅಲಾರಂ ಗಡಿಯಾರ ಎಂದುಕೊಂಡರೆ, ಅದನ್ನು ಒಂದು ಶವದ ಪಕ್ಕದಲ್ಲಿ ಇಟ್ಟು ನೋಡಿದಾಗ, ದೇವರ ಕೃಪೆಯು ನಮ್ಮನ್ನು ಇಂದು ಎಬ್ಬಿಸಿದ್ದು ಎಂಬ ಸತ್ಯ ಹೊಳೆಯುತ್ತದೆ. ನಾವು ಬದುಕಿರುವುದೇ ಆ ದೇವದೇವನ ಕೃಪೆಯಿಂದಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.*

*ಯೋಗವು ಒಮ್ಮೇ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ*

🌹🌹🌹

*ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಅರ್ಥವಾಗುವದಿಲ್ಲ ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವದಿಲ್ಲ ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವವನ್ನು ಬಿಡಬೇಡಿ. ಬೇರೆಯವರು  ಕೋಪದಿಂದ ಮಾತನಾಡಿದರೆ
"ಗುಣ" ವನ್ನು ಕಳೆದುಕೊಳ್ಳುತ್ತೇವೆ.

ಹೆಚ್ಚಾಗಿ ಮಾತನಾಡಿದರೆ
"ಶಾಂತಿ"ಯನ್ನು ಕಳೆದುಕೊಳ್ಳುತ್ತೇವೆ.

ಅನಗತ್ಯವಾಗಿ ಮಾತನಾಡಿದರೆ
"ಕೆಲಸ" ವನ್ನು ಕಳೆದುಕೊಳ್ಳುತ್ತೇವೆ.

ಅಹಂಕಾರದಿಂದ ಮಾತನಾಡಿದರೆ
"ಪ್ರೀತಿ" ಯನ್ನು ಕಳೆದುಕೊಳ್ಳುತ್ತೇವೆ.

ಸುಳ್ಳು ಸುಳ್ಳು ಮಾತನಾಡಿದರೆ
"ಹೆಸರು" ಕಳೆದುಕೊಳ್ಳುತ್ತೇವೆ.

ವೇಗವಾಗಿ ಮಾತನಾಡಿದರೆ
"ಅರ್ಥ" ವನ್ನು ಕಳೆದುಕೊಳ್ಳುತ್ತೇವೆ.

ಪ್ರೀತಿಯಿಂದ ಮಾತನಾಡಿದರೆ
"ಎಲ್ಲವನ್ನು" ಗಳಿಸಿಕೊಳ್ಳುತ್ತೇವೆ
🌿*

 ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ ಏನು ಅಂತ ತಿಳಿದುಕೊಳ್ಳೋಣ ;

೧) ಮೊಣಕಾಲು ಮೇಲೆ ನಿಲ್ಲಿಸಿದರೆ
*"ವಿನಯವನ್ನು ರೂಢಿಸಿಕೋ"* ಎಂದರ್ಥ.

೨) *"ಬಾಯಿಯ ಮೇಲೆ ಬೆರಳಿಟ್ಟುಕೋ ಎಂದರೆ ಸ್ವ-ಪ್ರಶಂಸೆ ಮಾಡಿಕೊಳ್ಳಬೇಡ "* ಎಂದು.

೩)ಕಿವಿ ಹಿಡಿದು ನಿಲ್ಲೆಂದರೆ *"ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು"* ಅಂತ.

೪) ಬೆಂಚಿನ ಮೇಲೆ ನಿಲ್ಲು ಅಂದರೆ *"ಎಲ್ಲರಿಗಿಂತ ಓದಿನಲ್ಲಿ ಮುಂದೆ ಇರು"* ಅಂತರ್ಥ.

೫) ಕೈಯೆತ್ತಿ ನಿಲ್ಲು ಅಂದರೆ
*"ನಿನ್ನ ಗುರಿ ಉನ್ನತವಾಗಿ ನಿಶ್ಚಲವಾಗಿರಲಿ"* ಎಂದು.

೬) ಗೋಡೆಗೆ ಮುಖಮಾಡಿ ನಿಲ್ಲು ಎಂದರೆ *"ಆತ್ಮಾವಲೋಕನ ಮಾಡಿಕೋ"* ಅಂತ.

೭) ತರಗತಿಯ (ಕ್ಲಾಸಿಂದ) ಹೊರಗೆ ನಿಲ್ಲಿಸಿದರೆ *"ಪರಿಸರದ ಜ್ಞಾನ ಪಡೆದುಕೋ"* ಎಂದು.

೮) ಕರಿಹಲಗೆ (ಬ್ಲ್ಯಾಕ್ ಬೋರ್ಡು) ಒರೆಸು ಎಂದರೆ
*"ಯಾವಾಗಲೂ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು"* ಎಂದರ್ಥ.

೯) ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ *"ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು. ಸೋಲೊಪ್ಪಿಕೊಳ್ಳಬೇಡ"* ಎಂದು.

ಎಷ್ಟು ಚೆನ್ನಾಗಿದೆಯಲ್ವಾ ಶಿಕ್ಷೆಯೆಂಬ ನವರತ್ನಗಳು.
ಗೂಢಾರ್ಥವ ಜೋಡಿಸಿ ಬದುಕ ತಿದ್ದುವ ಗುರುಗಳಿಗೆ ನಮೋ.ಜೀವನದ ಸತ್ಯವು_ಇಷ್ಟೇ*

*ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ* *ಮಾಡುವ ದಿನಗಳಷ್ಟು ಮಾತ್ರ*
*ಒಳ್ಳೆಯವರು ಅಗಿ ಕಾಣುತ್ತೇವೆ*
*ನಮ್ಮಿಂದ ಒಂದು ಚಿಕ್ಕ ತಪ್ಪು* *ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ*
*ನಾವು ಮಾಡುವ ಕೆಲಸಗಳು*
*ಜನರನ್ನು* *ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲಲ
*ಸಮುದ್ರಕ್ಕೆ ಬಿದ್ದ ಮಳೆ,*
? *ಹಸಿವಿಲ್ಲದವನಿಗೆ ನೀಡಿದ ಆಹಾರ,*
? *ಧನವಂತನಿಗೆ ನೀಡಿದ ಹಣ,*
? *ದರಿದ್ರವಂತನಿಗೆ ಬಂದ ಯೌವ್ವನ,*
*ಯಾವಾಗಲೂ ವ್ಯರ್ಥ.*
*ಜೀವನ ನಮಗೆ ಏನು ಕೊಟ್ಟಿದ್ದೆ ಅನ್ನುವದಕ್ಕಿಂತ*
*ಜೀವನದಲ್ಲಿ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಅನ್ನೋದು ಮುಖ್ಯ.*
*"ಚಿಂತೆ ಮತ್ತು ಚಿತೆಗೆ "ಇರುವ ವ್ಯತ್ಯಾಸ ಒಂದು ಸೊನ್ನೆ ಆದರೆ ಅದೇ ಜೀವನದ ನಿಜವಾದ ಸತ್ಯ

"ಒಬ್ಬರ ಅತಿಯಾದ ದ್ವೇಷದಿಂದ ಮನಸ್ಸಿಗೆ ಆಗುವ ದುಃಖಕ್ಕಿಂತ ಒಬ್ಬರನ್ನು ಅತಿಯಾಗಿ ಹಚ್ಚಿಕೊಳ್ಳುವುದರಿಂದ ನಮ್ಮ ಮನಸ್ಸು ಘಾಸಿಗೊಳ್ಳುತ್ತದೆ. ಯಾರೂ ಯಾರಿಗೂ ಅನಿವಾಯ೯ವಲ್ಲ. ಎಲ್ಲರನ್ನೂ ಎಲ್ಲಾ ಸಮಯದಲ್ಲೂ ಪ್ರೀತಿಸುವುದಾಗಲಿ, ದ್ವೇಷಿಸುವುದಾಗಲೀ, ಸಾಧ್ಯವಾಗಲ್ಲ ಆದರೇ... ಎಂಥಾ ಪರಿಸ್ಥಿತಿಯಲ್ಲೂ ಮಾನವೀಯತೆಯಿಂದ ವತಿ೯ಸುವವರೆ ನಿಜವಾದ ಮನುಷ್ಯರು.*"

ಜಗತ್ತನ್ನೇ ಗೆಲ್ಲಬೇಕೆಂಬ ಇಚ್ಛೆ ನಿನಗಿದ್ದರೆ ಅದಕ್ಕೆ ಬೇಕಾದದ್ದು ಒಂದೇ ಒಂದು ಮಾರ್ಗ, ಅದು ಬೇರೆಯವರಿಗೆ ಕೆಟ್ಟದಾಗಿ ಮಾತನಾಡದಿರುವುದು

*ಕೈಯಿಂದ ಎಸೆದ ಕಲ್ಲು*
*ನೂರು ಅಡಿ ಹೋಗಿ ಬೀಳುತ್ತದೆ*

*ಬಂದೂಕಿನಂದ ಹೊರಟ ಗುಂಡು*
*ಸಾವಿರ ಅಡಿ ದೂರ ಬೀಳುತ್ತದೆ*

ಆದರೆ.......!!

*ಹಸಿದವನಿಗೆ ಕೊಟ್ಟ ರೊಟ್ಟಿಯ ತುಂಡು*
*ಸ್ವರ್ಗದ ಬಾಗಿಲಿನವರೆಗೂ ಹೋಗುತ್ತದೆ*
" *ಶುದ್ಧ ಮನಸ್ಸಿನಿಂದ ಆಡುವ ಮಾತು ಲಕ್ಷಾಂತರ ಜನರ ಹ್ರದಯ ಗೆಲ್ಲಬಹುದು.., ಅದೇ ಒಂದು ದ್ವೇಷದ ನುಡಿ ಲಕ್ಷಾಂತರ ಜನ ವಿರೋಧಿಗಳನ್ನು ಸ್ರಷ್ಠಿಸಬಹುದು...ಮಾತಿಗಿರುವ ಶಕ್ತಿಯೇ ಅಂತಹದು ಮಾತಿಗಿರುವ ಬೆಲೆ ಮಾತು ಆಡುವವರಿಗೂ ಇರಲ್ಲ*..."

*🌼🌺🌼🌺🌼🌺🌼🌺🌼🌺
ತೊಂದರೆಗಳಿಗೆ ಎರಡು ಕಾರಣವಂತೆ
ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು. ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು..!

*ಕೆಲವೇ ಕ್ಷಣಗಳಲ್ಲಿ ಹಣ ಎನ್ನುವುದು ಬರೀ ಕಾಗದದ ಚೂರುಗಳಾಗಬಹುದು...!!*

*ಚಿನ್ನವು ಕೇವಲ ಒಂದು ಲೋಹವಾಗಿಬಿಡಬಹುದು...!!*

*ಆದರೆ ಸಂಬಂಧ ಗಳಿಗಿರುವ ಬೆಲೆಯನ್ನು ದೇವರಿಗೂ ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲ...!!*

*ನಮ್ಮ ಸ್ನೇಹಿತರು ಹಾಗೂ ಪರಿವಾರದವರೇ

💐 " ನಾವೆಷ್ಟು ಖುಷಿಯಾಗಿದ್ದೇವೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ ಸಂತೋಷವಾಗಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸಾಧ್ಯವಾದಷ್ಟು ಎಲ್ಲರನ್ನೂ ಖುಷಿ ಯಾಗಿಡಲು ಪ್ರಯತ್ನಿಸೋಣ*."

 *ಒಂದು ದಿನ ಕನಸು, ಜೀವನವನ್ನು ಕೇಳುತ್ತೆ ನಾನು ಯಾವಾಗಲು ನನಸು ಆಗೋದಿಲ್ಲಾ ಯಾಕೆ? ಅಂತಾ...... ಆಗ ಜೀವನ ನಗುತ್ತಾ ಹೇಳುತ್ತೆ, ಪ್ರಯತ್ನ ಪಡದೆ ಎಲ್ಲಾ ಕನಸು ನನಸಾದರೆ ಜೀವನಕ್ಕೆ ಅಥ೯ನೇ ಇರೋದಿಲ್ಲ ಅಂತಾ..*

ನೊಣಗಳು ನಮ್ಮ ಸುಂದರವಾದ ಇಡೀ ದೇಹವನ್ನು ಬಿಟ್ಟು ಗಾಯದ ಮೇಲೆ ಕುಳಿತುಕೊಳ್ಳುವ ಹಾಗೇ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.*

_*ಚಿಂತಿಸದಿರಿ*_

*ಹುಡುಕುವವರು ಏನಾದರೂ ಹುಡುಕಿಕೊಂಡು ಇರಲಿ ನಮಗೆ ನಮ್ಮತನದ ಅರಿವಿರಲಿ ನಮ್ಮ ಅಂತರಾಳ ಯಾವಾಗಲೂ ಒಳ್ಳೆಯದನ್ನೇ ಬಯಸಲಿ."*

_*ಅಬ್ದುಲ್
ಮರೆತು ಬಿಡಿ : ನಿಮ್ಮ ಅಸಫಲತೆಯ
ಮರೆತು ಬಿಡಿ : ಬೇರೆಯವರ ತಪ್ಪನ್ನು
ಮರೆತು ಬಿಡಿ : ಹಿಂದಿನ ಕಹಿ ಕ್ಷಣಗಳ

💮💮💮
ಬಿಟ್ಟುಬಿಡಿ : ಇನ್ನೊಬ್ಬರನ್ನು ಕೀಳಾಗಿ ಕಾಣುವುದನು
ಬಿಟ್ಟುಬಿಡಿ : ಇನ್ನೊಬ್ಬರ ಏಳಿಗೆಗೆ ಹೊಟ್ಟೆ ಕಿಚ್ಚನು
ಬಿಟ್ಟುಬಿಡಿ : ಇನ್ನೊಬ್ಬರ ಹಣದ ಆಸೆಯನು
ಬಿಟ್ಟುಬಿಡಿ : ಇನ್ನೊಬ್ಬರ ಅಪಹಾಸ್ಯವನು
ಬಿಟ್ಟುಬಿಡಿ : ಇನ್ನೊಬ್ಬರ ಸಫಲತೆಗೆ ದುಃಖವನು

*💎 ಸುಖ ಜೀವನದ ಮಂತ್ರಗಳು 💎*

1 ಹಿತವಾಗಿ ಮಾತಾಡಿ 👉 ಶಾಂತಿ ಸಿಗುತ್ತದೆ
2 ಅಹಂಕಾರ ಬಿಡಿ 👉 ದೊಡ್ಡವರಾಗುವಿರಿ
3 ಭಕ್ತಿಯಿರಲಿ 👉 ಮುಕ್ತಿ ಸಿಗುತ್ತದೆ
4 ವಿಚಾರ ಮಾಡಿ 👉 ಜ್ಞಾನ ಸಿಗುತ್ತದೆ
5 ಸೇವೆ ಮಾಡಿ 👉 ಶಕ್ತಿ ದೊರೆಯುತ್ತದೆ
6 ಸಹನೆಯಿಂದಿರಿ 👉 ದೈವತ್ವ ದೊರೆಯುತ್ತದೆ
7 ಸಂತೋಷದಿಂದಿರಿ 👉 ಸುಖ ದೊರೆಯುತ್ತದೆ

👌 ಒಂದೊಳ್ಳೆj ವಿಚಾರ👌

ಪರಕೆಯ ಕಡ್ಡಿಗಳು ದಾರದಿಂದ ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಸಂಬಂಧ ಎಂಬ ದಾರದಿಂದ ಒಂದಾಗೋಣ.

▫ _*ಕಟ್ಟಿದ ಮನೆ ಬಾಡಿಗೆದಾರನಿಗೆ ಆಯ್ತು*_
▫ *ಕೊಂಡ ಹೊಲ* *ಗೇಣಿದಾರನಿಗಾಯ್ತು*
▫ _*ಮುದ್ದಾಗಿ ಬೆಳೆಸಿದ ಮಗಳು ಅಳಿಯನಿಗಾಯ್ತು*_
▫ *ಹತ್ತಾರು ದೇವರಿಗೆ ಹರಕೆ ಹೊತ್ತು ಹೆತ್ತ ಮಗ ಸೊಸೆಯ ಪಾಲಾಯ್ತು*

ವಯಸ್ಸಾದ ಮೇಲೆ ಯಾರಿಗೆ ಯಾರಿಲ್ಲ ಎರವಿನ ಸಂಸಾರ

*ಆದರೂ ಆಸೆಗೆ ಕೊನೆಯಿಲ್ಲ..*
"ತಿದ್ದದೆ ತೀಡದೆ ಅಂದ ಕಾಣದು ಗೊಂಬೆ.*
*ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ.*
*ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು."*
*ಕಂಬಳಿ ಹುಳುವಿನಿಂದಲೇ*
*ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ*! *ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ* ""...

**👨‍❤‍👨ಸ್ನೇಹ ಅನ್ನೋದು ನೆನಪು ಅಲ್ಲ ಕನಸು ಅಲ್ಲ*
*ನಮ್ಮ ಜೊತೆ ಸದಾ ಇರೋ ಇನ್ನೊoದು ಮನಸ್ಸು* 😘❤
*ಯಶಸ್ಸು ಎಂದರೆ ವೈಯಕ್ತಿಕವಾಗಿ ನಾವೆಷ್ಟು ಬೆಳೆದೆವು ಎಂಬುದಲ್ಲ ,* *ನಮ್ಮ ಬೆಳವಣಿಗೆಗಳಿಂದ*
*ಎಷ್ಟು ಜನರು ಸ್ಪೂರ್ತಿ ಪಡೆದರು ಎಂಬುದು ಮುಖ್ಯವಾಗುತ್ತದೆ !*

*ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ*
*ಹಾಗೆಯೇ ಜೀವನ, ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ*

*🌹🌹ಶುಭಮುಂಜಾನೆ🌹🌹*

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

ಒತ್ತಡವಿಲ್ಲದ ಉದ್ಯೋಗವಿಲ್ಲ ,
ನಷ್ಟವಿಲ್ಲದ ವ್ಯಾಪಾರವಿಲ್ಲ ,
ಕಷ್ಟವಿಲ್ಲದ ವ್ಯವಸಾಯವಿಲ್ಲ ,
ನೋವಿಲ್ಲದ ಸಂಸಾರವಿಲ್ಲ ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ ,

ಇವೆಲ್ಲವನ್ನೂ ಜಯಸುವುದೇನೇ
"ಜೀವನ"

*"ಚಂದ್ರಗುಪ್ತ ಕೇಳುತ್ತಾನೆ"*
*"ಎಲ್ಲವೂ ಹಣೆಬರಹದಲ್ಲಿ ಬರೆದಿದ್ದಾರೆ ಅಂದ ಮೇಲೆ ಪ್ರಯತ್ನ ಪಟ್ಟು ಫಲವೇನು"?*

*"ಚಾಣಕ್ಯ ಉತ್ತರಿಸುತ್ತಾನೆ"*
*"ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ"...*

*"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"...*✍

*ಎಷ್ಟೊಂದು ಅರ್ಥಗರ್ಭಿತ ಮಾತು*
👉ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ….
ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ*
ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ...
- *ತಿಳಿದವರು ಹೇಳಿದ ಅಳಿಯದ ಮಾತು*

*"ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಲ್ಲ,*
*ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ*
*ಯಾಕೆಂದರೆ*
*ಸತ್ತ ಮೇಲೆ ಹೆಗಲು ಕೊಡುವವರು ಅವರೆ...*
*ಶ್ರೀಮಂತರು ನೇರವಾಗಿ* *ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"*

*"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ".🙏🏻*

*ಪ್ರಾಮಾಣಿಕ ಸಂಬಂಧಗಳು ಶುದ್ಧ ನೀರಿದ್ದಂತೆ. ವಾಸನೆ, ಬಣ್ಣ, ಆಕಾರಗಳಿಲ್ಲದಿದ್ದರೂ ಜೀವನಕ್ಕೆ ಅತೀ ಅವಶ್ಯ. ಕಲುಷಿತವಾಗದಂತೆ ನೋಡಿಕೊಳ್ಳೋಣ*

*ವೈರಿಯನ್ನು ಕೊಲ್ಲಬೇಕಾದರೆ ಅವನ ತಲೆಯನ್ನು ತೆಗೆಯಬೇಕಾದ ಅಗತ್ಯವಿಲ್ಲ!*
*ನಮ್ಮ ತಲೆಯಿಂದ ಅವನನ್ನು ತೆಗೆದರೆ ಸಾಕು!!😬*

*ಸಫಲತೆಯು ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸಿದರೆ ಸೋಲು ನಿನಗೆ ಜಗತ್ತನ್ನು ಪರಿಚಯಿಸುತ್ತದೆ. ಬದುಕಿನ ದಾರಿಯಲ್ಲಿ ಭರವಸೆ ಕಳೆದುಕೊಂಡು ಇದೇ ಕೊನೆ ಎಂದುಕೊಂಡರೆ ಭಗವಂತ ನಕ್ಕು ನುಡಿಯುತ್ತಾನೆ..." ಇದು ಬರೀ ಒಂದು ತಿರುವಷ್ಟೆ...ಕೊನೆಯಲ್ಲ" ಯಾವಾಗಲೂ ಸಂತಸದಿಂದಿರಿ.*

ಯಾವುದನ್ನೂ ಹಗುರವಾಗಿ ಭಾವಿಸಬಾರದೂ ಎಲ್ಲದಕ್ಕೂ ಒಂದು ಕಾಲ ಅಂತ ಇದೆ...
ಸಮಯ ಬಂದಾಗ ತಲೆಕೆಳಗೆ ಹಾಕಿ ನೇತಾಡುವ ಬಾವಲಿ ಕೂಡ ಎಲ್ಲರನ್ನೂ ಒಮ್ಮೆಗೆ ಮೇಲೆಕೆಳಗೆ ಮಾಡಬಲ್ಲದು🦇🤣😛

*ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು*

ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*

💐 *" ಅನುಮಾನ " ಮತ್ತು "ಅವಮಾನ "
ಬರೀ ಒಂದಕ್ಷರ ವ್ಯತ್ಯಾಸವಿರುವ
ಈ ಪದಗಳಿಗೆ ಸಾವಿರಾರು ಹೃದಯಗಳನ್ನು
ಛಿದ್ರ ಮಾಡುವಷ್ಟು "ಶಕ್ತಿ" ಇದೆ.. ಈ ಎರಡು ಪದಗಳು ನಮ್ಮ ಜೀವನದಲ್ಲಿ ಬಾರದಂತೆ ನೋಡಿಕೊಳ್ಳಬೆಕು.✍ *💐

*ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ.*

*ಆದರೆ........*

*ಬರೆದಿಡುವಂತಹ ಜೀವನ ಮಾಡಲು ಸಾಧ್ಯಇದೆ....*

ನಾವು ಚಿಕ್ಕವರಿದ್ದಾಗ ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!

*ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ ಒಂದು ದುಡಿಮೆ ಇನ್ನೊಂದು ತಾಳ್ಮೆ. ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ 'ಬದುಕು ಕಲಿಸುವ ಪಾಠ'.*

ನಾಲ್ವಡಿ ಕೃಷ್ಣ ರಾಜ ಒಡೆಯರ್ naalvadi krishnaraja vodeyar

ಮೈಸೂರಿನ ಅಶೋಕಪುರಂ ಮತ್ತು ನಾಲ್ವಡಿ

ಮೈಸೂರಿನಲ್ಲಿ ಅಶೋಕಪುರಂ ಎಂಬ ನಗರವಿದೆ. ಇಲ್ಲಿ ವಾಸಮಾಡುವ ಎಲ್ಲಾ ಜನರು ಮೂಲತಹ ದಲಿತರು. ಅಶೋಕಪುರಂ ನಲ್ಲಿ ಇಂದು ವಾಸ ಮಾಡುತ್ತಿರುವ ದಲಿತರು ಯಾರು ಕೂಡ ಅಲ್ಲಿಯವರಲ್ಲ, ಅವರೆಲ್ಲಾ ಮೂಲತಹ ಉತ್ತರ ಕರ್ನಾಟಕದವರು. ಬಹುಶ ಈ ಕಾರಣಕ್ಕೆ ಉತ್ತರ ಕರ್ನಟಕದವರಂತೆ ರಫ್ ಅಂಡ್ ಟಫ್ ಆಗಿರುವುದು ಎಂದು ಕ್ರಮೇಣ ನನಗನಿಸಿತು.

ಉತ್ತರ ಕರ್ನಾಟಕದಿಂದ ವಲಸೆ ಬಂದ ಈ ಜನಾಂಗ ಮೊದಲು ನೆಲೆಗೊಂಡದ್ದು ಮೈಸೂರಿನ ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ. ಆಗಿನ್ನೂ ಈಗಿನ ಹೊಸ ಅರಮನೆ ಇರಲಿಲ್ಲ. ಸಣ್ಣದೊಂದು ಗಂಧದ ಅರಮನೆ ಇತ್ತು. ದೊಡ್ಡಕೆರೆಯಲ್ಲಿ ಬೀಡುಬಿಟ್ಟಿದ್ದ ದಲಿತರನ್ನು ಅನಂತರ ಅಶೋಕಪುರಂ ಗೆ ಸ್ಥಳಾಂತರ ಮಾಡಲಾಯಿತು. ಆಗಿನ್ನು ಅದಕ್ಕೆ ಅಶೋಕಪುರಂ ಎಂಬ ಹೆಸರು ಬಂದಿರಲಿಲ್ಲ. ಸ್ಥಳಾಂತರಗೊಂಡ ಜನ ಅದಕ್ಕೆ ಆದಿ ಕರ್ನಾಟಕ ಪುರ ಎಂದು ನಾಮಕರಣ ಮಾಡಿಕೊಂಡಿದ್ದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಒಮ್ಮೆ ಅಲ್ಲಿಗೆ ಭೇಟಿ ನೀಡಿ ಅಶೋಕ ಪುರಂ ಎಂದು ಮರು ನಾಮಕರಣ ಮಾಡಿದರು. ಅಂದಿನಿಂದ ಇಲ್ಲಿಯ ತನಕ ಅದು ಅಶೋಕ ಪುರಂ ಆಗಿಯೇ ಉಳಿದುಕೊಂಡಿದೆ. ಆದರು ಚರಿತ್ರೆಯನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ.

ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಚಾರವನ್ನು ನಾನು ಹೇಳಬೇಕಿದೆ. ನಾಲ್ವಡಿಯ ಅವರ ಗಂಧದ ಮರದ ಸಣ್ಣ ಅರಮನೆ ಅಗ್ನಿಗೆ ಆಹುತಿಯಾಗುತ್ತದೆ. ಇಡೀ ಅರಮನೆಯ ಸುಟ್ಟು ಹೋಗುತ್ತಿದ್ದ ಸಂದರ್ಭ. ಅಂತಹ ತುರ್ತಿನ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದತ್ತು ಮಗ ಪುಟ್ಟಬಾಲಕ ಅರಮನೆಯ ಒಳಗೆ ಸಿಕ್ಕಿ ಹಾಕಿಕೊಂಡು ಕೂಗುತ್ತಿರುತ್ತದೆ. ಅಂತಹ ಸಂದಿಗ್ಧತೆಯ ಸ್ಥಿತಿಯಲ್ಲಿ ನಾಲ್ವಡಿ ಅವರ ಬೆಂಬಲಕ್ಕೆ ನಿಲ್ಲುವುದು ಒಬ್ಬರು ಮುಸಲ್ಮಾನರು, ಮತ್ತೊಬ್ಬರು ಅಶೋಕ ಪುರಂನ ದಲಿತರು. ಮುಸಲ್ಮಾನರು ಅರಮನೆಗಳ ಹೊತ್ತಿದ್ದ ಬೆಂಕಿ ಹಾರಿಸಲು ಮರಳು, ನೀರು ಇತ್ಯಾದಿ ವಸ್ತುಗಳ ಮೂಲಕ ಬೆಂಕಿಯನ್ನು ಹಾರಿಸಲು ಪ್ರಯತ್ನಿಸಿದರೆ, ದಲಿತರು ಅರಮನೆಗೆ ಹೊತ್ತಿದ್ದ ಬೆಂಕಿಯನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನು ಪಣವಿಟ್ಟು ನಾಲ್ವಡಿ ಅವರ ಮಗನನ್ನು ರಕ್ಷಿಸುತ್ತಾರೆ. ಅನಂತರ ಇಡೀ ಅರಮನೆಯೇ ಸುಟ್ಟು ಹೋಗಿ, ಹೊಸ ಅರಮನೆಯನ್ನು ಕಟ್ಟಿಸುತ್ತಾರೆ. ಅದೇ ಈಗಿರುವ ಅರಮನೆ.

ಈ ಘಟನೆಯ ನಂತರ ಕೃಷ್ಣರಾಜ ಓಡೆಯರ್ ಅವರು ಸುಮ್ಮನೆ ಕೂರಲಿಲ್ಲ. ನನ್ನ ಮಗನನ್ನು ಕಾಪಾಡಿದ ಮಹಾನುಭಾವರು ಯಾರು ಎಂದು ಹುಡುಕಿದರು, ಅನಂತರ ಅವರಿಗೆ ತಿಳಿದಿದ್ದು ಅಶೋಕಪುರಂ ನ ದಲಿತರು ನನ್ನ ಮಗನನ್ನು ಉಳಿಸಿದವರು ಎಂದು. ಆ ವಿಷಯ ತಿಳಿದ ತಕ್ಷಣ ನಾಲ್ವಡಿ ಅವರು ಕುದುರೆ ಏರಿ ಅಶೋಕಪುರಂ ಗೆ ತೆರಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕುದುರೆ ಏರಿ ಬರುತ್ತಿದ್ದನ್ನು ಕಂಡು ಅಶೋಕಪುರಂ ನ ದಲಿತರು, ರಾಜರ ಮಗನನ್ನು ಮುಟ್ಟಿದ ತಪ್ಪಿಗೆ ಶಿಕ್ಷೆ ಕೊಡಲು ಬರುತ್ತಿರಬಹುದೆಂದು ತಪ್ಪಾಗಿ ಊಹಿಸಿ ಎದುರಿ ಓಡುತ್ತಿದ್ದರು. ನಾಲ್ವಡಿಯ ಅವರು ಕುದುರೆಯಿಂದ ಇಳಿದು ದಯವಿಟ್ಟು ಯಾರು ಓಡಬೇಡಿ ನಾನು ನಿಮಗೆ ತೊಂದರೆ ಕೊಡಲು ಬಂದಿಲ್ಲ ಎಂದು ಹೇಳಿದ ತಕ್ಷಣ ಚದುರಿ ಹೋಗುತ್ತಿದ್ದ ಜನರೆಲ್ಲಾ ಅಲ್ಲಿಲ್ಲೇ ನಿಲ್ಲುತ್ತಾರೆ.

ನಾಲ್ವಡಿ ಅವರು, ಅಲ್ಲಿಯ ಜನರನ್ನು ಉದ್ದೇಶಿಸಿ. ನೋಡಿ ನೀವು ನನ್ನ ಮಗನನ್ನು ಉಳಿಸಿದವರು ಎಂದು ತಿಳಿಯಿತು. ಆ ಕಾರಣದಿಂದ ನಿಮಗೆ ನಾನು ಕೃತಜ್ಞತೆ ತಿಳಿಸಲು ಬಂದಿದ್ದೇನೆ. ಇಂತಹ ಸಂದರ್ಭದಲ್ಲಿ ನಿಮಗೇನು ಬೇಕು ಕೇಳಿ ನಾನು ಕೊಡುವೆ ಎಂದು ಹೇಳುತ್ತಾರೆ. ಅಲ್ಲಿದ್ದ ಕೆಲವು ಜನ ನಮಗೇನು ಬೇಡ ಎನ್ನುತ್ತಾರೆ. ಆದರೆ ಕೆಲವು ಮಂದಿ ನಮಗೆ ಯಾವುದೇ ಭೂ ಓಡೆತನವಿಲ್ಲ ಹಾಗಾಗಿ ನಮಗೆ ಕೊಟ್ಟರೆ ತುಂಡು ಭೂಮಿ ಕೊಡಿ ಸ್ವಾಮಿ ಎನ್ನುತ್ತಾರೆ. ಅವರಂತೆಯೇ ಓಡೆಯರ್ ಅವರು ಅಶೋಕಪುರಂ ನ ಪಕ್ಕದಲ್ಲೆ ಇರುವ ಇಡೀ ಎಲೆ ತೋಟವನ್ನೇ ಬರೆದು ಕೊಡುತ್ತಾರೆ. ಇಂದಿಗೂ ಅಶೋಕಪುರಂ ಪಕ್ಕದಲ್ಲಿರುವ ಕೋಟಿಗಟ್ಟಲೆ ಬೆಲೆ ಬಾಳುವ ಆ ಭೂಮಿ ಇಂದಿಗೂ ಅಲ್ಲಿನ ಜನರ ಕೈನಲ್ಲೆ ಇದೆ.

ಭೂಮಿ ಕೊಟ್ಟ ತಕ್ಷಣ ನಾಲ್ವಡಿ ಅವರು ಸುಮ್ಮನಾಗಲಿಲ್ಲ. ಇನ್ನೂ ಏನಾದರು ಕೊಡಬೇಕೆನಿಸಿ ಬೇರೆ ಏನಾದರು ಕೇಳಿ ಎಂದರು. ಎಲ್ಲರೂ ಬೇಡ ಮಹರಾಜರೇ ನಮಗಷ್ಟೆ ಸಾಕು ಎಂದರು. ನಾಲ್ವಡಿ ಅವರು ಸ್ವಲ್ಪ ಯೋಚಿಸುತ್ತಾ, ಮಹಾರಾಷ್ಟ್ರದಲ್ಲಿ ಕೊಲ್ಲಾಪುರದ ಶಾಹು ಮಹಾರಾಜರು ಅಂತ ಇದ್ದಾರೆ. ಅವರು ನಿಮ್ಮ ಜಾತಿಗೆ ಸೇರಿರುವ ಅಂಬೇಡ್ಕರ್ ಎಂಬ ವಿದ್ಯಾರ್ಥಿಯನ್ನು ವಿದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಅನುಧಾನ ಕೊಟ್ಟು ಓದಿಸುತ್ತಿದ್ದಾರೆ, ನಿಮ್ಮಲ್ಲಿ ಅಂತವರಿದ್ದರೆ ಹೇಳಿ ನಾನು ಕೂಡ ವಿದೇಶದಲ್ಲಿನ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿ ಓದಿಸುವೆ ಎನ್ನುತ್ತಾರೆ. ಒಂದಕ್ಷರವನ್ನು ಓದದ ಆ ಜನ ಹೇಗೆ ಹೋಗಲು ಸಾಧ್ಯ? ನಾಲ್ವಡಿ ಅವರ ಈ ಮಾತನ್ನು ಕೇಳಿದ ಅಶೋಕಪುರಂ ನ ಅನಕ್ಷರಸ್ಥನೊಬ್ಬ, ಅಲ್ಲಾ ಸ್ವಾಮಿ ನೀವು ಯಾವುದೋ ದೇಸುಕ್ಕ. ಅದ್ಯಾವುದೋ ಇಸ್ವ ಇದ್ಯಾಲಯಕ್ಕ ಕಳ್ಸ ಬದ್ಲು ಅದನ್ನೆ ನಮ್ ಮೈಸೂರ್ ನಲಿ ಮಾಡ್ಬುಡಿ ಅಂತ ಒಂದ್ ಮಾತು ಎಸೆದ. ಆತನ ಮಾತನ್ನು ಗಂಭೀರವಾಗಿ ಯೋಚಿಸಿ ಹೌದಲ್ವ ಎಂದು ಅದರ ನೆನಪಿನಾರ್ಥಕವಾಗಿ ಮೈಸೂರಿನಲ್ಲಿ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಿದರು. ಅದೇ ನಮ್ಮ ಮೈಸೂರು ವಿಶ್ವವಿದ್ಯಾನಿಲಯ. ಆ ವಿಶ್ವವಿದ್ಯಾನಿಲಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇಂದಿಗೂ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಲೂ ಇದ್ದಾರೆ. ಅಂತಹ ವಿಶ್ವವಿದ್ಯಾನಿಲಯದಲ್ಲಿ ಓದಿದ ನಾನು ಕೂಡ ಧನ್ಯ. ಅವರ ಜನ್ಮ ದಿನದ ಸಂದರ್ಭದಲ್ಲಿ ಒಕ್ಕೋರಲಿ ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ನೆನೆಯಬೇಕು. ನಮ್ಮೊಳಗೆ ನಾಲ್ವಡಿ ನೆಲೆಯಾಗಬೇಕು.

ನಗೆ ಹನಿ ಕನ್ನಡ ನಗೆಹನಿಗಳು Kannada joke's

ನಾನೊಂದು ದಿನ ಬೆಟ್ಟದ ಹಾದಿಯುದ್ದಕ್ಕೂ ನಡೆಯುತ್ತಿದ್ದೆ, ಇದ್ದಕ್ಕಿದ್ದಂತೆ ಧ್ವನಿವೊಂದು ಕೇಳಿತು.
"ನಿಲ್ಲು".
ಕೂಡಲೆ ನಿಂತೆ, ಒಂದು ದೊಡ್ಡ ಬಂಡೆಯು ಮುಂದೆ ಬಿದ್ದಿತು ... ಕೂದಲೆಳೆಯಿಂದ ಬಚಾವಾದೆ ...!

ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಮುಂದುವರೆದೆ ...!

ಸ್ವಲ್ಪ ಸಮಯದ ನಂತರ, ಅದೇ ಧ್ವನಿ ಮತ್ತೇ ಬಂದಿತು, " ನಿಲ್ಲು ...!

ಮತ್ತೆ ನಿಂತೆ, ಒಂದು ಕಾರು ವೇಗವಾಗಿ ಹಾದುಹೋಯಿತು ಕೂದಲೆಳೆಯಲ್ಲಿ ಬದುಕುಳಿದೆ ...!

ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಕೇಳಿದೆ.,! ಸಹೋದರ, ಯಾರು ನೀನು ನನ್ನ ಜೀವನವನ್ನು ಮತ್ತೆ ಮತ್ತೆ ಉಳಿಸುತ್ತಿದ್ದಿಯಾ...!

ಧ್ವನಿ ಉತ್ತರಿಸಿತು: ನಿನ್ನ ಜೀವ ರಕ್ಷಿಸುವ ದೇವರು...!

ಮತ್ತೊಮ್ಮೆ ಧನ್ಯವಾದ ಹೇಳಿ ಅಳುತ್ತಾ ಕೇಳಿದೆ.
ನೀವು ಮದುವೆಯ ಸಂದರ್ಭದಲ್ಲಿ ಎಲ್ಲಿದ್ದಿರಿ ಆವಾಗ ಯಾಕೆ ಕೂಗಿ ಹೇಳಲಿಲ್ಲ?

ಅದೃಶ್ಯ ಧ್ವನಿ ಉತ್ತರಿಸಿತು: ಅವಾಗಲೂ ಕೂಗಿ ಕೂಗಿ ಹೇಳಿದೆ ಆದರೆ 'ವಾದ್ಯದ ಸದ್ದಿನಿಂದ ನೀನು ಕೇಳಿಸಿಕೊಂಡಿಲ್ಲ...!
😂😁😆😅😂😃

😃😃😃😃

ಒಬ್ಬ ಗಂಡ ಕೊನೇ ಉಸಿರೆಳೆಯುವ ಸಮಯದಲ್ಲಿ (ಬೆಂಗಳೂರಿನ ಒಂದು ಆಸ್ಪತ್ರೆಯಲ್ಲಿ)

ತನ್ನ ದೊಡ್ಡ ಮಗನನ್ನು ಕರೆದು "ಜಯನಗರ 3ನೇ ಬ್ಲಾಕಿನ 15 ಮನೆಗಳನ್ನ ನೀನು ತಗೋ,"🏠🏠🏠

ಎರಡನೆಯವನ್ನನ್ನು ಕರೆದು "ಜಯನಗರ 5ನೇ ಬ್ಲಾಕಿನ 8 ಫ್ಲಾಟ್ಗಳನ್ನ ನೀನು ಇಟ್ಕೋ,"🏫🏫🏫

ಕಡೆಯ ಮಗನನ್ನು ಕರೆದು "ನೀನು ನನಗೆ ತುಂಬ ಪ್ರೀತಿ ಪಾತ್ರ. 4ನೇ ಬ್ಲಾಕಿನ 20 ಅಂಗಡಿಗಳನ್ನು ನೀನೇ ಇಟ್ಕೋ."🏤🏤🏤

ಕೊನೆಯದಾಗಿ ತನ್ನ ಪತ್ನಿಯನ್ನು ಕುರಿತು
"ನೀನು ನಮ್ಮ 4ನೇT ಬ್ಲಾಕಿನ 11 ಮನೆಗಳನ್ನು ನೀನೆ ಇಟ್ಕೊ. ಈಗಿನ ನಮ್ಮ ಮನೆಗೆ ತುಂಬಾ ಹತ್ತಿರ ಆಗುತ್ತೆ."🏡🏡🏡

ಇದೆಲ್ಲವನ್ನೂ ನೋಡುತ್ತಿದ್ದ ನರ್ಸ್ ಹೇಳಿದಳು "ನೀವು ಎಂತಾ ಪುಣ್ಯವಂತರು....!!!"

ಕೋಪಗೊಂಡ ಹೆಂಡ್ತಿ ಹೇಳಿದಳು
"ಅಯ್ಯೋ ನನ್ ಕರ್ಮ ಅದೆಲ್ಲಾ ನಾವು ಹಾಲು ಹಾಕುತ್ತಿದ್ದ ಮನೆಗಳು,
ಅದನ್ನ ಹಂಚ್ತಾ ಅವ್ರೆ ಅಷ್ಟೇಯ....!!!""

ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ನಾವು ಕಾಲಿಂದ ಯಾವುದನ್ನೂ/ಯಾರನ್ನೂ ಹೊಡೆಯೋಲ್ಲ..!!

ಇಲ್ಲಾಂದಿದ್ರೆ..ನಾವು ಫುಟ್ ಬಾಲ್ ನಲ್ಲಿ ನಂಬರ್ ಒನ್ ಆಗಿರ್ತಾ ಇದ್ವಿ..⚽!!

😜🤣😀😃😍😇😄😁

ಆದ್ರೆ ನಾವು ಬೇರೆಯವ್ರ ಕಾಲು ಎಳೆಯೋದ್ರಲ್ಲೇ ಖುಷಿ ಪಡ್ತೀವಿ.. ಅದಕ್ಕೇ ನಾವು ಕಬಡ್ಡಿಯಲ್ಲಿ ನಂಬರ್ ಒನ್ ಆಗಿರೋದು..😅😂🤣😁😆🤣😂😅🤩😍

ಓರ್ವ ಅರಬಿ Karnataka ಮಾರ್ಗವಾಗಿ ಪ್ರಯಾಣ ಮಾಡ್ತಾ ಇದ್ದ…….
ದಾರಿ ಮಧ್ಯೆ ,
Udupi ಬಳಿ ಇದ್ದ ತೋಡಿನಲ್ಲಿ ಒಬ್ಬ ವ್ಯಕ್ತಿ ಬಟ್ಟೆ ಒಗೆಯುತ್ತಿದ್ದುದು ಅರಬಿ ನೋಡಿದ…..
ಅರಬಿಯು ಊರಿಗೆ ಹಿಂತಿರುಗಿದಾಗ ಊರಿನ ಗೆಳೆಯರು ಕೇಳಿದರು: ” ಹೇಗಿತ್ತು ಕರ್ನಾಟಕ ಪ್ರವಾಸ ?”
ಅರಬಿ: ” ಎಂತ ಭಯಂಕರ ಮಾರ್ರೇ…ಏನೆಂದು ಹೇಳಲಿ …Karnatakaದವರು ನಾವು ಎಣಿಸಿದ ಹಾಗೆ ಇಲ್ಲ …… ಅವರು ಭೀಕರ…..”
“ಯಾಕೆ…..??
“ಅವರು ಬಂಡೆಕಲ್ಲನ್ನು ಒಡೆಯುವುದು ಚಡ್ಡಿಯಿಂದ…….”😁😁😁

---------------------
ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ:
......
ಗಂಡ: ಬಾರೇ, ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು.

ಹೆಂಡತಿ: ನೀವು ಹೇಳೋದು ಏನೂಂತಾ? ನಾನು ದಪ್ಪ ಅಂತಾನ?

ಗಂ: ಇಲ್ಲ. ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.

ಹೆಂ: ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ?

ಗಂ: ಹೋಗ್ಲಿ ಬಿಡು. ಏಳಬೇಡ.

ಹೆಂ: ಅಂದರೆ ನಾನು ಸೋಮಾರಿ ಅಂತ...

ಗಂ: ಹಾಗಲ್ಲ. ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.

ಹೆಂ: ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..

ಗಂ: ನಾನು ಹಾಗೆ ಹೇಳಲಿಲ್ಲ

ಹೆಂ: ಅಂದರೆ ನಾನು ಸುಳ್ಳು ಹೇಳ್ತೀನಿ ಅಂತ...

ಗಂ: ಎ.. ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ.
.
ಹೆಂ: ಅಂದ್ರೆ ನಾನು ಜಗಳಗಂಟಿ ಅಂತ...

ಗಂ: ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು..

ಹೆಂ: ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ.. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು..

ಗಂ: ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ?

ಹೆಂ: ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ.

ಗಂ: ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...

ಹೆಂ: ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗೆ
😄 😜 😁 😂 😡 🚶‍♂ಆಜ್ಞಾತವಾಸಿ

ಸಡನ್ನಾಗಿ ಅರ್ಧರಾತ್ರಿ 2 ಗಂಟೆಗೆ ಹೆಂಡತಿ ಗಂಡನನ್ನು ನಿದ್ರೆಯಿಂದ ಎಬ್ಬಿಸಿ ಹೀಗೆ ಕೇಳ್ತಾಳೆ,

ಹೆಂಡ್ತಿ: ಬಾಹುಬಲಿ ಸಿನಿಮಾದಲ್ಲಿ ಹೀರೊಯಿನ್ ಯಾರು ?

ಗಂಡ : ಅನುಷ್ಕ, ತಮನ್ನಾ.

ಹೆಂಡ್ತಿ : ತೆಲುಗು ಸಿನಿಮಾ ಈಗಾ ಚಿತ್ರದಲ್ಲಿ ಸಮಂತಾ ನಟಿಸಿದ ಪಾತ್ರದ ಹೆಸರು ಏನು?.

ಗಂಡ: ಬಿಂದು.

ಹೆಂಡ್ತಿ : 2003ರ ವರ್ಲ್ಡ್ ಕಪ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಪಾಕೀಸ್ತಾನ ವಿರುದ್ಧ ಹೊಡೆದ ರನ್ ಎಷ್ಟು?.

ಗಂಡ : 98.

ಹೆಂಡ್ತಿ:- ನಮ್ಮ ಫ್ಲಾಟ್‌ನಲ್ಲಿ ಇರೊ ಕವಿತ ಅ ಫ್ಲಾಟ್‌ಗೆ ಬಂದು ಎಷ್ಟು ದಿನ ಅಯ್ತು.

ಗಂಡ : ಈ ಗುರುವಾರಕ್ಕೆ ಎರ್ಡು ವರ್ಷ ಆಗುತ್ತೆ.

ಗಂಡ :- ಅದ್ ಸರಿ ಅರ್ಧ ರಾತ್ರಿಲಿ ಎಬ್ಬಿಸಿ ಯಾಕ್ ಕೇಳ್ತಿದ್ದಿಯಾ.

ಹೆಂಡ್ತಿ :- ನೆನ್ನೆ ನನ್ನ ಹುಟ್ಟಿದ ಹಬ್ಬ.

ಗಂಡ : SILENCE

ಹೆಂಡ್ತಿ : VIOLENCE.

ಕ್ವಿಜ್ ಕಾರ್ಯಕ್ರಮ ಮುಗಿತು.

ಮಾರಿ ಹಬ್ಬದ ಕುಣಿತ ಪ್ರಾರಂಭ ಆಯ್ತು.

ಕನ್ನಡ ನೀತಿ ಕತೆಗಳು moral stories in kannada

ಮನುಷ್ಯ ಸತ್ತ ಮೇಲೆ.. ಅವನ ಪರಿಚಯ.. *BODY* ಅಂತ ಶುರುವಾಗುತ್ತೆ.. *BODY* ಬಂತು *BODY* ಯನ್ನು ಇಳಿಸಿ *BODY* ಯನ್ನ ಎತ್ತಿ.. ಹೀಗೆ ಜೀವನ ಪರ್ಯಂತ ಜನರನ್ನು ಮೆಚ್ಚಿಸಲು ಪ್ರಯತ್ನಿಸಿದ ಆ ವ್ಯಕ್ತಿಯ ಹೆಸರನ್ನು ಕೂಡ ಜನ ಮರೆತುಬಿಡುತ್ತಾರೆ🙁😕...

*ಜೀವನದಲ್ಲಿ... ಸೃಷ್ಠಿಯನ್ನು ಮೆಚ್ಚಿಸುವ ಬದಲು ಸೃಷ್ಠಿಕರ್ತನನ್ನು ಮೆಚ್ಚಿಸಲು ಜೀವಿಸಬೇಕು☺..*

ಹಾಗಾಗಿ, 👇ಇವುಗಳನ್ನು ಧೈರ್ಯದಿಂದ ಮಾಡಿ

*1.ಸಾದ್ಯವಾದಷ್ಟು ಒಂದು ಬಾರಿಯಾದರು ಗುರುವಿನ ದ್ಯಾನ ಮಾಡಿ👏🙏..*

*2.ನೀವು ಇಷ್ಟಪಡುವ ವಸ್ತವನ್ನು ಕೊಳ್ಳಲು ಧಾರಾಳವಾಗಿ ಹಣ ಖರ್ಚು ಮಾಡಿ💸..*

*3.ನಗಬೇಕು ಅನಿಸಿದಾಗ ಹೊಟ್ಟೆ ಹುಣ್ಣು ಆಗುವಷ್ಟು ನಗಿ😆🤣..*

*4.ನಿಮ್ಮ ಡ್ಯಾನ್ಸ್ ಕೆಟ್ಟದಾಗಿ ಇದ್ದರು ಖುಷಿಯಾದಾಗ ಡ್ಯಾನ್ಸ್ ಮಾಡಿ💃🕺🏻..*

*5.ಪೋಟೋಗೆ ಇಷ್ಟ ಬಂದ ಹಾಗೆ ಪೋಸ್ ಕೊಡಿ🤷🏻‍♀🤷🏻‍♂..*

*6.ಮಗುವಿನ ತರಹ ಇರಲು ಪ್ರಯತ್ನಿಸಿ👶🏻👧🏻..*

*ನೀತಿ: ಜೀವನದಲ್ಲಿ ಸಾವು ಎಂಬುದು ದೊಡ್ಡ ನಷ್ಟವಲ್ಲ ಆದರೆ ಬದುಕಿರುವಾಗ ಜೀವನದಲ್ಲಿ ಎನು ಅನುಭವಿಸದೆ ಉತ್ಸಾಹ ಕಳೆದುಕೊಳ್ಳುವುದು ದೊಡ್ಡ ನಷ್ಟ😞😔*

ಆದ್ದರಿಂದ *ನಮ್ಮದು ಅಂತಾ ಇರುವುದು ಪ್ರತಿ ಕ್ಷಣ⏱ ಆ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಿ* ಒಂದಲ್ಲಾ ಒಂದು ದಿನ ಎಲ್ಲವನ್ನ ಎಲ್ಲರನ್ನು ಬಿಟ್ಟು ಕಾಣದ ಲೋಕಕ್ಕೆ ಹೋಗುವುದು ಖಚಿತ, *ಜೀವನ...ಎಂಬ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿ🎊🎉🎏🎐🎈📯🥁🎺🎸🎻*..ಎಲ್ಲರಿಗೂ ಸದಾ ಒಳ್ಳೆಯದನ್ನೆ ಬಯಸಿ...

🍃🍂 ಸರ್ವೇ ಜನಃ ಸುಖಿನೋ ಭವಂತೂ🍂🍃🙌🙏😊😊

_ಒಂದು ಯುದ್ಧದಿಂದಾಗಿ *ತಿಮ್ಮಪ್ಪ ನಾಯಕ ಕನಕದಾಸ* ನಾಗಿ ಬದಲಾದ...._

_*ನಾರದ* ನ ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ *ವಾಲ್ಮೀಕಿ* ಯಾದ...._

_ಎಂಟನೆಯ ವಯಸ್ಸಿಗೆ_ _ಉಪನಯನವನ್ನು ತಿರಸ್ಕರಿಸಿ_
_*ಬಸವಣ್ಣ*_
*_ಜಗಜ್ಯೋತಿ_*_ಯಾದ..._

_ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ *ಅಂಬೇಡ್ಕರ್ ಸಂವಿಧಾನ ಶಿಲ್ಪಿ* ಯಾದ...._

_ತನ್ನ ಅದ್ಬುತ ವಿಚಾರದಾರೆಗಳಿಂದ ಜಗತ್ತನ್ನು ಗೆದ್ದ *ನರೇಂದ್ರ ವಿವೇಕಾನಂದ* ನಾದ...._

_ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು._
_ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ *ಸೂಪರ್ ಸ್ಟಾರ್ ಉಪೇಂದ್ರ* ನಾದ...._

_ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ *ರವಿ ಚನ್ನಣ್ಣನವರ್* ಇಂದು ಐಪಿಎಸ್ ಅಧಿಕಾರಿಯಾದ...._

_ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ._ _*ಎಸ್.ಆರ್.ಕಂಠಿ* ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ *"ಭರತ"* ನಾದ...._

_ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ದಾರ,_ _ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ *ಅಣ್ಣಾ ಹಜಾರೆ ಆಧುನಿಕ ಗಾಂಧಿ* ಯಾದರು....._

_ಬೀದಿ ದೀಪದಲ್ಲಿ ಓದಿದ *ವಿಶ್ವೇಶ್ವರಯ್ಯ ಭಾರತ ರತ್ನ* ನಾದ...._

_ಎಂಟನೇ ತರಗತಿ ಫೇಲ್ ಆದ *ಸಚಿನ್* ಇಂದು ಕ್ರಿಕೆಟ್ ಲೋಕದ ದೇವರಾದ...._

_ಪೆಟ್ರೋಲ್ ಹಾಕುತ್ತಿದ್ದ *ಮುಖೇಶ್ ಅಂಬಾನಿ* ಇಂದು ಭಾರತದ *ನಂಬರ್ ಒನ್* ಶ್ರೀಮಂತನಾದ....._

_*ಗೋಪಾಲ್ ಕೃಷ್ಣ ರೋಲಂಕಿ* ಎಂಬ ಆಂಧ್ರದ ಯುವಕ_ _ಇಂಗ್ಲಿಷ್ ಮತ್ತು_
_ಹಿಂದಿ ಬರದಿದ್ದರೂ_ _*ಐಎಎಸ್* ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಬಂದ...._

_ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ *ಅಬ್ರಹಾಂ ಲಿಂಕನ್* ಸತತ ಸೋಲು ಕಂಡರು ಕೊನೆಗೆ *ಅಮೆರಿಕದ ಅಧ್ಯಕ್ಷ* ನಾದ...._

_*ಎನ್. ಅಂಬಿಕಾ* ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ *ಐಪಿಎಸ್* ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ *ಮಿಸ್* ಮಾಡದೆ ತಿಳಿದುಕೊಳ್ಳಿ)._

_ನಮ್ಮ ಜಿಲ್ಲೆಯವನೊಬ್ಬ_
_*ಐಎಎಸ್* ಅಧಿಕಾರಿಯಾದ...._
_ನಮ್ಮ ತಾಲೂಕಿನವನೊಬ್ಬ_
_*ಕೆ.ಎ.ಎಸ್* ಅಧಿಕಾರಿಯಾದ...._
_ನಮ್ಮ ಊರಿನವನೊಬ್ಬ_
_*ಪಿ.ಎಸ್.ಐ.* ಆದ._
_ನಮ್ಮ ಓಣಿಯವನೊಬ್ಬ_
_*ಎಫ್.ಡಿ.ಎ.* ಆದ._
_ನಮ್ಮ ಮನೆಯ ಪಕ್ಕದವನೊಬ್ಬ_
_*ಎಸ್.ಡಿ.ಎ* ಆದ._

_ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...??!!_ _ಏಕೆಂದರೆ ನಮ್ಮಲ್ಲಿ *ಸಾಧಿಸುವ ಛಲವೇ ಸತ್ತು*_ _ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ._

_*ಕಷ್ಟ ಯಾರಿಗಿಲ್ಲಾ...?*_
_*ಅವಮಾನ ಯಾರಿಗಾಗಿಲ್ಲ...??*_
_ಸೋಲನ್ನ ಯಾರು ನೋಡಿಲ್ಲ...??_

_*ಕಷ್ಟ* ಗಳನ್ನ ಮನುಷ್ಯ *ಮೌನ* ವಾಗಿ ದಾಟಬೇಕು._
_*ಪರಿಶ್ರಮ* ಸದ್ದಿಲ್ಲದೆ ಸಾಗುತ್ತಿರಬೇಕು._
_ಆಗ ಸಿಗುವ *ಯಶಸ್ಸಿನ ಫಲ* ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ._
_ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು._
_ಆದರೆ *ಪುಸ್ತಕ* ಎಂದಿಗೂ ಮಾಡಲಾರದು._

_*ಎದೆಗೆ ಬಿದ್ದ ಅಕ್ಷರ..*_
_*ಭೂಮಿಗೆ ಬಿದ್ದ ಬೀಜ..* ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು._

_*ಪುಸ್ತಕ* ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ._

_*ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆ* ಯೊಂದಿದ್ದರೆ ಏನನ್ನಾದರೂ ಸಾದಿಸಬಹುದು._

_ಇಂತಹ *ಸಂದೇಶಗಳು* ಹಲವರಿಗೆ *ಸ್ಫೂರ್ತಿ* ಯಾಗಬಹುದು._
_ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!_
_ಆದರೆ.._
_*ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.*_
_ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು *ಗಾರ್ಲ ವರ್ದಿ* ರವರು ಹೇಳುತ್ತಾರೆ._

Tuesday, 3 July 2018

short stories in kannada ಕನ್ನಡದ ನೀತಿ ಕತೆಗಳು

*ಪಾಪದ ಫಲ ಯಾರಿಗೆ* ?
-----------------------------
ಒಬ್ಬ ರಾಜನಿದ್ದ . ಆತ ಪ್ರತಿದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .

ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ  ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ  ಹಾವಿನ ಬಾಯಿಯಿಂದ ಒಂದು ಬಿಂದು ವಿಷ , ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ. ರಾಜ   ಆಹಾರ ಹಂಚುವುದನ್ನು ಮುಂದುವರಿಸಿದ .
ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.

ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು. ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು, ಅವನಿಗೆ ತಿಳಿಯಲಿಲ್ಲ. ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು. ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ. ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ. ರಾಜನಿಗೆ ಆಹಾರದ ಮೇಲೆ ವಿಷ ಬಿದ್ದಿದ್ದು ಗೊತ್ತೇ ಇರಲಿಲ್ಲ .

ಚಿತ್ರಗುಪ್ತ ಸೀದಾ ಯಮಧರ್ಮನ ಬಳಿ ಹೋಗಿ ತನ್ನ ಸಮಸ್ಯೆಯನ್ನು ವಿವರಿಸಿದ. ಯಮಧರ್ಮ, ಅವನೊಡನೆ ತಾಳ್ಮೆಯಿಂದ ಕಾಯುವಂತೆ ಹಾಗೂ ಇನ್ನು ಕೆಲವೇ ದಿನಗಳಲ್ಲಿ ಆ ಸಮಸ್ಯೆಗೆ ಉತ್ತರ ಹೊಳೆಯುವುದಾಗಿಯೂ ತಿಳಿಸಿದ.

ಆ ನಂತರ ಸ್ವಲ್ಪ ದಿನಗಳಲ್ಲಿ , ರಾಜನನ್ನು ಭೇಟಿಯಾಗಲು ಕೆಲವು ಮಂದಿ ಬ್ರಾಹ್ಮಣರು, ಆ ಊರನ್ನು ಪ್ರವೇಶಿಸಿದರು. ಅರಮನೆಯ ದಾರಿ ಅವರಿಗೆ ಗೊತ್ತಿರಲಿಲ್ಲ. ಅಲ್ಲಿಯೇ ಮಾರ್ಗದ ಬದಿಯಲ್ಲಿ ಕುಳಿತು ಹೂ ಮಾರುತ್ತಿದ್ದ ಹೆಂಗಸಿನೊಡನೆ, 'ನಿನಗೆ ಅರಮನೆಯ ದಾರಿ ಗೊತ್ತಿದೆಯೇ ? ನಾವು ಅಲ್ಲಿಗೆ ಹೇಗೆ ಹೋಗಬಹುದು?' ಎಂದು ವಿಚಾರಿಸಿದರು. ಆಕೆ ಒಪ್ಪಿ, ಸರಿಯಾದ ದಾರಿಯನ್ನು ಅವರಿಗೆ ವಿವರಿಸಿ ಹೇಳಿದ ನಂತರ ಸೇರಿಸಿದಳು.   'ಆದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ಆ ರಾಜ ಬ್ರಾಹ್ಮಣರನ್ನು ಕೊಲ್ಲುವನು.'

ಅವಳು, ರಾಜನು ಮಾಡದ ಪಾಪದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ ಕ್ಷಣದಲ್ಲಿಯೇ ಚಿತ್ರಗುಪ್ತನ ಪ್ರಶ್ನೆಗೆ ಉತ್ತರ ದೊರಕಿತು. ಆತ, ಬ್ರಾಹ್ಮಣ ಸತ್ತ ಪಾಪದ ಫಲವನ್ನು ಆಕೆಯ ಲೆಕ್ಕಕ್ಕೆ ಸೇರಿಸಿದ.

ಕಥೆಯ ನೀತಿ :
*ನಾವು ಯಾರಾದರೊಬ್ಬರ ಪಾಪದ ಬಗ್ಗೆ, ಆಡಿಕೊಂಡರೆ, ಮತ್ತು ನಾವು ಆಡಿದ ಮಾತು ಸುಳ್ಳಾಗಿದ್ದರೆ, ಆ ಪಾಪದ ಫಲ ನಮ್ಮ ಲೆಕ್ಕಕ್ಕೇ ಸಂಪೂರ್ಣವಾಗಿ ಸೇರಿಸಲ್ಪಡುವುದು.*

ಆದ್ದರಿಂದ ನಾವು ಇತರರ ಬಗ್ಗೆ  ಯೋಚಿಸುವಾಗ, ಮಾತನ್ನಾಡುವಾಗ ಜಾಗರೂಕರಾಗಿರೋಣ.
🌳👆ಎಲ್ಲರೂ ಓದಲೇಬೇಕಾಗಿರುವುದು 👆🌳

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು